Sunday, 28th April 2024

ಆತ್ಮಸ್ಥೈರ್ಯದೊಂದಿಗೆ ಮಾತ್ರ ಆರೋಗ್ಯ ವೃದ್ಧಿ ಸಾಧ್ಯ : ಗಿರಿಧರ ಪೂಜಾರಿ

ರಾಜ್ಯ ಬರಹಗಾರರ ಸಂಘದಿಂದ ಅಂತರಜಾಲದ ಉಪನ್ಯಾಸ ಕಾರ್ಯಕ್ರಮ
ವರದಿ : ಆನಂದಸ್ವಾಮಿ ಹಿರೇಮಠ 
ಮಾನವಿ : ಕರ್ನಾಟಕ ರಾಜ್ಯ ಬರಹಗಾರರ ಸಂಘದ ರಾಯಚೂರು ಜಿಲ್ಲಾ ಘಟಕ ಸಹಯೋಗದೊಂದಿಗೆ ಮಾನವಿ ತಾಲೂಕ ಬರಹಗಾರರ ಸಂಘವು  ಅಂತರಜಾಲದ ಉಪನ್ಯಾಸ ಕಾರ್ಯಕ್ರಮದಲ್ಲಿ ಮನೋ ಸ್ಥೈರ್ಯದಿಂದಲೇ ಮಾತ್ರ ಮನುಷ್ಯನ ಆರೋಗ್ಯ ವೃದ್ಧಿಯಾಗಲು ಸಾಧ್ಯ ಎಂದು ವ್ಯಕ್ತಿತ್ವ ವಿಕಸನ ತರಬೇತುದಾರ ಗಿರಿಧರ ಪೂಜಾರಿ ಚಿಕಲಪರ್ವಿ ಹೇಳಿದರು.
ದೇಶದಲ್ಲಿ ಕರೋನ ಆರ್ಭಟ ಅತಿಯಾಗಿರುವ ಹಿನ್ನೆಲೆಯಲ್ಲಿ ಯಾವುದೇ ಬಹಿರಂಗ ಸಭೆ ಸಮಾರಂಭವನ್ನು ಮಾಡುವಂತಿಲ್ಲ ಆದರಿಂದ ಮಧುನಾಯ್ಕ್ ಲಂಬಾಣಿ ಇವರ ಬರಹಗಾರರ ಸಂಘದ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಅಂತರಜಾಲದ ಕವಿ ಗೋಷ್ಠಿ ಹಾಗೂ ಉಪನ್ಯಾಸ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರಾಜ್ಯದ ಜನರಿಗೆ ಬಹಳ ಉಪಯುಕ್ತ ಉಪನ್ಯಾಸವನ್ನು ಒದಗಿಸುತ್ತಿದೆ ಅದರಂತೆ ಭಾನುವಾರ ರಾಯಚೂರು ಜಿಲ್ಲೆಯ ಮಾನವಿ ತಾಲೂಕ ಬರಹಗಾರರ ಸಂಘದ ಅಧ್ಯಕ್ಷರಾದ ಚಂದ್ರ ಶೇಖರ ಮದ್ಲಾಪೂರ ಇವರ ಸಹಕಾರದಿಂದ ಬಹಳ ಅರ್ಥಪೂರ್ಣ ಕಾರ್ಯವನ್ನು ಕೈಗೊಳ್ಳಗಿದ್ದು ಈ ಕಾರ್ಯಕ್ರಮದಲ್ಲಿ ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ಇತಿಹಾಸ ಸಂಶೋಧಕರಾದ ಡಾ ಅಮರೇಶ ಯತಗಲ್ ಹಾಗೂ ರಾಜ್ಯದ ವ್ಯಕ್ತಿತ್ವ ವಿಕಸನ ತರಬೇತಿದಾರ ಗಿರಿಧರ ಪೂಜಾರಿ ಜಿಲ್ಲಾ ಅಧ್ಯಕ್ಷ ವಿರೇಶ ಎಂ ಎಸ್ ಸೇರಿದಂತೆ ರಾಜ್ಯದvಸರಿ ಸುಮಾರು 60 ಕ್ಕೂ ಹೆಚ್ಚು ಬರಹಗಾರರು, ಸಾಹಿತಿಗಳು  ಭಾಗವಹಿಸಿದ್ದರು.
ನಂತರ ಉಪನ್ಯಾಸಕರಾದ ಗಿರಿಧರ ಪೂಜಾರಿ ಮಾತಾನಾಡಿ ಈ ಕರೋನ ಸಂದರ್ಭದಲ್ಲಿ ಮನುಷ್ಯನಿಗೆ ಬಹು ಪ್ರಮುಖವಾಗಿ ಮನೋ ಸ್ಥೈರ್ಯ ವೃದ್ಧಿಯಾಗಬೇಕೆಂದರೆ ಪ್ರತಿ ದಿನ ಉತ್ತಮ ಚಟುವಟಿಯಿಂದ ಇರಬೇಕಾಗುತ್ತದೆ ಬಹು ಪ್ರಮುಖವಾಗಿ ನಮ್ಮ ಜೀವನಕ್ಕೆ ಇಂಗ್ಲಿಷ್ ಔಷಧಿಗಳನ್ನು ಬಳಸುವ ಬದಲಾಗಿ ನಿತ್ಯ ನಮ್ಮ ಚಟುವಟಿಕೆಗಳ ಅನುಗುಣವಾಗಿ ನಮ್ಮ ದೇಹದಲ್ಲಿ ರಾಸಾಯನಿಕ ಕ್ರಿಯೆ ನಡೆದು ದ್ರವರೂಪದ ಔಷಧಿ ಉತ್ಪತ್ತಿಯಾಗಿ ನಾವು ಆತ್ಮ ಸ್ಥೈರ್ಯದೊಂದಿಗೆ ಆರೋಗ್ಯ ಕಾಪಾಡಲು ಸಹಕಾರಿಯಾಗುತ್ತದೆ ಉದಾಹರಣೆಗೆ  ನಾವು ಸಂತೋಷವಾಗಿದ್ದಾಗ ಡೋಪೋಮೈನ್ ಎನ್ನುವ ಆರ್ಮೋನ್ ಉತ್ಪಾದನೆ ಯಾಗುತ್ತದೆ.
ನಾವು ಕಷ್ಟ ದುಃಖದಲ್ಲಿದ್ದಾಗ ಸೋರಟನೀನ್ ಎನ್ನುವ ಆರ್ಮೋನ್ ಉತ್ಪಾದನೆಯಾಗುತ್ತದೆ,  ನಾನು ಹುಮ್ಮಸ್ಸಿನಿಂದ ಆಕ್ಟೀವ್ ಆಗಿರುವಾಗ ಆಕ್ಸಿಟಾಕಿನ್ ಆರ್ಮೋನ್ ಉತ್ಪಾದನೆಯಾಗುತ್ತದೆ, ಆದರೆ ಮನುಷ್ಯನು ಬಹಳ ಧೈರ್ಯದಿಂದ ಇದ್ದಾಗ ಮಾತ್ರ ಏನ್ಡೋಫ್ರೀನ್ಸ್ ಎನ್ನುವ ರಾಸಾಯನಿಕ ದ್ರವ ನಮ್ಮಲ್ಲಿ ಉತ್ಪಾದನೆಯಾಗಿ ಅದು ನಮ್ಮ ದೇಹಕ್ಕೆ ನೋವು ನಿವಾರಕ ಔಷಧಿಯಾಗಿ ಕೆಲಸ ಮಾಡಿ ನಮ್ಮನ್ನು ಉತ್ತಮವಂತ ಮನುಷ್ಯನಾಗಿ ಮಾಡಬಲ್ಲದು ಇವುಗಳು ಮನುಷ್ಯನಲ್ಲಿ ಪ್ರತಿ ದಿನವು ಉತ್ಪಾದನೆಯಾಗ ಬೇಕಾದರೆ ಸಾವು ಇನ್ನೊಬ್ಬರಿಗೆ ಸಹಾಯ ಮಾಡಬೇಕು ದಿನನಿತ್ಯದ ವಾಯುವಿಹಾರ ಹೋಗಬೇಕು ಕುಟುಂಬದಲ್ಲಿ ಯಾವ ತೊಂದರೆ ಬರದಂತೆ ನೋಡಿಕೊಳ್ಳಬೇಕು ಆತ್ಮೀಯ ಸ್ನೇಹಿತರಿದೊಂದಿಗೆ ಬರೆಯಬೇಕು ಇದರಿಂದ ನಮಗೆ ಯಾವುದೇ ರೋಗಗಳು ಬರುವುದಿಲ್ಲ ಬಂದರೂ ನಮ್ಮನ್ನು ಏನು ಮಾಡುವುದಕ್ಕೆ ಆಗದೆ ತಾವೇ ಸತ್ತು ಹೋಗುತ್ತವೆ ಎಂದು ಬಹಳ ಅತ್ಯುತ್ತಮವಾದ ಮಾಹಿತಿಯನ್ನು ಉಪನ್ಯಾಸಕ ಗಿರಿಧರ ಪೂಜಾರಿ ಮಾಹಿತಿ ನೀಡಿದರು. ನಂತರ ಸುಮಾರು 35 ಹೆಚ್ಚು ಕವಿಗಳು ತಮ್ಮ ಕವನ ವಾಚನ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಂಪಿ ವಿಶ್ವವಿದ್ಯಾಲಯ ಇತಿಹಾಸ ಪ್ರಾಧ್ಯಾಪಕರಾದ ಡಾ ಅಮರೇಶ ಯತಗಲ್ ಮಾತನಾಡಿ, ನಮ್ಮ ನಾಡು ನುಡಿ ಉಳಿಯಬೇಕಾಯಿತು ಕನ್ನಡವನ್ನು ಉಳಿಸಬೇಕು ಇಂತಹ ಕನ್ನಡ ಸೇವೆಯ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ್ದು ತುಂಬಾ ಖುಷಿಯ ವಿಚಾರವಾಗಿದೆ ಗಿರಿಧರ ಪೂಜಾರಿಯವರ ಉಪನ್ಯಾಸ ಬಹಳ ಉಪಯುಕ್ತವಾಗಿತ್ತು ಅತ್ಯಂತ ಕಡಿಮೆ ಅವಧಿಯಲ್ಲಿ ಕರ್ನಾಟಕ ರಾಜ್ಯ ಬರಹಗಾರರ ಸಂಘವು ಬಹಳ ಅತ್ಯಂತ ಕಾರ್ಯಕ್ರಮ ಹಾಗೂ ಉಪನ್ಯಾಸವನ್ನು ನೀಡುತ್ತಾ ಬಂದಿದೆ ಇನ್ನೂ ಉತ್ತಮ ಸೇವೆಯನ್ನು ಮಾಡಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ  ಬರಹಗಾರರ ಸಂಘದ ಉಪಾಧ್ಯಕ್ಷ ಖಂಡು ಬಂಜಾರ ಸೇವಾನಗರ ಹರಪನಹಳ್ಳಿ.ಜಿಲ್ಲಾ ಅಧ್ಯಕ್ಷ ವಿರೇಶ ಎಂ ಎಸ್ ಸಿಂಧನೂರು. ತಾಲೂಕ ಅಧ್ಯಕ್ಷ ಚಂದ್ರಶೇಖರ ಮದ್ಲಾಪೂರ. ದುರ್ಗಾಸಿಂಗ್ ಲಿಂಗಸ್ಗೂರು.ಕೆ. ಬಿ. ಹಿರೇಮಠ ಜಿಲ್ಲಾ ಸಂ ಕಾರ್ಯದರ್ಶಿ. ಸೇರಿದಂತೆ ಸಂಗಮೇಶ ವಸ್ರ್ತದ್. ಸೋಮನಗೌಡ ಮಾಲಿಪಾಟೀಲ. ರಾಘವೇಂದ್ರಚಾರಿ.ಬಿ. ಜೆ,  ರವಿಕುಮಾರ್ ಸೇರಿದಂತೆ ಒಟ್ಟು 60 ಹೆಚ್ಚು ಕವಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!