ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

ಪ್ಯಾರಾ ಬಿಲ್ಗಾರ್ತಿ ಶೀತಲ್ ದೇವಿಗೆ ಆನಂದ್‌ ಮಹೀಂದ್ರಾ ಸ್ಕಾರ್ಫಿಯೋ ಕಾರು ಉಡುಗೊರೆ

ಜಮ್ಮುವಿನ ಲಾಯಿಧರ್‌ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿದ ಶೀತಲ್ ದೇವಿ(Sheetal Devi) ಹುಟ್ಟುವಾಗಲೇ ಫೊಕೊಮೀಲಿಯ ಕಾಯಿಲೆಗೆ ತುತ್ತಾಗಿದ್ದರು. ಈ ಕಾಯಿಲೆಯಿದ್ದವರಿಗೆ ಕೈ ಅಥವಾ ಕಾಲುಗಳ ಬೆಳವಣಿಗೆ ಇರುವುದಿಲ್ಲ. ಶೀತಲ್‌ ಅವರಿಗೆ ಎರಡೂ ಕೈಗಳು ಬೆಳೆಯದೇ ಹಾಗೇ ಜೀವನ ಸಾಗಬೇಕಾಯಿತು.

ಪ್ಯಾರಾ ಬಿಲ್ಗಾರ್ತಿ ಶೀತಲ್ ದೇವಿಗೆ ಆನಂದ್‌ ಮಹೀಂದ್ರಾ ಸ್ಕಾರ್ಫಿಯೋ ಕಾರು ಉಡುಗೊರೆ

Sheetal Devi

Profile Abhilash BC Jan 29, 2025 4:17 PM

ನವದೆಹಲಿ: ಯುವ ಪ್ರತಿಭೆಗಳನ್ನು ಗುರುತಿಸುವುದು ಹಾಗೂ ಅವರನ್ನು ಪ್ರೋತ್ಸಾಹಿಸುವ ಉದ್ಯಮಿ ಆನಂದ್‌ ಮಹೀಂದ್ರಾ ಅವರು ಎರಡೂ ಕೈಗಳಿಲ್ಲದ ಮಹಿಳಾ ಪ್ಯಾರಾ ಬಿಲ್ಲುಗಾರ್ತಿ ಶೀತಲ್(Sheetal Devi) ದೇವಿಗೆ ಮಹೀಂದ್ರಾ ಸ್ಕಾರ್ಫಿಯೋ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದೇ ವೇಳೆ ಶೀತಲ್ ದೇವಿ ಅವರು ಆನಂದ್‌ ಮಹೀಂದ್ರಾಗೆ ಆರ್ಚರಿ ಬಾಣವೊಂದನ್ನು ಸ್ಮರಣಿಕೆಯಾಗಿ ನೀಡಿದರು.

ಕಳೆದ ವರ್ಷ ಪ್ಯಾರಿಸ್‌ನಲ್ಲಿ ನಡೆದಿದ್ದ ಪ್ಯಾರಾಲಿಂಪಿಕ್ಸ್ ಮಿಶ್ರ ಟೀಮ್ ಕಾಂಪೌಂಡ್ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ಶೀತಲ್ ದೇವಿ ಅವರು ರಾಕೇಶ್ ಕುಮಾರ್ ಜತೆಗೂಡಿ ಕಂಚಿನ ಪದಕ ಜಯಿಸಿದ್ದರು.

'ಶೀತಲ್ ದೇವಿಯ ಪ್ರತಿಭೆಯನ್ನು ನಾನು ಬಹಳ ಹಿಂದಿನಿಂದಲೂ ಮೆಚ್ಚಿಕೊಂಡಿದ್ದೆ. ಅವರನ್ನು ವೈಯಕ್ತಿಕವಾಗಿ ಭೇಟಿಯಾದಾಗ, ಅವರ ಗಮನಾರ್ಹ ದೃಢನಿಶ್ಚಯ, ದೃಢತೆಯನ್ನು ಕಂಡು ನಾನು ಪ್ರಭಾವಿತನಾದೆ. ಅವರ ತಾಯಿ ಮತ್ತು ಸಹೋದರಿಯೊಂದಿಗೆ ಮಾತನಾಡುವಾಗ, ಈ ದೃಢತೆ ಅವರ ಕುಟುಂಬದಲ್ಲೇ ಇದೆ ಎಂಬುದು ಸ್ಪಷ್ಟವಾಗಿತ್ತು. ಅವಳು ನನಗೆ ಒಂದು ಬಾಣವನ್ನು ಉಡುಗೊರೆಯಾಗಿ ಕೊಟ್ಟಳು, ಅದು ಬಿಲ್ಲುಗಾರ್ತಿಯಾಗಿ ಆಕೆಯ ಗುರುತಿನ ಸಂಕೇತ. ಶೀತಲ್ ನಮಗೆಲ್ಲರಿಗೂ ಸ್ಫೂರ್ತಿ, ಮತ್ತು ಅವಳು ಹೊಸ ಎತ್ತರಕ್ಕೆ ಏರುತ್ತಿರುವಾಗ ಸೂಕ್ತವಾದ ಸ್ಕಾರ್ಪಿಯೋ-ಎನ್ ನಲ್ಲಿ ಅವಳನ್ನು ನೋಡಲು ನನಗೆ ಹೆಮ್ಮೆಯಾಗುತ್ತದೆ' ಎಂದು ಆನಂದ್‌ ಮಹೀಂದ್ರಾ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.



ಜಮ್ಮುವಿನ ಲಾಯಿಧರ್‌ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿದ ಅವರು ಹುಟ್ಟುವಾಗಲೇ ಫೊಕೊಮೀಲಿಯ ಕಾಯಿಲೆಗೆ ತುತ್ತಾಗಿದ್ದರು. ಈ ಕಾಯಿಲೆಯಿದ್ದವರಿಗೆ ಕೈ ಅಥವಾ ಕಾಲುಗಳ ಬೆಳವಣಿಗೆ ಇರುವುದಿಲ್ಲ. ಶೀತಲ್‌ ಅವರಿಗೆ ಎರಡೂ ಕೈಗಳು ಬೆಳೆಯದೇ ಹಾಗೇ ಜೀವನ ಸಾಗಬೇಕಾಯಿತು.

ಇದನ್ನೂ ಓದಿ Ranji Trophy: ಮೇಘಾಲಯ ವಿರುದ್ಧದ ಪಂದ್ಯಕ್ಕೆ ರೋಹಿತ್‌, ಜೈಸ್ವಾಲ್‌, ಶ್ರೇಯಸ್‌ ಅಲಭ್ಯ

2019 ಅವರ ಬಾಳ್ವೆಯ ಮಹತ್ತರ ಘಟ್ಟವಾಗಿ ಪರಿಣಮಿಸಿತಲ್ಲದೇ ಕ್ರೀಡಾಕ್ಷೇತ್ರದಲ್ಲಿ ಬೆಳಗಲು ನಾಂದಿಯಾಯಿತು. ಭಾರತೀಯ ಸೇನೆ ಲಾಯಿರ್‌ನಲ್ಲಿ ಆಯೋಜಿಸಿದ ಯುವ ಕ್ರೀಡಾಕೂಟದ ವೇಳೆ ಶೀತಲ್‌ ಅವರ ಚುರುಕಿನ ಓಟ, ಕ್ರೀಡಾಸ್ಫೂರ್ತಿಯಿಂದ ಸೇನೆಯ ಅಧಿಕಾರಿಗಳು ಅಕರ್ಷಿತ ರಾದರಲ್ಲದೇ ಆಕೆಯ ಭವಿಷ್ಯದ ಬಗ್ಗೆ ಚಿಂತಿಸಿ ಶೈಕ್ಷಣಿಕ, ವೈದ್ಯಕೀಯ ನೆರವಿಗೆ ಸಹಾಯಹಸ್ತ ಚಾಚಿದರು.