ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hockey India Awards: ಹಾಕಿ ಇಂಡಿಯಾ ಪ್ರಶಸ್ತಿ ಗೆದ್ದ ಹರ್ಮನ್‌ಪ್ರೀತ್, ಸವಿತಾ

ಸವಿತಾ ಅವರಿಗೆ ವಾರ್ಷಿಕ ಗೌರವದ ಜೊತೆಗೆ ಬಲ್ಜೀತ್ ಸಿಂಗ್ ಶ್ರೇಷ್ಠ ಗೋಲ್‌ಕೀಪರ್ ಪ್ರಶಸ್ತಿಯನ್ನೂ ಪ್ರದಾನ ಮಾಡಲಾಯಿತು. 'ಅವಳಿ ಪ್ರಶಸ್ತಿ ಸಿಕ್ಕಿರುವುದು ನನಗೆ ಸಿಕ್ಕಿದ ಬಲುದೊಡ್ಡ ಗೌರವ, ಆದರೆ ಇದು ನನ್ನ ತಂಡದ ಸದಸ್ಯರಿಂದಾಗಿ ಈ ಪ್ರಶಸ್ತಿ ಸಿಕ್ಕಿದೆ' ಎಂದು ಸವಿತಾ ಪ್ರಶಸ್ತಿ ಸ್ವೀಕರಿಸಿದ ಬಳಿಕ ಸಂತಸ ವ್ಯಕ್ತಪಡಿಸಿದರು.

ಹಾಕಿ ಇಂಡಿಯಾ ಪ್ರಶಸ್ತಿ ಗೆದ್ದ ಹರ್ಮನ್‌ಪ್ರೀತ್, ಸವಿತಾ

Profile Abhilash BC Mar 16, 2025 8:29 AM

ನವದೆಹಲಿ: ಭಾರತ ಪುರುಷರ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ಮಹಿಳಾ ತಂಡದ ಅನುಭವಿ ಗೋಲ್‌ಕೀಪರ್ ಸವಿತಾ ಪೂನಿಯಾ ಅವರಿಗೆ ಹಾಕಿ ಇಂಡಿಯಾ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗಿದೆ. ಬಲ್ಬೀರ್ ಸಿಂಗ್ ಸೀನಿಯರ್ ಅವರ ಹೆಸರಿನ ಈ ಪ್ರಶಸ್ತಿಯನ್ನು ಪ್ರತಿವರ್ಷ ಉತ್ತಮ ಸಾಧನೆ ಮಾಡಿದ ಆಟಗಾರ ಹಾಗೂ ಆಟಗಾರ್ತಿಗೆ ನೀಡಲಾಗುತ್ತದೆ. ಹರ್ಮನ್‌ಪ್ರೀತ್‌ ನಾಯಕತ್ವದ ಭಾರತೀಯ ತಂಡ 2024ರ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿತ್ತು. 2020ರ ಟೋಕಿಯೊ ಒಲಿಂಪಿಕ್ ಕೂಟದ ಕಂಚಿನ ಪದಕ ಗೆದ್ದಿದ್ದ ತಂಡದಲ್ಲಿಯೂ ಅವರು ಆಡಿದ್ದರು.

1975ರ ಪುರುಷರ ವಿಶ್ವಕಪ್‌ ವಿಜೇತ ತಂಡಕ್ಕೆ ಹಾಕಿ ಇಂಡಿಯಾ ಮೇಜರ್‌ ಧ್ಯಾನ್‌ಚಂದ್‌ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಾಕಿ ಇಂಡಿಯಾ 7ನೇ ವಾರ್ಷಿಕ ಸಮಾರಂಭದಲ್ಲಿ ಆಟಗಾರರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.



ಸವಿತಾ ಅವರಿಗೆ ವಾರ್ಷಿಕ ಗೌರವದ ಜೊತೆಗೆ ಬಲ್ಜೀತ್ ಸಿಂಗ್ ಶ್ರೇಷ್ಠ ಗೋಲ್‌ಕೀಪರ್ ಪ್ರಶಸ್ತಿಯನ್ನೂ ಪ್ರದಾನ ಮಾಡಲಾಯಿತು. 'ಅವಳಿ ಪ್ರಶಸ್ತಿ ಸಿಕ್ಕಿರುವುದು ನನಗೆ ಸಿಕ್ಕಿದ ಬಲುದೊಡ್ಡ ಗೌರವ, ಆದರೆ ಇದು ನನ್ನ ತಂಡದ ಸದಸ್ಯರಿಂದಾಗಿ ಈ ಪ್ರಶಸ್ತಿ ಸಿಕ್ಕಿದೆ' ಎಂದು ಸವಿತಾ ಪ್ರಶಸ್ತಿ ಸ್ವೀಕರಿಸಿದ ಬಳಿಕ ಸಂತಸ ವ್ಯಕ್ತಪಡಿಸಿದರು.

'ಪ್ರಶಸ್ತಿ ಸಿಕ್ಕಿರುವುದು ಬಹಳ ಖುಷಿಯಾಗಿದೆ. ಕಠಿಣ ಪರಿಶ್ರಮದಿಂದ ಗುರಿ ಸಾಧನೆ ಮಾಡುವುದು ಸಾಧ್ಯ ನಮ್ಮ ಸಾಧನೆಯು ಯುವ ಆಟಗಾರರಿಗೆ ಪ್ರೇರಣೆಯಾಗಲಿ' ಎಂದು ಹರ್ಮನ್‌ಪ್ರೀತ್ ಸಿಂಗ್ ಹೇಳಿದರು.



ಅಭಿಷೇಕ್ (ಫಾರ್ವರ್ಡ್), ಹಾರ್ದಿಕ್ ಸಿಂಗ್ (ಮಿಡ್‌ಫೀಲ್ಡರ್), ಅಮಿತ್ ರೋಹಿದಾಸ್ (ಡಿಫೆಂಡರ್) ಅವರಿಗೆ ವಾರ್ಷಿಕ ಪ್ರಶಸ್ತಿ ನೀಡಲಾಯಿತು. ಅರೈಜೀತ್ ಸಿಂಗ್ ಹುಂಡಾಲ್ ಅವರಿಗೆ 21 ವರ್ಷದೊಳಗಿನ ಪುರುಷರ ವಿಭಾಗದಲ್ಲಿ ಜುಗರಾಜ್ ಸಿಂಗ್ ಪ್ರಶಸ್ತಿ, ದೀಪಿಕಾ ಅವರಿಗೆ ಮಹಿಳಾ ವಿಭಾಗದ ಪ್ರಶಸ್ತಿ ನೀಡಲಾಯಿತು. ಪ್ರಶಸ್ತಿ ಸಮಾರಂಭದಲ್ಲಿ ಕೇಂದ್ರದ ಮಾಜಿ ಕ್ರೀಡಾ ಸಚಿವ ಕಿರಣ್ ರಿಜಿಜು, ಹಾಕಿ ಇಂಡಿಯಾ ಅಧ್ಯಕ್ಷ ದಿಲಿಪ್ ಟಿರ್ಕಿ, ಮಹಾಪ್ರಧಾನ ಕಾರ್ಯದರ್ಶಿ ಭೋಲಾನಾಥ್ ಸಿಂಗ್ ಅವರು ಹಾಜರಿದ್ದರು.