Saturday, 27th April 2024

ಸರ್ವಧರ್ಮ ಸದ್ಭಾವನಾ ಸಮಾರಂಭ ಹಾಗೂ ಭಾವೈಕ್ಯತಾ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ

ಕೊಲ್ಹಾರ: 20ನೇ ಶತಮಾನದ ಸೂಫಿ ಸಂತ ಸುಪ್ರಸಿದ್ಧ ಅಲ್ ಹಾಜ್ ಶಾಹ ಮಹಮ್ಮದ್ ಅಬ್ದುಲ್ ಗಫಾರ ಕಾದ್ರಿ (ಅಲಾಹಬಾದ ಮೌಲಾನಾ) ಅವರ 31 ನೇ ಉರುಸಿನ ನಿಮಿತ್ಯವಾಗಿ ಸರ್ವಧರ್ಮ ಸದ್ಭಾವನಾ ಸಮಾರಂಭ ಹಾಗೂ ಅಲಾಹಬಾದ ಮೌಲಾನಾ ಭಾವೈಕ್ಯತಾ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಮಾ.7 ರಂದು ಮುಂಜಾನೆ 11 ಗಂಟೆಗೆ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ ಎಂದು ಖಾನಕಾಯೆ ಗಫಾರೀಯಾ ಪೀಠಾಧಿಪತಿಗಳಾದ ಅಲ್ ಹಾಜ್ ಶಾಹ ಬಖ್ತಿಯಾರಖಾನ್ ಖಾದ್ರಿ ಹಾಗೂ ಕಾರ್ಯಕ್ರಮದ ಸ್ವಾಗತ ಸಮಿತಿಯ ಅಧ್ಯಕ್ಷ ಮುಖಂಡರಾದ ಉಸ್ಮಾನ್ ಪಟೇಲ್ ಖಾನ್ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ಹಮ್ಮಿಕೊಂಡು ಮಾತನಾಡಿದ ಅವರು ಪ್ರತಿವರ್ಷದಂತೆ ಈ ವರ್ಷವೂ ಕೂಡ ಅತ್ಯಂತ ವಿಜೃಂಭಣೆ ಯಿಂದ ಸರ್ವಧರ್ಮ ಸದ್ಭಾವನಾ ಸಮಾರಂಭ ಹಾಗೂ ಭಾವೈಕ್ಯತಾ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಿಜಯಪುರ ಜಾಮಿಯಾ ಹಾಶೀಮಪೀರ ಪೀಠಾಧಿಪತಿಗಳಾದ ಶ್ರೀ ಹಜರತ ಸೈಯ್ಯದ ಶಾ ಮಹಮ್ಮದ ತನ್ವೀರ್ ಹಾಶ್ಮೀ. ಯರನಾಳ ವಿರಕ್ತ ಮಠದ ಶ್ರೀ ಗುರು ಸಂಗನಬಸವ ಮಹಾಸ್ವಾಮಿಜಿಗಳು. ಇಳಕಲ್ ಜಾಮಿಯಾ ಅರೇಬಿಕ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಶ್ರೀ ಸಯ್ಯದ ಬಹಾವೊದ್ದಿನ ಸದರಕಾಜಿ, ಬೇಲೂರ-ಕೋಲ್ದಾರ ಹಿರೇಮಠದ ಪೂಜ್ಯಶ್ರೀ ಪ್ರಭುಕುಮಾರ ಶಿವಾಚಾರ್ಯ ಸ್ವಾಮಿಗಳು, ಕೊಲ್ಹಾರ ದಿಗಂಬರೇಶ್ವರ ಮಠದ ಪೀಠಾಧಿಪತಿಗಳಾದ ಶ್ರೀ ಕಲ್ಲಿನಾಥ ದೇವರು, ಕೊಲ್ಹಾರ ಶೀಲವಂತ ಹಿರೇಮಠದ ಡಾ.ಕೈಲಾಸನಾಥ ಮಹಾಸ್ವಾಮಿಗಳು ವಹಿಸಿಕೊಳ್ಳುವರು.
ಅಧ್ಯಕ್ಷತೆ ಅಲ್‌ಹಾಜ ಡಾ. ಬಖ್ತಿಯಾರಖಾನ ಕಾದ್ರಿ ಉತ್ತರಾಧಿಕಾರಿಗಳು ಖಾನಕಾಯೇ ಗಪ್ಪಾರಿಯಾ ಕೋಲ್ದಾರ. ಪ್ರಸಕ್ತ ವರ್ಷದ ಅಲಹಾಬಾದ್ ಮೌಲಾನಾ ಭಾವೈಕ್ಯತಾ ಪ್ರಶಸ್ತಿ ಭಾಜರಾದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಜಾನಪದ ವಿದ್ವಾಂಸರಾದ ಶಂಭು ಬಳಿಗಾರ, ಮುಖ್ಯ ಅತಿಥಿಗಳಾಗಿ ಸಚಿವ ಶಿವಾನಂದ.ಎಸ್ ಪಾಟೀಲ್, ಮಾಜಿ ಸಚಿವ ಎಸ್.ಆರ್ ಪಾಟೀಲ್, ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ, ಸಂಶೋಧಕರು ಹಾಗೂ ಅಲಹಾಬಾದ್ ಮೌಲಾನಾ ಭಾವೈಕ್ಯತಾ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷರಾದ ಡಾ.ಕೃಷ್ಣ ಕೋಲ್ಹಾರ ಕುಲಕರ್ಣಿ, ಮಾಜಿ ಜಿ ಪಂ ಸದಸ್ಯರಾದ ಕಲ್ಲು ದೇಸಾಯಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಆರ್.ಬಿ ಪಕಾಲಿ, ತಾಲೂಕಾ ಆರೋಗ್ಯ ಅಧಿಕಾರಿಗಳಾದ ಡಾ.ಎಸ್.ಎಸ್ ಓತಗೇರಿ, ಬ.ಬಾಗೇವಾಡಿ ವಿಶ್ವ ಬಂಧು ಬಸವ ಸಮಿತಿ ಅಧ್ಯಕ್ಷರಾದ ಡಾ.ಅಮರೇಶ.ಎಸ್ ಮಿಣಜಗಿ, ಹಿರಿಯ ಪತ್ರಕರ್ತರು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ರಫೀ ಭಂಡಾರಿ, ನಾಗರಬಳ್ಳಿ ಬಸವ ಕೇಂದ್ರದ ಅಧ್ಯಕ್ಷರಾದ ನಾನಾಗೌಡ ಪಾಟೀಲ್, ಅಂಜುಮನ್ ಕಮೀಟಿ ಅಧ್ಯಕ್ಷರಾದ ಅಲ್ಲಾಭಕ್ಷ ಬಿಜಾಪುರ, ಪ ಪಂ ಸದಸ್ಯರಾದ ಸಿ.ಎಸ್ ಗಿಡಪ್ಪಗೋಳ, ಪ್ರಮುಖರಾದ ಎಸ್.ಬಿ ಪತಂಗಿ, ಐ.ಎನ್ ತಹಸಿಲ್ದಾರ, ಪಿ.ಕೆ ಗಿರಗಾಂವಿ, ಮಹ್ಮದಸಲೀಮ ಅತ್ತಾರ, ಸಿ.ಎಂ ಗಣಕುಮಾರ, ಬಸನಗೌಡ ಪಾಟೀಲ್, ಎನ್.ಎಲ್ ಹೋನ್ಯಾಳ, ನಂದಬಸಪ್ಪ ಚೌಧರಿ, ಈರಣ್ಣಗೌಡ ಕೋಮಾರ, ಬಸವರಾಜ ಎಸ್. ಹಂಗರಗಿ, ಅಲ್‌ಹಾಜ ಹಸನಡೋಂಗ್ರಿ ಗಿರಗಾಂವಿ, ಮಹಾದೇವಪ್ಪ ಗಾಡದ, ಮಲ್ಲು ದೇಸಾಯಿ, ಅಲ್‌ಹಾಜ ಎಚ್.ಕೆ ಚೌದರಿ, ಎಮ್.ಎಚ್ ಕೂಡಗಿ, ಬಿ.ಡಿ ಕಲಾದಗಿ, ಹಸನಸಾಬ ಥರ್ಥರಿ, ನಯೀಮಖಾನ ಜಮಾದಾರ, ಮಹಾದೇವಪ್ಪ ಹತ್ತರಕಿಹಾಳ, ಇಸ್ಮಾಯಿಲಸಾಬ ವಾಲಿಕಾರ, ಹಟೇಲಸಾಬ ಕಂಕರಪೀರ, ಇಬ್ರಾಹಿಂಸಾಬ. ತಹಸಿಲ್ದಾರ, ಈರಣ್ಣ ಔರಸಂಗ, ಪ್ರಾಣೇಶ ಪತ್ತಾರ ಸಹಿತ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಅಲ್ಲಾಭಕ್ಷ ಕಾಖಂಡಕಿ, ಜಾಕೀರ್ ಸೌದಾಗರ, ಹನೀಫ್ ಮಕಾನದಾರ, ಅಬ್ದುಲ್ ಪಕಾಲಿ, ನಜೀರ್ ಖಾಜಿ ಸಹಿತ ಅನೇಕರು ಉಪಸ್ಥಿತರಿದ್ದರು.

ಹಾಜಿ ಅಯ್ಯೂಬ್ ಖಾನ್ ಪಠಾಣ ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!