ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Champions Trophy: ಟೂರ್ನಿ ಶ್ರೇಷ್ಠ ಪ್ರಶಸ್ತಿ ವರುಣ್‌ ಚಕ್ರವರ್ತಿಗೆ ಸಿಗಬೇಕಿತ್ತೆಂದ ಆರ್‌ ಅಶ್ವಿನ್‌!

R Ashwin on Player of the Tournament: ನ್ಯೂಜಿಲೆಂಡ್‌ ಆರಂಭಿಕ ಬ್ಯಾಟ್ಸ್‌ಮನ್‌ ರಚಿನ್‌ ರವೀಂದ್ರ ಬದಲಿಗೆ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಟೂರ್ನಿ ಶ್ರೇಷ್ಠ ಪ್ರಶಸ್ತಿಯನ್ನು ವರುಣ್‌ ಚಕ್ರವರ್ತಿಗೆ ನೀಡಬೇಕಿತ್ತೆಂದು ಭಾರತದ ಸ್ಪಿನ್‌ ದಿಗ್ಗಜ ರವಿಚಂದ್ರನ್‌ ಅಶ್ವಿನ್‌ ಆಯ್ಕೆ ಮಾಡಿದ್ದಾರೆ. ಆ ಮೂಲಕ ಈ ಟೂರ್ನಿಯಲ್ಲಿ ಭಾರತದ ಪರ ವೈಯಕ್ತಿಕ ಗರಿಷ್ಠ ಮೊತ್ತವನ್ನು ಕಲೆ ಹಾಕಿದ್ದ ಶ್ರೇಯಸ್‌ ಅಯ್ಯರ್‌ ಅವರನ್ನು ಕಡೆಗಣಿಸಿದ್ದಾರೆ.

ವರುಣ್‌ ಚಕ್ರವರ್ತಿಗೆ ಟೂರ್ನಿ ಶ್ರೇಷ್ಠ ಪ್ರಶಸ್ತಿ ಸಿಗಬೇಕಿತ್ತು: ಅಶ್ವಿನ್‌!

ವರುಣ್‌ ಚಕ್ರವರ್ತಿಗೆ ಆರ್‌ ಅಶ್ವಿನ್‌ ಮೆಚ್ಚುಗೆ.

Profile Ramesh Kote Mar 10, 2025 8:02 PM

ನವದೆಹಲಿ: ಐಸಿಸಿ ಚಾಂಪಿಯನ್ಸ್‌ ಟ್ರೋಫಿ (Champions Trophy 2025) ಟೂರ್ನಿಯಲ್ಲಿ ಭಾರತ ತಂಡದ ಪರ ಬೌಲಿಂಗ್‌ ಶ್ರೇಷ್ಠ ಪ್ರದರ್ಶನವನ್ನು ಹೊರತಂದ ಸ್ಪಿನ್ನರ್‌ ವರುಣ್‌ ಚಕ್ರವರ್ತಿ (varun Chakravarthy) ಒಟ್ಟು 9 ವಿಕೆಟ್‌ಗಳನ್ನು ಕಬಳಿಸಿದ್ದರು. ಆ ಮೂಲಕ ಭಾರತ ತಂಡ ಚಾಂಪಿಯನ್‌ ಆಗುವಲ್ಲಿ ಚೆನ್ನೈ ಮೂಲದ ಸ್ಪಿನ್ನರ್‌ ಬಹುಮುಖ್ಯ ಪಾತ್ರವನ್ನು ವಹಿಸಿದ್ದರು. ಈ ಹಿನ್ನೆಲೆಯಲ್ಲಿ ವರುಣ್‌ ಚಕ್ರವರ್ತಿಗೆ ಟೂರ್ನಿ ಶ್ರೇಷ್ಠ ಪ್ರಶಸ್ತಿ ನೀಡಬೇಕಾಗಿತ್ತೆಂದು ಭಾರತದ ಸ್ಪಿನ್‌ ದಿಗ್ಗಜ ಆರ್‌ ಅಶ್ವಿನ್‌ (R Ashwin) ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಆದರೆ, ಬ್ಯಾಟಿಂಗ್‌ನಲ್ಲಿ 263 ರನ್‌ಗಳನ್ನು ಕಲೆ ಹಾಕಿದ್ದ ನ್ಯೂಜಿಲೆಂಡ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ರಚಿನ್‌ ರವೀಂದ್ರಗೆ ಟೂರ್ನಿ ಶ್ರೇಷ್ಠ ಪ್ರಶಸ್ತಿಯನ್ನು ನೀಡಲಾಗಿತ್ತು.

ಭಾನುವಾರ ದುಬೈನ ಇಂಟರ್‌ನ್ಯಾನಷಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಫೈನಲ್‌ ಹಣಾಹಣಿಯಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ನ್ಯೂಜಿಲೆಂಡ್‌ ತಂಡ, 251 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ 252 ರನ್‌ಗ ಗುರಿಯನ್ನು ಹಿಂಬಾಲಿಸಿದ ಭಾರತ ತಂಡ, ರೋಹಿತ್‌ ಶರ್ಮಾ, ಶ್ರೇಯಸ್‌ ಅಯ್ಯರ್‌, ಕೆಎಲ್‌ ರಾಹುಲ್‌ ಬ್ಯಾಟಿಂಗ್‌ ಬಲದಿಂದ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಟೀಮ್‌ ಇಂಡಿಯಾ ಫೈನಲ್‌ ಪಂದ್ಯವನ್ನು ಗೆದ್ದುಕೊಂಡಿತ್ತು. ಆ ಮೂಲಕ ಭಾರತ ತಂಡ ಮೂರನೇ ಚಾಂಪಿಯನ್ಸ್‌ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು. 76 ರನ್‌ಗಳನ್ನು ಕಲೆ ಹಾಕಿದ್ದ ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು.

IND vs NZ: ನ್ಯೂಜಿಲೆಂಡ್‌ಗೆ ಮಣ್ಣು ಮುಕ್ಕಿಸಿ ಮೂರನೇ ಚಾಂಪಿಯನ್ಸ್‌ ಟ್ರೋಫಿ ಗೆದ್ದ ಭಾರತ!

ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ರಚಿನ್‌ ರವೀಂದ್ರ ಅಗ್ರ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿ ಶ್ರೇಯಸ್‌ ಅಯ್ಯರ್‌ ಹಾಗೂ ಐದನೇ ಸ್ಥಾನದಲ್ಲಿ ವಿರಾಟ್‌ ಕೊಹ್ಲಿ ಇದ್ದರು. ಶ್ರೇಯಸ್‌ ಅಯ್ಯರ್‌ 5 ಪಂದ್ಯಗಳಿಂದ 243 ರನ್‌ಗಳನ್ನು ಕಲೆ ಹಾಕಿದ್ದರೆ, ವಿರಾಟ್‌ ಕೊಹ್ಲಿ ಅಷ್ಟೇ ಪಂದ್ಯಗಳಿಂದ 218 ರನ್‌ಗಳನ್ನು ಗಳಿಸಿದ್ದರು. ಇನ್ನು ಭಾರತ ತಂಡದ ಸ್ಪನ್ನರ್‌ ವರುಣ್‌ ಚಕ್ರವರ್ತಿಮೂರು ಪಂದ್ಯಗಳಿಂದ 9 ವಿಕೆಟ್‌ಗಳನ್ನು ಕಬಳಿಸಿದ್ದರು. ಅಂದಹಾಗೆ ಫೈನಲ್‌ ಹಣಾಹಣಿಯ ಬಳಿಕ ಶ್ರೇಯಸ್‌ ಅಯ್ಯರ್‌ ಅಥವಾ ವಿರಾಟ್‌ ಕೊಹ್ಲಿ ಪೈಕಿ ಒಬ್ಬರು ಟೂರ್ನಿ ಶ್ರೇಷ್ಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಇವರನ್ನು ಹಿಂದಿಕ್ಕಿ ರಚಿನ್‌ ರವೀಂದ್ರ ಈ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದರು.

IND vs NZ: ರೋಹಿತ್‌ ಶರ್ಮಾ ಬ್ಯಾಟಿಂಗ್‌ನಿಂದ ಬೌಲರ್‌ಗಳು ಭಯ ಬಿದ್ದಿದ್ದರೆಂದ ಮಿಚೆಲ್‌ ಸ್ಯಾಂಟ್ನರ್‌!

ವರುಣ್‌ ಚಕ್ರವರ್ತಿಗೆ ಟೂರ್ನಿ ಶ್ರೇಷ್ಠ ಪ್ರಶಸ್ತಿ ನೀಡಬೇಕಿತ್ತು: ಅಶ್ವಿನ್‌

ಆದರೆ, ಭಾರತೀಯ ಸ್ಪಿನ್‌ ದಿಗ್ಗಜ ರವಿಚಂದ್ರನ್‌ ಅಶ್ವಿನ್‌ ಅವರು, ವಿಭಿನ್ನ ಅಭಿಪ್ರಾಯವನ್ನು ಹೊಂದಿದ್ದಾರೆ. ಭಾರತ ತಂಡದ ಸ್ಪಿನ್ನರ್‌ ವರುಣ್‌ ಚಕ್ರಚರ್ತಿಗೆ ಟೂರ್ನಿ ಶ್ರೇಷ್ಠ ಪ್ರಶಸ್ತಿಯನ್ನು ನೀಡಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಮ್ಮ ಅಧಿಕೃತ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಿದ ವಿಡಿಯೊದಲ್ಲಿ ಮಾತನಾಡಿದ ಆರ್‌ ಅಶ್ವಿನ್‌, "ನಾನೇನಾದರೂ ಹೇಳಿರಲಿ ಅಥವಾ ಮಾಡಿರಲಿ, ನನ್ನ ಪ್ರಕಾರ ಟೂರ್ನಿ ಶ್ರೇಷ್ಠ ಪ್ರಶಸ್ತಿ, ನನ್ನ ದೃಷ್ಟಿಯಲ್ಲಿ ವರುಣ್‌ ಚಕ್ರವರ್ತಿಯನ್ನು ಆಯ್ಕೆ ಮಾಡುತ್ತೇನೆ. ಇವರು ಟೂರ್ನಿಯುದ್ದಕ್ಕೂ ಎಲ್ಲಾ ಪಂದ್ಯಗಳಲ್ಲಿ ಆಡಿರಲಿಲ್ಲ, ಆದರೆ ಇವರು ಟೂರ್ನಿಯಲ್ಲಿ ದೊಡ್ಡ ಪ್ರಾಬಲ್ಯವನ್ನು ಉಂಟು ಮಾಡಿದ್ದರು. ವರುಣ್‌ ಚಕ್ರವರ್ತಿ ಫೈನಲ್‌ ಆಡಿಲ್ಲವಾಗಿದ್ದರೆ, ಪಂದ್ಯದ ಫಲಿತಾಂಶ ವಿಭಿನ್ನವಾಗಿರುತ್ತಿತ್ತು," ಎಂದು ತಿಳಿಸಿದ್ದಾರೆ.

IND vs NZ: 37 ರನ್‌ ಗಳಿಸಿ ಕೇನ್‌ ವಿಲಿಯಮ್ಸನ್‌ ದಾಖಲೆ ಮುರಿದ ರಚಿನ್‌ ರವೀಂದ್ರ!

ಕೊನೆಯ ಹಂತದಲ್ಲಿ ಆಯ್ಕೆಯಾಗಿದ್ದ ವರುಣ್‌

ಚಾಂಪಿಯನ್ಸ್‌ ಟ್ರೋಫಿ ಟೂರ್ನಿಗೆ ಆರಂಭದಲ್ಲಿ ಭಾರತ ತಂಡವನ್ನು ಆಯ್ಕೆ ಮಾಡಿದ್ದಾಗ ವರುಣ್‌ ಚಕ್ರವರ್ತಿ ಇರಲಿಲ್ಲ. ಆದರೆ, ಅವರು ಇಂಗ್ಲೆಂಡ್‌ ವಿರುದ್ಧದ ಟಿ20ಐ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಬಳಿಕ, ಇಂಗ್ಲೆಂಡ್‌ ವಿರುದ್ದದ ಏಕದಿನ ಸರಣಿಯಲ್ಲಿ ಆಡಿಸಲಾಗಿತ್ತು. ಅವರು ಗಮನಾರ್ಹ ಪ್ರದರ್ಶನ ತೋರಿದ ಬಳಿಕ ಕೊನೆಯ ಹಂತದಲ್ಲಿ ಯಶಸ್ವಿ ಜೈಸ್ವಾಲ್‌ ಅವರ ಸ್ಥಾನಕ್ಕೆ ವರುಣ್‌ ಚಕ್ರವರ್ತಿಯನ್ನು ಕರೆತರಲಾಗಿತ್ತು.