ಅಂತರರಾಷ್ಟ್ರೀಯ ಮಹಿಳಾ ದಿನ ಸಂದರ್ಭ ಮಹಿಳಾ ಉದ್ಯಮಿಗಳಿಗಾಗಿ ವೀಸಾ ಸಂಸ್ಥೆ ನೀಡಿದ ಕೆಲವು ಡಿಜಿಟಲ್ ಪೇಮೆಂಟ್ ಸಲಹೆಗಳು
ಪ್ರಸ್ತುತ ಹೆಚ್ಚು ಹೆಚ್ಚು ಮಹಿಳೆಯರು ಉದ್ಯಮಿಗಳಾಗುತ್ತಿದ್ದಾರೆ. ಉದ್ಯಮಿಗಳಾಗುವುದು ಮುಖ್ಯ ವಲ್ಲ. ಆ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ಬಹಳ ಮುಖ್ಯ. ಅವರು ಮೊದಲ ತಮ್ಮ ಉದ್ಯಮ ಯೋಜನೆಯಲ್ಲಿ ಡಿಜಿಟಲ್ ಪೇಮೆಂಟ್ ಮತ್ತು ಭದ್ರತೆಯ ಕಡೆಗೆ ಗಮನ ಹರಿಸಬೇಕು.


ಪ್ರಸ್ತುತ ಹೆಚ್ಚು ಹೆಚ್ಚು ಮಹಿಳೆಯರು ಉದ್ಯಮಿಗಳಾಗುತ್ತಿದ್ದಾರೆ. ಉದ್ಯಮಿಗಳಾಗುವುದು ಮುಖ್ಯವಲ್ಲ. ಆ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ಬಹಳ ಮುಖ್ಯ.
ಅವರು ಮೊದಲ ತಮ್ಮ ಉದ್ಯಮ ಯೋಜನೆಯಲ್ಲಿ ಡಿಜಿಟಲ್ ಪೇಮೆಂಟ್ ಮತ್ತು ಭದ್ರತೆ ಯ ಕಡೆಗೆ ಗಮನ ಹರಿಸಬೇಕು. ಹಾಗಾಗಿ ಈ ಅಂತರರಾಷ್ಟ್ರೀಯ ಮಹಿಳಾ ದಿನದ ಸಂದರ್ಭದಲ್ಲಿ ವೀಸಾ ಸಂಸ್ಥೆಯು ಸುರಕ್ಷಿತ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಹೊಂದಲು ಮತ್ತು ತಮ್ಮ ಉದ್ಯಮವನ್ನು ವಿಸ್ತರಿಸಿಕೊಳ್ಳಲು ಮಹಿಳಾ ಉದ್ಯಮಿಗಳಿಗೆ ಕೆಲವು ಉಪ ಯುಕ್ತ ಸಲಹೆ ಗಳನ್ನು ನೀಡಿದೆ:
- ಭದ್ರತೆ ಮೊದಲ ಆದ್ಯತೆಯಾಗಿರಲಿ: ಉದ್ಯೋಗಿಗಳಿಗೆ ಡಿಜಿಟಲ್ ವಿಚಾರದಲ್ಲಿ ಪಾಲಿಸ ಬೇಕಾದ ಉತ್ತಮ ಪದ್ಧತಿಗಳು ಮತ್ತು ಹೊಸ ರೀತಿಯ ಡಿಜಿಟಲ್ ವಂಚನೆಗಳ ಕುರಿತು ನಿಯಮಿತವಾಗಿ ತರಬೇತಿ ನೀಡಿ. ಉತ್ಪನ್ನ ಯೋಜನೆ ಮತ್ತು ಗ್ರಾಹಕ ಸೇವೆ ವಿಭಾಗ ದಲ್ಲಿ ಭದ್ರತೆಯನ್ನು ಮೊದಲ ಆದ್ಯತೆಯಾಗಿಟ್ಟುಕೊಳ್ಳಿ.
- ಸುರಕ್ಷಿತವಾದ ಟ್ಯಾಪ್, ಪೇ ಮತ್ತು ಕ್ಲಿಕ್ ಪೇಮೆಂಟ್ ವ್ಯವಸ್ಥೆ ಬಳಸಿ: ನಿಮ್ಮ ಮಳಿಗೆ ಗಳಲ್ಲಿ ಸುರಕ್ಷಿತವಾದ ಮತ್ತು ವೇಗವಾದ ಪಾವತಿ ಸಾಧ್ಯವಾಗಲು ಇಎಂವಿಸಿಓ®ಚಿಪ್ ಆಧಾರಿತ ಸಂಪರ್ಕ ರಹಿತ ಕಾರ್ಡ್‌ಗಳನ್ನು ಸ್ವೀಕರಿಸುವ ಮತ್ತು ಟೋಕನೈಸ್ಡ್ ಕಾರ್ಡ್ ಮೂಲಕ ಆನ್ ಲೈನ್ ನಲ್ಲಿ ಪಾವತಿ ಮಾಡಬಹುದಾದ ವ್ಯವಸ್ಥೆ ಅಳವಡಿಸಿಕೊಳ್ಳಿ. ಈ ವ್ಯವಸ್ಥೆಗಳು ಎನ್‌ಕ್ರಿಪ್ಶನ್ ಮತ್ತು ಬಯೋಮೆಟ್ರಿಕ್ ದೃಢೀಕರಣವನ್ನು ಅವಲಂಬಿಸಿವೆ ಅನ್ನುವುದು ಗಮನಾರ್ಹ.
- ಸುರಕ್ಷಿತ ಪಾವತಿ ವ್ಯವಸ್ಥೆಗಳನ್ನು ಬಳಸಿ: ಇಎಂವಿಸಿಓ® ಮತ್ತು ಪಿಸಿಐ ಡಿಎಸ್ಎಸ್ (ಪೇಮೆಂಟ್ ಕಾರ್ಡ್ ಇಂಡಸ್ಟ್ರಿ ಡೇಟಾ ಸೆಕ್ಯೂರಿಟಿ ಸ್ಟಾಂಡರ್ಡ್) ನಂತಹ ಉದ್ಯಮ ಮಾನದಂಡಗಳನ್ನು ಪಾಲಿಸುವ ವಿಶ್ವಾಸಾರ್ಹ ಪಾವತಿ ವ್ಯವಸ್ಥೆಗಳನ್ನು ಮಾತ್ರ ಅಳವಡಿಸಿಕೊಳ್ಳಿ. ಬಹು ಸೂಕ್ತವಾದ ಭದ್ರತೆ ಮತ್ತು ಎನ್‌ಕ್ರಿಪ್ಶನ್ ಹೊಂದಿರುತ್ತವೆ.
- ಸಾಫ್ಟ್ ವೇರ್ ಮತ್ತು ಸಾಧನಗಳನ್ನು ನಿಯಮಿತವಾಗಿ ಅಪ್ ಡೇಟ್ ಮಾಡಿ: ಎಲ್ಲಾ ಸಾಧನಗಳು ಮತ್ತು ಸಾಫ್ಟ್ ವೇರ್ ಗಳನ್ನು ಇತ್ತೀಚಿನ ಹೊಸ ಆವೃತ್ತಿಗೆ ಅಪ್ ಡೇಟ್ ಮಾಡುವುದನ್ನು ಮರೆಯದಿರಿ. ಈ ಮೂಲಕ ಮಾಲ್ ವೇರ್, ಹ್ಯಾಕಿಂಗ್ ಪ್ರಯತ್ನಗಳು ಮತ್ತು ಡೇಟಾ ಕಳ್ಳತನ ಮುಂತಾದ ಸೈಬರ್ ಅಪಾಯಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ.
- ಖಾತೆಯ ಮೇಲೆ ಸದಾ ನಿಗಾ ಇರಲಿ: ಬ್ಯಾಂಕಿಂಗ್ ಮತ್ತು ಆರ್ಥಿಕ ಆಪ್ ಗಳ ನೋಟಿಫಿ ಕೇಷನ್ ಗಳನ್ನು ಗಮನಿಸುತ್ತಲೇ ಇರಿ, ವಹಿವಾಟಿನಲ್ಲಿ ವಂಚನೆ ಉಂಟಾಗಬಹುದಾದ ಸಂದರ್ಭಗಳಲ್ಲಿ ಪರಿಶೀಲನೆ ನಡೆಸಿ.
ಈ ಸಲಹೆಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಮಹಿಳೆಯರು ಯಶಸ್ವಿ ಉದ್ಯಮ ವನ್ನು ನಡೆಸಬಹುದು. ಜೊತೆಗೆ ಉತ್ತಮ ರೀತಿಯಲ್ಲಿ ಉದ್ಯಮ ನಡೆಸುವ ಮೂಲಕ ಸ್ಫೂರ್ತಿಯಾಗಬಹುದು ಮತ್ತು ಸಮಾಜ ಅಭಿವೃದ್ಧಿ ಕಾರ್ಯ ಮಾಡಬಹುದು.