ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IML 2025: ಇಂದು ಭಾರತ-ವಿಂಡೀಸ್‌ ಫೈನಲ್‌ ಮುಖಾಮುಖಿ

IML 2025: ಲೀಗ್‌ ಹಂತದ ಪಂದ್ಯದಲ್ಲಿ ಭಾರತ ತಂಡ ವಿಂಡೀಸ್‌ ವಿರುದ್ಧ ಕೇವಲ 7 ರನ್‌ ಅಂತರದ ಗೆಲುವು ಸಾಧಿಸಿತ್ತು. ಹೀಗಾಗಿ ಫೈನಲ್‌ ಪಂದ್ಯ ಕೂಡ ತೀವ್ರ ಪೈಪೋಟಿಯಿಂದ ಕೂಡಿರುವ ನಿರೀಕ್ಷೆ ಇದೆ. 1983ರ ಏಕದಿನ ವಿಶ್ವಕಪ್‌ ಫೈನಲ್‌ ಅಂದರೆ, ಬರೋಬ್ಬರಿ 42 ವರ್ಷಗಳ ಬಳಿಕ ಇತ್ತಂಡಗಳು ಕ್ರಿಕೆಟ್‌ ಟೂರ್ನಿಯೊಂದರ ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿರುವ ವಿಶೇಷ.

ಇಂದು ಭಾರತ-ವಿಂಡೀಸ್‌ ಫೈನಲ್‌ ಮುಖಾಮುಖಿ

Profile Abhilash BC Mar 16, 2025 10:22 AM

ರಾಯ್‌ಪುರ: ಇಂದು(ಭಾನುವಾರ) ನಡೆಯುವ ಮೊದಲ ಅಂತಾರಾಷ್ಟ್ರೀಯ ಮಾಸ್ಟರ್ ಟಿ20 ಲೀಗ್‌ ಫೈನಲ್‌(IML 2025) ಪಂದ್ಯದಲ್ಲಿ ಸಚಿನ್‌ ತೆಂಡೂಲ್ಕರ್(Sachin Tendulkar) ನಾಯಕತ್ವದ ಇಂಡಿಯಾ ಮಾಸ್ಟರ್ಸ್‌ ತಂಡವು ಬ್ರಿಯಾನ್‌ ಲಾರಾ(Brian Lara) ಸಾರಥ್ಯದ ವೆಸ್ಟ್‌ ಇಂಡೀಸ್‌ ಮಾಸ್ಟರ್ಸ್‌ ತಂಡವನ್ನು ಎದುರಿಸಲಿದೆ. ಯಾರೇ ಗೆದ್ದರು ಚೊಚ್ಚಲ ಟ್ರೋಫಿ ಎತ್ತಿ ಹಿಡಿಯಲಿದ್ದಾರೆ. ಈ ತಂಡ ಯಾವುದು ಎಂಬುದು ಪಂದ್ಯದ ಕುತೂಹಲ. ಸೆಮಿ ಫೈನಲ್‌ನಲ್ಲಿ ಭಾರತ ಆಸ್ಟ್ರೇಲಿಯವನ್ನು, ವೆಸ್ಟ್‌ ಇಂಡೀಸ್‌ ಶ್ರೀಲಂಕಾವನ್ನು ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟಿತ್ತು.

ಲೀಗ್‌ ಹಂತದ ಪಂದ್ಯದಲ್ಲಿ ಭಾರತ ತಂಡ ವಿಂಡೀಸ್‌ ವಿರುದ್ಧ ಕೇವಲ 7 ರನ್‌ ಅಂತರದ ಗೆಲುವು ಸಾಧಿಸಿತ್ತು. ಹೀಗಾಗಿ ಫೈನಲ್‌ ಪಂದ್ಯ ಕೂಡ ತೀವ್ರ ಪೈಪೋಟಿಯಿಂದ ಕೂಡಿರುವ ನಿರೀಕ್ಷೆ ಇದೆ. 1983ರ ಏಕದಿನ ವಿಶ್ವಕಪ್‌ ಫೈನಲ್‌ ಅಂದರೆ, ಬರೋಬ್ಬರಿ 42 ವರ್ಷಗಳ ಬಳಿಕ ಇತ್ತಂಡಗಳು ಕ್ರಿಕೆಟ್‌ ಟೂರ್ನಿಯೊಂದರ ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿರುವ ವಿಶೇಷ.

ನಾಯಕ ಸಚಿನ್‌ ಮತ್ತು ಯುವರಾಜ್‌ ಸಿಂಗ್‌ ಪ್ರಚಂಡ ಬ್ಯಾಟಿಂಗ್‌ ಫಾರ್ಮ್‌ನಲ್ಲಿರುವುದು ಭಾರತ ತಂಡದ ಬಲವಾಗಿದೆ. ಬೌಲಿಂಗ್‌ನಲ್ಲಿ ಇರ್ಫಾನ್‌ ಪಠಾಣ್‌, ವಿನಯ್‌ ಕುಮಾರ್‌ ಮತ್ತು ಪವನ್‌ ನೇಗಿ ಉತ್ತಮ ಲಯದಲ್ಲಿದ್ದಾರೆ.



ಇದನ್ನೂ ಓದಿ IPL 2025: ಪಾಂಡ್ಯಗೆ ನಿಷೇಧ ಶಿಕ್ಷೆ; ಮೊದಲ ಪಂದ್ಯದಲ್ಲಿ ಮುಂಬೈಗೆ ನಾಯಕ ಯಾರು?

ಸಂಭಾವ್ಯ ತಂಡಗಳು

ಭಾರತ ಮಾಸ್ಟರ್ಸ್‌: ಸಚಿನ್ ತೆಂಡೂಲ್ಕರ್ (ನಾಯಕ), ಅಂಬಾಟಿ ರಾಯುಡು, ಗುರುಕೀರತ್ ಸಿಂಗ್ ಮಾನ್, ಯೂಸುಫ್ ಪಠಾಣ್, ಯುವರಾಜ್ ಸಿಂಗ್, ಸ್ಟುವರ್ಟ್ ಬಿನ್ನಿ, ಇರ್ಫಾನ್ ಪಠಾಣ್, ಪವನ್ ನೇಗಿ, ಶಹಬಾಜ್ ನದೀಮ್, ಧವಳ್ ಕುಲಕರ್ಣಿ, ವಿನಯ್ ಕುಮಾರ್.

ವೆಸ್ಟ್‌ ಇಂಡೀಸ್‌: ಡ್ವೇನ್ ಸ್ಮಿತ್, ವಿಲಿಯಂ ಪರ್ಕಿನ್ಸ್, ಲೆಂಡ್ಲ್ ಸಿಮ್ಮನ್ಸ್, ಬ್ರಿಯಾನ್ ಲಾರಾ (ನಾಯಕ), ಆಶ್ಲೇ ನರ್ಸ್, ಚಾಡ್ವಿಕ್ ವಾಲ್ಟನ್, ದಿನೇಶ್ ರಾಮ್ದಿನ್ (ವಿಕೆಟ್ ಕೀಪರ್), ಟಿನೋ ಬೆಸ್ಟ್, ಜೆರೋಮ್ ಟೇಲರ್, ಸುಲೈಮಾನ್ ಬೆನ್, ರವಿ ರಾಮ್‌ಪಾಲ್.