Wednesday, 11th December 2024

ಧೋನಿ ನಾಯಕತ್ವ ತ್ಯಾಗ, ರುತುರಾಜ್ ಗಾಯಕ್ವಾಡ್’ಗೆ ಪಟ್ಟ

ಚೆನ್ನೈ: ಮಹೇಂದ್ರ ಸಿಂಗ್ ಧೋನಿ ಅವರು ಚೆನ್ನೈ ತಂಡದ ನಾಯಕತ್ವದ ಜವಾಬ್ದಾರಿಯಿಂದ ದೂರವಾಗಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಐಪಿಎಲ್ ಹ್ಯಾಂಡಲ್ ನಲ್ಲಿ ಅಧಿಕೃತವಾಗಿ ಪ್ರಕಟಿಸಲಾಗಿದೆ.

ಸಿಎಸ್ ಕೆ ತಂಡದ ಮುಂದಿನ ನಾಯಕನಾಗಿ ಯುವ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ ಅವರನ್ನು ನೇಮಿಸಲಾಗಿದೆ.

ಚೆನ್ನೈನಲ್ಲಿ ನಡೆಯಲಿರುವ 2024ರ ಐಪಿಎಲ್ ನ ಮೊದಲ ಪಂದ್ಯವನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.