Wednesday, 11th December 2024

ತಾಲ್ಲೂಕಿನ ಅಧಿಕಾರಿಗಳಿಂದ ಬೇಸರ: ಉಸ್ತುವಾರಿ ಸಚಿವ ಮಾಧುಸ್ವಾಮಿ

ಪಾವಗಡ ಪಟ್ಟಣದ ಎಸ್ ಎಸ್ ಕೆ ರಂಗಮಂದಿರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಧಿಕಾರಿಗಳ ಜೊತೆ ಸಭೆ ನಡೆಸಿ ಕೋವಿಡ್ ನಿಯಂತ್ರಣ ಬಗ್ಗೆ ಮಾಹಿತಿ ಪಡೆದರು.

ಸಭೆಯಲ್ಲಿ ಅಧಿಕಾರಿಗಳೊಡನೆ ಕೋವಿಡ್ ಬಗ್ಗೆ ಚರ್ಚೆ ಮಾಡಿದ ಸಚಿವರು ಗ್ರಾಮೀಣ ಪ್ರದೇಶದ ಕೋವಿಡ್ ಕೆಂಪು ವಲಯದಲ್ಲಿ ಅಧಿಕಾರಿಗಳು ಬೇಟಿ ನೀಡಿ ಕೋವಿಡ್ ಸೋಂಕು ದೃಡ ಪಟ್ಟಂತಹ ವ್ಯಕ್ತಿಯ ಕುಟುಂಬದ ಎಲ್ಲಾ ಸದಸ್ಯರಿಗೆ ಕೋವಿಡ್ ಪರೀಕ್ಷೆ ಮಾಡಬೇಕು ಎಂಬುದಾಗಿ ತಿಳಿಸಿದರು ಸಹ ಪರೀಕ್ಷೆ ಮಾಡದೆ ಇರುವುದು ಗಮನಿಸಿದಾಗ ಈ ಭಾಗದ ಅಧಿಕಾರಿಗಳು ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತಿದ್ದಾರೆ ಎಂಬುದು ತಿಳಿದು ಬರುತ್ತಿದೆ.

ಕೋವಿಡ್ ಪ್ರಕರಣಗಳು ಹತೋಟಿಗೆ ಬರುತ್ತಿದೆ ಕೋವಿಡ್ ಪರೋಕ್ಷ ಅಂಕಿಅಂಶಗಳು ದಿನೆ ದಿನೆ ಕಡಿಮೆಯಾಗುತ್ತಿವೆ. ಹಲವು ಬಾರಿ ಈ ಭಾಗದ ಕೋವಿಡ್ ನಿಯಂತ್ರಣ ಬಗ್ಗೆ ಸರಿಯಾಗಿ ಮಾಹಿತಿ ನೀಡುವುದಿಲ್ಲ ಎಂದರು.

ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಮಾತನಾಡಿ ಗ್ರಾಮೀಣ ಪ್ರದೇಶದ ಪ್ರಕರಣದ ಮಾಹಿತಿ ಅಧಿಕಾರಿಗಳು ಸರಿಯಾಗಿ ನೀಡುತ್ತಿಲ್ಲ. ಇನ್ನೂ ಮುಂದೆ ಪ್ರತಿ ದಿನ ಏಳುನೂರು ಜನರ ಕೋವಿಡ್ ಪರೀಕ್ಷೆಗಳು ಮಾಡಬೇಕು. ಇನ್ನೂ ಮುಂದೆ ಕೆಂಪು ವಲಯದಲ್ಲಿ ವಿಶೇಷವಾಗಿ ಒಬ್ಬ ಅಧಿಕಾರಿಯನ್ನು ನೇಮಿಸಲಾಗುವುದು ಹಾಗೂ ವೈದ್ಯರ ನಡೆ ಹಳ್ಳಿಯ ಕಡೆ ಎಂಬ ಕಾರ್ಯ ಕ್ರಮದಡಿಯಲ್ಲಿ ಪ್ರತಿಯೊಂದು ಮನೆಯಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿದ ಬಗ್ಗೆ ಸಮೀಕ್ಷೆ ಮಾಡಬೇಕು ಮಾಡಿಸದ ವ್ಯಕ್ತಿ ಗಳಿಗೆ ಪರೀಕ್ಷೆ ಮಾಡಿಸ ಬೇಕು ಎಂದರು.

ಸಿಇಓ ಡಾ.ವಿದ್ಯಾಕುಮಾರಿ ಮಾತನಾಡಿ ಪಿಡಿಓ ಗಳಿಗೆ ತರಾಟೆಗೆ ತೆಗೆದು ಕೊಳ್ಳಲಾಗಿತ್ತು ಇಷ್ಟ ಇದ್ದರೆ ಕೆಲಸ ಮಾಡಿ ಇಲ್ಲದಿದ್ದರೆ ಮನೆಯಲ್ಲಿ ಇರಿ. ಕೋವಿಡ್ ಬಂದ ದಿನದಿಂದಲು ಯಾವುದೇ ಕೆಲಸ ನಿಮಗೆ ಹೇಳಿಲ್ಲ ಗ್ರಾಮೀಣ ಪ್ರದೇಶದ ಕೋವಿಡ್ ನಿಯಂತ್ರಣ ಮಾಡು ಕೆಲಸ ಮಾಡಿ ಎಂದರೆ ನಿರ್ಲಕ್ಷ್ಯ ಧೋರಣೆ ವಹಿಸುತ್ತಿದ್ದೀರಾ ಎಂದರು.

ಇಂದಿನಿಂದಲೇ ಗ್ರಾಮೀಣ ಪ್ರದೇಶದ ಮನೆ ಮನೆ ಸಮೀಕ್ಷೆ ಮಾಡಬೇಕು ಕೋವಿಡ್ ಸೋಂಕು ಪತ್ತೆಯಾದ ಕುಟುಂಬ ಸದಸ್ಯ ರಿಗೂ ಕೋವಿಡ್ ಪರೀಕ್ಷೆ ಮಾಡಿಸಬೇಕು.ಯಾವುದೇ ಮನೆ ಬಿಡುವ ಹಾಗಿಲ್ಲ ಎಂದು ತಿಳಿಸಿದರು.

ಈ ವೇಳೆ ಶಾಸಕ ವೆಂಕಟರಮಣಪ್ಪ, ಜಿಲ್ಲಾ ಎಸ್ಪಿ ವಂಶಿಕೃಷ್ಣ.ಜಿಲ್ಲಾ ವೈದ್ಯಧಿಕಾರಿ ಡಾ.ನಾಗೇಂದ್ರಪ್ಪ ಹಾಗೂ ತಾಲ್ಲೂಕಿನ ಕೋವಿಡ್ ನೋಡಲ್ ಅಧಿಕಾರಿಗಳು ಹಾಗೂ ತಾಲ್ಲೂಕಿನ ಎಲ್ಲಾ ಇಲಾಖೆ ಅಧಿಕಾರಿಗಳು ಇದ್ದರು.