Sunday, 28th April 2024

ಧೋನಿ, ವಿರಾಟ್‌ ಕೊಹ್ಲಿ ಅವರ ಪತ್ನಿ, ಮಕ್ಕಳ ಗುರಿಯಾಗಿಸಿ ಹೇಳಿಕೆ: ಪ್ರಕರಣ ದಾಖಲು

ವದೆಹಲಿ: ಕ್ರಿಕೆಟಿಗರಾದ ಮಹೇಂದ್ರ ಸಿಂಗ್‌ ಧೋನಿ ಹಾಗೂ ವಿರಾಟ್‌ ಕೊಹ್ಲಿ ಅವರ ಪತ್ನಿ ಮತ್ತು ಮಕ್ಕಳನ್ನು ಗುರಿಯಾಗಿಸಿ ‘ಸ್ತ್ರೀ ದ್ವೇಷಿ’ ಹೇಳಿಕೆಗಳನ್ನು ನೀಡುವವರ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಆಗ್ರಹಿಸಿ ದೆಹಲಿ ಮಹಿಳಾ ಆಯೋಗವು ನಗರ ಪೊಲೀಸರಿಗೆ ನೋಟಿಸ್‌ ನೀಡಿದೆ.

ಧೋನಿ ಮಗಳು ಮತ್ತು ಕೊಹ್ಲಿ ಅವರ ಮಗಳನ್ನು ಗುರಿಯಾಗಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ ಹಂಚಿಕೊಳ್ಳುತ್ತಿರು ವವರ ವಿರುದ್ಧ ಆಯೋಗವು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.

‘ಎರಡೂ ಮಕ್ಕಳು ಮತ್ತು ಅವರ ತಾಯಿಯಂದಿರ ಕುರಿತಂತೆ ಸಾಮಾಜಿಕ ಮಾಧ್ಯಮ ವೇದಿಕೆ ಟ್ವಿಟರ್‌ನಲ್ಲಿ ಹಂಚಿಕೆ ಯಾಗಿರುವ ಪೋಸ್ಟ್‌ಗಳು ಅಶ್ಲೀಲ, ಸ್ತ್ರೀದ್ವೇಷಿ ಮತ್ತು ನಿಂದನಾತ್ಮಕವಾಗಿವೆ. ಇದು ಅತ್ಯಂತ ಗಂಭೀರ ವಿಷಯವಾಗಿದ್ದು, ತುರ್ತಾಗಿ ಕ್ರಮ ಕೈಗೊಳ್ಳಬೇಕಿದೆ’ ಎಂದು ಆಯೋಗವು ತನ್ನ ನೋಟಿಸ್‌ನಲ್ಲಿ ತಿಳಿಸಿದೆ.

ತೆಗೆದುಕೊಳ್ಳಲಾದ ಕ್ರಮದ ಕುರಿತು ವಿಸ್ತೃತ ವರದಿಯನ್ನು ಜನವರಿ 16ರ ಒಳಗಾಗಿ ನೀಡುವಂತೆ ಹೇಳಲಾಗಿದೆ.

error: Content is protected !!