Friday, 20th September 2024

‘ತಿಂಗಳ ಆಟಗಾರ’ ಪ್ರಶಸ್ತಿ ಗೆದ್ದ ಯಶಸ್ವಿ ಜೈಸ್ವಾಲ್

ವದೆಹಲಿ : ಭಾರತದ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಅವರಿಗೆ ಐಸಿಸಿ ಫೆಬ್ರವರಿ ತಿಂಗಳ ‘ತಿಂಗಳ ಆಟಗಾರ’ ಪ್ರಶಸ್ತಿ ನೀಡಿದೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಜೈಸ್ವಾಲ್ ಒಟ್ಟು 5 ಪಂದ್ಯಗಳಲ್ಲಿ 713 ರನ್ ಗಳಿಸಿದ್ದರು.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಜೈಸ್ವಾಲ್ ಸರಣಿ ಶ್ರೇಷ್ಠ ಪ್ರಶಸ್ತಿಪಡೆದರು. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ, ಜೈಸ್ವಾಲ್ ಸತತ ಎರಡು ಟೆಸ್ಟ್ ಗಳಲ್ಲಿ ಎರಡು ದ್ವಿಶತಕಗಳನ್ನ ಗಳಿಸುವ ಅದ್ಭುತ ಆಟ ಆಡಿದ್ದರು. ಜೈಸ್ವಾಲ್ ಫೆಬ್ರವರಿಯಲ್ಲಿ ಮೂರು ಟೆಸ್ಟ್ ಪಂದ್ಯಗಳನ್ನ ಆಡಿದರು ಮತ್ತು ಈ ಅವಧಿಯಲ್ಲಿ ಒಟ್ಟು 560 ರನ್ ಗಳಿಸುವಲ್ಲಿ ಯಶಸ್ವಿಯಾದರು.

ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಜೈಸ್ವಾಲ್ ಹಲವಾರು ದಾಖಲೆಗಳನ್ನ ನಿರ್ಮಿಸಿದರು. ಇದಲ್ಲದೆ, ಜೈಸ್ವಾಲ್ ಸತತ ಎರಡು ದ್ವಿಶತಕಗಳನ್ನ ಗಳಿಸಿದ ವಿಶ್ವದ ಮೂರನೇ ಕಿರಿಯ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದರೊಂದಿಗೆ ರಾಜ್ಕೋಟ್ ಟೆಸ್ಟ್ನಲ್ಲಿ  12 ಸಿಕ್ಸರುಗಳನ್ನ ಬಾರಿಸುವ ಮೂಲಕ ವಾಸಿಮ್ ಅಕ್ರಮ್ ಅವರ ದಾಖಲೆಯನ್ನ ಸರಿಗಟ್ಟಿದರು.

ಐಪಿಎಲ್ 2024 ಮಾರ್ಚ್ 22 ರಿಂದ ಪ್ರಾರಂಭವಾಗಲಿದ್ದು, ಜೈಸ್ವಾಲ್ ರಾಜಸ್ಥಾನ್ ರಾಯಲ್ಸ್ ಪರ ಆಡಲಿದ್ದಾರೆ. ಈ ವರ್ಷ ಟಿ 20 ವಿಶ್ವಕಪ್ ನಡೆಯಲಿದೆ.