ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RCB vs CSK: ಮಾರಕ ಬೌನ್ಸರ್‌ ಎಸೆದ ಮತೀಶ್‌ ಪತಿರಣ ವಿರುದ್ದ ಸೇಡು ತೀರಿಸಿಕೊಂಡ ವಿರಾಟ್‌ ಕೊಹ್ಲಿ!

RCB vs CSK: ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ವೇಗದ ಬೌಲರ್ ಮತೀಶ ಪತಿರಣ ಅವರು ಬೌನ್ಸರ್‌ ಮೂಲಕ ವಿರಾಟ್ ಕೊಹ್ಲಿ ಹೆಲ್ಮೆಟ್‌ಗೆ ಹೊಡೆದರು. ಇದರಿಂದ ಆಕ್ರೋಶಗೊಂಡ ವಿರಾಟ್‌ ಕೊಹ್ಲಿ, ಸತತ ಎರಡು ಎಸೆತಗಳಲ್ಲಿ ಸಿಕ್ಸರ್ ಮತ್ತು ಬೌಂಡರಿ ಬಾರಿಸುವ ಮೂಲಕ ಸಿಎಸ್‌ಕೆ ವೇಗಿಯ ಎದುರು ಸೇಡು ತೀರಿಸಿಕೊಂಡರು.

ಸಿಕ್ಸರ್‌, ಬೌಂಡರಿ ಸಿಡಿಸಿ ಮತೀಶ ಪತಿರಣಗೆ ಪಾಠ ಕಲಿಸಿದ ಕಿಂಗ್‌ ಕೊಹ್ಲಿ!

ವಿರಾಟ್‌ ಕೊಹ್ಲಿ

Profile Ramesh Kote Mar 28, 2025 10:05 PM

ಚೆನ್ನೈ: ಹದಿನೆಂಟನೇ ಆವೃತ್ತಿಯ ಎಂಟನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಗಳು (RCB vs CSK) ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿವಂತಾದ ಆರ್‌ಸಿಬಿ ತಂಡ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ತೋರಿತು. ಅಂದ ಹಾಗೆ ಈ ಪಂದ್ಯದಲ್ಲಿ ಅಚ್ಚರಿ ಘಟನೆಯೊಂದು ನಡೆಯಿತು. ಇನಿಂಗ್ಸ್‌ನ 11ನೇ ಓವರ್‌ನಲ್ಲಿ ಕೆಲಕಾಲ ಎಲ್ಲರೂ ಭಯಗೊಂಡ ಘಟನೆ ನಡೆಯಿತು. ಸಿಎಸ್‌ಕೆ ವೇಗದ ಬೌಲರ್ ಮತೀಶ ಪತಿರಣ (Matheesha Pathirana) ಅವರು ತಮ್ಮ ಮಾರಕ ಬೌನ್ಸರ್‌ ಮೂಲಕ ವಿರಾಟ್ ಕೊಹ್ಲಿ (Virat Kohli) ಹೆಲ್ಮೆಟ್‌ಗೆ ಚೆಂಡನ್ನು ಹೊಡೆದರು. ಇದಾದ ನಂತರ ವಿರಾಟ್ ಕೊಹ್ಲಿ ಕೂಡ ಸಿಎಸ್‌ಕೆ ವೇಗಿಯ ವಿರುದ್ದ ಸೇಡು ತೀರಿಸಿಕೊಂಡರು.

ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದಿದ್ದ 2025ರ ಐಪಿಎಲ್‌ ಟೂರ್ನಿಯ ಎಂಟನೇ ಪಂದ್ಯದಲ್ಲಿ ಎಂದಿನಂತೆ ವಿರಾಟ್‌ ಕೊಹ್ಲಿ ಇನಿಂಗ್ಸ್‌ ಆರಂಭಿಸಿದರು. ಮತ್ತೊಂದು ತುದಿಯಲ್ಲಿ ಫಿಲ್‌ ಸಾಲ್ಟ್‌ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನ ತೋರುತ್ತಿದ್ದರು. ಆದರೆ, ಮತ್ತೊಂದು ಕಡೆ ವಿರಾಟ್‌ ಕೊಹ್ಲಿ ನಿಧಾನಗತಿಯ ಆಟವನ್ನು ಆಡಿದರು. ಫಿಲ್‌ ಸಾಲ್ಟ್‌ ಹಾಗೂ ದೇವದತ್‌ ಪಡಿಕ್ಕಲ್‌ ಔಟ್‌ ಆದ ಬಳಿಕ ವಿರಾಟ್‌ ಕೊಹ್ಲಿ ತಮ್ಮ ಬ್ಯಾಟಿಂಗ್‌ ವೇಗವನ್ನು ಹೆಚ್ಚಿಸಿಕೊಳ್ಳುತ್ತಿದ್ದರು. ಆದರೆ, 11ನೇ ಓವರ್‌ನಲ್ಲಿ ಎಲ್ಲರನ್ನೂ ಆತಂಕ ಮೂಡಿಸುವ ಘಟನೆಯೊಂದು ನಡೆಯಿತು.

RCB vs CSK: 27 ರನ್‌ ಗಳಿಸಿ ಔಟಾದರೂ ಕನ್ನಡಿಗ ದೇವದತ್‌ ಪಡಿಕ್ಕಲ್‌ ಬ್ಯಾಟಿಂಗ್‌ಗೆ ಫ್ಯಾನ್ಸ್‌ ಮೆಚ್ಚುಗೆ!

ವಿರಾಟ್‌ ಕೊಹ್ಲಿಯ ಹೆಲ್ಮೆಟ್‌ಗೆ ಬಡಿದ ಮಾರಕ ಬೌನ್ಸರ್‌

ಆರ್‌ಸಿಬಿ ಇನಿಂಗ್ಸ್‌ನಲ್ಲಿ ವಿರಾಟ್‌ ಕೊಹ್ಲಿಗೆ ಮತೀಶ ಪತಿರಣ ಮಾರಕ ಬೌನ್ಸರ್‌ ಹಾಕಿದರು. ಈ ವೇಳೆ ಪುಲ್‌ ಹೊಡೆಯಲು ಪ್ರಯತ್ನಿಸಿದರು. ಆದರೆ, ಕೊಹ್ಲಿ ನಿರೀಕ್ಷೆ ಮಾಡಿದ ರೀತಿಯಲ್ಲಿ ಬರಲಿಲ್ಲ. ಇದರ ಪರಿಣಾಮವಾಗಿ ಚೆಂಡು ವಿರಾಟ್‌ ಕೊಹ್ಲಿಯ ಹೆಲ್ಮೆಟ್‌ಗೆ ಬಡಿಯಿತು. ಕೆಲ ಕಾಲ ಎಲ್ಲರಲ್ಲಿಯೂ ಆತಂಕ ಮೂಡಿತು. ಫಿಸಿಯೊ ಕೂಡ ಮೈದಾನಕ್ಕೆ ಧಾವಿಸಿದ್ದರು. ಆದರೆ, ವಿರಾಟ್‌ ಕೊಹ್ಲಿ ತಮಗೆ ಏನೂ ಆಗಿಲ್ಲ ಎಂದು ಹೇಳುವ ಮೂಲಕ ಅವರನ್ನು ವಾಪಸ್‌ ಕಳುಹಿಸಿದ್ದರು.



ಮತೀಶ ಪತಿರಣ ವಿರುದ್ಧ ಸೇಡು ತೀರಿಸಿಕೊಂಡ ಕಿಂಗ್‌ ಕೊಹ್ಲಿ

ಮತೀಶ್‌ ಪತಿರಣ ಬೌನ್ಸರ್‌ಗೆ ಆಕ್ರೋಶಗೊಂಡಿದ್ದ ವಿರಾಟ್‌ ಕೊಹ್ಲಿ, ಮುಂದಿನ ಎರಡು ಎಸೆತಗಳಲ್ಲಿ ಸಿಕ್ಸರ್‌ ಹಾಗೂ ಬೌಂಡರಿಗಳನ್ನು ಸಿಡಿಸಿದರು. ಆ ಮೂಲಕ ಎದುರಾಳಿ ಮತೀಶ ಪತಿರಣ ವಿರುದ್ಧ ಸೇಡು ತೀರಿಸಿಕೊಂಡರು. ಪತಿರಣ ಎಸೆದ ಶಾರ್ಟ್‌ ಎಸೆತವನ್ನು ಅರಿತುಕೊಂಡ ವಿರಾಟ್‌ ಕೊಹ್ಲಿ ಪುಲ್‌ ಮೂಲಕ ಸಿಕ್ಸರ್‌ ಸಿಡಿಸಿದರೆ, ನಂತರದ ಎಸೆತದಲ್ಲಿ ಲಾಂಗ್‌ ಆನ್‌ ಮೇಲೆ ಬೌಂಡರಿ ಬಾರಿಸಿದರು. ಆ ಮೂಲಕ ಮತೀಶ ಪತಿರಣ ವಿರುದ್ದ ಸೇಡು ತೀರಿಸಿಕೊಂಡರು. ಈ ವೇಳೆ ಸಿಎಸ್‌ಕೆ ವೇಗಿಯನ್ನು ಕೊಹ್ಲಿ ಗುರಾಯಿಸಿದರು.



31 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ ಕೊಹ್ಲಿ

ವಿರಾಟ್‌ ಕೊಹ್ಲಿ ತಾವು ಎಷ್ಟು ಕಠಿಣ ಆಟಗಾರ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು. ಇದಕ್ಕೆ ಈ ಘಟನೆ ಉತ್ತಮ ಉದಾಹರಣೆಯಾಗಿದೆ. ಅವರಿಗೆ ಎಂಥಾ ಕಠಿಣ ಪರಿಸ್ಥಿತಿ ಎದುರಾದರೂ ಅದನ್ನು ದಿಟ್ಟತನದಿಂದ ಎದುರಿಸುತ್ತಾರೆ. ಈ ಇನಿಂಗ್ಸ್‌ನಲ್ಲಿ ಆಡಿದ 30 ಎಸೆತಗಳಲ್ಲಿ ಒಂದು ಸಿಕ್ಸರ್‌ ಹಾಗೂ ಎರಡು ಬೌಂಡರಿಗಳೊಂದಿಗೆ 32 ರನ್‌ಗಳನ್ನು ಕಲೆ ಹಾಕಿದರು. ನಂತರ ನೂರ್‌ ಅಹ್ಮದ್‌ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿದ ವಿರಾಟ್‌ ಕೊಹ್ಲಿ, ರಚಿನ್‌ ರವೀಂದ್ರಗೆ ವಿಕೆಟ್‌ ಒಪ್ಪಿಸಿದರು.

RCB vs CSK: ವಿರಾಟ್‌ ಕೊಹ್ಲಿ ಜತೆಗಿನ ತರಬೇತಿಯ ಅನುಭವ ತೆರೆದಿಟ್ಟ ಜಾಶ್‌ ಹೇಝಲ್‌ವುಡ್‌!

196 ರನ್‌ಗಳನ್ನು ಕಲೆ ಹಾಕಿದ ಆರ್‌ಸಿಬಿ

ಅಂದ ಹಾಗೆ ಈ ಪಂದ್ಯದಲ್ಲಿ ಆರ್‌ಸಿಬಿ ತಂಡ ತನ್ನ ಪಾಲಿನ 20 ಓವರ್‌ಗಳಿಂದ 7 ವಿಕೆಟ್‌ಗಳನ್ನು ಕಳೆದುಕೊಂಡು 196 ರನ್‌ಗಳನ್ನು ಕಲೆ ಹಾಕಿತು. ಆರ್‌ಸಿಬಿ ಪರ ಅತ್ಯುತ್ತಮ ಬ್ಯಾಟ್‌ ಮಾಡಿದ ರಜತ್‌ ಪಾಟಿದಾರ್‌ 51 ರನ್‌ಗಳನ್ನು ಸಿಡಿಸಿದರೆ, ಫಿಲ್‌ ಸಾಲ್ಟ್‌ 32 ಹಾಗೂ ದೇವದತ್‌ ಪಡಿಕ್ಕಲ್‌ 27 ರನ್‌ಗಳನ್ನು ಕಲೆ ಹಾಕಿತು. ಅಂತಿಮವಾಗಿ ಆರ್‌ಸಿಬಿಗೆ 197 ರನ್‌ಗಳ ಕಠಿಣ ಗುರಿಯನ್ನು ನೀಡಿತು.