ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Fire Accident: ಶಾಲೆಯಲ್ಲಿ ಬೆಂಕಿ ಅವಘಡ; ಪವನ್ ಕಲ್ಯಾಣ್ ಕಿರಿಯ ಪುತ್ರನಿಗೆ ತೀವ್ರ ಗಾಯ, ಆಸ್ಪತ್ರೆಗೆ ದಾಖಲು

ಸಿಂಗಾಪುರದ ಶಾಲೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಕಿರಿಯ ಪುತ್ರ ಮಾರ್ಕ್ ಶಂಕರ್ ಪವನೋವಿಚ್ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮಂಗಳವಾರ ಬೆಳಿಗ್ಗೆ 9:45 ರ ಸುಮಾರಿಗೆ ರಿವರ್ ವ್ಯಾಲಿ ಶಾಪ್‌ಹೌಸ್‌ನಲ್ಲಿರುವ ಶಾಲೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಶಾಲೆಯಲ್ಲಿ ಬೆಂಕಿ ಅವಘಡ; ಪವನ್ ಕಲ್ಯಾಣ್ ಪುತ್ರನಿಗೆ ತೀವ್ರ ಗಾಯ

Profile Vishakha Bhat Apr 8, 2025 12:14 PM

ಸಿಂಗಾಪುರ: ಶಾಲೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ (Pawan Kalyan) ಅವರ ಕಿರಿಯ ಪುತ್ರ ಮಾರ್ಕ್ ಶಂಕರ್ ಪವನೋವಿಚ್ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮಂಗಳವಾರ ಬೆಳಿಗ್ಗೆ 9:45 ರ ಸುಮಾರಿಗೆ ರಿವರ್ ವ್ಯಾಲಿ ಶಾಪ್‌ಹೌಸ್‌ನಲ್ಲಿರುವ ಶಾಲೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಶಾಲೆಯಿಂದ ಎಲ್ಲರನ್ನೂ ಹೊರಗೆ ಕಳುಹಿಸಲಾಗಿದೆ. ಅಷ್ಟರಲ್ಲಿ ಹಲವರಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಮಾರ್ಕ್ ಶಂಕರ್ ಪವನೋವಿಚ್‌ಗೆ ಕೈ ಕಾಲುಗಳಿಗೆ ಗಾಯಗಳಾಗಿದ್ದು, ಹೊಗೆಯಿಂದ ಉಸಿರಾಟದ ತೊಂದರೆ ಉಂಟಾಗಿದೆ ಎಂದು ತಿಳಿದು ಬಂದಿದೆ.

ಸದ್ಯ ಮಾರ್ಕ್ ಶಂಕರ್ ಪವನೋವಿಚ್‌ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಮಗನ ಆರೋಗ್ಯ ವಿಚಾರಿಸಲು ಪವನ್‌ ಕಲ್ಯಾಣ್‌ ಸಿಂಗಾಪುರಕ್ಕೆ ತೆರಳಿದ್ದಾರೆ. ಸಿಂಗಾಪುರದಲ್ಲಿ ಮಕ್ಕಳ ಶಿಬಿರ ನಡೆಯುತ್ತಿದ್ದ ಕಟ್ಟಡದ ಎರಡನೇ ಮತ್ತು ಮೂರನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಘಟನೆಯಲ್ಲಿ 15 ಮಕ್ಕಳು ಸೇರಿದಂತೆ ಒಟ್ಟು 19 ಜನರು ಗಾಯಗೊಂಡಿದ್ದಾರೆ. ಬೆಂಕಿ ಅವಘಡಕ್ಕೆ ಕಾರಣವೇನೆಂದು ಸ್ಪಷ್ಟವಾಗಿಲ್ಲ ಮತ್ತು ಅಧಿಕಾರಿಗಳು ಘಟನೆಯ ಕಾರಣವನ್ನು ಹುಡುಕುತ್ತಿದ್ದಾರೆ.

ಪವನ್‌ ಕಲ್ಯಾಣ್‌ ಅವರ ಪುತ್ರನಿಗೆ ಬೆಂಕಿ ಅಪಘಾತವಾದುದನ್ನು ಜನ ಸೇನಾ ಪಾರ್ಟಿ ಟ್ವೀಟ್‌ ಮೂಲಕ ತಿಳಿಸಿದೆ. ರಾಜ್ಯದ ಉಪಮುಖ್ಯಮಂತ್ರಿ ಶ್ರೀ ಪವನ್ ಕಲ್ಯಾಣ್ ಅವರ ಕಿರಿಯ ಪುತ್ರ ಮಾರ್ಕ್ ಶಂಕರ್ ಸಿಂಗಾಪುರದಲ್ಲಿ ನಡೆದ ಬೆಂಕಿ ಅವಘಡದಲ್ಲಿ ಸಿಲುಕಿಕೊಂಡಿದ್ದಾರೆ. ಮಾರ್ಕ್ ಶಂಕರ್ ಓದುತ್ತಿದ್ದ ಶಾಲೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಪಘಾತದಲ್ಲಿ ಅವರ ಕೈ ಮತ್ತು ಕಾಲುಗಳಿಗೆ ಗಾಯಗಳಾಗಿವೆ. ಹೊಗೆಯಿಂದ ಉಸಿರಾಡಿದ ಪರಿಣಾಮವೂ ಅವರಿಗೆ ಉಂಟಾಗಿದೆ. ಮಾರ್ಕ್ ಶಂಕರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ" ಎಂದು ಟ್ವೀಟ್‌ನಲ್ಲಿ ತಿಳಿಸಲಾಗಿದೆ.



ಪವನ್ ಕಲ್ಯಾಣ್ ಮತ್ತು ಪತ್ನಿ ಅನ್ನಾ ಲೆಜ್ನೇವಾ ಅವರು ಅಕ್ಟೋಬರ್ 10, 2017 ರಂದು ತಮ್ಮ ಮಗ ಮಾರ್ಕ್ ಶಂಕರ್‌ಗೆ ಜನ್ಮ ನೀಡಿದ್ದರು. ಷ್ಯಾದ ಮಾಡೆಲ್ ಅನ್ನಾ ಲೆಜ್ನೇವಾ, ಪವನ್ ಕಲ್ಯಾಣ್ ಅವರ ಮೂರನೇ ಪತ್ನಿ. 2011 ರಲ್ಲಿ ಟೀನ್ ಮಾರ್ ಚಿತ್ರೀಕರಣದ ಸಮಯದಲ್ಲಿ ಇಬ್ಬರೂ ಭೇಟಿಯಾದರು ಮತ್ತು ಸೆಪ್ಟೆಂಬರ್ 30, 2013 ರಂದು ವಿವಾಹವಾದರು.