ಇಂಡಿ: ದೇಶಕ್ಕೆ ವಿಶ್ವದಲ್ಲಿಯೇ ಶ್ರೇಷ್ಠ ಸಂವಿಧಾನ ನೀಡಿದ ಅಂಬೇಡ್ಕರ ಅವರ ಕೊಡುಗೆ ಅಪಾರವಾಗಿದೆ. ,ರ‍್ವರು ಸಮಾನರು ಎಂಬ ತತ್ವವನ್ನು ಹೇಳಿದ ಅಂಬೇಡ್ಕರ ಅವರು, ಮಾನವೀಯ ಮೌಲ್ಯಗಳು ಜಗತ್ತಿಗೆ ಸಾರಿದ ಮಹಾನ್ ಚೇತನ ಎಂದು ತಹಶೀಲ್ದಾರ ಬಿ.ಎಸ್.ಕಡಕಬಾವಿ ಹೇಳಿದರು.
ಅವರು ಗುರುವಾರ ಪಟ್ಟಣದ ಅಂಬೇಡ್ಕರ ವೃತ್ತದಲ್ಲಿ ಅಂಬೇಡ್ಕರ ಅವರ ಮಹಾಪರಿನರ‍್ವಾಣ ದಿನದ ಅಂಗವಾಗಿ ಡಾ.ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.ವಿಶ್ವ ಮೆಚ್ಚುವಂತ ಸಂವಿಧಾನ ರೂಪಿಸಿರುವುದಲ್ಲದೆ, ರ‍್ವ ಸಮುದಾಯದ ಏಳಿಗೆಗೆ ಅಡಿಪಾಯವನ್ನು ಸಂವಿಧಾನದ ಮೂಲಕ ಹಾಕಿಕೊಟ್ಟಿದ್ದಾರೆ. ಅವರ ತತ್ವ,ಸಿದ್ದಂತ,,ಮರ‍್ಗದಲ್ಲಿ ಜೀವನ ಸಾಗಿಸಬೇಕು ಎಂದು ಹೇಳಿದರು.ಬಾಬಾಸಾಹೇಬ ಅಂಬೇಡ್ಕರವರು ಮಾತೃ ಹೃದಯದ ಮಹಾನಾಯಕ.
ಇಡೀ ಜಗತ್ತಿನಲ್ಲಿಯೇ ಅದ್ಬುತವಾದ ವಿದ್ಯರ‍್ಜನೆ ಮಾಡಿ ಜ್ಞಾನ ಕಣಜ ಎನಿಸಿಕೊಂಡಿದ್ದಾರೆ.ಅಂದಿನ ದಿನಮಾನಗಳಲ್ಲಿ ಸಾಕಷ್ಟು ಕಷ್ಟ,ನಷ್ಟಗಳ ಮಧ್ಯ ಬದುಕಿ,ಬಡವರು,ಮಹಿಳೆಯರು,ದೀನ ದರ‍್ಬಲರ ಶ್ರೇಯೋಭಿವೃದ್ದಿಗಾಗಿ ಹಗಲಿರಳು ಶ್ರಮಿಸಿದ್ದಾರೆ. ಸಾಮಾಜಿಕ,ಧರ‍್ಮಿಕ, ರ‍್ಥಿಕ ಬದಲಾವಣೆಯಾಗ ಬೇಕಾದರೆ ಅದು ಶಿಕ್ಷಣದಿಂದ ಮಾತ್ರ ಎಂದು ಒತ್ತಿಹೇಳಿದ್ದಾರೆ.ಎಲ್ಲರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದು ಹೇಳಿದರು.
ಶಹರ ಸಿಪಿಐ ಜಿರಗ್ಯಾಳ ಮಾತನಾಡಿ,ದೇಶಕ್ಕೆ ವಿಶ್ವದಲ್ಲಿಯೇ ಶ್ರೇಷ್ಠ ಸಂವಿಧಾನ ನೀಡಿದ ಅಂಬೇಡ್ಕರ ಅವರ ಕೊಡುಗೆ ಅಪಾರವಾಗಿದೆ. ರ‍್ವರು ಸಮಾನರು ಎಂಬ ತತ್ವವನ್ನು ಹೇಳಿದ ಅಂಬೇಡ್ಕರ ಅವರು, ಮಾನವೀಯ ಮೌಲ್ಯಗಳು ಜಗತ್ತಿಗೆ ಸಾರಿದ ಮಹಾನ್ ಚೇತನ ಎಂದು ಮುಖಂಡ ಶಿವಾನಂದ ಮೂರಮನ,ಸಮಾಜ ಕಲ್ಯಾಣಾಕಾರಿ ಬಿ.ಜೆ.ಇಂಡಿ ಮಾತನಾಡಿ,ಶೋಷಿತ ಸಮುದಾಯಕ್ಕೆ ಸಾಮಾಜಿಕ ನ್ಯಾಯ ನೀಡಿದ ಅಂಬೇಡ್ಕರ ಅವರು ಸಾಮಾಜಿಕ ಪರಿರ‍್ತನೆಯ ಹರಿಕಾರರು.
ದಲಿತರು ಇಂದು ಸಾಮಾಜಿಕ,ರ‍್ಥಿಕವಾಗಿ ಹಾಗೂ ರಾಜಕೀಯವಾಗಿ ಮುಂದೆ ಬಂದಿರುವುದು ಅಂಬೇಡ್ಕರ ಅವರ ನಿಸ್ವರ‍್ಥ ಹೋರಾಟವೇ ಕಾರಣ ಎಂದು ಹೇಳಿದ ಅವರು, ಅಂಬೇಡ್ಕರ ಅವರ ಋಣ ತೀರಿಸಬೇಕಾದರೆ ನಮ್ಮ ಉಸಿರು ನಿಲ್ಲುವವರೆಗೂ ಅವರು ಹಾಕಿದ ಮರ‍್ಗದಲ್ಲಿ ನಡೆದು, ಸ್ವಾಭಿಮಾನಿಗಳಾಗಿ, ಶಿಕ್ಷಣವಂತರಾಗಿ ಬದುಕು ಸಾಗಿಸಬೇಕು ಎಂದು ಹೇಳಿದರು. ಮುಖಂಡ ಶಿವಾನಂದ ಮೂರಮನ,ಭೀಮಾಶಂಕರ ಮೂರಮನ, ಪುರಸಭೆ ಸದಸ್ಯ ವಿಜಯಕುಮಾರ ಮೂರಮನ, ಕಲ್ಲಪ್ಪ ಅಂಜುಟಗಿ, ಶಿವು ತೆನ್ನಿಹಳ್ಳಿ, ಗಂಗಾಧರ ನಾಟಿಕಾರ, ರಾಘು ಹಾದಿಮನಿ, ರಾಜು ಹಳ್ಳದಮನಿ ಮೊದಲಾದವರು ಈ ಸಂರ‍್ಭದಲ್ಲಿ ಇದ್ದರು.