Wednesday, 11th December 2024

ಹೆಣ್ಣು ಮಗುವಿಗೆ ಜನ್ಮ ನೀಡಿದ ಡಿವಿಲಿಯರ್ಸ್‌ ಪತ್ನಿ

ಜೋಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್‌ (ಎಬಿಡಿ) ಪತ್ನಿ ಡೇನೀಲ್ ಹೆಣ್ಣು ಮಗು ವಿಗೆ ಜನ್ಮ ನೀಡಿದ್ದಾರೆ. ಈ ಕುರಿತು ಸ್ಫೋಟಕ ಬ್ಯಾಟ್ಸ್‌ಮನ್ ಎಬಿಡಿ ಇನ್‌ಸ್ಟಾಗ್ರಾಂನಲ್ಲಿ ಖುಷಿ ಹಂಚಿಕೊಂಡಿದ್ದಾರೆ.

ಪತ್ನಿ ಹಾಗೂ ಮಗುವಿನೊಂದಿಗೆ ಇರುವ ಫೋಟೋವನ್ನು ಡಿವಿಲಿಯರ್ಸ್‌ ಪ್ರಕಟಿಸಿದ್ದು, ಎಬಿಡಿ ದಂಪತಿಗೆ ಮೂರನೇ ಮಗು ಇದಾಗಿದ್ದು, ಇಬ್ಬರು ಗಂಡು ಮಕ್ಕಳಿದ್ದಾರೆ. ಹೆಣ್ಣು ಮಗುವಿಗೆ ಯೆಂಟೆ ಎಂದು ಹೆಸರಿಡಲಾಗಿದೆ.

2013ರಲ್ಲಿ ಮದುವೆಯಾದ ಈ ಜೋಡಿಗೆ 2015ರಲ್ಲಿ ಮೊದಲ ಮಗ ಅಬ್ರಹಾಂ ಡಿ ವಿಲಿಯರ್ಸ್‌ ಜನಿಸಿದರೆ, 2017ರಲ್ಲಿ ಜಾನ್ ಡಿ ವಿಲಿಯರ್ಸ್‌ ಜನಿಸಿದರು. ಇದೀಗ ಹೆಣ್ಣುಮಗುವಿನ ಜನನದಿಂದಾಗಿ ಎಬಿಡಿ ದಂಪತಿಯ ಸಂತೋಷ ಇಮ್ಮಡಿಗೊಂಡಿದೆ. ಇತ್ತೀಚೆಗೆ ಯುಎಇಯಲ್ಲಿ ಮುಕ್ತಾಯಗೊಂಡ ಐಪಿಎಲ್‌ನಲ್ಲಿ ಎಬಿಡಿ ಒಳಗೊಂಡ ಆರ್‌ಸಿಬಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. 15 ಪಂದ್ಯಗಳನ್ನಾಡಿದ ಎಬಿಡಿ ಸ್ಟ್ರೈಕ್‌ರೇಟ್ 158.74 ರಂತೆ 5 ಅರ್ಧಶತಕ ಒಳಗೊಂಡಂತೆ 454 ರನ್ ಬಾರಿಸಿದ್ದರು.

ಎಬಿ ಡಿವಿಲಿಯರ್ಸ್‌, ಮುಂಬರುವ ಬಿಗ್ ಬಾಷ್ ಲೀಗ್‌ನಿಂದ ಹೊರಗುಳಿದಿದ್ದಾರೆ. 2018ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಎಬಿಡಿ ವಿದಾಯ ಹೇಳಿದ್ದಾರೆ. 36 ವರ್ಷದ ಎಬಿ ಡಿವಿಲಿಯರ್ಸ್‌, ಟಿ20 ವಿಶ್ವಕಪ್‌ಗೆ ವಾಪಸ್ ವೇಳೆಗೆ ರಾಷ್ಟ್ರೀಯ ತಂಡಕ್ಕೆ ವಾಪಸಾಗುವ ನಿರ್ಧರಿಸಿದ್ದರೂ ಟೂರ್ನಿಯೇ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿದೆ.