ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Yagati Raghu Naadig Column: ಕೈಕೊಟ್ಟ ಮಿನುಗುತಾರೆ, ಕೈಹಿಡಿದ ಅಭಿನಯ ಶಾರದೆ..!

ಸಾಹಿತಿ ತ.ರಾ.ಸುಬ್ಬರಾವ್ (ತ.ರಾ.ಸು.) ಅವರ ‘ಸರ್ಪ ಮತ್ಸರ’, ‘ಎರಡು ಹೆಣ್ಣು ಒಂದು ಗಂಡು’ ಮತ್ತು ‘ನಾಗರ ಹಾವು’ ಎಂಬ ಕಾದಂಬರಿಗಳ ಹೂರಣವನ್ನು ಸೇರಿಸಿ ಈ ಚಿತ್ರದ ಚಿತ್ರಕಥೆಯನ್ನು ರಚಿಸಿದ್ದು ಪುಟ್ಟಣ್ಣನವರೇ. ಚಿತ್ರ ನಿರ್ಮಾಣಕ್ಕೆ ಮುಂದಾದ ಎಂ.ವೀರಾಸ್ವಾಮಿಯವರಿಗೆ (ನಟ ರವಿಚಂದ್ರನ್‌ರ ತಂದೆ) ಪುಟ್ಟಣ್ಣ, “ಚಿತ್ರವನ್ನು ಭರ್ಜರಿಯಾಗಿ ತೆರೆಯ ಮೇಲೆ ತರಬೇಕೆಂಬ ಇರಾದೆ ನನ್ನದು, ಚಿತ್ರೀಕರಣದ ಎಲ್ಲಾ ಜವಾಬ್ದಾರಿಯನ್ನೂ ನಾನೇ ವಹಿಸಿಕೊಳ್ಳುವೆ. ನೀವಿದರಲ್ಲಿ ಮೂಗು ತೂರಿಸದೆ ಹಣ ವನ್ನಷ್ಟೇ ಒದಗಿಸಿದರೆ ಸಾಕು" ಎಂಬ ಷರತ್ತು ಹಾಕಿದರು.

ಕೈಕೊಟ್ಟ ಮಿನುಗುತಾರೆ, ಕೈಹಿಡಿದ ಅಭಿನಯ ಶಾರದೆ..!

Profile Ashok Nayak Mar 9, 2025 7:56 AM

ರಸದೌತಣ

ಯಗಟಿ ರಘು ನಾಡಿಗ್

naadigru@gmail.com

ವಿಷ್ಣುವರ್ಧನ್ ಅವರು ‘ನಾಗರಹಾವು’ ನಂತರ ಪುಟ್ಟಣ್ಣನವರ ಯಾವುದೇ ಚಿತ್ರಗಳಲ್ಲಿ ಕಾಣಿಸಿಕೊಳ್ಳದಿದ್ದುದರ ಕುರಿತಾದ ಫ್ಫ್ಲ್ಫ್ಯಾಷ್‌ಬ್ಯಾಕ್ ಅನ್ನು ಕಳೆದ ಸಂಚಿಕೆಯಲ್ಲಿ ಓದಿದಿರಿ. ಈಗ ನಾಗರಹಾವು ಚಿತ್ರೀಕರಣದ ಸಂದರ್ಭಕ್ಕೆ ತೆರಳೋಣ (2024ರ ನವೆಂಬರ್ 17ರ ಅಂಕಣದಲ್ಲಿ ಪ್ರಕಟವಾದ ‘ಹುತ್ತದ ಹಾವಿಗೆ ಬೆತ್ತದಿ ಬಡಿದರೆ ಭುಸುಗುಟ್ಟದೇ?’ ಶೀರ್ಷಿಕೆಯ ಬರಹದಲ್ಲಿ ಈ ಚಿತ್ರದ ಮತ್ತೊಂದು ರಸಪ್ರಸಂಗವನ್ನು ಈಗಾಗಲೇ ನೀಡಲಾಗಿದೆ. ಇದಕ್ಕೆ ಹೊರತಾದ ಕೆಲ ಪ್ರಸಂಗಗಳು ಮುಂದೆ ಮೂಡಿ ಬರಲಿವೆ).

44

ಸಾಹಿತಿ ತ.ರಾ.ಸುಬ್ಬರಾವ್ (ತ.ರಾ.ಸು.) ಅವರ ‘ಸರ್ಪ ಮತ್ಸರ’, ‘ಎರಡು ಹೆಣ್ಣು ಒಂದು ಗಂಡು’ ಮತ್ತು ‘ನಾಗರ ಹಾವು’ ಎಂಬ ಕಾದಂಬರಿಗಳ ಹೂರಣವನ್ನು ಸೇರಿಸಿ ಈ ಚಿತ್ರದ ಚಿತ್ರಕಥೆಯನ್ನು ರಚಿಸಿದ್ದು ಪುಟ್ಟಣ್ಣನವರೇ. ಚಿತ್ರ ನಿರ್ಮಾಣಕ್ಕೆ ಮುಂದಾದ ಎಂ.ವೀರಾಸ್ವಾಮಿಯವರಿಗೆ (ನಟ ರವಿಚಂದ್ರನ್‌ರ ತಂದೆ) ಪುಟ್ಟಣ್ಣ, “ಚಿತ್ರವನ್ನು ಭರ್ಜರಿಯಾಗಿ ತೆರೆಯ ಮೇಲೆ ತರಬೇಕೆಂಬ ಇರಾದೆ ನನ್ನದು, ಚಿತ್ರೀಕರಣದ ಎಲ್ಲಾ ಜವಾಬ್ದಾರಿಯನ್ನೂ ನಾನೇ ವಹಿಸಿಕೊಳ್ಳುವೆ. ನೀವಿದರಲ್ಲಿ ಮೂಗು ತೂರಿಸದೆ ಹಣ ವನ್ನಷ್ಟೇ ಒದಗಿಸಿದರೆ ಸಾಕು" ಎಂಬ ಷರತ್ತು ಹಾಕಿದರು. ಪುಟ್ಟಣ್ಣನವರ ಸಾಮರ್ಥ್ಯ ಅರಿತಿದ್ದ ವೀರಾಸ್ವಾಮಿ ಅದಕ್ಕೆ ಒಪ್ಪಿದರು.

ಕಥೆಯಲ್ಲಿ ಬರುವ ‘ಆಂಗ್ರಿ ಯಂಗ್‌ಮ್ಯಾನ್’ ರಾಮಾಚಾರಿ ಪಾತ್ರಕ್ಕೆ ಹೊಸಮುಖದ ತಲಾಶೆಯಲ್ಲಿದ್ದರು ಪುಟ್ಟಣ್ಣ. ಚಿತ್ರಕಥೆ ಯನ್ನು ರಚಿಸುವಾಗಲೇ ರಾಮಾಚಾರಿ ಅವರನ್ನು ಇನ್ನಿಲ್ಲದಂತೆ ಕಾಡಿದ್ದ. ಹೀಗಾಗಿ, ಎಷ್ಟೇ ಖರ್ಚಾದರೂ ಪರವಾಗಿಲ್ಲ, ಸೂಕ್ತ ಯುವಪ್ರತಿಭೆಯನ್ನೇ ಹೆಕ್ಕಬೇಕು ಎಂಬ ಹೆಬ್ಬಯಕೆಯೊಂದಿಗೆ ಬರೋಬ್ಬರಿ 300 ಮಂದಿಯನ್ನು ಸಂದರ್ಶಿಸಿ, ಅಳೆದು-ಸುರಿದು ಅವಲೋಕಿಸಿದರು ಪುಟ್ಟಣ್ಣ. ಅವರಲ್ಲಿ 24 ಮಂದಿ ಮೊದಲ ಹಂತದಲ್ಲಿ ಆಯ್ಕೆಯಾದರು. ಖ್ಯಾತ ವರ್ಣಚಿತ್ರ ಕಲಾ ವಿದ ಮಧುಗಿರಿ ರಾಮು ಅವರ ಸಲಹೆಯ ಮೇರೆಗೆ ಆ ಸಂದರ್ಶನದಲ್ಲಿ ತೂರಿಕೊಂಡಿದ್ದ ಸಂಪತ್‌ ಕುಮಾರ್ ಎಂಬ ಚಿಗುರು ಮೀಸೆಯ ಚೆಲುವನೂ ಅವರಬ್ಬನಾಗಿದ್ದ. ಇಷ್ಟು ಮಂದಿಗೂ ಮೇಕಪ್ ಟೆಸ್ಟ್ ಮಾಡಿ ನಿರ್ದಿಷ್ಟ ಸಂಭಾಷಣೆಯ ಸಾಲನ್ನು ಹೇಳಿಸಿದಾಗ ಅಂತಿಮವಾಗಿ ಆಯ್ಕೆಯಾಗಿದ್ದು ಸಂಪತ್‌ಕುಮಾರನೇ. ಈತನೇ ಮುಂದೆ ‘ವಿಷ್ಣು ವರ್ಧನ’ ಎಂಬುದಾಗಿ ಪುಟ್ಟಣ್ಣರಿಂದ ಮರುನಾಮಕರಣಗೊಂಡಿದ್ದು ಈಗಾಗಲೇ ನಿಮಗೆ ಗೊತ್ತಿದೆ.

ಇದನ್ನೂ ಓದಿ: Yagati Raghu Naadig Column: ಐಟಂ ನಂಬರ್ರೇ ಬೆಸ್ಟು!

ತಮ್ಮ ಕಲ್ಪನೆಯ ರಾಮಾಚಾರಿಯೇನೋ ಸಿಕ್ಕಿಬಿಟ್ಟ, ಆದರೆ ಅಲಮೇಲು ಮತ್ತು ಮಾರ್ಗರೇಟ್ ಪಾತ್ರಗಳಿಗೆ ಯಾರನ್ನು ಹೆಕ್ಕುವುದು ಎಂಬ ಜಿಜ್ಞಾಸೆ ಶುರುವಾಯಿತು ಪುಟ್ಟಣ್ಣನವರಲ್ಲಿ. ಏಕೆಂದರೆ, ಎಸ್ಟಾಬ್ಲಿಷ್ ಆಗಿರುವ ನಾಯಕನ ಎದುರು ನಾಯಕಿಯನ್ನು ಗೊತ್ತು ಮಾಡುವುದಕ್ಕೂ, ನವನಾಯಕನ ಎದುರು ಹಾಗೆ ನಿಯೋಜಿಸುವುದಕ್ಕೂ ಸಾಕಷ್ಟು ವ್ಯತ್ಯಾಸವಿತ್ತು. ಅಷ್ಟು ಹೊತ್ತಿಗಾಗಲೇ, ‘ಗೆಜ್ಜೆಪೂಜೆ’ ಚಿತ್ರದಲ್ಲಿ ತಂಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಆರತಿಯವರನ್ನು ಅಲಮೇಲು ಪಾತ್ರದಕೆ ಬಿಂಬಿಸಬಾರದು ಎಂಬ ಆಲೋಚನೆ ಪುಟ್ಟಣ್ಣರಲ್ಲಿ ಸುಳಿದು, ಅಂತೆಯೇ ಆಯ್ಕೆ ಮಾಡಿಬಿಟ್ಟರು. ಆದರೆ ಮತ್ತೊಂದು ಮಹತ್ವದ ಪಾತ್ರವಾದ ಮಾರ್ಗರೇಟ್ ವಿಷಯದಲ್ಲಿ ಒಂದಿಷ್ಟು ಹಗ್ಗಜಗ್ಗಾಟ ನಡೆಯಿತು. ಅದಕ್ಕೆ ಕಾರಣರಾಗಿದ್ದು ನಟಿ ಕಲ್ಪನಾ!

‘ಕಪ್ಪು-ಬಿಳುಪು’, ‘ಕರುಳಿನ ಕರೆ’, ‘ಶರಪಂಜರ’ ಚಿತ್ರಗಳಲ್ಲಿ ಕಲ್ಪನಾರನ್ನು ನಾಯಕಿಯಾಗಿಸಿ ಯಶಸ್ಸು ಕಂಡಿದ್ದ ಪುಟ್ಟಣ್ಣ, ‘ಸಾಕ್ಷಾತ್ಕಾರ’ ಚಿತ್ರದಲ್ಲಿ ಹೊರಳುದಾರಿ ತುಳಿದು, ಜಮುನಾರನ್ನು ನಾಯಕಿಯಾಗಿ ಪ್ರತಿಷ್ಠಾಪಿಸಿದ್ದರು. ಅಣ್ಣಾವ್ರ ಉತ್ತಮ ಅಭಿನಯ, ಇಂಪಾದ ಹಾಡುಗಳು, ಹಿಂದಿಯ ಪೃಥ್ವಿರಾಜ್ ಕಪೂರರ ಉಪಸ್ಥಿತಿಯ ಹೊರತಾಗಿಯೂ ‘ಸಾಕ್ಷಾತ್ಕಾರ’ ವಿಫಲ ವಾಯಿತು. ‘ಕಲ್ಪನಾರನ್ನು ಬಿಟ್ಟಿದ್ದೇ ಇದಕ್ಕೆ ಕಾರಣ’ ಎಂಬ ಉದ್ಯಮದವರ ಮಾತು ಕಲ್ಪನಾರ ಕಿವಿಗೂ ಬಿದ್ದಿತ್ತು. ಅಷ್ಟು ಹೊತ್ತಿಗಾಗಲೇ ಪುಟ್ಟಣ್ಣ- ಕಲ್ಪನಾರ ನಡುವೆ ಭಿನ್ನಾಭಿಪ್ರಾಯದ ತೆಳುಪರದೆಯೊಂದು ರೂಪುಗೊಂಡಿತ್ತಾದರೂ, ‘ಪಕ್ಕಾ ಪ್ರೊಫೆಷನಲ್’ ಆಗಿದ್ದ ಕಲ್ಪನಾ ಬಿಗುಮಾನವನ್ನು ಬದಿಗೊತ್ತಿ, ಮಾರ್ಗರೇಟ್ ಪಾತ್ರದಲ್ಲಿ ಅಭಿನಯಿಸಬೇಕೆಂಬ ತಮ್ಮಾಸೆ ಯನ್ನು ಪುಟ್ಟಣ್ಣನವರಲ್ಲಿ ಹೇಳಿಕೊಂಡರು. ಅದಕ್ಕೆ ಪುಟ್ಟಣ್ಣ, “ಮಾರ್ಗರೇಟ್ ಪಾತ್ರಕ್ಕೆ ನನ್ನ ಕಲ್ಪನೆಯೇ ಬೇರೆಯಿದೆ, ನೀವು ಹೊಂದುವುದಿಲ್ಲ" ಎಂದು ಹೇಳಿ ನಯವಾಗಿ ನಿರಾಕರಿಸಿದರು. ‘ಸಾಕ್ಷಾತ್ಕಾರ’ದ ಸೋಲಿನಿಂದ ಬಳಲಿದ್ದ ಪುಟ್ಟಣ್ಣ ತಮ್ಮ ಮಾತಿಗೆ ನಿರಾಕರಿಸುವುದಿಲ್ಲ ಎಂದು ಭ್ರಮಿಸಿದ್ದ ಕಲ್ಪನಾರ ‘ಅಹಂ’ಗೆ ಇದರಿಂದ ಪೆಟ್ಟು ಬಿದ್ದಂತಾಯಿತು. ನಿರಾಕರಣೆಯ ಸುದ್ದಿ ಗೊತ್ತಾದ ಉದ್ಯಮದವರು, “ಶರಪಂಜರ ಚಿತ್ರದ ವೇಳೆ ಕಲ್ಪನಾ ತೋರಿದ ಡೌಲು- ಅಹಂಕಾರದಿಂದ ಬೇಸರಗೊಂಡ ಪುಟ್ಟಣ್ಣ, ನಾಗರಹಾವು ಚಿತ್ರದಿಂದ ಅವರನ್ನು ಹೊರ ಗಿಟ್ಟರು" ಎಂದೇ ಮಾತಾಡಿಕೊಂಡರು. ಆದರೆ, ನಾಯಕ-ಪ್ರಧಾನ ಚಿತ್ರದಲ್ಲಿ ಹೊಸ ಮುಖವೊಂದನ್ನು ಪ್ರೊಜೆಕ್ಟ್ ಮಾಡುತ್ತಿರುವಾಗ, ಅದಾಗಲೇ ಎಸ್ಟಾಬ್ಲಿಷ್ ಆಗಿದ್ದ ಕಲಾವಿದೆಯನ್ನು ಆತನಿಗೆ ಜೋಡಿಯಾಗಿಸಿದರೆ ಸರಿಹೊಂದುವುದಿಲ್ಲ ಎಂಬುದು ಪುಟ್ಟಣ್ಣ ನವರ ಗಣಿತವಾಗಿತ್ತು. ಅವರ ನಿರಾಕರಣೆಯನ್ನು ಆರೋಗ್ಯ ಕರವಾಗಿ, ‘ಕ್ರೀಡಾಪಟುವಿನ ಸ್ಪೂರ್ತಿ’ಯಿಂದ ಸ್ವೀಕರಿಸಲು ಕಲ್ಪನಾ ಸಿದ್ಧರಿರಲಿಲ್ಲ. ಅಂತೆಯೇ, ಚಿತ್ರದಲ್ಲಿ ಬರುವ ಒನಕೆ ಓಬವ್ವನ ಉಪಕಥೆ ಹಾಗೂ ‘ಕನ್ನಡನಾಡಿನ ವೀರರಮಣಿಯ’ ಹಾಡಿನ ದೃಶ್ಯದಲ್ಲಿ ಅಭಿನಯಿಸುವ ಆಯ್ಕೆಯನ್ನು ಪುಟ್ಟಣ್ಣ ಒಡ್ಡಿದಾಗ, “ಚಿತ್ರದ ನಾಯಕಿಯ ಪಾತ್ರಕ್ಕಾಗಿ ಆಸೆಪಟ್ಟಿದ್ದ ನಾನು, ಅದೇ ಚಿತ್ರದ ಇಂಥ ಕಿರುಪಾತ್ರದಲ್ಲಿ ಕಾಣಿಸಿಕೊಂಡರೆ ಅದೆಷ್ಟು ಸರಿ ಪುಟ್ಟಣ್ಣಾಜಿ!" ಎಂದು ಕೊಂಕು ನುಡಿದು ‘ತಾರಮ್ಮಯ್ಯ’ ಮಾಡಿ ಬಿಟ್ಟರು. ಕಲ್ಪನಾರ ಈ ‘ನಿರಾಕರಣ’ವು ಓಬವ್ವನಾಗಿ ಮತ್ತೊಬ್ಬ ಮಹಾನ್ ಕಲಾವಿದೆಯ ‘ಅನಾವರಣ’ಕ್ಕೆ ದಾರಿಮಾಡಿ ಕೊಟ್ಟಿತು. ಅವರೇ ಅಭಿನಯ ಶಾರದೆ ಜಯಂತಿ!

ಇಲ್ಲೂ ಒಂದು ಫ್ಲ್ಯಾಷ್‌ಬ್ಯಾಕ್ ಇದೆ. ಪುಟ್ಟಣ್ಣನವರ ಚಿತ್ರದಲ್ಲಿ ಅಭಿನಯಿಸಬೇಕೆಂದು ತವಕಿಸುತ್ತಿದ್ದ ಅಂದಿನ ಕಲಾವಿದೆಯರಲ್ಲಿ ಜಯಂತಿ ಕೂಡ ಒಬ್ಬರಾಗಿದ್ದರು. ‘ಸಾವಿರ ಮೆಟ್ಟಿಲು’ ಚಿತ್ರದಲ್ಲಿ ಅವರಿಗೆ ನಾಯಕಿ ಪಾತ್ರ ಸಿಕ್ಕಿತಾದರೂ, ಚಿತ್ರ ಪೂರ್ಣಗೊಳ್ಳದ ಕಾರಣ ಜಯಂತಿ ನಿರಾಶೆಗೊಂಡಿದ್ದರು. ತರುವಾಯದಲ್ಲಿ ‘ಕಪ್ಪು-ಬಿಳುಪು’ ಮತ್ತು ‘ಸಾಕ್ಷಾತ್ಕಾರ’ ಚಿತ್ರಗಳಿಗೆ ನಾಯಕಿಯಾಗಿ ಆಯ್ಕೆಯಾಗಿ ನಿರ್ಮಾಪಕರಿಂದ ಮುಂಗಡವನ್ನೂ ಪಡೆದಿದ್ದರು; ಆದರೆ, ಈ ಚಿತ್ರಗಳಿಗೆ ಪುಟ್ಟಣ್ಣ ಅಂತಿಮಗೊಳಿಸಿದ್ದು ತಮ್ಮಾಯ್ಕೆಯ ನಾಯಕಿಯರನ್ನೇ. ಹೀಗೆ ಸರಣಿ ಹಿನ್ನಡೆಯಿಂದ ಕಂಗೆಟ್ಟಿದ್ದ ಜಯಂತಿಯವರನ್ನು ಪುಟ್ಟಣ್ಣ ಭೇಟಿ ಯಾಗಿ, “ಇದು ಪುಟ್ಟಪಾತ್ರವಾದರೂ ಮಹತ್ವದ್ದು, ಒಪ್ಪಿಕೊಳ್ಳಿ. ನಿಮಗೂ ಹೆಸರು ಬರುತ್ತೆ" ಎಂದು ಪುಸಲಾ ಯಿಸಿ ಓಬವ್ವನ ಪಾತ್ರವನ್ನು ನೀಡಿದಾಗ, ಎಲ್ಲ ಕಹಿಯನ್ನೂ ಮರೆತು ಆ ಪಾತ್ರದಲ್ಲಿ ವೀರರಸ ಮೆರೆದರು ಜಯಂತಿ. ಆ ಪ್ರಸ್ತುತಿಯನ್ನು ಜನರೂ ಮೆಚ್ಚಿದರು. ಮುಂದಿನದ್ದು ಇತಿಹಾಸ...

ಅದಕ್ಕೆ ನೀವು ಹೇಗೆ ತಾಲೀಮು ಮಾಡಿಕೊಳ್ತೀರೋ ನಂಗೆ ಗೊತ್ತಿಲ್ಲ. ಈಗ ಬೆಳಗ್ಗೆ ಒಂಬತ್ತೂವರೆ. ಸಂಜೆ 5 ಗಂಟೆಯವ ರೆಗೂ ನಿಮಗೆ ಕಾಲಾವಕಾಶ" ಎಂದಷ್ಟೇ ಹೇಳಿ ಜಾಗ ಖಾಲಿಮಾಡಿದರು.ಯಾರಿಗೂ ಅನ್ಯಮಾರ್ಗವಿರಲಿಲ್ಲ, ಸಮಯವನ್ನು ವ್ಯರ್ಥಗೊಳಿಸದಂತೆ ತಾಲೀಮಿಗೆ ಶುರುವಿಟ್ಟುಕೊಂಡರು. ಸಂಜೆ 5 ಗಂಟೆಗೆ ಚಿತ್ರೀಕರಣ ತಾಣಕ್ಕೆ ದಾಂಗುಡಿ ಯಿಟ್ಟ ಪುಟ್ಟಣ್ಣ, “ಸ್ಟಾರ್ಟ್ ಕ್ಯಾಮರಾ, ಆಕ್ಷನ್" ಎಂದರು. ಎಲ್ಲಾ ಕಲಾವಿದರೂ ತೊಡಗಿಸಿಕೊಂಡರು, ಒಂದೆರಡು ಕಡೆ ತಪ್ಪಾಯಿತು. ಹುಸಿಕೋಪ ತೋರಿದ ಪುಟ್ಟಣ್ಣ ವ್ಯಂಗ್ಯವಾಗಿ, “ಅಯ್ಯೋ ಪಾಪ! ನಿಮಗೆ ಆಗಂದ್ರೆ ಹೇಳ್ರೀ... ಚಿತ್ರದಿಂದ ಈ ದೃಶ್ಯವನ್ನೇ ಕಿತ್ತುಹಾಕ್ತೀನಿ" ಎಂದು ಎಲ್ಲರ ಸ್ವಾಭಿಮಾನವನ್ನು ಕೆಣಕಿದರು. ಮೆ ಚಿತ್ರೀಕರಿಸಬೇಕಾಗಿ ಬರುತ್ತಿತ್ತು. ಆ ದೃಶ್ಯದಲ್ಲಿ ಗುಪ್ತಗಾಮಿನಿಯಾಗಿದ್ದ ಭಾವ ವನ್ನು ಕಲಾವಿದರು ಸಮರ್ಥವಾಗಿ ಗ್ರಹಿಸದೆಯೇ ಅಭಿನಯಿಸಿದ್ದರೆ ಅದೊಂದು ಪಕ್ಕಾ ‘ಮೇಲೋಡ್ರಾಮಾ’ ಆಗಿಬಿಡುವ ಅಪಾಯವೂ ಇತ್ತು. ಒಟ್ಟಾರೆಯಾಗಿ, ಕಲಾವಿದರ-ತಂತ್ರಜ್ಞರ ಹೃತ್ಪೂರ್ವಕ ಸಹಕಾರ ವಿಲ್ಲದೆ ಅದು ಪರಿಣಾಮಕಾರಿಯಾಗಿ ಒಡಮೂಡಲು ಸಾಧ್ಯವಿರಲಿಲ್ಲ. ಆಗ ಪುಟ್ಟಣ್ಣ ಒಂದು ಉಪಾಯ ಮಾಡಿದರು. ಎಲ್ಲರನ್ನೂ ಒಂದೆಡೆ ಕಲೆ ಹಾಕಿ, “ನೋಡ್ರಪ್ಪಾ, ಈ ದೃಶ್ಯವು ನನ್ನ ಕಲ್ಪನೆಯಂತೆ, ನನಗೆ ತೃಪ್ತಿಯಾಗುವಂತೆ ಮೂಡಿಬರ ಬೇಕು. ಅದಕ್ಕೆ ನೀವು ಹೇಗೆ ತಾಲೀಮು ಮಾಡಿಕೊಳ್ತೀರೋ ನಂಗೆ ಗೊತ್ತಿಲ್ಲ. ಈಗ ಬೆಳಗ್ಗೆ ಒಂಬತ್ತೂವರೆ. ಸಂಜೆ 5 ಗಂಟೆಯವರೆಗೂ ನಿಮಗೆ ಕಾಲಾವಕಾಶ" ಎಂದಷ್ಟೇ ಹೇಳಿ ಜಾಗ ಖಾಲಿ ಮಾಡಿದರು.

ಯಾರಿಗೂ ಅನ್ಯಮಾರ್ಗವಿರಲಿಲ್ಲ, ಸಮಯವನ್ನು ವ್ಯರ್ಥಗೊಳಿಸದಂತೆ ತಾಲೀಮಿಗೆ ಶುರುವಿಟ್ಟುಕೊಂಡರು. ಸಂಜೆ 5 ಗಂಟೆಗೆ ಚಿತ್ರೀಕರಣ ತಾಣಕ್ಕೆ ದಾಂಗುಡಿ ಯಿಟ್ಟ ಪುಟ್ಟಣ್ಣ, “ಸ್ಟಾರ್ಟ್ ಕ್ಯಾಮರಾ, ಆಕ್ಷನ್" ಎಂದರು. ಎಲ್ಲಾ ಕಲಾವಿದರೂ ತೊಡಗಿಸಿಕೊಂಡರು, ಒಂದೆರಡು ಕಡೆ ತಪ್ಪಾಯಿತು. ಹುಸಿಕೋಪ ತೋರಿದ ಪುಟ್ಟಣ್ಣ ವ್ಯಂಗ್ಯವಾಗಿ, “ಅಯ್ಯೋ ಪಾಪ! ನಿಮಗೆ ಆಗಂದ್ರೆ ಹೇಳ್ರೀ... ಚಿತ್ರದಿಂದ ಈ ದೃಶ್ಯವನ್ನೇ ಕಿತ್ತುಹಾಕ್ತೀನಿ" ಎಂದು ಎಲ್ಲರ ಸ್ವಾಭಿಮಾನವನ್ನು ಕೆಣಕಿದರು. “ಇಲ್ಲಾ ಪುಟ್ಟಣ್ಣಾಜಿ, ನಿಮ್ಮ ನಿರೀಕ್ಷೆಯಂತೆಯೇ ಅಭಿನಯಿಸ್ತೀವಿ..." ಎಂಬ ದನಿಯೊಂದು ಕಲಾವಿದರ ಗುಂಪಿನಿಂದ ತೇಲಿಬಂತು. ಹಾಗೆ ಹೇಳಿದ್ದು, ಚಾಮಯ್ಯ ಮೇಷ್ಟ್ರು ಪಾತ್ರಧಾರಿ ಕೆ.ಎಸ್.ಅಶ್ವಥ್! ಕ್ಯಾಮೆರಾ ಮತ್ತೆ ಚಾಲನೆಯಾಯಿತು, ಕಲಾವಿದರೆಲ್ಲ ಮನದುಂಬಿ ಅಭಿನಯಿಸಿದರು, ಟೇಕ್ ಓಕೆ ಆಯಿತು!

ಇಲ್ಲಿದೆ ನೋಡಿ ಆ ದೃಶ್ಯ: ಚಿತ್ರದ ಕಥೆಯಂತೆ, ಗುರು- ಹಿರಿಯರ ಆಗ್ರಹಕ್ಕೆ ಕಟ್ಟುಬಿದ್ದು ರಾಮಾಚಾರಿ ತಾನು ಮನಸಾರೆ ಪ್ರೀತಿಸಿದ್ದ ಅಲಮೇಲುವಿನಿಂದ ದೂರವಾಗ ಬೇಕಾಗುತ್ತದೆ, ಅಣ್ಣನಾಗಿ ಮುಂದೆ ನಿಂತು ಅವಳ ಮದುವೆಯನ್ನು ನಡೆಸಿಕೊಡ ಬೇಕು ಎಂಬ ಷರತ್ತಿಗೆ ಒಳಗಾಗಬೇಕಾ ಗುತ್ತದೆ. ಆಗ ಆಕೆಯ ಮನೆಗೆ ಬರುವ ರಾಮಾಚಾರಿ, “ಅಲಮೇಲು, ನಿನಗೇಂತ ವಿಷ ತಂದಿದ್ದೀನಿ ತಗೋ" ಅಂತ ಪೊಟ್ಟಣವೊಂದನ್ನು ಮುಂದು ಮಾಡಿದಾಗ ಅಲ ಮೇಲು ಮುಗಿಬಿದ್ದು ಅದನ್ನು ತೆಗೆದು ಕೊಳ್ಳುತ್ತಾಳೆ. ತಮ್ಮ ಪ್ರೀತಿಗೆ ಅಡ್ಡಿಯಾದ ಹಿರಿಯರ ಸಮ್ಮುಖದ ಅದನ್ನು ಸೇವಿಸಿ ಪ್ರಾಣಬಿಟ್ಟುಬಿಡಬೇಕು ಎಂಬುದು ಅವಳ ಇರಾದೆಯಾಗಿರುತ್ತದೆ. ಅವಳು ಹಾಗೆ ಪೊಟ್ಟಣ ತೆಗೆದುಕೊಳ್ಳುವಾಗ ಮನೆಯವರೆ ಧಾವಿಸಿ ಬಂದು ಅದನ್ನು ಕಿತ್ತುಕೊಳ್ಳಲು ಮುಂದಾಗುತ್ತಾರೆ. ಆ ಕೊಸರಾಟದಲ್ಲಿ ಪೊಟ್ಟಣ ಒಡೆದು ಅದರಿಂದ ಆರಿಶಿನ- ಕುಂಕುಮ ಧಾರಾಕಾರವಾಗಿ ಸುರಿಯಲಾ ರಂಭಿಸುತ್ತದೆ. ಆಗ ಅಲಮೇಲು, “ಅಲ್ವೋ ರಾಮಾಚಾರಿ, ಅರಿಶಿನ-ಕುಂಕುಮ ತಂದುಬಿಟ್ಟು ವಿಷ ಅಂತೀಯ...?" ಎಂದಾಗ ರಾಮಾಚಾರಿ, “ಲೇ ಹುಚ್ಚಿ, ಇವತ್ತಿನಿಂದ ನಾನು ನಿನ್ನ ಅಣ್ಣ... ಅಣ್ಣನಾದವನು ತಂಗಿಗೆ ವಿಷ ತಂದುಕೊಡ್ತಾನೇನೇ? ಅವನು ಯಾವತ್ತಿಗೂ ಕೊಡೋದು ಅರಿಶಿನ-ಕುಂಕುಮ ವನ್ನೇ ಅಲ್ವೇನೇ..?" ಎನ್ನುತ್ತಾನೆ. ಇವಿಷ್ಟೂ ಬೆಳವಣಿಗೆಗೂ ಕಾರಣರಾಗಿದ್ದ ಅಲ್ಲಿದ್ದ ಹಿರಿಯರು ರಾಮಾಚಾರಿಯ ಈ ಮಾತಿಗೆ ಬೆರಗಾಗುತ್ತಾರೆ. ತಮ್ಮ ಪರಮ ಶಿಷ್ಯನ ಹೃದಯ ವೈಶಾಲ್ಯ ಕಂಡು ಚಾಮಯ್ಯ ಮೇಷ್ಟ್ರ ಕಂಗಳು ಹನಿಗೂಡುತ್ತವೆ. ಆ ಭಾವದಲ್ಲೇ ಅವನನ್ನು ನೋಡುತ್ತ ಸ್ಥಿರವಾಗುತ್ತಾರೆ.

‘ನಾಗರಹಾವು’ ಚಿತ್ರದ ಒಂದೊಂದು ದೃಶ್ಯವೂ ಹೀಗೆ ‘ಹಾಟ್ ಕೇಕ್’ನಂತೆ ಮೂಡಿಬರು ವಂತಾಗಲು ಪುಟ್ಟಣ್ಣ ಕಲಾವಿದ ರನ್ನು, ತಂತ್ರಜ್ಞರನ್ನು ಆಗಾಗ ಹೀಗೆ ಕೆಣಕುತ್ತಿದ್ದರು. ಅದರ ಫಲಶ್ರುತಿಯಾಗಿರುವ ದೃಶ್ಯಗಳಲ್ಲಿ ಇದೂ ಒಂದು.

(ಮುಂದುವರಿಯುವುದು)