Marathi Row: ಥಾಣೆಯಲ್ಲಿ ಭುಗಿಲೆದ್ದ ಭಾಷಾ ಉದ್ವಿಗ್ನತೆ ; ರಾಜ್ ಠಾಕ್ರೆ ಬೆಂಬಲಿಗರ ಬಂಧನ
ಮಹಾರಾಷ್ಟ್ರದಲ್ಲಿ ಭಾಷಾ ವಿವಾದ ಭುಗಿಲೆದ್ದಿದೆ. ಮರಾಠಿ ಮಾತನಾಡದ ಕಾರಣ ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆಸಿದ ಘಟನೆ ಕಳೆದ ವಾರ ನಡೆದಿತ್ತು. ಅದನ್ನು ಖಂಡಿಸಿ ಮಹಾರಾಷ್ಟ್ರದಲ್ಲಿ ವ್ಯಾಪಾರಿಗಳು ನಡೆಸಿದ ಪ್ರತಿಭಟನೆ ನಡೆಸಿದ್ದರು. ಇದೀಗ ವ್ಯಾಪಾರಿಗಳ ವಿರುದ್ಧ ಮಂಗಳವಾರ ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನೆ ಭಾರೀ ಪ್ರಮಾಣದ ಪ್ರತಿಭಟನೆಯನ್ನು ನಡೆಸಿತು.


ಮುಂಬೈ: ಮಹಾರಾಷ್ಟ್ರದಲ್ಲಿ ಭಾಷಾ ವಿವಾದ ಭುಗಿಲೆದ್ದಿದೆ. ಮರಾಠಿ ( Marathi Row) ಮಾತನಾಡದ ಕಾರಣ ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆಸಿದ ಘಟನೆ ಕಳೆದ ವಾರ ನಡೆದಿತ್ತು. ಅದನ್ನು ಖಂಡಿಸಿ ಮಹಾರಾಷ್ಟ್ರದಲ್ಲಿ ವ್ಯಾಪಾರಿಗಳು ನಡೆಸಿದ ಪ್ರತಿಭಟನೆ ನಡೆಸಿದ್ದರು. ಇದೀಗ ವ್ಯಾಪಾರಿಗಳ ವಿರುದ್ಧ ಮಂಗಳವಾರ ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನೆ ಭಾರೀ ಪ್ರಮಾಣದ ಪ್ರತಿಭಟನೆಯನ್ನು ನಡೆಸಿತು. ಮೀರಾ ಭಯಾಂದರ್ ಪ್ರದೇಶದಿಂದ ಶುರುವಾದ ರ್ಯಾಲಿಯು ಥಾಣೆ ಜಿಲ್ಲೆಯಾದ್ಯಂತ ನಡೆದಿದೆ.
ಈ ಮಾರ್ಗದಲ್ಲಿ ರ್ಯಾಲಿ ಪೊಲೀಸ್ ಅನುಮತಿ ಇಲ್ಲದಿದ್ದರೂ, ಎಂಎನ್‌ಎಸ್ ಕಾರ್ಯಕರ್ತರು ಮುಂಬೈವರೆಗೆ ಮೆರವಣಿಗೆ ನಡೆಸಲು ಯೋಜಿಸಿದ್ದರು. ಹೀಗಾಗಿ ಎಂಎನ್‌ಎಸ್‌ನ ಥಾಣೆ ಮತ್ತು ಪಾಲ್ಘರ್ ಮುಖ್ಯಸ್ಥ ಅವಿನಾಶ್ ಜಾಧವ್ ಮತ್ತು ಇತರ ನಾಯಕರನ್ನು ಮುಂಜಾನೆ ಬಂಧಿಸಲಾಯಿತು. ಎಂಎನ್‌ಎಸ್‌ನ ಸಂದೀಪ್ ದೇಶಪಾಂಡೆ, ನಾಯಕರ ಬಂಧನವನ್ನು ಖಂಡಿಸಿದ್ದು, ಬೆಳಗಿನ ಜಾವ 3.30 ರ ಸುಮಾರಿಗೆ ನಾಯಕರನ್ನು (D Fadnavis ) ಬಂಧಿಸಲಾಯಿತು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಇದನ್ನು "ತುರ್ತು ಪರಿಸ್ಥಿತಿಯಂತಹ" ಪರಿಸ್ಥಿತಿ ಎಂದು ಕರೆದಿದ್ದಾರೆ.
ಇಂದು ಬೆಳಗಿನ ಜಾವ 3.30 ಕ್ಕೆ ನಮ್ಮ ನಾಯಕರನ್ನು ಬಂಧಿಸಲಾಯಿತು. ಗುಜರಾತಿ ವ್ಯಾಪಾರಿಗಳ ಪ್ರತಿಭಟನಾ ಮೆರವಣಿಗೆಗೆ ಪೊಲೀಸರು ಗೌರವ ತೋರಿಸುತ್ತಿದ್ದಾರೆ, ಆದರೆ ಮರಾಠಿ ಜನರ ಮೆರವಣಿಗೆಗೆ ಅನುಮತಿ ನೀಡುತ್ತಿಲ್ಲ. ಇದು ಎಂತಹ ತುರ್ತು ಪರಿಸ್ಥಿತಿ? ಇದು ಮಹಾರಾಷ್ಟ್ರ ಸರ್ಕಾರವೋ ಅಥವಾ ಗುಜರಾತ್ ಸರ್ಕಾರವೋ? ಅವರು ಏನೇ ಮಾಡಿದರೂ ಮೆರವಣಿಗೆ ಖಂಡಿತವಾಗಿಯೂ ನಡೆಯುತ್ತದೆ" ಎಂದು ದೇಶಪಾಂಡೆ ಹೇಳಿದರು.
ಆದರೆ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಎಂಎನ್‌ಎಸ್ ಕಾರ್ಯಕರ್ತರನ್ನು ದೂರಿದ್ದು, ನಾವು ಪ್ರತಿಭಟನೆಗೆ ಅನುಮತಿ ನೀಡಲಿಲ್ಲ ಎಂದು ಹೇಳುವುದು ತಪ್ಪು. ನಾನು ಆಯುಕ್ತರೊಂದಿಗೆ ಮಾತನಾಡಿದ್ದೇನೆ, ಪೊಲೀಸರು ಪ್ರತಿಭಟನೆಗೆ ಅನುಮತಿ ನಿರಾಕರಿಸಲಿಲ್ಲ ಎಂದು ಅವರು ನನಗೆ ಹೇಳಿದರು. ಅವರು ಸಭೆಗೆ ಅನುಮತಿ ಕೇಳಿದ್ದರು. ನಾವು ಅವರನ್ನು ಪರ್ಯಾಯ ಮಾರ್ಗವನ್ನು ತೆಗೆದುಕೊಳ್ಳಲು ಕೇಳಿಕೊಂಡೆವು, ಆದರೆ ಅವರು ಅದಕ್ಕೆ ಒಪ್ಪಲಿಲ್ಲ" ಎಂದು ಫಡ್ನವೀಸ್ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Marathi Row: ಮರಾಠಿಗಾಗಿ 20 ವರ್ಷಗಳ ನಂತರ ಮತ್ತೆ ಒಂದಾಗಲಿರುವ ಉದ್ಧವ್ - ರಾಜ್ ಠಾಕ್ರೆ; ಬಿಜೆಪಿಗೆ ಶುರುವಾಯ್ತು ಟೆನ್ಷನ್
ಈ ತಿಂಗಳ ಆರಂಭದಲ್ಲಿ, ಭಯಾಂದರ್ ಪ್ರದೇಶದ ಆಹಾರ ಮಳಿಗೆಯ ಮಾಲೀಕರೊಬ್ಬರು ಮರಾಠಿಯಲ್ಲಿ ಮಾತನಾಡದ ಕಾರಣ ಕೆಲವು ಎಂಎನ್‌ಎಸ್ ಕಾರ್ಯಕರ್ತರು ಕಪಾಳಮೋಕ್ಷ ಮಾಡಿದ್ದರು. ಹಲ್ಲೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ವ್ಯಾಪಾರಿ ಸಮುದಾಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.