Viral Video: ಪಾಕ್‌ನ ನಡುರಸ್ತೆಯಲ್ಲಿ ಚಲಿಸಿದ ವಿಚಿತ್ರ ವಾಹನ; ವಿಡಿಯೊ ವೈರಲ್
ಪಾಕಿಸ್ತಾನದ ರಸ್ತೆಯಲ್ಲಿ ಅರ್ಧ ಕಾರು, ಅರ್ಧ ಬೈಕ್ ಆಕಾರದ ವಾಹನವೊಂದು ಚಲಿಸಿದ್ದು, ಇದನ್ನು ವ್ಯಕ್ತಿಯೊಬ್ಬರು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇದೀಗ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಅಂದ ಹಾಗೇ ಏನಿದು ವಾಹನ ಎಂಬ ಕುತೂಹಲ ನಿಮ್ಮನ್ನೂ ಕಾಡುತ್ತಿದೆಯಾ...? ಮಾಹಿತಿ ಇಲ್ಲಿದೆ ನೋಡಿ.
![ಪಾಕಿಸ್ತಾನದ ರಸ್ತೆಯಲ್ಲಿ ಇದೆಂಥಾ ವಾಹನ ನೋಡಿ!](https://cdn-vishwavani-prod.hindverse.com/media/original_images/pakistan_viral_video.jpg)
ಪಾಕಿಸ್ತಾನದ ರಸ್ತೆಯಲ್ಲಿ ಚಲಿಸಿದ ವಿಚಿತ್ರ ವಾಹನ
![Profile](https://vishwavani.news/static/img/user.png)
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿನ ವಿಲಕ್ಷಣವಾದ ವಾಹನವೊಂದು ಸೋಶಿಯಲ್ ಮಿಡಿಯಾದಲ್ಲಿ ಗಮನವನ್ನು ಸೆಳೆದು ನೆಟ್ಟಿಗರನ್ನು ಬೆರಗಾಗುವಂತೆ ಮಾಡಿದೆ. ಯಾಕೆಂದರೆ ಆ ವಾಹನ ಅರ್ಧ ಕಾರಿನ ಭಾಗವನ್ನು ಹೊಂದಿದ್ದರೆ ಉಳಿದರ್ಧ ಭಾಗ ಬೈಕ್ ರೀತಿ ಇದೆಯಂತೆ. ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ವ್ಯಕ್ತಿಯೊಬ್ಬರು ವಾಹನದಲ್ಲಿ ಹೋಗುವಾಗ ಈ ರೀತಿಯ ಗಾಡಿ ನೋಡಿ ಶಾಕ್ ಆಗಿದ್ದಾರೆ. ಈ ಹೊಸ ಕ್ರಿಯೇಷನ್ ಮೋಟಾರ್‌ಸೈಕಲ್-ಕಾರು ಹೈಬ್ರಿಡ್ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ಇನ್‌ಸ್ಟಾಗ್ರಾಂನಲ್ಲಿ 3.1 ಮಿಲಿಯನ್ ವ್ಯೂವ್ಸ್ ಗಳಿಸಿದೆ. ಸೋಶಿಯಲ್ ಮಿಡಿಯಾ ನೆಟ್ಟಿಗರು ಇದನ್ನು "ಪ್ರೀಮಿಯಂ ಚಿಂಗ್ಚಿ" ಎಂದು ಕರೆದಿದ್ದಾರೆ.
ಅನೇಕರು ಈ ಪ್ರಯತ್ನವನ್ನು ಹೊಗಳಿದ್ದಾರೆ. ಇದನ್ನು ಪಾಕಿಸ್ತಾನದ ನಾವೀನ್ಯತೆಗೆ ನಿಜವಾದ ಸಾಕ್ಷಿ ಎಂದು ಕರೆದಿದ್ದಾರೆ. ಇತರರು ವಿನ್ಯಾಸದ ಅಸಂಬದ್ಧತೆಯನ್ನು ನೋಡಿ ನಕ್ಕಿದ್ದಾರೆ. "ಇದು ರೋಲ್ಸ್ ರಾಯ್ಸ್ ರಿಕ್ಷಾಗಳ ಕಾರು!" ಎಂದು ಒಬ್ಬರು ತಮಾಷೆ ಮಾಡಿದರೆ, ಇನ್ನೊಬ್ಬರು "ಕನಿಷ್ಠ ಮುಂಭಾಗದಿಂದ, ಇದು ಪ್ರೀಮಿಯಂ ಆಗಿ ಕಾಣುತ್ತದೆ. ಆದರೆ ಹಿಂಭಾಗದಲ್ಲಿದ್ದ ಪ್ರಯಾಣಿಕರಿಗೆ ಶುಭವಾಗಲಿ!" ಎಂದು ವ್ಯಂಗ್ಯವಾಡಿದ್ದಾರೆ. ಇನ್ನೊಬ್ಬರು, "ನೀವು ಕಾರು ಖರೀದಿಸುವ ದೊಡ್ಡ ಕನಸು ಕಂಡಾಗ ಹಾಗೂ ನಿಮ್ಮಲ್ಲಿ ಬಜೆಟ್ ಸಮಸ್ಯೆ ಇದ್ದಾಗ ಈ ರೀತಿ ಆಗುತ್ತದೆ." ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ: Viral News: ಪಾಕಿಸ್ತಾನದಲ್ಲಿಯೇ ಉಳಿದ ಭಾರತದ ಈ ರೈಲು; ಅದರ ಹಿಂದಿನ ರೋಚಕ ಕಥೆ ಏನು ಗೊತ್ತಾ?
ಕಳೆದ ಐದು ವರ್ಷಗಳಿಂದ ಲಾಹೋರ್‌ನಲ್ಲಿ ಭಾರತೀಯ ರೈಲೊಂದು ನಿಂತಿದೆಯಂತೆ. ಅದರ ಸ್ಥಿತಿ ಎಷ್ಟು ಕೆಟ್ಟದಾಗಿದೆಯೆಂದರೆ ಈಗ ಈ ರೈಲಿನ ಬೋಗಿಗಳಿಗೆ ತುಕ್ಕು ಹಿಡಿಯುತ್ತಿದೆಯಂತೆ. ಈ ಸುದ್ದಿ ಎಲ್ಲೆಡೆ ವೈರಲ್ ಆಗಿದೆ. ಸಂಜೌತಾ ಎಕ್ಸ್‌ಪ್ರೆಸ್‍ನ ಮೂಲ ಮತ್ತು ಉದ್ದೇಶ1971 ರಲ್ಲಿ ಸಿಮ್ಲಾ ಒಪ್ಪಂದದ ಸಮಯದಲ್ಲಿ ಇಂದಿರಾ ಗಾಂಧಿ ಮತ್ತು ಜುಲ್ಫಿಕರ್ ಅಲಿ ಭುಟ್ಟೋ ನಡುವಿನ ಮಾತುಕತೆಯ ಸಮಯದಲ್ಲಿ ಉಭಯ ದೇಶಗಳ ನಡುವೆ ನಿಯಮಿತ ರೈಲು ಸೇವೆಯನ್ನು ಪ್ರಾರಂಭಿಸುವ ಆಲೋಚನೆ ಬಂದಿತು. ಹಾಗಾಗಿ ಸಂಜೌತಾ ಎಕ್ಸ್‌ಪ್ರೆಸ್ ಜುಲೈ 22, 1976 ರಂದು, ಅಟ್ಟಾರಿ ಮತ್ತು ಲಾಹೋರ್ ನಡುವೆ ಮೊದಲ ಬಾರಿಗೆ ಸೇವೆಯನ್ನು ಶುರು ಮಾಡಿತ್ತು.
2019 ರಲ್ಲಿ, ಜಮ್ಮು ಮತ್ತು ಕಾಶ್ಮೀರದಿಂದ 370 ನೇ ವಿಧಿಯನ್ನು ತೆಗೆದುಹಾಕುವ ಐತಿಹಾಸಿಕ ನಿರ್ಧಾರವನ್ನು ಭಾರತ ತೆಗೆದುಕೊಂಡಾಗ, ಪಾಕಿಸ್ತಾನ ಅದನ್ನು ಬಲವಾಗಿ ವಿರೋಧಿಸಿತು. ಈ ನಡುವೆ ಉಭಯ ದೇಶಗಳ ನಡುವಿನ ಉದ್ವಿಗ್ನತೆ ಹೆಚ್ಚಾಯಿತು ಮತ್ತು ಸಂಜೌತಾ ಎಕ್ಸ್‌ಪ್ರೆಸ್ ಅನ್ನು ನಿಲ್ಲಿಸಲಾಯಿತು. ರೈಲು ಸೇವೆಯನ್ನು ನಿಲ್ಲಿಸಿದಾಗ, ಸಂಜೌತಾ ಎಕ್ಸ್‌ಪ್ರೆಸ್‌ನ ಬೋಗಿಗಳು ಪಾಕಿಸ್ತಾನದ ಲಾಹೋರ್‌ನಲ್ಲಿ ನಿಂತಿದ್ದವು. ಈ 11 ಬೋಗಿಗಳು ಇನ್ನೂ ಪಾಕಿಸ್ತಾನದಲ್ಲಿಯೇ ಇದ್ದರೆ, ಪಾಕಿಸ್ತಾನದ ರೈಲಿನ 16 ಬೋಗಿಗಳು ಭಾರತದ ಅಟ್ಟಾರಿ ರೈಲ್ವೆ ನಿಲ್ದಾಣದಲ್ಲಿ ನಿಂತಿವೆ.