Monday, 13th May 2024

ಮನೆಮಾರಾಟಕ್ಕಿದೆ…. ಹಾರರ್ ಕಾಮಿಡಿಯ ಮಿಶ್ರಣ

ಹಾರರ್ ಚಿತ್ರವೆಂದರೆ ಅಲ್ಲಿ ಬೇರೆ ಯಾವುದಕ್ಕೆೆ ಅವಕಾಶ ಇರುವುದಿಲ್ಲ. ಅದರಂತೆ ಕಾಮಿಡಿ ಅಂದರೆ ನಗು ಬಿಟ್ಟು ಬೇರೇನೂ ಸಿಗುವುದಿಲ್ಲ. ಹೊಸತು ಎನ್ನುವಂತೆ ಮನೆ ಮಾರಾಟಕ್ಕಿಿದೆ ಅಡಿ ಬರಹದಲ್ಲಿ ದೆವ್ವಗಳೇ ಎಚ್ಚರಿಕೆ ಎಂದು ಹೇಳಿಕೊಂಡಿರುವ ಚಿತ್ರದಲ್ಲಿ ಇವರೆಡು ಒಂದರ ನಂತರ ಸನ್ನಿಿವೇಶಗಳಲ್ಲಿ ಮೂಡಿಬಂದಿದೆ. ಶಶಿರ, ಶ್ರೀಕಂಠ, ಶ್ರಾಾವಣಿ ಸುಬ್ರಮಣಿ, ಪಟಾಕಿ ಚಿತ್ರಗಳ ನಿರ್ದೇಶಕ ಮಂಜುಸ್ವರಾಜ್ ಈ ಬಾರಿ ಎರಡು ಅಂಶಗಳನ್ನು ಸೇರಿಸಿಕೊಂಡು ಕತೆ ಹೆಣೆದಿದ್ದಾಾರೆ. ಇದಕ್ಕೆೆ ತೆಲುಗಿನ ಚಿತ್ರ ಸ್ಫೂರ್ತಿಯಂತೆ. ಬಾರ್‌ನಲ್ಲಿ ಕ್ಯಾಾಶಿಯರ್ ಆಗಿರುವ ಚಿಕ್ಕಣ್ಣ, ಎಣ್ಣೆೆ ಪ್ರಿಿಯಾ ಸಾಧುಕೋಕಿಲ, ಇರಳು ಗಣ್ಣಿಿನ ಎಟಿಎಂ ಸೆಕ್ಯುರಿಟಿ ಗಾರ್ಡ್ ರವಿಶಂಕರ್, ನಟನಾಗಲು ಬಯಸುವ ಕುರಿಪ್ರತಾಪ್ ಅವರಿಗೆ ಅಂತಲೇ ಹಾಡು ಇರಲಿದೆ. ತಕ್ಷಣ ಹೆದರಿಸುವ ದೃಶ್ಯಗಳು ಬರುವುದು ಹೈಲೈಟ್ ಆಗಿದೆ. ಪುರಾತನ ಮನೆಯನ್ನು ಮಾರಾಟ ಮಾಡಿಸಲು ಒಂದು ಸಂದರ್ಭದಲ್ಲಿ ಭೇಟಿಯಾಗಿ ನಾಲ್ವರು ಇಲ್ಲಿಗೆ ಬರುತ್ತಾಾರೆ. ದೆವ್ವಗಳು ಇದೆ ಎಂದು ತಿಳಿದುಕೊಂಡು ಅದನ್ನೆೆ ಹೆದರಿಸುತ್ತಾಾರೆ. ಅದು ಹೇಗೆ, ಏನೇನು ಆಗುತ್ತದೆ ಎಂಬುದು ಭಯ ತರಿಸುವ-ಹಾಸ್ಯ ಹುಟ್ಟಿಿಸುವ ರೂಪದಲ್ಲಿ ಸಾಗುತ್ತದಂತೆ. ಟೈಟಲ್ ಮನೆ ಮನೆ ಮಾತಾಗುತ್ತದೆಂದು ತಂಡದ ಆಶಾಭಾವನೆಯಾಗಿದೆ.


ಮತ್ತೊೊಂದು ಮುಖ್ಯ ಪಾತ್ರದಲ್ಲಿ ಶೃತಿಹರಿಹರನ್ ಅವರೊಂದಿಗೆ ಗ್ಯಾಾಪ್ ನಂತರ ಕಾರುಣ್ಯರಾಮ್, ಮನ್‌ದೀಪ್‌ರಾಯ್, ಶಿವರಾಂ, ನೀನಾಸಂಅಶ್ವಥ್,ಗಿರಿ, ರಮೇಶ್‌ಪಂಡಿತ್, ಕಾಮಿಡಿ ಕಿಲಾಡಿಗಳು ಖ್ಯಾಾತಿಯ ಸದಾನಂದಕಾಳೆ,ಗುಣಶೇಖರ್ ಮುಂತಾದವರು ನಟಿಸಿದ್ದಾಾರೆ. ಕತೆಗೆ ಅನುಗುಣವಾಗಿ ನೆಲಮಂಗಲ ಬಳಿ ಇರುವ ಜಾಗದಲ್ಲಿ ದೊಡ್ಡದಾದ ಮನೆ ಸೆಟ್‌ನ್ನು ಸಿದ್ದಪಡಿಸಿ ಶೇಕಡ 90ರಷ್ಟು ಚಿತ್ರೀಕರಣವನ್ನು ಅಲ್ಲಿಯೇ ಮುಗಿಸಿದ್ದಾಾರೆ. ಮೂರು ಹಾಡುಗಳಿಗೆ ಅಭಿಮನ್‌ರಾಯ್ ಸಂಗೀತ ಸಂಯೋಜನೆ ಇರಲಿದೆ. ಛಾಯಾಗ್ರಹಣ ಸುರೇಶ್‌ಬಾಬು, ಸಂಕಲನ ವಿಶ್ವ, ಕಲೆ ಮೋಹನ್.ಬಿ.ಕರೆ ಅವರದಾಗಿದೆ. ಅದ್ದೂರಿ ಚಿತ್ರಗಳನ್ನು ನಿರ್ಮಾಣ ಮಾಡಿರುವ ಎಸ್.ವಿ.ಬಾಬು ಹದಿನಾರನೇ ಸಿನಿಮಾಕ್ಕೆೆ ಬಂಡವಾಳ ಹೂಡಿದ್ದಾಾರೆ. ಚಿತ್ರವು ಶುಕ್ರವಾರದಂದು ಸುಮಾರು 150 ಕೇಂದ್ರಗಳಲ್ಲಿ ತೆರೆ ಕಾಣಲಿದೆ.

Leave a Reply

Your email address will not be published. Required fields are marked *

error: Content is protected !!