Monday, 20th May 2024

ಕರೋನಾ ಬ್ರೇಕಿಂಗ್‌: ರಾಜ್ಯದಲ್ಲಿ 25311 ಹೊಸ ಕೇಸ್ ಪತ್ತೆ, 529 ಮಂದಿ ಸಾವು

Covid

ಬೆಂಗಳೂರು : ರಾಜ್ಯದಲ್ಲಿ ಕರೋನಾ 2ನೇ ಅಲೆ ಆರ್ಭಟ ಮುಂದುವರೆದಿದೆ. ಸೋಮವಾರ ರಾಜ್ಯದಾದ್ಯಂತ ಕಳೆದ 24 ಗಂಟೆಯಲ್ಲಿ 529 ಪ್ರಾಣ ಕಳೆದುಕೊಂಡಿದ್ದಾರೆ. 25311 ಹೊಸ ಕೇಸ್ ಪತ್ತೆಯಾಗಿವೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 2450215 ಕ್ಕೇರಿಕೆಯಾದರೆ, ಸಾವಿನ ಸಂಖ್ಯೆ 25811ಕ್ಕೆ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ 5701 ಜನರಿಗೆ ಕರೋನಾ ತಗುಲಿದೆ. 297 ಮಂದಿ ಮಹಾಮಾರಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಈವರೆಗೆ 1125253 ಮಂದಿಗೆ ಕರೋನಾ ತಗುಲಿದೆ. ಒಟ್ಟು 11513 ಮಂದಿ ಮೃತಪಟ್ಟಿದ್ದಾರೆ.

57333 ಮಂದಿ ಗುಣಮುಖರಾಗಿ ಡಿಸ್ಚಾರ್ಜ್​ ಆಗಿದ್ದು, ಈವರೆಗೆ ಒಟ್ಟು 1983948 ಮಂದಿ ಗುಣಮುಖರಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!