ತನ್ನ 400 ರನ್‌ಗಳ ದಾಖಲೆಯನ್ನು ಮುರಿಯಬಲ್ಲ ಭಾರತೀಯ ಆಟಗಾರನನ್ನು ಆರಿಸಿದ ಬ್ರಿಯಾನ್ ಲಾರಾ!
ಪ್ರಸ್ತುತ ಭಾರತ ಟೆಸ್ಟ್ ತಂಡ, ಇಂಗ್ಲೆಂಡ್ ಪ್ರವಾಸದಲ್ಲಿದೆ. ಇದೀಗ ಎರಡು ಟೆಸ್ಟ್ ಪಂದ್ಯಗಳ ಅಂತ್ಯಕ್ಕೆ ಭಾರತ ಹಾಗೂ ಇಂಗ್ಲೆಂಡ್ ತಂಡಗಳು 1-1 ಸಮಬಲ ಸಾಧಿಸಿವೆ. ಅಂದಹಾಗೆ ಜಿಂಬಾಬ್ವೆ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ವಿಯಾನ್ ಮುಲ್ಡರ್ ಅವರು 367 ರನ್‌ಗಳನ್ನು ಕಲೆ ಹಾಕಿದ್ದರು. ಆದರೆ, ಬ್ರಿಯಾನ್ ಲಾರಾ ಅವರ ದಾಖಲೆಯನ್ನು ಮುರಿಯಲು ಅವರು ಇಷ್ಟ ಪಡದೆ ಡಿಕ್ಲೆರ್ ಮಾಡಿಕೊಂಡಿದ್ದರು. ಆದರೆ, ಬ್ರಿಯಾನ್ ಲಾರಾ ಅವರು ತಮ್ಮ ದಾಖಲೆಯನ್ನು ಯಾರು ಮುರಿಯಲಿದ್ದಾರೆಂದು ಭವಿಷ್ಯ ನುಡಿದಿದ್ದಾರೆ.

ಯಶಸ್ವಿ ಜೈಸ್ವಾಲ್‌ಗೆ ಬ್ರಿಯಾನ್ ಲಾರಾ ದಾಖಲೆ ಮುರಿಯುವ ಸಾಮರ್ಥ್ಯವಿದೆ.

ನವದೆಹಲಿ: ಜಿಂಬಾಬ್ವೆ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ(IND vs ENG) ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್ ವಿಯಾನ್ ಮುಲ್ಡರ್ (Wiaan Mulder) ಅವರು 334 ಎಸೆತಗಳಲ್ಲಿ 367 ರನ್‌ಗಳನ್ನು ಕಲೆ ಹಾಕಿದ್ದರು. ಆದರೆ, ಬ್ರಿಯಾನ್ ಲಾರಾ (Brian Lara) ಅವರ 400 ರನ್‌ಗಳ ದಾಶಖಲೆಯನ್ನು ಮುರಿಯಲು ಇಷ್ಟಪಡದ ವಿಯಾನ್ ಮುಲ್ಡರ್ ತಮ್ಮ ತಂಡದ ಇನಿಂಗ್ಸ್‌ನ ಡಿಕ್ಲೆರ್ ಮಾಡಿಕೊಂಡಿದ್ದರು. ಆದರೆ, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಸೇರಿದಂತೆ ಸಾಕಷ್ಟು ದಿಗ್ಗಜರಿಂದ ಬ್ರಿಯಾನ್ ಲಾರಾ ಅವರ 400 ರನ್‌ಗಳ ದಾಖಲೆಯನ್ನು ಮುರಿಯಲು ಸಾಧ್ಯವಾಗಲಿಲ್ಲ. ಆದರೆ, ಬ್ರಿಯಾನ್ ಲಾರಾ ಅವರು ತಮ್ಮ 400 ರನ್‌ಗಳ ದಾಖಲೆಯನ್ನು ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಅವರಿಂದ ಸಾಧ್ಯ ಎಂದು ಹೇಳಿದ್ದರು ಎಂಬುದನ್ನು ಮೈಕಲ್ ಅಥರ್ಟನ್ ತಿಳಿಸಿದ್ದಾರೆ.
ಜಿಂಬಾಬ್ವೆ ವಿರುದ್ದದ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ ಮಾತನಾಡಿದ ವಿಯಾನ್ ಮುಲ್ಡರ್, "ಮೊದಲನೇ ಸಂಗತಿ ಏನೆಂದರೆ ನಮಗೆ ದಾಖಲಾಗಿರುವ ರನ್‌ಗಳು ಸಾಕು ಹಾಗೂ ನಾವು ಬೌಲ್ ಮಾಡುತ್ತೇವೆ. ಎರಡನೇ ಸಂಗತಿ ಏನೆಂದರೆ ಬ್ರಿಯಾನ್ ಲಾರಾ ದಂತಕತೆ ಹಾಗೂ ಅವರು ನಿಜವಾದ ಹೀರೋ. ಇಂಗ್ಲೆಂಡ್ ವಿರುದ್ಧ 401 ರನ್ ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿರಬಹುದು. ಆದರೆ, ಅವರ ದಾಖಲೆಯನ್ನು ವಿಶೇಷವಾಗಿ ಉಳಿಯಲು ಎಲ್ಲರೂ ಬಯಸುತ್ತಾರೆ. ಅದೇ ಕೆಲಸವನ್ನು ಕೂಡ ನಾನು ಮಾಡುತ್ತೇನೆ. ʻದಂತಕಥೆಗಳು ನಿಜವಾಗಿಯೂ ದೊಡ್ಡ ಸ್ಕೋರ್‌ಗಳನ್ನು ಉಳಿಸಿಕೊಳ್ಳಲಿ,ʼ ಎಂದು ಮುಖ್ಯ ತರಬೇತುದಾರ ಶುಕ್ರಿ ಕಾನ್ರಾಡ್ ಅವರು ತಿಳಿಸಿದ್ದರು," ಎಂದು ಅವರು ಹೇಳಿದ್ದಾರೆ.
IND vs ENG: ವಿರಾಟ್ ಕೊಹ್ಲಿ ಅಲ್ಲ, ಭಾರತಕ್ಕೆ ಇವರೇ ಡಾನ್ ಬ್ರಾಡ್ಮನ್ ಎಂದ ರವಿ ಶಾಸ್ತ್ರಿ!
ವಿಯಾನ್ ಮುಲ್ಡರ್ ಅವರು ಆಲ್‌ರೌಂಡರ್ ಆಗಿದ್ದು, ಅವರು ಬ್ರಿಯಾನ್ ಲಾರಾ ಅವರ ದಾಖಲೆಯ ಸನಿಹ ಬರುತ್ತಾರೆಂದು ಯಾರೂ ಕೂಡ ಅಂದುಕೊಂಡಿರಲಿಲ್ಲ. ಮುಲ್ಡರ್ ಅವರು ತ್ರಿಶತಕ ಸಿಡಿಸುತ್ತಾರೆಂದು ಸ್ವತಃ ಬ್ರಿಯಾನ್ ಲಾರಾ ಅವರಿಗೂ ಅಂದಾಜಿಸಿರಲಿಲ್ಲ. ಆದರೆ, ಬ್ರಿಯಾನ್ ಲಾರಾ ಅವರು ತಮ್ಮ ದಾಖಲೆಯನ್ನು ಯಾರು ಮುರಿಯಲಿದ್ದಾರೆಂದು ಭವಿಷ್ಯ ನುಡಿದಿದ್ದಾರೆ. ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್‌ಗೆ ಈ ಸಾಮರ್ಥ್ಯ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸ್ಕೈ ಕ್ರಿಕೆಟ್ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದ ಮೈಕಲ್ ಅಥರ್ಟನ್, ಬ್ರಿಯಾನ್ ಲಾರಾ ಅವರ 400 ರನ್‌ಗಳ ದಾಖಲೆಯನ್ನು ಇಬ್ಬರು ಮುರಿಯುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಅಲ್ಲದೆ, ಇದೇ ವೇಳೆ ಅವರು 2024ರಲ್ಲಿ ಬ್ರಿಯಾನ್ ಲಾರಾ ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ಕೂಡ ಬಹಿರಂಗಪಡಿಸಿದ್ದಾರೆ.
IND vs ENG: 3ನೇ ಪಂದ್ಯಕ್ಕೂ ಮುನ್ನ ಪಿಚ್ ಕ್ಯುರೇಟರ್ಗೆ ವಿಶೇಷ ಮನವಿ ಮಾಡಿದ ಇಂಗ್ಲೆಂಡ್
ಬ್ರಿಯಾನ್ ಲಾರಾ ಅವರ ದಾಖಲೆಯನ್ನು ಶುಭಮನ್ ಗಿಲ್ ಮುರಿಯಲಿದ್ದಾರೆಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಬ್ರಿಯಾನ್ ಲಾರಾ ಅವರ ದಾಖಲೆಯನ್ನು ಗಿಲ್ ಮುರಿಯುವ ಸಾಧ್ಯತೆ ಇಲ್ಲ. ಆದರೆ, ಯಶಸ್ವಿ ಜೈಸ್ವಾಲ್ ಮತ್ತು ಹ್ಯಾರಿ ಬ್ರೂಕ್ ಅವರಿಗೆ ತಮ್ಮ ದಾಖಲೆಯನ್ನು ಮುರಿಯುವ ಸಾಧ್ಯತೆ ಇದೆ ಎಂದು ಬ್ರಿಯಾನ್ ಲಾರಾ ಅವರೇ ಒಪ್ಪಿಕೊಂಡಿದ್ದಾರೆ. ಟೆಸ್ಟ್ ಕ್ರಿಕೆಟ್‌ಗೆ ಯಶಸ್ವಿ ಜೈಸ್ವಾಲ್ ಪದಾರ್ಪಣೆ ಮಾಡಿದ್ದ ಜೈಸ್ವಾಲ್, ಲಾರಾ ಅವರ ದಾಖಲೆಯನ್ನು ಮುರಿಯಬಹುದು ಎಂದು ಲಾರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಯಶಸ್ವಿ ಜೈಸ್ವಾಲ್ ಟೆಸ್ಟ್ ಕ್ರಿಕೆಟ್‌ನಲ್ಲಿ 214 ರನ್‌ಗಳನ್ನು ದಾಖಲಿಸಿದ್ದಾರೆ ಹಾಗೂ ಇದು ಅವರ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. ಅವರು 40 ಇನಿಂಗ್ಸ್‌ಗಳಿಂದ 53.10ರ ಸರಾಸರಿಯಲ್ಲಿ 2018 ರನ್‌ಗಳನ್ನು ಕಲೆ ಹಾಕಿದ್ದಾರೆ. ಆದರೆ, ಹ್ಯಾರಿ ಬ್ರೂಕ್ ಅವರು ತ್ರಿಶತಕವನ್ನು ಸಿಡಿಸಿದ್ದಾರೆ. ಅವರು 45 ಇನಿಂಗ್ಸ್‌ಗಳಿಂದ 59.52ರ ಸರಾಸರಿಯಲ್ಲಿ 2619 ರನ್‌ಗಳನ್ನು ದಾಖಲಿಸಿದ್ದಾರೆ. ಇವರ ವೈಯಕ್ತಿಕ ಗರಿಷ್ಠ ಮೊತ್ತ 317 ರನ್ ಗಳಿಸಿದ್ದಾರೆ.