#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Ranveer Allahbadia: ಯೂಟ್ಯೂಬರ್‌ ರಣವೀರ್‌ಗೆ‌ ಮತ್ತೊಂದು ಶಾಕ್: ಬ್ರೇಕಪ್‌ ಮಾಡಿಕೊಂಡ ಗರ್ಲ್ ಫ್ರೆಂಡ್?

ಇಂಡಿಯಾಸ್ ಗಾಟ್ ಲ್ಯಾಟೆಂಟ್ ಶೋನಲ್ಲಿ ಅಸಭ್ಯ ಪ್ರಶ್ನೆ ಕೇಳಿದ ಖ್ಯಾತ ಯೂಟ್ಯೂಬರ್‌ ರಣವೀರ್‌ ಅಲಾಹಾಬಾದಿಯಾ ವಿರುದ್ಧ ಸಾಕಷ್ಟು ಪ್ರಕರಣಗಳು ದಾಖಲಾಗಿದ್ದು, ವಿವಾದಗಳು ಭುಗಿಲೆದ್ದಿವೆ. ವಿವಾದದ ಬೆನ್ನಲ್ಲೇ ರಣವೀರ್‌ ಗರ್ಲ್‌ ಫ್ರೆಂಡ್‌ ನಿಕ್ಕಿ ಶರ್ಮಾ ಆತನೊಂದಿಗೆ ಬ್ರೇಕಪ್‌ ಮಾಡಿಕೊಂಡಿದ್ದಾಳೆ ಎಂಬ ಸುದ್ದಿ ಹರಿದಾಡುತ್ತಿದೆ.

ಯೂಟ್ಯೂಬರ್‌ ರಣವೀರ್‌ಗೆ ಶಾಕ್:‌ ಬ್ರೇಕಪ್‌ ಗರ್ಲ್‌ ಫ್ರೆಂಡ್!

ರಣವೀರ್‌ ಮತ್ತು ಆತನ ಗರ್ಲ್‌ಫ್ರೆಂಡ್

Profile Deekshith Nair Feb 12, 2025 1:50 PM

ಮುಂಬೈ:‌ ಇಂಡಿಯಾಸ್ ಗಾಟ್ ಲ್ಯಾಟೆಂಟ್ ಶೋನಲ್ಲಿ( India's Got Latent Show) ಅಸಭ್ಯ ಪ್ರಶ್ನೆ ಕೇಳಿದ ಖ್ಯಾತ ಯೂಟ್ಯೂಬರ್‌ ರಣವೀರ್‌ ಅಲಾಹಾಬಾದಿಯಾ (Ranveer Allahbadia) ವಿರುದ್ಧ ಸಾಕಷ್ಟು ಪ್ರಕರಣಗಳು ದಾಖಲಾಗಿದ್ದು, ವಿವಾದಗಳು ಭುಗಿಲೆದ್ದಿವೆ. ವಿವಾದದ ಬೆನ್ನಲ್ಲೇ ರಣವೀರ್‌ ಗರ್ಲ್‌ ಫ್ರೆಂಡ್‌ ನಿಕ್ಕಿ ಶರ್ಮಾ ಆತನೊಂದಿಗೆ ಬ್ರೇಕಪ್‌ ಮಾಡಿಕೊಂಡಿದ್ದಾಳೆ ಎಂಬ ಸುದ್ದಿ ಹರಿದಾಡುತ್ತಿದೆ. ಪರಸ್ಪರ ಇಬ್ಬರೂ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಅನ್‌ಫಾಲೋ ಮಾಡಿದ್ದು,ರಿಲೇಷನ್‌ಶಿಪ್‌ ಗೆ ಗುಡ್‌ ಬೈ ಹೇಳಿದ್ದಾರೆ ಎನ್ನಲಾಗಿದೆ.

ಯೂಟ್ಯೂಬ್ ಶೋ 'ಇಂಡಿಯಾಸ್ ಗಾಟ್ ಲ್ಯಾಟೆಂಟ್' ತನ್ನ ಇತ್ತೀಚೆಗಿನ ಸಂಚಿಕೆಯಲ್ಲಿ ಅಶ್ಲೀಲತೆಯನ್ನು ಪ್ರಸಾರ ಮಾಡಿದ್ದಲ್ಲದೆ, ಯೂಟ್ಯೂಬರ್ಸ್ ಅಸಭ್ಯವಾಗಿ ಪ್ರಶ್ನೆ ಕೇಳಿದ್ದಾರೆ. ಅಷ್ಟೇ ಅಲ್ಲದೆ ಲೈಂಗಿಕ ಸಂಬಂಧ ಚರ್ಚೆಗಳಲ್ಲಿ ತೊಡಗಿದ್ದಾರೆ. ಅವರ ವಿರುದ್ಧ ಅಸ್ಸಾಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ರಣವೀರ್ ಅಲ್ಹಾಬಾದಿಯಾ ಮತ್ತು ಸ್ಟಾಂಡ್‌ಅಪ್‌ ಕಾಮಿಡಿಯನ್ ಸಮಯ್ ರೈನಾ, ಹಾಗೂ ಇತರ ಯೂಟ್ಯೂಬರ್‌ಗಳ ವಿರುದ್ಧ ಪ್ರಕರಣ ದಾಖಲಾಗಿದೆ. ರಣವೀರ್‌ ವಿರುದ್ಧ ಭಾರೀ ಟೀಕೆ ವ್ಯಕ್ತವಾಗುತ್ತಿದೆ, ದೇಶದಾದ್ಯಂತ ಪ್ರಕರಣ ದಾಖಲಾಗಿದೆ. ಸಂಸದೀಯ ಸಮಿತಿ ಕೂಡ ಯೂಟ್ಯೂಬರ್‌ಗಳಿಗೆ ನೋಟಿಸ್‌ ನೀಡುವ ಸಾಧ್ಯತೆಯಿದೆ. ಇಷ್ಟೆಲ್ಲ ಸಂಕಟಗಳ ನಡುವೆ ರಣವೀರ್‌ ಬ್ರೇಕಪ್‌ ನೋವನ್ನು ಅನುಭವಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಕಳೆದ ಕೆಲವು ವರ್ಷಗಳಿಂದ ರಣವೀರ್‌ ಜೊತೆಗೆ ರಿಲೇಷನ್‌ಶಿಪ್‌ ಇಟ್ಟುಕೊಂಡಿದ್ದ ಅವರ ಗರ್ಲ್‌ಫ್ರೆಂಡ್‌ ನಿಕ್ಕಿ ಶರ್ಮಾ ಕೈಕೊಟ್ಟಿದ್ದಾರೆ ಎಂಬ ಗಾಸಿಪ್‌ ಇದೆ. ವ್ಯಾಲೆಂಟೆನ್ಸ್‌ ವಾರದಲ್ಲೇ ರಣವೀರ್‌ ವಿರಹ ವೇದನೆ ಅನುಭವಿಸುವಂತಾಗಿದೆ ಎಂದು ನೆಟ್ಟಿಗರು ಅಣಕಿಸಿದ್ದಾರೆ.‌



50 ಸಾವಿರ ಫಾಲೊವರ್ಸ್‌ ಕಳೆದುಕೊಂಡ ರಣವೀರ್‌

ಇಂಡಿಯಾಸ್ ಗಾಟ್ ಲ್ಯಾಟೆಂಟ್ ಕಾರ್ಯಕ್ರಮದಲ್ಲಿ ಪೋಷಕರು ಮತ್ತು ಲೈಂಗಿಕತೆ ಕುರಿತು ಅಸಭ್ಯ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ ಪಾಡ್‌ಕಾಸ್ಟರ್ ರಣವೀರ್ ಅಲ್ಹಾಬಾದಿಯಾ ಅವರ ಸಾಮಾಜಿಕ ಜಾಲತಾಣದಲ್ಲಿನ ಅನುಯಾಯಿಗಳ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿದೆ.

ಈ ಸುದ್ದಿಯನ್ನೂ ಓದಿ:India's got latent row: ರಣವೀರ್‌ ಅಲಹಾಬಾದಿಯಾ ಸೇರಿ ಹಲವರ ವಿರುದ್ಧ ಪ್ರಕರಣ ದಾಖಲು!

'ಬಿಯರ್‌ಬೈಸೆಪ್ಸ್' ಎಂಬ ಹೆಸರು ಹೊಂದಿರುವ ರಣವೀರ್ ಅಲ್ಹಾಬಾದಿಯಾ ಅವರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸುಮಾರು 50,000 ಅನುಯಾಯಿಗಳು ಕಡಿಮೆಯಾಗಿದ್ದಾರೆ.‌

ರಣವೀರ್‌ಗೆ ಸಪೋರ್ಟ್‌ ಮಾಡಿದ ನಟಿ ಊರ್ಫಿ ಜಾವೇದ್‌

ಅಸಭ್ಯವಾದ ಹೇಳಿಕೆ ನೀಡುವ ಮೂಲಕ ವಿವಾದಕ್ಕೆ ಈಡಾಗಿರುವ ಪ್ರಖ್ಯಾತ ಯೂಟ್ಯೂಬರ್‌ ರಣವೀರ್‌ಗೆ ನಟಿ ಊರ್ಫಿ ಜಾವೇದ್‌ ಸಪೋರ್ಟ್‌ ಮಾಡಿದ್ದಾರೆ. "ನೀವು ಕೆಲವು ಜನರನ್ನು ಇಷ್ಟಪಡುವುದಿಲ್ಲ. ಅವರು ಮಾಡುವ ಅಥವಾ ಹೇಳುವ ವಿಷಯಗಳನ್ನು ನೀವು ಇಷ್ಟಪಡುವುದಿಲ್ಲ. ರಣವೀರ್ ಅವರನ್ನು ಜೈಲಿಗೆ ಕಳುಹಿಸಬೇಕೆಂದು ಒತ್ತಾಯಿಸುತ್ತಿದ್ದೀರಿ. ನಿಮಗೆ ಪ್ರಜ್ಞೆ ಇದೆಯಾ? ಹೂಂ! ಗೊತ್ತಿಲ್ಲ. ಸಮಯ್ ನನ್ನ ಗೆಳೆಯ. ನಾನು ಅವನ ಜೊತೆಗಿದ್ದೇನೆ. ಆದರೆ ಉಳಿದ ಪ್ಯಾನೆಲ್‌ನವರು ಹೇಳಿದ್ದು ಸರಿಯಿಲ್ಲ. ಹೌದು, ಆದರೆ ಇದಕ್ಕಾಗಿ ಅವರು ಜೈಲಿಗೆ ಹೋಗಬೇಕೆಂದು ನಾನು ಭಾವಿಸುವುದಿಲ್ಲ" ಎಂದು ತಮ್ಮ ಇನ್ಸ್ಟಾಗ್ರಾಂ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.