ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Jack Dorsey: ಇಂಟರ್‌ನೆಟ್ ಬೇಡ, ವೈಫೈ ಬೇಕಿಲ್ಲ... ಹೊಸ ಮೆಸೆಂಜರ್ ಆ್ಯಪ್ ಆವಿಷ್ಕಾರ!

Jack Dorsey: ಟ್ವಿಟರ್‌ನ ಸಹ-ಸ್ಥಾಪಕ ಜಾಕ್ ಡೋರ್ಸಿ ಮತ್ತೊಮ್ಮೆ ತಂತ್ರಜ್ಞಾನ ಜಗತ್ತಿನಲ್ಲಿ ಸಂಚಲನ ಮೂಡಿಸಿದ್ದಾರೆ. ಇಂಟರ್‌ನೆಟ್, ಸ್ಯಾಟಲೈಟ್ ಸಂಪರ್ಕ, ಅಥವಾ ವೈ-ಫೈ ಇಲ್ಲದೇ ಕಾರ್ಯನಿರ್ವಹಿಸುವ ‘ಬಿಟ್‌ಚಾಟ್’ ಎಂಬ ಪೀರ್-ಟು-ಪೀರ್ (P2P) ಮೆಸೆಂಜರ್ ಆ್ಯಪ್ ಅನ್ನು ಅವರು ಅಭಿವೃದ್ಧಿಪಡಿಸಿದ್ದಾರೆ. ಈ ಆ್ಯಪ್ ಸದ್ಯ ಆ್ಯಪಲ್ ಐ ಸ್ಟೋರ್‌ನಲ್ಲಿ ಟೆಸ್ಟ್ ಮೋಡ್‌ನಲ್ಲಿ ಲಭ್ಯವಿದೆ.

ಇಂಟರ್‌ನೆಟ್ ಬೇಡ, ವೈಫೈ ಬೇಕಿಲ್ಲ... ಹೊಸ ಮೆಸೆಂಜರ್ ಆ್ಯಪ್ ಆವಿಷ್ಕಾರ!

Profile Sushmitha Jain Jul 9, 2025 1:58 PM

ನವದೆಹಲಿ: ಟ್ವಿಟರ್‌ನ (ಈಗಿನ ಎಕ್ಸ್) ಸಹ-ಸ್ಥಾಪಕ ಜಾಕ್ ಡೋರ್ಸಿ (Jack Dorsey) ಮತ್ತೊಮ್ಮೆ ತಂತ್ರಜ್ಞಾನ ಜಗತ್ತಿನಲ್ಲಿ ಸಂಚಲನ ಮೂಡಿಸಿದ್ದಾರೆ. ಇಂಟರ್‌ನೆಟ್ (Internet), ಸ್ಯಾಟಲೈಟ್ ಸಂಪರ್ಕ (Satellite Connection), ಅಥವಾ ವೈ-ಫೈ ಇಲ್ಲದೇ ಕಾರ್ಯನಿರ್ವಹಿಸುವ ‘ಬಿಟ್‌ಚಾಟ್’ (BitChat) ಎಂಬ ಪೀರ್-ಟು-ಪೀರ್ (P2P) ಮೆಸೆಂಜರ್ ಆ್ಯಪ್ ಅನ್ನು ಅವರು ಅಭಿವೃದ್ಧಿಪಡಿಸಿದ್ದಾರೆ. ಈ ಆ್ಯಪ್ ಸದ್ಯ ಆ್ಯಪಲ್ ಐ ಸ್ಟೋರ್‌ನಲ್ಲಿ ಟೆಸ್ಟ್ ಮೋಡ್‌ನಲ್ಲಿ ಲಭ್ಯವಿದೆ.

ಬಿಟ್‌ಚಾಟ್ ಆ್ಯಪ್‌ನ ಸ್ಕ್ರೀನ್‌ಶಾಟ್‌ಗಳು ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ಹಲವರು ಈ ಆ್ಯಪ್ ಮೂಲಕ ಚಾಟ್ ಮಾಡಿರುವುದು ಗಮನ ಸೆಳೆದಿದೆ. ಕ್ರಿಪ್ಟೋ ಕರೆನ್ಸಿ ಆ್ಯಪ್‌ಗಳಲ್ಲಿ ಬಳಸಲಾದ ತಂತ್ರಜ್ಞಾನವನ್ನು ಸುಧಾರಿಸಿ ಈ ಆ್ಯಪ್ ರೂಪಿಸಲಾಗಿದೆ ಎನ್ನಲಾಗಿದೆ. ಮೊಬೈಲ್ ಅಥವಾ ಇತರ ಸಾಧನಗಳ ಬ್ಲೂಟೂತ್ ಮೂಲಕ P2P ನೆಟ್‌ವರ್ಕ್‌ನಲ್ಲಿ ಒಂದು ಸಾಧನವನ್ನು ಮತ್ತೊಂದಕ್ಕೆ ಸಂಪರ್ಕಿಸುವ ಮೂಲಕ ಇದು ಕಾರ್ಯನಿರ್ವಹಿಸುತ್ತದೆ. ಈ ತಂತ್ರಜ್ಞಾನವು ಇಂಟರ್‌ನೆಟ್ ಸಂಪರ್ಕವಿಲ್ಲದ ಸ್ಥಳಗಳಲ್ಲಿಯೂ ಸುಲಭ ಸಂವಹನಕ್ಕೆ ಅವಕಾಶ ನೀಡುತ್ತದೆ.

2022ರಲ್ಲಿ ಎಲಾನ್ ಮಸ್ಕ್ ಟ್ವಿಟರ್ ಖರೀದಿಸಿದ ನಂತರ ಜಾಕ್ ಡೋರ್ಸಿ ಆ ಕಂಪನಿಯಿಂದ ಹೊರಬಂದಿದ್ದರು. ಆದರೆ, ಈಗ ಬಿಟ್‌ಚಾಟ್‌ನೊಂದಿಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ಮತ್ತೊಮ್ಮೆ ಕ್ರಾಂತಿಕಾರಿ ಹೆಜ್ಜೆ ಇಡುವ ಗುರಿಯಲ್ಲಿದ್ದಾರೆ. ಈ ಆ್ಯಪ್ ಯಶಸ್ವಿಯಾದರೆ, ಸಂವಹನ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡಲಿದ್ದಾರೆ ಎಂದು ತಜ್ಞರು ಭಾವಿಸಿದ್ದಾರೆ.

ಬಿಟ್‌ಚಾಟ್‌ನ ವಿಶೇಷತೆ ಇಂಟರ್‌ನೆಟ್ ಅಗತ್ಯವಿಲ್ಲದೇ ಸಂದೇಶಗಳನ್ನು ಕಳುಹಿಸುವ ಸಾಮರ್ಥ್ಯ. ಇದು ದೂರದ ಪ್ರದೇಶಗಳು, ತುರ್ತು ಸಂದರ್ಭಗಳು, ಅಥವಾ ಸಂಪರ್ಕ ಸಮಸ್ಯೆಯಿರುವ ಜಾಗಗಳಲ್ಲಿ ಅತ್ಯಂತ ಉಪಯುಕ್ತವಾಗಿದೆ. ಹಲವು ಟೆಕ್ ಮಾಧ್ಯಮಗಳು ಈ ಆ್ಯಪ್‌ನ ಬಗ್ಗೆ ವರದಿ ಮಾಡಿದ್ದು, ಇದರ ಸಾಮರ್ಥ್ಯವನ್ನು ಶ್ಲಾಘಿಸಿವೆ. ಜಾಕ್ ಡೋರ್ಸಿಯ ಈ ಆವಿಷ್ಕಾರವು ಭವಿಷ್ಯದ ಸಂವಹನ ತಂತ್ರಜ್ಞಾನದಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ ಎಂದು ಜನರು ಆಶಿಸುತ್ತಿದ್ದಾರೆ. ಸದ್ಯಕ್ಕೆ ಟೆಸ್ಟ್ ಮೋಡ್‌ನಲ್ಲಿ ಇರುವ ಈ ಆ್ಯಪ್‌ನ ಸಂಪೂರ್ಣ ಬಿಡುಗಡೆಗೆ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ.