ದತ್ತಿ ದಿನಾಚರಣೆ ಪ್ರತಿಭಾಸಂಪನ್ನರ ಹುಟ್ಟುಹಾಕುವ ವೇದಿಕೆಯಾಗಿದೆ : ಕೆ.ವಿ.ಟ್ರಸ್ಟ್ ಮತ್ತು ಪಂಚಗಿರಿ ಶಿಕ್ಷಣ ದತ್ತಿ ಅಧ್ಯಕ್ಷ ಕೆ.ವಿ.ನವೀನ್‌ಕಿರಣ್
ಸಿವಿವಿ ದತ್ತಿ ದಿನಾಚರಣೆ ಅಂಗವಾಗಿ ನಡೆಸಿಕೊಂಡು ಬರುತ್ತಿರುವ ಸ್ವಯಂಪ್ರೇರಿತ ರಕ್ತದಾನ ಶಿಬಿರಕ್ಕೆ ತನ್ನದೇ ಆದ ಭವ್ಯವಾದ ಇತಿಹಾಸವಿದೆ. ಈ ಬಾರಿ ಜು.೨೩ರಂದು ನಡೆಯುವ ರಕ್ತದಾನ ಶಿಬಿರ ವಿಶ್ವ ದಾಖಲೆ ಮಾಡುವ ವಿಶ್ವಾಸವಿದೆ. ನಮ್ಮ ಸಂಸ್ಥೆಯ ಸಿಬ್ಬಂದಿ ವಿದ್ಯಾರ್ಥಿಗಳು ಸೇರಿದಂತೆ ಜಿಲ್ಲೆಯ ನಾನಾ ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿಗಳು, ನಗರ ಪಟ್ಟಣ ಹಳ್ಳಿಗಾಡಿನ ಸಂಘಸಂಸ್ಥೆಗಳ ಮುಖಂಡರು, ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಬಂದು ರಕ್ತದಾನ ಮಾಡುವ ಮೂಲಕ ಕಳೆದ ಬಾರಿಯ ದಾಖಲೆಯನ್ನು ಮುರಿಯುವ ಸಂಕಲ್ಪ ಮಾಡಲಾಗಿದೆ.

ಸಿ.ವಿ.ವಿ ದತ್ತಿ ದಿನಾಚರಣೆ ಎಂಬುದು ಕೇವಲ ಆಚರಣೆಗೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ಪ್ರತಿಭಾಸಂಪನ್ನರನ್ನು ಹುಟ್ಟುಹಾಕುವ ಮುಕ್ತವಾದ ವೇದಿಕೆಯಾಗಿದೆ ಎಂದು ಕೆ.ವಿ.ಟ್ರಸ್ಟ್ ಮತ್ತು ಪಂಚಗಿರಿ ಶಿಕ್ಷಣ ದತ್ತಿ ಅಧ್ಯಕ್ಷ ಕೆ.ವಿ.ನವೀನ್‌ಕಿರಣ್ ಅಭಿಪ್ರಾಯಪಟ್ಟರು.

ದತ್ತಿ ದಿನಾಚರಣೆ ಮತ್ತು ಸಿವಿವಿ ಜಯಂತಿ ಅಂಗವಾಗಿ ಕೆ.ವಿ.ಟ್ರಸ್ಟ್ ಮತ್ತು ಪಂಚಗಿರಿ ಶಿಕ್ಷಣ ದತ್ತಿಯ ಸಿಬ್ಬಂದಿಯ ಕ್ರೀಡಾ ಕೂಟಕ್ಕೆ ಚಾಲನೆ ನೀಡಿ ಹೇಳಿಕೆ
ಚಿಕ್ಕಬಳ್ಳಾಪುರ: ಸಿ.ವಿ.ವಿ ದತ್ತಿ ದಿನಾಚರಣೆ ಎಂಬುದು ಕೇವಲ ಆಚರಣೆಗೆ ಮಾತ್ರ ಸೀಮಿತ ವಾಗಿಲ್ಲ, ಬದಲಿಗೆ ಪ್ರತಿಭಾಸಂಪನ್ನರನ್ನು ಹುಟ್ಟುಹಾಕುವ ಮುಕ್ತವಾದ ವೇದಿಕೆಯಾಗಿದೆ ಎಂದು ಕೆ.ವಿ.ಟ್ರಸ್ಟ್ ಮತ್ತು ಪಂಚಗಿರಿ ಶಿಕ್ಷಣ ದತ್ತಿ ಅಧ್ಯಕ್ಷ ಕೆ.ವಿ.ನವೀನ್‌ಕಿರಣ್ ಅಭಿಪ್ರಾಯಪಟ್ಟರು.
ನಗರ ಹೊರವಲಯ ಸೂಲಾಲಪ್ಪ ದಿನ್ನೆಯಲ್ಲಿರುವ ಕೆ.ವಿ.ಕ್ಯಾಂಪಸ್ ಸಿವಿವಿ ಕ್ರೀಡಾಂಗಣದಲ್ಲಿ ಶುಕ್ರವಾರ ಪ್ರಾರಂಭವಾದ ೨೯ನೇ ದತ್ತಿ ದಿನಾಚರಣೆ ಮತ್ತು ಸಿವಿವಿ ಜಯಂತಿ ಅಂಗವಾಗಿ ಶ್ರೀ ಕೆ.ವಿ. ಮತ್ತು ಪಂಚಗಿರಿ ದತ್ತಿಯ ವಿದ್ಯಾರ್ಥಿಗಳು,ಶಿಕ್ಷಕರು ಮತ್ತು ಸಿಬ್ಬಂದಿಯ ಕ್ರೀಡಾ ಕೂಟಕ್ಕೆ ಕ್ರೀಡಾ ಜ್ಯೋತಿ ಸ್ವೀಕರಿಸುವುದರೊಂದಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸಿ.ವೆಂಕಟರಾಯಪ್ಪ ಅವರು ಎಂತಹ ಜನಾನುರಾಗಿ, ನೌಕರಸ್ನೇಹಿ ಶಿಕ್ಷಣ ಸಂಸ್ಥೆಗಳ ಮಾಲೀಕ ರಾಗಿದ್ದರು ಎನ್ನುವುದಲ್ಲಿ ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲವಾಗಿ ೨೯ ವರ್ಷ ಕಳೆದರೂ ಅವರು ಹುಟ್ಟು ಹಾಕಿರುವ ಈ ಕ್ರೀಡಾಕೂಟ ಮತ್ತು ದತ್ತಿ ದಿನಾಚರಣೆಯೇ ಸಾಕ್ಷಿಯಾಗಿದೆ.ಈ ಸಂಸ್ಥೆಯಲ್ಲಿ ಕೆಲಸ ಮಾಡುವ ಬಸ್ ಚಾಲಕ, ಕಚೇರಿಯ ಜವಾನರಿಂದ ಮೊದಲಾಗಿ ಪ್ರಾಂಶುಪಾಲ ರಾದಿಯಾಗಿ ಎಲ್ಲರೂ ಕೂಡ ಆಟವಾಡುವುದು, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಅವರವರ ಆಟಕ್ಕನುಗುಣವಾದ ಫಲತಾಂಶ ಪಡೆಯುವುದು ಸಾಮಾನ್ಯ ವಿಚಾರವಂತೂ ಅಲ್ಲ. ಈ ತರದ ಆಟ ಮತ್ತು ಆಚರಣೆ ರಾಜ್ಯದ ಯಾವ ವಿದ್ಯಾಸಂಸ್ಥೆಯಲ್ಲಿಯೂ ಇಲ್ಲ ಎನ್ನುವುದೇ ನಮಗೆ ಹೆಮ್ಮೆ ಎಂದರು.
ಇದನ್ನೂ ಓದಿ: Chikkaballapur News: ನಾಯಿ ಮತ್ತು ಹಾವು ಕಡಿತ ಸಾವನ್ನು ಕಡಿಮೆ ಮಾಡಲು ಕ್ರಮ ವಹಿಸಿ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ
ಸಿವಿವಿ ದತ್ತಿ ದಿನಾಚರಣೆ ಅಂಗವಾಗಿ ನಡೆಸಿಕೊಂಡು ಬರುತ್ತಿರುವ ಸ್ವಯಂಪ್ರೇರಿತ ರಕ್ತದಾನ ಶಿಬಿರಕ್ಕೆ ತನ್ನದೇ ಆದ ಭವ್ಯವಾದ ಇತಿಹಾಸವಿದೆ. ಈ ಬಾರಿ ಜು.೨೩ರಂದು ನಡೆಯುವ ರಕ್ತದಾನ ಶಿಬಿರ ವಿಶ್ವದಾಖಲೆ ಮಾಡುವ ವಿಶ್ವಾಸವಿದೆ. ನಮ್ಮ ಸಂಸ್ಥೆಯ ಸಿಬ್ಬಂದಿ ವಿದ್ಯಾರ್ಥಿಗಳು ಸೇರಿದಂತೆ ಜಿಲ್ಲೆಯ ನಾನಾ ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿಗಳು, ನಗರ ಪಟ್ಟಣ ಹಳ್ಳಿಗಾಡಿನ ಸಂಘಸಂಸ್ಥೆಗಳ ಮುಖಂಡರು, ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಬಂದು ರಕ್ತದಾನ ಮಾಡುವ ಮೂಲಕ ಕಳೆದ ಬಾರಿಯ ದಾಖಲೆಯನ್ನು ಮುರಿಯುವ ಸಂಕಲ್ಪ ಮಾಡಲಾಗಿದೆ. ಎಲ್ಲೆಡೆಯಿಂದ ಸಾಕಷ್ಟು ಉತ್ತಮ ಪ್ರತಿಕ್ರಿಯೆ ಬರುತ್ತಿದೆ.ಜುಲೈ ೨೩ ರಂದು ನಡೆಯಲಿರುವ ರಕ್ತದಾನ ಶಿಬಿರದಲ್ಲಿ ಸ್ವಯಂ ಪ್ರೇರಿತವಾಗಿ ಆಗಮಿಸಿ, ಎಲ್ಲರೂ ರಕ್ತದಾನ ಮಾಡಿ ನಾವು ನೀವು ಸಾಮಾಜಿಕ ಕಳಕಳಿ ಮೆರೆ ಯೋಣ ಎಂದರು.

ದತ್ತಿ ಜಯಂತಿಯ ವೇದಿಕೆಯು ಅವಕಾಶಗಳನ್ನು ನೀಡುತ್ತಿದೆ. ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮತ್ತು ಕೆಲಸ ಮಾಡುತ್ತಿರುವ ಎಲ್ಲರೂ ಬೇದ ಭಾವ ಮರೆತು ಒಗ್ಗೂಡಿ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿರುವುದು ನಮ್ಮ ಹೆಮ್ಮೆ. ಹಬ್ಬದ ವಾತಾವರಣದಲ್ಲಿ ನಮ್ಮ ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳು, ಮೇಲ್ವರ್ಗದಿಂದ ಕೆಳಸ್ಥರದ ಉದ್ಯೋಗಿಯವರೆಗೂ ಯಾವುದೇ ವಯಸ್ಸಿನ ತಾರತಮ್ಯವೂ ಇಲ್ಲದೆ ಎಲ್ಲಾ ಸಿಬ್ಬಂದಿ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾ ಬಂದಿರುವುದು ನಮಗೆ ಸಂತಸ ತಂದಿದೆ. ದತ್ತಿ ಜಯಂತಿಯ ವೇದಿಕೆಯು ಪ್ರತಿಭಾನ್ವಿತರಿಗೆ ಎಂದರು.
ಸಿವಿವಿ ಪುತ್ರಿ ನಗರಸಭೆ ಸದಸ್ಯೆ ನಿರ್ಮಲಪ್ರಭು ಮಾತನಾಡಿ, ನಮ್ಮ ತಂದೆಯ ಕಾಲದಿಂದಲೂ ಶ್ರೀ ಕೆವಿ ಶಿಕ್ಷಣ ದತ್ತಿಯಿಂದ ಈ ಕಾರ್ಯಕ್ರಮ ನಡೆಸಿಕೊಂದು ಬರುತ್ತಿದ್ದೇವೆ.ನಮ್ಮ ತಂದೆಯವರು ಎಂತಹುದೇ ಸಂದರ್ಭವಿರಲಿ ಸಂಸ್ಥೆಯ ಉದ್ಯೋಗಿಗಳಿಗೆ ಕುಂದು ಬಾರದಂತೆ ಅವರ ಹಿತ ಬಯಸಿದವರು.ಇದೇ ಕಾರಣಕ್ಕಾಗಿ ಇಂದೂ ಸಹ ಎಲ್ಲರೂ ಒಗ್ಗೂಡಿ ಈ ಕ್ರೀಡಾಸ್ಪರ್ಧೆಯಲ್ಲಿ ಭಾಗವಹಿಸಿರುವುದು ಅತ್ಯಂತ ಸಂತಸದಾಯಕವಾಗಿದೆ. ಕ್ರೀಡೆಗಳಲ್ಲಿ ಸೋಲು ಗೆಲುವು ಸಹಜ. ಇವೆಲ್ಲಕ್ಕಿಂತ ಬಹು ಮುಖ್ಯವಾಗಿ ಪಾಲ್ಗೊಳ್ಳುವಿಕೆ ಮುಖ್ಯ. ಅತ್ಯಂತ ಉತ್ಸಾಹದಿಂದ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ದತ್ತಿ ದಿನಾಚರಣೆಯನ್ನು ಅರ್ಥಪೂರ್ಣ ವಾಗಿಸಬೇಕು. ಮಹಿಳೆಯರಲ್ಲಿ ಕ್ರೀಡಾ ಭಾವನೆ ಬೆಳೆಸುವುದಕ್ಕೆ ನಮ್ಮ ಸಂಸ್ಥೆ ಇಂತಹ ಉತ್ತಮ ವೇದಿಕೆ ಒದಗಿಸಿದೆ. ಮಹಿಳೆಯರು ಈಗ ಎಲ್ಲ ಕ್ಷೇತ್ರಗಳಲ್ಲಿ ಸಾಕಷ್ಟು ಅವಕಾಶ ಪಡೆಯುತ್ತಿದ್ದು, ಕ್ರೀಡಾ ಕ್ಷೇತ್ರದಲ್ಲಿಯೂ ಸಂಸ್ಥೆಯ ಹಲವು ಮಹಿಳೆಯರು ತಮ್ಮದೇ ಆದ ಛಾಪು ಮೂಡಿಸುತ್ತಿರು ವುದು ಉಳಿದವರಿಗೆ ಪ್ರೇರೇಪಣೆಯಾಗಿದೆ ಎಂದು ಹೇಳಿದರು.
ದತ್ತಿ ಸದಸ್ಯ ೯೭ ವರ್ಷದ ಮುನಿಯಪ್ಪ ಮಾತನಾಡಿ ಮಾಜಿ ಶಾಸಕ ದಿವಂಗತ ಸಿ.ವಿ.ವೆಂಕಟ ರಾಯಪ್ಪನವರ ದೂರದೃಷ್ಟಿಯ ಫಲವಾಗಿ ಚಿಕ್ಕಬಳ್ಳಾಪುರವು ವಿದ್ಯಾಕಾಶಿಯಾಗಿದೆ. ಚಿಕ್ಕಬಳ್ಳಾ ಪುರದಲ್ಲಿ ಸರಕಾರಿ ಶಾಲೆ ಕಾಲೇಜು ಬಿಟ್ಟು ಬೇರೇನೂ ಇಲ್ಲದ ಕಾಲದಲ್ಲಿ ಕಷ್ಟದಿಂದ ಶಿಕ್ಷಣ ಸಂಸ್ಥೆ ಕಟ್ಟಿದರು. ಉದಯೋನ್ಮುಖ ಪ್ರತಿಭಾನ್ವಿತನ ಶಿಕ್ಷಕರಿಗೆ ಅವಕಾಶ ನೀಡಿದ್ದರ ಫಲವಾಗಿ ಸಂಸ್ಥೆ ಹೆಮ್ಮರವಾಗಿ ಬೆಳೆದಿದೆ.ನಡೆದು ಬಂದ ಹಾದಿಯನ್ನು ಯಾರೂ ಕೂಡ ಮರೆಯಬಾರದು.ಸಿವಿವಿ ಎಂದರೆ ಶಕ್ತಿ,ಅದೊಂದು ದೂರದೃಷ್ಟಿಯ ಹಣತೆ ಎಂದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಕೆ.ವಿ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು ನಡೆಸಿಕೊಟ್ಟ ೨೦ ನಿಮಿಷಗಳ ಏರೋಬಿಕ್ಸ್ ಕ್ರೀಡಾಂಗಣದಲ್ಲಿ ಹೊಸ ಸಂಚಲವನ್ನು ಉಂಟು ಮಾಡಿತು.
ಕಾರ್ಯಕ್ರಮದಲ್ಲಿ ಶ್ರೀ ಕೆ.ವಿ. ಮತ್ತು ಪಂಚಗಿರಿ ಶಿಕ್ಷಣ ದತ್ತಿ ಆಡಳಿತ ಅಧಿಕಾರಿ ಸಾಯಿಪ್ರಭು, ಸದಸ್ಯರಾದ ಬಿ.ಮುನಿಯಪ್ಪ, ಸುಜಾತಕಿರಣ್, ವಿಜಯಲಕ್ಷ್ಮಿ,ಇಮ್ರಾನ್ ಖಾನ್,ದತ್ತಿಯ ವ್ಯೆವಸ್ಥಾ ಪಕ ಕೆ.ಆರ್.ಲಕ್ಷ್ಮಣಸ್ವಾಮಿ, ಶ್ರೀ ಕೆ.ವಿ. ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಆರ್.ವೆಂಕಟೇಶ್,ಕೆವಿಆAಗ್ಲಶಾಲೆಯ ಪ್ರಾಂಶುಪಾಲ ತ್ಯಾಗರಾಜ್, ಪ್ರಾಧ್ಯಾಪಕರಾದ ಡಾ. ಎ.ಎಸ್ ಅಮರೇಂದ್ರ, ಡಾ. ಜಿ ಸಿದ್ದಪ್ಪಸ್ವಾಮಿ, ವೆಂಕಟಸ್ವಾಮಿ, ಹರಿಚರಣ್, ಕೆ ಎನ್ ಅಶೋಕ್, ಅರುಣ್ ಕುಮಾರ್, ನಾಗರಾಜ ನಾಯ್ಡು,ಎಸ್.ಕಿಶನ್,ವಿ ಪ್ರವೀಣ್, ಎಚ್.ಎನ್.ಸತ್ಯನಾರಾಯಣ, ಫಾರ್ಮಸಿ ಅಧೀಕ್ಷ ಫರೀದ್ ಬಾಬು, ಕೆ.ವಿ.ಟ್ರಸ್ಟ್ ಮತ್ತು ಪಂಚಗಿರಿ ಶಿಕ್ಷಣ ದತ್ತಿಯ ವಿದ್ಯಾರ್ಥಿಗಳು,ಶಿಕ್ಷಕರು ಮತ್ತು ಸಿಬ್ಬಂ ಇದ್ದರು.