ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Virat Kohli: ಕುಟುಂಬ ನಿರ್ಬಂಧ ನಿಯಮಕ್ಕೆ ಪರೋಕ್ಷವಾಗಿ ಚಾಟಿ ಬೀಸಿದ ಕೊಹ್ಲಿ

2028ರ ಒಲಿಂಪಿಕ್ಸ್‌ಗೆ ಕ್ರಿಕೆಟ್‌ ಸೇರ್ಪಡೆ ಬಗ್ಗೆ ಮಾತನಾಡಿರುವ ಕೊಹ್ಲಿ, ಇದರ ಹಿಂದೆ ಐಪಿಎಲ್‌ ಪಾತ್ರ ದೊಡ್ಡದು ಎಂದಿದ್ದಾರೆ. ಇದೇ ವೇಳೆ ನಿವೃತ್ತಿ ಹಿಂಪಡೆದು ಒಲಿಂಪಿಕ್ಸ್‌ ಟಿ20 ಕ್ರಿಕೆಟ್‌ನಲ್ಲಿ ಆಡುತ್ತೀರಾ ಎಂಬ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಕೊಹ್ಲಿ, ‘ಅದರ ಬಗ್ಗೆ ಗೊತ್ತಿಲ್ಲ. ಆದರೆ ಒಲಿಂಪಿಕ್ಸ್‌ ಚಿನ್ನದ ಪದಕದ ಒಂದು ಪಂದ್ಯಕ್ಕಾಗಿ ಆಡುವ ಅವಕಾಶ ಸಿಕ್ಕರೆ, ಪದಕ ಪಡೆದು ಮನೆಗೆ ಮರಳುತ್ತೇನೆ’ ಎಂದರು.

ಕುಟುಂಬ ನಿರ್ಬಂಧ ನಿಯಮಕ್ಕೆ ಪರೋಕ್ಷವಾಗಿ ಚಾಟಿ ಬೀಸಿದ ಕೊಹ್ಲಿ

Profile Abhilash BC Mar 16, 2025 11:58 AM

ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್‌-ಗವಾಸ್ಕರ್‌ ಟೆಸ್ಟ್‌ ಸರಣಿ ಸೋಲಿನ ಬಳಿಕ ಬಿಸಿಸಿಐ ಶಿಸ್ತು ಸಂಹಿತೆಯಲ್ಲಿ ಅಮೂಲಾಗ್ರ ಪರಿಷ್ಕರಣೆ ಮಾಡಿತ್ತು. ಇದರಲ್ಲಿ ಮುಖ್ಯವಾಗಿ ವಿದೇಶಿ ಸರಣಿಯ ಪ್ರವಾಸದ ವೇಳೆ ಆಟಗಾರರ ಪತ್ನಿ ಹಾಗೂ ಕುಟುಂಬ ಸದಸ್ಯರ ಜತೆಗಿರುವಿಕೆಯ ಕಾಲಮಿತಿಯನ್ನು ಕಡಿತಗೊಳಿಸಿತ್ತು. ಈ ಬಾರಿಯ ಐಪಿಎಲ್‌ನಲ್ಲಿಯೂ ಈ ನಿಯಮ ಪಾಲನೆಯಾಗಲಿದೆ. ಈ ನಿಯಮಕ್ಕೆ ವಿರಾಟ್‌ ಕೊಹ್ಲಿ ಪರೋಕ್ಷವಾಗಿ ಚಾಟಿ ಬೀಸಿದ್ದಾರೆ. ಆಟಗಾರರಿಗೆ ಕುಟುಂಬದ ಸಖ್ಯ ಬಹಳ ಮುಖ್ಯ. ತಮ್ಮ ಪಾಲಿನ ಕರ್ತವ್ಯ ನಿರ್ವಹಿಸಿದ ನಂತರ ಕುಟುಂಬದೊಂದಿಗೆ ನಿರಾಳವಾಗಿ ಕಾಲ ಕಳೆಯುವುದು ಉತ್ತಮ ಅನುಭೂತಿ ಎಂದರು.

ಶನಿವಾರ ರಾಹುಲ್ ದ್ರಾವಿಡ್ –ಪ್ರಕಾಶ್ ಪಡುಕೋಣೆ ಅಕಾಡೆಮಿಯಲ್ಲಿ ಆರ್‌ಸಿಬಿ ಇನೋವೆಟಿವ್ ಲ್ಯಾಬ್ ಆಯೋಜಿಸಿದ್ದ ಇಂಡಿಯನ್ ಸ್ಪೋರ್ಟ್ಸ್ ಸಮಿಟ್‌ನಲ್ಲಿ ಕೊಹ್ಲಿ ಹಲವು ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿದರು.

'ಮೈದಾನದಲ್ಲಿ ಆಟಗಾರನೊಬ್ಬ ಕಠಿಣ ಸಮಯವನ್ನು ಎದುರಿಸುತ್ತಿರುವ ಅವರಿಗೆ ಕುಟುಂಬಗಳು ಸಮತೋಲನವನ್ನು ತರುತ್ತವೆ. ಏನೇ ಸಮಸ್ಯೆಯಾದರೂ ಕುಟುಂಬದ ಜತೆಗಿದ್ದರೆ ಈ ಸಮಸ್ಯೆಗೊಂದು ಪರಿಹಾರ ಕಂಡುಕೊಳ್ಳಬಹುದು' ಎಂದು ಹೇಳುವ ಮೂಲಕ ಬಿಸಿಐ ನಿಯಮಕ್ಕೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದರು.

2028ರ ಒಲಿಂಪಿಕ್ಸ್‌ಗೆ ಕ್ರಿಕೆಟ್‌ ಸೇರ್ಪಡೆ ಬಗ್ಗೆ ಮಾತನಾಡಿರುವ ಕೊಹ್ಲಿ, ಇದರ ಹಿಂದೆ ಐಪಿಎಲ್‌ ಪಾತ್ರ ದೊಡ್ಡದು ಎಂದಿದ್ದಾರೆ. ಇದೇ ವೇಳೆ ನಿವೃತ್ತಿ ಹಿಂಪಡೆದು ಒಲಿಂಪಿಕ್ಸ್‌ ಟಿ20 ಕ್ರಿಕೆಟ್‌ನಲ್ಲಿ ಆಡುತ್ತೀರಾ ಎಂಬ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಕೊಹ್ಲಿ, ‘ಅದರ ಬಗ್ಗೆ ಗೊತ್ತಿಲ್ಲ. ಆದರೆ ಒಲಿಂಪಿಕ್ಸ್‌ ಚಿನ್ನದ ಪದಕದ ಒಂದು ಪಂದ್ಯಕ್ಕಾಗಿ ಆಡುವ ಅವಕಾಶ ಸಿಕ್ಕರೆ, ಪದಕ ಪಡೆದು ಮನೆಗೆ ಮರಳುತ್ತೇನೆ’ ಎಂದರು.

ಇದನ್ನೂ ಓದಿ Virat Kohli: ವಿರಾಟ್‌ ಕೊಹ್ಲಿಯ ನೂತನ ಕೇಶ ವಿನ್ಯಾಸಕ್ಕೆ ಅಭಿಮಾನಿಗಳು ಫಿದಾ!

ಕ್ರಿಕೆಟಿಗನೊಬ್ಬ 45ಕ್ಕೂ ಅಧಿಕ ದಿನಗಳ ಕಾಲ ವಿದೇಶಿ ಕ್ರಿಕೆಟ್‌ ಪ್ರವಾಸದಲ್ಲಿದ್ದರೆ, ಆಗ ಕುಟುಂಬ ಸದಸ್ಯರು ಗರಿಷ್ಠ 2 ವಾರಗಳ ಕಾಲ ಅವರ ಜತೆಗಿರಬಹುದು. 45 ದಿನಗಳಿಗಿಂತ ಕಡಿಮೆ ಅವಧಿಯ ಪ್ರವಾಸಗಳಿಗೆ ಕುಟುಂಬಗಳು ಆಟಗಾರರ ಜತೆಯಲ್ಲಿ ಬರಲು ಅನುಮತಿ ಇಲ್ಲ. ಇದೇ ಕಾರಣಕ್ಕೆ ಮೂರು ವಾರಗಳ ಚಾಂಪಿಯನ್ಸ್‌ ಟ್ರೋಫಿಗೆ ಆಟಗಾರರ ಜತೆ ಕುಟುಂಬ ಸದಸ್ಯರಿಗೆ ಅನುಮತಿ ನೀಡಿಲ್ಲ. ಆದರೂ ಕೊನೆಗೆ ಬಿಸಿಸಿಐ ಒಂದು ಪಂದ್ಯಕ್ಕೆ ಮಾತ್ರ ಅವಕಾಶ ನೀಡಿತ್ತು.