Saturday, 27th April 2024

ರೋಹಿತ್‌, ಗಿಲ್‌ ಶತಕ, ಮೂವರ ಅರ್ಧಶತಕ

ರ್ಮಶಾಲಾ: ಇಂಗ್ಲೆಂಡ್‌ ವಿರುದ್ಧದ ಕೊನೆಯ ಟೆಸ್ಟ್‌ ಪಂದ್ಯದಲ್ಲಿ ಎರಡನೇ ದಿನವಾದ ಶುಕ್ರವಾರ ಇಂಗ್ಲೆಂಡ್‌ ಬೌಲರ್‌ಗಳನ್ನು ವಿಶ್ವಾಸದಿಂದ ಎದುರಿಸಿದ ರೋಹಿತ್‌ ಶರ್ಮಾ ಮತ್ತು ಶುಭಮನ್ ಗಿಲ್‌ ಶತಕ ಸಿಡಿಸಿದರು.

ಊಟದ ವಿರಾಮದ ವೇಳೆಗೆ ರೋಹಿತ್‌ ಶರ್ಮಾ 102, ಗಿಲ್‌ 101 ರನ್‌ಗಳಿಸಿ ಆಡುತ್ತಿದ್ದರು.

ಇಬ್ಬರ ಬಳಿಕ ಮೊದಲ ಟೆಸ್ಟ್ ಆಡಿದ ದೇವದತ್‌ ಪಡಿಕ್ಕಲ್‌ ಹಾಗೂ ಸರ್ಫರಾಜ್ ಖಾನ್ ಕೂಡ ಅರ್ಧಶತಕ ಬಾರಿಸಿ, ಇಂಗ್ಲೆಂಡಿನ ಬೌಲರುಗಳ ಬೆವರಿಳಿಸಿದರು. ಇತ್ತೀಚಿನ ವರದಿ ಪ್ರಕಾರ, ಕುಲದೀಪ್ ಯಾದವ್ ಹಾಗೂ ಉಪನಾಯಕ ಬೂಮ್ರಾ ಇನ್ನಿಂಗ್ಸ್ ಬೆಳೆಸುತ್ತಿದ್ದಾರೆ.

ಗುರುವಾರ ಭಾರತ 30 ಓವರುಗಳಲ್ಲಿ 1 ವಿಕೆಟ್‌ಗೆ 135 ರನ್ ಗಳಿಸಿ ದಿನದಾಟ ಮುಗಿಸಿತು. ಯಶಸ್ವಿ ಜೈಸ್ವಾಲ್ (57 ರನ್‌) ಔಟಾಗಿದ್ದರು.

ಟೆಸ್ಟ್‌ ಕ್ರಿಕೆಟ್‌ನಲ್ಲಿ ರೋಹಿತ್‌ ಶರ್ಮಾ ಅವರದ್ದು 12ನೇ ಶತಕವಾದರೆ, ಗಿಲ್‌ ಅವರದ್ದು ನಾಲ್ಕನೇ ಶತಕವಾಗಿದೆ.

ಕುಲದೀಪ್ ಯಾದವ್ ನೇತೃತ್ವದಲ್ಲಿ ಸ್ಪಿನ್‌ತ್ರಯರು ದಾಳಿಗೆ ತತ್ತರಿಸಿದ ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್‌ನಲ್ಲಿ 218 ರನ್‌ಗಳಿಗೆ ಮುದುರಿತು. ರವಿಚಂದ್ರನ್ ಅಶ್ವಿನ್ 4, ಕುಲದೀಪ್ ಯಾದವ್ 5 ಹಾಗೂ ಜಡೇಜ 1 ವಿಕೆಟ್‌ ಪಡೆದರು.

ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 8 ವಿಕೆಟ್‌ ಕಳೆದುಕೊಂಡು 467 ರನ್‌ಗಳಿಸಿದೆ. ಈ ಮೂಲಕ ಭಾರತ 249 ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ.

ಸ್ಕೋರ್‌

ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್‌: 218-10

ಭಾರತ ಮೊದಲ ಇನ್ನಿಂಗ್ಸ್‌: 467- 8

Leave a Reply

Your email address will not be published. Required fields are marked *

error: Content is protected !!