ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ಕಸದ ವಾಹನಗಳೂ ಸ್ವಚ್ಛ

ಕಸದ ವಾಹನಗಳ ದರ್ಶನವೇ ಇತರ ದೇಶಗಳೊಂದಿಗೆ ಹೋಲಿಸಿದರೆ ಬಹಳ ವಿಭಿನ್ನ ಮತ್ತು ವಿಶಿಷ್ಟ. ಸಾಮಾನ್ಯವಾಗಿ, ಬಹುತೇಕ ದೇಶಗಳಲ್ಲಿ ಕಸದ ವಹಿವಾಟಿಗೆ ಬಳಸುವ ವಾಹನಗಳೇ ಗಲೀಜಾಗಿರುತ್ತವೆ, ದುರ್ವಾಸನೆಯಿಂದ ಕೂಡಿರುತ್ತವೆ. ಕಸವನ್ನು ಕೊಂಡೊಯ್ಯುವಾಗ ತ್ಯಾಜ್ಯ ವಸ್ತುಗಳ ಗಬ್ಬುನಾತ ಹೊರಹೊಮ್ಮುತ್ತಿರುತ್ತದೆ. ಆದರೆ ಜಪಾನಿನಲ್ಲಿ ಈ ಯಾವ ದೃಶ್ಯವನ್ನೂ ನೋಡಲು ಸಾಧ್ಯವೇ ಇಲ್ಲ.

ಕಸದ ವಾಹನಗಳೂ ಸ್ವಚ್ಛ

ಸಂಪಾದಕರ ಸದ್ಯಶೋಧನೆ

ಜಪಾನ್ ದೇಶಕ್ಕೆ ಹೋಗಿ ಬಂದವರ ಹತ್ತಿರ ಅಲ್ಲಿನ ಅನುಭವದ ಬಗ್ಗೆ ಮಾತಾಡುವಾಗ ಪ್ರಧಾನವಾಗಿ ಚರ್ಚಿತವಾಗುವ ಸಂಗತಿಯೆಂದರೆ ಅಲ್ಲಿನ ಸ್ವಚ್ಛತೆ. ಅಮೆರಿಕ, ಯುರೋಪ್ ಮುಂತಾದ ದೇಶಗಳಿಂದ ಬಂದವರಿಗೂ, ಜಪಾನಿನ ಸ್ವಚ್ಛತೆ ಕಣ್ಣಿಗೆ ರಾಚುತ್ತದೆ. ತಮ್ಮ ದೇಶಕ್ಕಿಂತ ಜಪಾನ್ ಇನ್ನೂ ಸ್ವಚ್ಛವಾಗಿದೆ ಎಂದು ಅವರಿಗೆ ಅನಿಸುತ್ತದೆ. ಹಾಗೆ ನೋಡಿದರೆ, ಜಪಾನ್ ಸ್ವಚ್ಛತೆ, ಶಿಸ್ತು ಮತ್ತು ವ್ಯವಸ್ಥಿತ ಜೀವನಶೈಲಿಯ ಪ್ರತೀಕವೆಂದು ಕರೆಯಬಹುದು. ಜಪಾನಿನಲ್ಲಿ ಪೂರಕ ಸೌಲಭ್ಯ ಗಳು ಮಾತ್ರವಲ್ಲ, ದಿನನಿತ್ಯದ ಕೆಲಸಗಳು ಕೂಡ ಅತ್ಯಂತ ಅನುಶಾಸಿತ ರೀತಿಯಲ್ಲಿ ನಡೆಯುತ್ತವೆ. ಅದರ ಒಂದು ಉತ್ಕೃಷ್ಟ ಉದಾಹರಣೆ ಅಂದರೆ, ಜಪಾನಿನ ಕಸ ಸಂಗ್ರಹಣಾ ವ್ಯವಸ್ಥೆ ಮತ್ತು ಕಸ ಸಾಗಿಸುವ ವಾಹನಗಳ ಸ್ವಚ್ಛತೆ. ಜಪಾನ್ ದೇಶದಲ್ಲಿ ಕಸದ ವಿಂಗಡನೆ ಮತ್ತು ತ್ಯಾಜ್ಯ ನಿರ್ವಹಣೆಯ ಮೇಲೆ ಅಪಾರ ಗಮನ ನೀಡಿರುವ ಅಂಶ ಎಂಥವರಿ ಗಾದರೂ ಅನುಭವಕ್ಕೆ ಬರುತ್ತದೆ.

ಇದನ್ನೂ ಓದಿ: Vishweshwar Bhat Column: ಮನಸ್ಸನ್ನು ರೂಪಿಸುವ ಮನೆಗಳು

ಕಸದ ವಾಹನಗಳ ದರ್ಶನವೇ ಇತರ ದೇಶಗಳೊಂದಿಗೆ ಹೋಲಿಸಿದರೆ ಬಹಳ ವಿಭಿನ್ನ ಮತ್ತು ವಿಶಿಷ್ಟ. ಸಾಮಾನ್ಯವಾಗಿ, ಬಹುತೇಕ ದೇಶಗಳಲ್ಲಿ ಕಸದ ವಹಿವಾಟಿಗೆ ಬಳಸುವ ವಾಹನಗಳೇ ಗಲೀಜಾಗಿರುತ್ತವೆ, ದುರ್ವಾಸನೆಯಿಂದ ಕೂಡಿರುತ್ತವೆ. ಕಸವನ್ನು ಕೊಂಡೊಯ್ಯುವಾಗ ತ್ಯಾಜ್ಯ ವಸ್ತುಗಳ ಗಬ್ಬುನಾತ ಹೊರಹೊಮ್ಮುತ್ತಿರುತ್ತದೆ. ಆದರೆ ಜಪಾನಿನಲ್ಲಿ ಈ ಯಾವ ದೃಶ್ಯವನ್ನೂ ನೋಡಲು ಸಾಧ್ಯವೇ ಇಲ್ಲ.

ಸೋಜಿಗವೆನಿಸಬಹುದು, ಜಪಾನಿನ ಕಸದ ವಾಹನಗಳು ಯಾವಾಗ ನೋಡಿದರೂ ಫಳಫಳ ಹೊಳೆಯುವಂತೆ ಸ್ವಚ್ಛವಾಗಿರು ತ್ತವೆ. ಪ್ರತಿದಿನದ ಕೆಲಸದ ಬಳಿಕ ಅಥವಾ ಬಳಕೆ ಬಳಿಕ ವಾಹನಗಳನ್ನು ಕಡ್ಡಾಯವಾಗಿ ತೊಳೆಯಲಾಗುತ್ತದೆ. ಅದರೊಳಗಿರುವ ತ್ಯಾಜ್ಯ ಸಂಗ್ರಹಿಸುವ ಭಾಗವನ್ನು ಕೂಡ ವಿಶೇಷ ಕೆಮಿಕಲ್ ಮತ್ತು ನೀರಿನಿಂದ ಶುದ್ಧೀಕರಿಸಲಾಗುತ್ತದೆ. ಕಸದ ವಾಹನಗಳನ್ನು ವಿಭಿನ್ನ ರೀತಿಯ ತ್ಯಾಜ್ಯ ಸಂಗ್ರಹಿಸಲು ವಿನ್ಯಾಸಗೊಳಿಸಿರುವುದು ವಿಶೇಷ. ಕೆಲವು ವಾಹನಗಳು ಒಣಕಸ ಸಂಗ್ರಹಿಸುವುದಕ್ಕೆ, ಇನ್ನು ಕೆಲವು ಹಸಿಕಸ ಅಥವಾ ಪ್ಲಾಸ್ಟಿಕ್ ಕಸ ಸಂಗ್ರಹಿಸಲು ಮೀಸಲಾಗಿರುತ್ತವೆ.

ಇದರಿಂದ ಕಸದ ಮರುಬಳಕೆ ಮತ್ತು ವಿಲೇವಾರಿ ಸುಗಮವಾಗುತ್ತವೆ. ಜಪಾನಿನ ಕಸದ ವಾಹನಗಳು ಶಬ್ದರಹಿತವಾಗಿ ಕೆಲಸ ಮಾಡುವ ತಂತ್ರeನ ಹೊಂದಿವೆ. ಕೆಲವು ವಾಹನಗಳು ಸ್ವಯಂಚಾಲಿತ (ಜಪಾನಿನ ಕಸ ಸಂಗ್ರಹಣಾ ವ್ಯವಸ್ಥೆ) ವ್ಯವಸ್ಥೆ ಹೊಂದಿದ್ದು, ತ್ಯಾಜ್ಯವನ್ನು ಹೆಚ್ಚು ಸುಲಭವಾಗಿ ಸಂಗ್ರಹಿಸಲು ನೆರವಾಗುತ್ತವೆ. ಕಸದ ವಾಹನಗಳಲ್ಲೂ ಸಿಸಿ ಕೆಮೆರಾ, ಸ್ಮಾರ್ಟ್ ಸೆನ್ಸರ್‌ ಗಳು ಸೇರಿದಂತೆ ಹಲವು ತಾಂತ್ರಿಕ ಸಾಧನಗಳನ್ನು ಬಳಸಲಾಗುತ್ತದೆ. ಜಪಾನಿನಲ್ಲಿ ಕಸ ಸಂಗ್ರಹಿಸುವ ಉದ್ಯೋಗವನ್ನು ಕೂಡ ಗೌರವಪೂರ್ವಕ ಕೆಲಸವೆಂದು ಪರಿಗಣಿಸಲಾಗುತ್ತದೆ. ಈ ಉದ್ಯೋಗದಲ್ಲಿ ನಿರತರಾದ ವ್ಯಕ್ತಿಗಳು ಸರಿಯಾದ ಪೋಷಾಕು ಧರಿಸಿ, ಅತ್ಯಂತ ನಿಷ್ಠೆ, ಪರಿಶ್ರಮ ಮತ್ತು ಶಿಸ್ತಿನೊಂದಿಗೆ ಕೆಲಸ ಮಾಡುತ್ತಾರೆ. ಆ ಕೆಲಸಗಾರರಲ್ಲಿ ಎದ್ದುಕಾಣುವ ಅಂಶವೆಂದರೆ ವಿನಯಶೀಲತೆ. ಕಸ ಸಂಗ್ರಹಿಸುವ ಸಿಬ್ಬಂದಿ ಯಾವಾಗಲೂ ಸ್ವಚ್ಛವಾದ ಸಮವಸ್ತ್ರ ಧರಿಸಿರು ತ್ತಾರೆ ಮತ್ತು ಸಾರ್ವಜನಿಕರೊಂದಿಗೆ ವಿನಯಪೂರ್ವಕವಾಗಿ ವರ್ತಿಸುತ್ತಾರೆ.

ಸಮಯ ಪಾಲನೆ, ಸರಿಯಾದ ವಿಧಾನದಲ್ಲಿ ಕೆಲಸ ಮಾಡುವುದು, ಕಸವನ್ನು ಎಲ್ಲಿ ಹೇಗೆ ಹಾಕಬೇಕು ಎಂಬ ನಿಯಮಗಳನ್ನು ಖಚಿತವಾಗಿ ಪಾಲಿಸುವ ಮನೋಭಾವವನ್ನು ಅವರಲ್ಲಿ ಕಾಣಬಹುದು. ಅಲ್ಲಿ ಕಸದ ವಹಿವಾಟು ನಡೆಸುವವರಿಗೆ ತಾವು ಯಾವುದೋ ಕನಿಷ್ಠತಮ ಉದ್ಯೋಗ ಮಾಡುತ್ತಿದ್ದೇವೆ ಎಂಬ ಭಾವನೆಯೇ ಬರುವುದಿಲ್ಲ. ಅವರು ಸಾರ್ವಜನಿಕ ಸ್ಥಳಗಳನ್ನು ಮತ್ತು ಮನೆಗಳ ಬಳಿ ಕಸದ ಹೂಡಿಕೆಯ ನಿಯಮಗಳನ್ನು ಪಾಲಿಸುವಂತೆ ಜನರಲ್ಲಿ ಜಾಗ್ರತೆ ಮತ್ತು ಅರಿವನ್ನು ಮೂಡಿಸಿ ಪ್ರೋತ್ಸಾಹಿಸುತ್ತಾರೆ.

ಜಪಾನಿನ ಸ್ವಚ್ಛ ಮತ್ತು ವ್ಯವಸ್ಥಿತ ಕಸ ಸಂಗ್ರಹಣಾ ವಿಧಾನದಿಂದ ಹಲವಾರು ಸಕಾರಾತ್ಮಕ ಪರಿಣಾಮಗಳಾಗಿರುವುದನ್ನು ಗಮನಿಸಬಹುದು. ಸರಿಯಾದ ವಿಂಗಡನೆ ಮತ್ತು ಮರುಬಳಕೆ ನೀತಿಗಳಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಆಗುವುದಿಲ್ಲ. ಕಸದ ವಾಹನಗಳು ಸ್ವಚ್ಛವಾಗಿರುವುದರಿಂದ ನಗರಗಳು ದುರ್ವಾಸನೆಯಿಂದ ಮುಕ್ತವಾಗಿವೆ. ಕಸದ ವಾಹನವೇ ಅಷ್ಟು ಸ್ವಚ್ಛವಾಗಿದೆಯೆಂದರೆ, ತಮ್ಮ ವಾಹನ ಮತ್ತು ಪರಿಸರವನ್ನು ಇನ್ನೂ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂಬ ಭಾವನೆ ಅಲ್ಲಿನ ಜನರಲ್ಲಿ ಮೂಡಿದ್ದರೆ ಆಶ್ಚರ್ಯವಿಲ್ಲ.