ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kidnap Case: ಪೋಷಕರಾಗಲು ಸಾಧ್ಯವಿಲ್ಲ ಎಂದು ಮಗುವನ್ನು ಅಪಹರಿಸಿದ ದಂಪತಿ; ಸಿಸಿಟವಿಯಲ್ಲಿ ದೃಶ್ಯ ಸೆರೆ

ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ದಂಪತಿ ಬಾಲಕನನ್ನು ಅಪಹರಿಸಿದ ಘಟನೆ ನಡೆದಿದೆ. ಕಳೆದ ವಾರ ಜೈಪುರ ರೈಲ್ವೆ ನಿಲ್ದಾಣದಿಂದ ನಾಲ್ಕು ವರ್ಷದ ಬಾಲಕನನ್ನು ಅಪಹರಿಸಿದ್ದಾರೆ. ಮಾರ್ಚ್ 14 ರಂದು ತನ್ನ ತಾಯಿಯೊಂದಿಗೆ ರೈಲುಗಾಗಿ ಕಾಯುತ್ತಿದ್ದ ಮಗುವನ್ನು 28 ವರ್ಷದ ಸುಂದರ್ ಕಶ್ಯಪ್ ಮತ್ತು ಜೀವಿಕಾ ಅಪಹರಿಸಿದ್ದರು.

ಪೋಷಕರಾಗಲು ಸಾಧ್ಯವಿಲ್ಲ ಎಂದು ಮಗುವನ್ನು ಅಪಹರಿಸಿದ ದಂಪತಿ

ಅಪಹರಣದ ದೃಶ್ಯ

Profile Vishakha Bhat Mar 19, 2025 3:56 PM

ಜೈಪುರ: ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ದಂಪತಿ ಬಾಲಕನನ್ನು ಅಪಹರಿಸಿದ ಘಟನೆ (Kidnap Case) ನಡೆದಿದೆ. ಕಳೆದ ವಾರ ಜೈಪುರ (Jaipur) ರೈಲ್ವೆ ನಿಲ್ದಾಣದಿಂದ ನಾಲ್ಕು ವರ್ಷದ ಬಾಲಕನನ್ನು ಅಪಹರಿಸಿದ್ದಾರೆ. ಮಾರ್ಚ್ 14 ರಂದು ತನ್ನ ತಾಯಿಯೊಂದಿಗೆ ರೈಲುಗಾಗಿ ಕಾಯುತ್ತಿದ್ದ ಮಗುವನ್ನು 28 ವರ್ಷದ ಸುಂದರ್ ಕಶ್ಯಪ್ ಮತ್ತು ಜೀವಿಕಾ ಅಪಹರಿಸಿದ್ದರು. ಸದ್ಯ ಆರೋಪಿಗಳನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ದಂಪತಿಗಳು ಪೋಷಕರಾಗಲು ಬಯಸಿದ್ದರು. ಆದರೆ ಅದು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಜೈಪುರದ ರೈಲ್ವೆ ನಿಲ್ದಾಣದಲ್ಲಿ ತನ್ನ ತಾಯಿ ಪ್ರಿಯಾಂಕಾ ಜೊತೆ ಇದ್ದ ನಾಲ್ಕು ವರ್ಷದ ಬಾಲಕನನ್ನು ಈ ಜೋಡಿ ಅಪಹರಣ ಮಾಡಿದೆ.

ನಂತರ ಮಗುವಿನ ತಾಯಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಪೊಲೀಸರು ಮಂಗಳವಾರ ದಂಪತಿಯನ್ನು ಪತ್ತೆಹಚ್ಚಿ ಮಗುವನ್ನು ಅವನ ಹೆತ್ತವರಿಗೆ ಹಿಂದಿರುಗಿಸಿದ್ದಾರೆ. ರಾಜಸ್ಥಾನದ ದೌಸಾ ಜಿಲ್ಲೆಯ ಮಹುವಾದಿಂದ ಪೊಲೀಸರು ದಂಪತಿಯನ್ನು ಬಂಧಿಸಿದ್ದಾರೆ. ತನಿಖೆಯಲ್ಲಿ ದಂಪತಿಗಳು ಸುಮಾರು ಎಂಟು ತಿಂಗಳಿನಿಂದ ಮಗುವನ್ನು ಅಪಹರಿಸಲು ಯೋಜಿಸುತ್ತಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ.

ಜೀವಿಕಾ ಬೇರೆ ವ್ಯಕ್ತಿಯನ್ನು ಮದುವೆಯಾಗಿದ್ದು, ಆತನಿಂದ ಇಬ್ಬರು ಮಕ್ಕಳಿದ್ದಾರೆ. ಆದರೆ ಆಕೆ ತನ್ನ ಗಂಡ ಹಾಗೂ ಮಕ್ಕಳನ್ನು ಬಿಟ್ಟು ಜೈಪುರದಲ್ಲಿ ಕೂಲಿ ಕಾರ್ಮಿಕ ಕಶ್ಯಪ್ ಜೊತೆ ಒಂದು ವರ್ಷದಿಂದ ವಾಸವಿದ್ದಳು. ಆದರೆ ಜೀವಿಕಾಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಆಕೆಗೆ ಇನ್ನು ಮಕ್ಕಳಿಗೆ ಜನ್ಮ ನೀಡಲು ಸಾಧ್ಯವಿಲ್ಲ ಎಂದು ಸುಂದರ್‌ಗೆ ತಿಳಿದಿದ್ದೇ ಆಕೆಯೊಂದಿಗೆ ಜಗಳವಾಡಿದ್ದ. ನಂತರ ಅವರು ಅಪಹರಣದ ಯೋಜನೆ ಹಾಕಿಕೊಂಡಿದ್ದರು. ಮಾರ್ಚ್ 14 ರಂದು ಅವರು ಜೈಪುರ ರೈಲ್ವೆ ನಿಲ್ದಾಣಕ್ಕೆ ಹೋಗಿ ನಾಲ್ಕು ವರ್ಷದ ಬಾಲಕ ತಾಯಿಯಿಂದ ದೂರವಾಗಿ ಓಡಾಡುತ್ತಿದ್ದಾಗ ಅವನನ್ನು ಅಪಹರಿಸಿದ್ದರು. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದೀಗ ಪೊಲೀಸರು ಅವರನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.



ಈ ಸುದ್ದಿಯನ್ನೂ ಓದಿ: Kidnap Case: ನರ್ಸಿಂಗ್ ಓದುತ್ತಿದ್ದ ಯುವತಿ ನಾಪತ್ತೆ, ಯುವಕನ ಮೇಲೆ ಅಪಹರಣ ಕೇಸ್

ಮಗುವನ್ನು ಅಪಹರಿಸಿದ ನಂತರ ದಂಪತಿ ಮಹುವಾಗೆ ಬಸ್ ಹತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಆರೋಪಿಗಳನ್ನು ಗುರುತಿಸಿ ಅವರ ಮೊಬೈಲ್ ಫೋನ್‌ಗಳನ್ನು ಟ್ರ್ಯಾಕ್ ಮಾಡಿದ್ದಾರೆ. ಭಾನುವಾರ ಪೊಲೀಸರು ಸ್ಥಳಕ್ಕೆ ತಲುಪಿ ಮನೆಯನ್ನು ಶೋಧಿಸಿದಾಗ, ಮಗು ಸುರಕ್ಷಿತವಾಗಿ ಪತ್ತೆಯಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ. ಪೊಲೀಸರ ಪ್ರಕಾರ, ಮಗು ಹೊಸ ಬಟ್ಟೆ ಧರಿಸಿ ಮಲಗಿರುವುದು ಕಂಡುಬಂದಿದೆ. ಆರೋಪಿಗಳನ್ನು ವಿಚಾರಣೆ ನಡೆಸಿದಾಗ, ಅಪಹರಣಕ್ಕೂ ಮುನ್ನ ಮಗುವಿಗೆ ಹೊಸ ಬಟ್ಟೆ ಮತ್ತು ಆಹಾರಕ್ಕಾಗಿ ಶಾಪಿಂಗ್ ಮಾಡಲಾಗಿತ್ತು ಎಂದು ಬಹಿರಂಗಪಡಿಸಿದ್ದಾರೆ. ಅಪಹರಣ ಮಾಡಲು ರೈಲ್ವೆ ನಿಲ್ದಾಣಕ್ಕೆ ಹೋದಾಗ, ಅವರು ಬಟ್ಟೆ, ಚಿಪ್ಸ್ ಮತ್ತು ಹಾಲನ್ನು ಚೀಲದಲ್ಲಿ ತಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಬಾಲಕನನ್ನು ತಂದೆ ತಾಯಿಗೆ ಒಪ್ಪಿಸಲಾಗಿದೆ.