ಡೀಸೆಲ್ ಸಾಗಿಸುತ್ತಿದ್ದ ಗೂಡ್ಸ್ ರೈಲಿನಲ್ಲಿ ಬೆಂಕಿ ಅವಘಡ; 8 ರೈಲುಗಳ ಸಂಚಾರ ರದ್ದು
ಎನ್ನೋರ್ (ಚೆನ್ನೈ) ನಿಂದ ಮುಂಬೈಗೆ 45 ಟ್ಯಾಂಕರ್‌ಗಳಷ್ಟು ಕಚ್ಚಾ ತೈಲವನ್ನು ಸಾಗಿಸುತ್ತಿದ್ದ ಸರಕು ಸಾಗಣೆ ರೈಲಿನಲ್ಲಿ ತಿರುವಳ್ಳೂರು ಬಳಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿತು. ಒಂದು ಟ್ಯಾಂಕರ್‌ಗೆ ಬೆಂಕಿ ಹೊತ್ತಿಕೊಂಡಿದ್ದು ಆ ಬಳಿಕ ಇತರ ಟ್ಯಾಂಕರ್‌ಗಳಿಗೆ ಹರಡಿತು. ರೈಲು ನಿಲ್ದಾಣದಲ್ಲಿ ದಟ್ಟ ಹೊಗೆ ಆವರಿಸಿದೆ ಎಂದು ವರದಿಯಾಗಿದೆ.


ಚೆನ್ನೈ: ಚೆನ್ನೈನಿಂದ ಇಂಧನ ಸಾಗಿಸುತ್ತಿದ್ದ ರೈಲು ಟ್ಯಾಂಕರ್(Oil Tanker Fire Breakout) ಬೋಗಿಯೊಂದರಲ್ಲಿ ಬೆಂಕಿ(Train Accident) ಕಾಣಿಸಿಕೊಂಡ ಪರಿಣಾಮ, ಬೆಂಗಳೂರು, ಮೈಸೂರು ಮತ್ತು ಕೊಯಮತ್ತೂರು ನಡುವೆ ಸಂಚರಿಸುವ ಪ್ರೀಮಿಯಮ್ ವಂದೇಭಾರತ್, ಶತಾಬ್ದಿ ಎಕ್ಸ್ ಪ್ರೆಸ್ ಸೇರಿದಂತೆ ಕನಿಷ್ಠ ಎಂಟು ರೈಲುಗಳ ಸಂಚಾರ ರದ್ದುಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎನ್ನೋರ್ (ಚೆನ್ನೈ) ನಿಂದ ಮುಂಬೈಗೆ 45 ಟ್ಯಾಂಕರ್‌ಗಳಷ್ಟು ಕಚ್ಚಾ ತೈಲವನ್ನು ಸಾಗಿಸುತ್ತಿದ್ದ ಸರಕು ಸಾಗಣೆ ರೈಲಿನಲ್ಲಿ ತಿರುವಳ್ಳೂರು ಬಳಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿತು. ಒಂದು ಟ್ಯಾಂಕರ್‌ಗೆ ಬೆಂಕಿ ಹೊತ್ತಿಕೊಂಡಿದ್ದು ಆ ಬಳಿಕ ಇತರ ಟ್ಯಾಂಕರ್‌ಗಳಿಗೆ ಹರಡಿತು. ರೈಲು ನಿಲ್ದಾಣದಲ್ಲಿ ದಟ್ಟ ಹೊಗೆ ಆವರಿಸಿದೆ ಎಂದು ವರದಿಯಾಗಿದೆ.
ಚೆನ್ನೈ-ಅರಕ್ಕೋಣಂ ಮಾರ್ಗದಲ್ಲಿ ರೈಲು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದ್ದು. ಪ್ರಯಾಣಿಕ ಮತ್ತು ಸರಕು ಸಾಗಣೆ ಸೇವೆಗಳ ಮೇಲೆ ಪರಿಣಾಮ ಬೀರಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಸರಕು ಸಾಗಣೆ ರೈಲಿನ ಮೂರು ಬೋಗಿಗಳು ಹಳಿ ತಪ್ಪಿದ್ದರಿಂದ, ಟ್ಯಾಂಕರ್ ನಿಂದ ಇಂಧನ ಸೋರಿಕೆಯಾಗಿ ಈ ಬೆಂಕಿ ಆಕಸ್ಮಿಕ ಸಂಭವಿಸಿದೆ ಎಂದು ಹೇಳಲಾಗಿದೆ.
In connection will fire mishap of a goods train near Tiruvallur, passengers seeking guidance/assistance are requested to contact Helpline numbers given below
— Southern Railway (@GMSRailway) July 13, 2025
📞 044-25354151
📞 044-24354995#SouthernRailway
ರೈಲುಗಳ ಮಾರ್ಗ ಬದಲಾವಣೆಯ ಬಗ್ಗೆ ದಕ್ಷಿಣ ರೈಲ್ವೆ ಇಲಾಖೆಯು ಎಕ್ಸ್ ಪೋಸ್ಟ್ ಮೂಲಕ ಮಾಹಿತಿ ನೀಡಿದೆ. "ತಿರುವಳ್ಳೂರು ಬಳಿ ಸಂಭವಿಸಿದ ಘಟನೆಯಿಂದ ಮುಂಜಾಗೃತವಾಗಿ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಲಾಗಿದೆ. ಬೆಂಕಿ ನಂದಿಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆದ್ದರಿಂದ ರೈಲು ಸೇವೆಗಳಲ್ಲಿ ಈ ಕೆಳಗಿನ ಬದಲಾವಣೆಗಳನ್ನು ಮಾಡಲಾಗಿದೆ" ಎಂದು ರೈಲುಗಳ ಪಟ್ಟಿಯನ್ನು ಹಂಚಿಕೊಂಡಿದೆ. ತುರ್ತು ಸಹಾಯಕ್ಕಾಗಿ ಸಹಾಯವಾಣಿ: 044-25354151, 044-24354995 ತೆರೆಯಲಾಗಿದೆ.
ಇದನ್ನೂ ಓದಿ ಫುಟ್‌ಪಾತ್‌ನಲ್ಲಿ ಮಲಗಿದ್ದವರ ಮೇಲೆ ಕಾರು ಚಲಾಯಿಸಿದ ಚಾಲಕನ ಬಂಧನ
ತಮಿಳುನಾಡು ಸಚಿವ ಎಸ್.ಎಂ. ನಾಸರ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಬೆಂಕಿ ನಿಯಂತ್ರಿಸಲು ಇನ್ನೂ ಕೆಲ ಗಂಟೆಗಳು ಅಗತ್ಯವಿದೆ ಎಂದು ಜಿಲ್ಲಾಡಳಿತ ಹೇಳಿದೆ.