Wednesday, 11th December 2024

ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಶುಭಾರಂಭ

ಚೆನ್ನೈ: ಐಪಿಎಲ್​ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವನ್ನು 6 ವಿಕೆಟ್​​ ಗಳಿಂದ ಮಣಿಸಿ, ಶುಭಾರಂಭ ಮಾಡಿತು.

ಮೊದಲ ಪಂದ್ಯದಲ್ಲಿಯೇ ಟಾಸ್ ಗೆದ್ದ ಆರ್​ಸಿಬಿ ತಂಡ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿತು. ಫಾಫ್​ ಪಡೆ 20 ಓವರ್​ ಗೆ 6 ವಿಕೆಟ್​ ನಷ್ಟಕ್ಕೆ 173 ರನ್​ ಗಳಿಸುವ ಮೂಲಕ ಚೆನ್ನೈ ತಂಡಕ್ಕೆ 174 ರನ್​ ಗಳ ಬಿಗ್​ ಟಾರ್ಗೆಟ್​​ ನೀಡಿತು. ಈ ಮೊತ್ತ ಬೆನ್ನಟ್ಟಿದ ಚೆನ್ನೈ ತಂಡಕ್ಕೆ ಉತ್ತಮ ಆರಂಭ ಪಡೆಯುವಲ್ಲಿ ಯಶಸ್ವಿಯಾಯಿತು. ಅಂತಿಮವಾಗಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡವು ನಿಗದಿತ 18.4 ಓವರ್​ಗೆ 4 ವಿಕೆಟ್ ನಷ್ಟಕ್ಕೆ 176 ರನ್​ ಗಳಿಸುವ ಮೂಲಕ ಚೆನ್ನೈ 6 ವಿಕೆಟ್​​ ಗಳ ಭರ್ಜರಿ ಗೆಲುವು ದಾಖಲಿಸಿತು.

ಆರ್​ಸಿಬಿ ನೀಡಿದ ಬಿಗ್​ ಟಾರ್ಗೆಟ್ ಬೆನ್ನಟ್ಟಿದ ಚೆನ್ನೈ ತಂಡಕ್ಕೆ ಸಾಧಾರಣ ಆರಂಭ ದೊರಕಿತು. ನಾಯಕ ರುತುರಾಜ್​ ಗಾಯಕ್ವಾಡ 15 ರನ್​ ಸಿಡಿಸಿ ಔಟ್ ಆದರು. ಚೊಚ್ಚಲ ಬಾರಿಗೆ ಐಪಿಎಲ್​ ಆಡಿದ ಕನ್ನಡಿಗ ರಚಿನ್​ ರವೀಂದ್ರ 15 ಎಸೆತದಲ್ಲಿ 3 ಸಿಕ್ಸ್​ ಮತ್ತು 3 ಬೌಂಡರಿ ಮೂಲಕ 37 ರನ್​ ಗಳಿಸಿ ಅಬ್ಬರಿಸಿ ದರು. ಅಜಿಂಕ್ಯಾ ರಹಾನೆ ಸಹ 19 ಎಸೆತದಲ್ಲಿ 27 ರನ್​ ಸಿಡಿಸಿದರು. ಶಿವಂ ದುಬೆ ಭರ್ಜರಿ ಬ್ಯಾಟಿಂಗ್​ ಮಾಡುವ ಮೂಲಕ ಗೆಲುವನ್ನು ತರಲುವಲ್ಲಿ ಪ್ರಮುಖರಾದರು. ದುಬೆ 34 ರನ್​ ಹಾಗೂ ಕೊನೆಯಲ್ಲಿ ರವೀಂದ್ರ ಜಡೇಜಾ 25 ರನ್​ ಸಿಡಿಸಿದರು.

ಮೊದಲು ಬ್ಯಾಟಿಂಗ್​ ಮಾಡಿದ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ನಾಯಕ ಫಾಫ್​ ಡುಪ್ಲೇಸಿಸ್​ 23 ಎಸೆತದಲ್ಲಿ 8 ಬೌಂಡರಿ ಸಹಿತ 35 ರನ್​ ಸಿಡಿಸಿ ವಿಕೆಟ್ ಒಪ್ಪಿಸಿದರೆ, ಬಳಿಕ ಬಂದ ರಜತ್​ ಪಟೇದಾರ್​​ ಶೂನ್ಯ ಮತ್ತು ಗ್ಲೇನ್​ ಮ್ಯಾಕ್ಸ್​ವೆಲ್​ ಸಹ ಶೂನ್ಯಕ್ಕೆ ಔಟ್​ ಆದರು. ವಿರಾಟ್ ಕೊಹ್ಲಿ ಸಹ 20 ಎಸೆತದಲ್ಲಿ 1 ಸಿಕ್ಸ್ ಸಹಿತ 21 ರನ್​ ಸಿಡಿಸಿ ಪೆವೆಲಿಯನ್​ ಸೇರಿದರು. ಕೆಮರೂನ್​ ಗ್ರೀನ್​ ಸಹ 18 ರನ್​ ಸಿಡಿಸಿ ಔಟ್​ ಆದರು. ಬಳಿಕ ಜೊತೆಯಾದ ಅನುಜ್​ ರಾವತ್​ ಮತ್ತು ದಿನೇಶ್​ ಕಾರ್ತಿಕ್​ ತಾಳ್ಮೆಯಿಂದ ಉತ್ತಮ ಜೊತೆಯಾಟವಾಡಿದರು. ಈ ಮೂಲಕ ತಂಡದ ಮೊತ್ತವನ್ನು ಹೆಚ್ಚಿಸಲುವಲ್ಲಿ ಸಹಾಯಕರಾದರು.

ಚೆನ್ನೈ ಸೂಪರ್​ ಕಿಂಗ್ಸ್​ ತಂಡಕ್ಕೆ ಆರಂಭದಲ್ಲಿ ಕೊಂಚ ಹಿನ್ನಡೆಯಾದರೂ ಸಹ ಬಳಿಕ ಉತ್ತಮ ಆರಂಭ ದೊರಕಿತು. ಬ್ಯಾಕ್​ ಟು ಬ್ಯಾಕ್​ ವಿಕೆಟ್ ಪಡೆಯುವಲ್ಲಿ ಯಶಸ್ವಿ ಆಯಿತು. ಚೆನ್ನೈ ಪರ ಮುಸ್ತಾಫಿಜುರ್ ರಹಮಾನ್ 4 ಓವರ್​ ಗೆ 29 ರನ್​ ನೀಡಿ 4 ವಿಕೆಟ್ ಕಬಳಿಸಿ ಮಿಮಚಿದರು. ಇತ್ತ ದೀಪಕ್​ ಚಹಾರ್​ 4 ಓವರ್​ ಗೆ 37 ರನ್​ ನಿಡಿ 1 ವಿಕೆಟ್ ಪಡೆದರು.