Saturday, 9th December 2023

ನೂತನ ಅಶೋಕ್ ಮಹಾರಾಜ್ ಸಹಕಾರಿ ಬ್ಯಾಂಕ್ ಆರಂಭ

ಮಸ್ಕಿ: ಪಟ್ಟಣದ ಭ್ರಮರಾಂಬ ದೇವಿ ಮಲ್ಲಿಕಾರ್ಜುನ ದೇವಸ್ಥಾನದ ಎದುರುಗಡೆಯ ನೂತನ ಸಹಕಾರಿ ಬ್ಯಾಂಕ್ ಉದ್ಘಾಟನೆ ಕಾರ್ಯಕ್ರಮ ಅದ್ಧೂರಿ ಯಾಗಿ ಜರುಗಿತು.

ಶ್ರೀ ಅಶೋಕ ಮಹಾರಾಜ ಸೌಹಾರ್ದ ಸಹಕಾರಿ ಸಂಘ ನಿ. ಮಸ್ಕಿಯ ನೂತನ ಸಹಕಾರಿ ಬ್ಯಾಂಕ್ ನ ಸಮಾ ರಂಭವು ಭಾನುವಾರ ಬೆಳಗ್ಗೆ 6: 25 ರಿಂದ 9:05 ರವರೆಗೆ ವಾಸ್ತು ಸಹಿತ ಶ್ರೀ ಗಣೇಶ – ಶ್ರೀ ವರಮಹಾಲಕ್ಷ್ಮೀಯ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಸಂಘದ ಸರ್ವ ಸದಸ್ಯರು ಹಾಗೂ ಪರಿವಾರ ಸಮೇತರಾಗಿ ಆಗಮಿಸಿ ಸಹಕಾರಿ ಬ್ಯಾಂಕ್ ನ ಕಾರ್ಯಕ್ರಮದ ಸಾನಿಧ್ಯವನ್ನು ಗಚ್ಚಿನ ಹಿರೇ ಮಠದ ಶ್ರೀಗಳಾದ ಶ್ರೀ ಶ್ರೀ ಶ್ರೀ ವರ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು.

ಹಾಗೆಯೇ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾಜಿ ಶಾಸಕರಾದ ಪ್ರತಾಪ ಗೌಡ ಪಾಟೀಲ್ ರವರು ಹಾಗೂ ಸಹಕಾರಿ ಬ್ಯಾಂಕ್ ನ ನಿರ್ದೇಶಕರುಗಳು ಸಂಘದ ಸರ್ವ ಸದಸ್ಯರು ಪರಿವಾರ ಸಮೇತರಾಗಿ ಆಗಮಿಸಿ ಸಹಕಾರಿ ಬ್ಯಾಂಕ್ ನ ಕಾರ್ಯಕ್ರಮಕ್ಕೆ ಅಕ್ಷತೆಯನ್ನು ಹಾಕುವುದರ ಮೂಲಕ ಶುಭ ಹಾರೈಸಿದರು. ನಂತರ ಮಹಮ್ಮದ್ ಹನೀಫ್ ಪರಾಪೂರ ಅಧ್ಯಕ್ಷರು ಹಾಗೂ ಸುಭಾಷ್ ವೀರಾಪುರ ಉಪಾಧ್ಯಕ್ಷರು ಗಳನ್ನು ಶಾಲು ಹೊದಿಸಿ ಹೂವಿನ ಹಾರ ಹಾಕಿ ಸನ್ಮಾನಿಸಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ನಿರ್ದೇಶಕರುಗಳಾದ ಶ್ರೀಕಾಂತ್ ಹಿರೇ ಕಡಬೂರು, ದವಲ್ ಸಾಬ್ ಸಿಂಧನೂರು, ಮಹೇಶ್ ವೀರಾಪುರ, ನಾಗಭೂಷಣ್ ಗುಡದೂರು, ಶಿವರಾಜ್ ಕಾನಿಹಾಳ, ರೇಷ್ಮಾ ಗಂ/ ನಾಗರಾಜ್ ಸಜ್ಜನ್ ನಿರ್ದೇಶಕರು, ರಾಜೇಶ್ವರಿ ಗಂ/ಅಮರೇಶ್ ಮಸ್ಕಿ, ಸರಸ್ವತಿ ಗಂ/ ಮಲ್ಲಿಕಾರ್ಜುನ ಮಡಿವಾಳ, ಶಿವಲೀಲಾ ಗಂ/ ಮಲ್ಲಿಕಾರ್ಜುನ . ಕೆ, ಮೀನಾಕ್ಷಿ ಗಂ / ಸೈಮನ್,ಮೀನಾಕ್ಷಿ ಗಂ / ಜಗದೀಶ ಸೇರಿದಂತೆ ಶ್ರೀ ಅಶೋಕ ಮಹಾರಾಜ ಸೌಹಾರ್ದ ಸಹಕಾರಿ ಸಂಘ ನಿ. ಮಸ್ಕಿ ಬ್ಯಾಂಕ್ ನ ಸರ್ವ ಸದಸ್ಯರು ಹಾಗೂ ಸಾರ್ವಜನಿಕರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *

error: Content is protected !!