PM Modhi: ಪ್ರಧಾನಿ ನರೇಂದ್ರ ಮೋದಿಗೆ ಸಿಕ್ಕ 27 ಅಂತಾರಾಷ್ಟ್ರೀಯ ಪ್ರಶಸ್ತಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಬುಧವಾರ ನಮೀಬಿಯಾದ ಸರ್ವೋಚ್ಚ ನಾಗರಿಕ ಗೌರವ ‘ದಿ ಆರ್ಡರ್ ಆಫ್ ದಿ ಮೋಸ್ಟ್ ಏನ್ಷಿಯೆಂಟ್ ವೆಲ್ವಿಟ್ಚಿಯಾ ಮಿರಾಬಿಲಿಸ್’ ಪ್ರಶಸ್ತಿಯನ್ನು ನೀಡಲಾಯಿತು. ಇದು ಅವರ ಐದು ರಾಷ್ಟ್ರಗಳ ರಾಜತಾಂತ್ರಿಕ ಪ್ರವಾಸದ ಕೊನೆಯ ಹಂತವಾಗಿತ್ತು. ನಮೀಬಿಯಾದ ರಾಷ್ಟ್ರಾಧ್ಯಕ್ಷ ನೆಟುಂಬೊ ನಂದಿ-ನದೈತ್ವಾ ಅವರು ವಿಂಡ್‌ಹೋಕ್‌ನಲ್ಲಿ ಔಪಚಾರಿಕ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು.


ವಿಂಡ್‌ಹೋಕ್: ಪ್ರಧಾನಮಂತ್ರಿ ನರೇಂದ್ರ ಮೋದಿ (Prime Minister Narendra Modi) ಅವರಿಗೆ ಬುಧವಾರ, ನಮೀಬಿಯಾದ ಸರ್ವೋಚ್ಚ ನಾಗರಿಕ ಗೌರವ (Namibia Highest Civilian Honour) ‘ದಿ ಆರ್ಡರ್ ಆಫ್ ದಿ ಮೋಸ್ಟ್ ಏನ್ಷಿಯೆಂಟ್ ವೆಲ್ವಿಟ್ಚಿಯಾ ಮಿರಾಬಿಲಿಸ್’ ಪ್ರಶಸ್ತಿಯನ್ನು ನೀಡಲಾಯಿತು. ಇದು ಅವರ ಐದು ರಾಷ್ಟ್ರಗಳ ರಾಜತಾಂತ್ರಿಕ ಪ್ರವಾಸದ ಕೊನೆಯ ಹಂತವಾಗಿತ್ತು. ನಮೀಬಿಯಾದ ರಾಷ್ಟ್ರಾಧ್ಯಕ್ಷ ನೆಟುಂಬೊ ನಂದಿ-ನದೈತ್ವಾ (Netumbo Nandi-Ndaitwah) ಅವರು ವಿಂಡ್‌ಹೋಕ್‌ನಲ್ಲಿ ಔಪಚಾರಿಕ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ದ್ವಿಪಕ್ಷೀಯ ಮಾತುಕತೆಯಲ್ಲಿ ಮಾತನಾಡಿದ ಪಿಎಂ ಮೋದಿ, ಈ ಗೌರವಕ್ಕೆ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. 140 ಕೋಟಿ ಭಾರತೀಯರಿಗೆ ಇದು ಹೆಮ್ಮೆಯ ಕ್ಷಣ ಎಂದು ವರ್ಣಿಸಿದರು. ವೆಲ್‌ವಿಟ್‌ಶಿಯಾ ಮಿರಾಬಿಲಿಸ್ ಪ್ರಶಸ್ತಿಯು ಭಾರತ-ನಮೀಬಿಯಾ ಸಂಬಂಧಗಳ ಗಟ್ಟಿತನವನ್ನು ಸಂಕೇತಿಸುತ್ತದೆ ಎಂದರು. 2014ರ ಮೇಯಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಮೋದಿ ಅವರಿಗೆ ಇದು 27ನೇ ಅಂತಾರಾಷ್ಟ್ರೀಯ ಪ್ರಶಸ್ತಿಯಾಗಿದ್ದು, ಈ ಪ್ರವಾಸದಲ್ಲಿ ನಾಲ್ಕನೇ ಮತ್ತು 24 ಗಂಟೆಗಳಲ್ಲಿ ಎರಡನೇ ಪ್ರಶಸ್ತಿಯಾಗಿದೆ.
ಮೋದಿ ಅವರಿಗೆ ದೊರೆತ ಅಂತಾರಾಷ್ಟ್ರೀಯ ಗೌರವಗಳು
2025: ನಮೀಬಿಯಾ (ವೆಲ್‌ವಿಟ್‌ಶಿಯಾ ಮಿರಾಬಿಲಿಸ್), ಬ್ರೆಜಿಲ್ (ಗ್ರ್ಯಾಂಡ್ ಕಾಲರ್ ಆಫ್ ದಿ ನ್ಯಾಷನಲ್ ಆರ್ಡರ್), ಟ್ರಿನಿಡಾಡ್ ಆಂಡ್ ಟೊಬಾಗೊ (ಆರ್ಡರ್ ಆಫ್ ದಿ ರಿಪಬ್ಲಿಕ್), ಘಾನಾ (ಆಫೀಸರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್), ಸೈಪ್ರಸ್ (ಗ್ರ್ಯಾಂಡ್ ಕ್ರಾಸ್ ಆಫ್ ಮಕಾರಿಯೋಸ್ III), ಶ್ರೀಲಂಕಾ (ಮಿತ್ರ ವಿಭೂಷಣ), ಮಾರಿಷಸ್ (ಗ್ರ್ಯಾಂಡ್ ಕಮಾಂಡರ್ ಆಫ್ ದಿ ಆರ್ಡರ್).
2024: ಕುವೈತ್ (ಮುಬಾರಕ್ ಅಲ್ ಕಬೀರ್), ಗಯಾನಾ (ಆರ್ಡರ್ ಆಫ್ ಎಕ್ಸಲೆನ್ಸ್), ಬಾರ್ಬಡೋಸ್ (ಆರ್ಡರ್ ಆಫ್ ಫ್ರೀಡಮ್), ನೈಜೀರಿಯಾ (ಗ್ರ್ಯಾಂಡ್ ಕಮಾಂಡರ್), ಡೊಮಿನಿಕಾ (ಡೊಮಿನಿಕಾ ಆರ್ಡರ್ ಆಫ್ ಆನರ್), ರಷ್ಯಾ (ಸೇಂಟ್ ಆಂಡ್ರಿಯೂ).
2023: ಗ್ರೀಸ್ (ಗ್ರ್ಯಾಂಡ್ ಕ್ರಾಸ್ ಆಫ್ ಆನರ್), ಫ್ರಾನ್ಸ್ (ಲೀಜನ್ ಆಫ್ ಆನರ್), ಈಜಿಪ್ಟ್ (ಆರ್ಡರ್ ಆಫ್ ದಿ ನೈಲ್), ಪಲಾವ್ (ಎಬಕ್ಲ್ ಅವಾರ್ಡ್), ಪಪುವಾ ನ್ಯೂ ಗಿನಿಯಾ (ಲೊಗೊಹು), ಫಿಜಿ (ಕಂಪಾನಿಯನ್ ಆಫ್ ದಿ ಆರ್ಡರ್).
2021: ಭೂತಾನ್ (ಡ್ರುಕ್ ಗ್ಯಾಲ್ಪೊ).
2020: ಅಮೆರಿಕ (ಲೀಜನ್ ಆಫ್ ಮೆರಿಟ್).
2019: ಬಹರೈನ್ (ಕಿಂಗ್ ಹಮದ್), ಮಾಲ್ಡೀವ್ಸ್ (ನಿಶಾನ್ ಇಝ್ಝುದ್ದೀನ್), ಯುಎಇ (ಝಾಯೆದ್ ಅವಾರ್ಡ್).
2018: ಪ್ಯಾಲೆಸ್ತೀನ್ (ಗ್ರ್ಯಾಂಡ್ ಕಾಲರ್).
2016: ಅಫ್ಘಾನಿಸ್ತಾನ (ಘಾಜಿ ಅಮಿರ್ ಅಮಾನುಲ್ಲಾ ಖಾನ್), ಸೌದಿ ಅರೇಬಿಯಾ (ಕಿಂಗ್ ಅಬ್ದುಲ್‌ಅಜೀಜ್).
ಈ ಪ್ರಶಸ್ತಿಗಳು ಭಾರತದ ಜಾಗತಿಕ ರಾಜತಾಂತ್ರಿಕ ಸಂಬಂಧಗಳನ್ನು ಬಲಪಡಿಸಿವೆ. ನಮೀಬಿಯಾದ ಈ ಗೌರವವು ದ್ವಿಪಕ್ಷೀಯ ಸಹಕಾರವನ್ನು ಇನ್ನಷ್ಟು ಗಟ್ಟಿಗೊಳಿಸಲಿದೆ ಎಂದು ವಿಶ್ಲೇಷಕರು ಭಾವಿಸಿದ್ದಾರೆ.