Friday, 13th December 2024

ನಗುವುದರಿಂದ ಆಯಷು ವೃದ್ದಿಸುತ್ತದೆ: ಶಂಕರಗೌಡ ಪಾಟೀಲ 

ಇಂಡಿ: ತಾಲೂಕಿನ ತಡವಲಗಾ ಜೋಡಗುಡಿ ಹತ್ತಿರ ಶ್ರೀ ಮರಳುಸಿದ್ದೇಶ್ವರ ನೂತನೂತನ ದೇವಾಲಯ ಲೋಕಾರ್ಪಣೆ ನಿಮಿತ್ಯ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ, ಬಸವರಾಜ ಮಾಮನಿ, ನರಸಿಂಹ ಜ್ಯೋಶಿ ತಂಡದಿ0ದ ನಗೆ ಹಬ್ಬ ಕಾರ್ಯಕ್ರಮವನ್ನು ಬಿಜೆಪಿ ಮುಖಂಡ ಹಾಗೂ ಸ್ವದೇಶಿ ಜಾಗರಣ ಮಂಚಿನ ಸಂಚಾಲಕ ಶಂಕರಗೌಡ ಪಾಟೀಲ (ಡೋಮನಾಳ) ಬಿಜೆಪಿ ಜಿಲ್ಲಾ ವೈದ್ಯಕೀಯ ಪ್ರಕೋಷ್ಠದ ಸಂಚಾಲಕ ಬಾಬುರಾಜೇಂದ್ರ ನಾಯಕ ಕಾರ್ಯಕ್ರಮ ಉದ್ಘಾಟಿಸಿದರು.

ಈ ಸಂದರ್ಬಲ್ಲಿ ಬಿಜೆಪಿ ಮುಖಂಡ ಶಂಕರಗೌಡ ಪಾಟೀಲ ಡೋಮನಾಳ ಮಾತನಾಡಿ ಹಬ್ಬ ಹರಿದಿನ ಗಳು ಮಾನವೀಯ ಸಂಬ0ಧಗಳನ್ನು ಬೆಸೆಯುತ್ತವೆ. ಪರಸ್ಪರರು ಕೂಡಿ ಹಬ್ಬ , ಜಾತ್ರೆ ಧಾರ್ಮಿಕ, ಅಧ್ಯಾತ್ಮಿಕ, ಪುರಾಣ ಪ್ರವಚನಗಳು ನಡೇದಲ್ಲಿ ಎಲ್ಲರೂ ಸೇರುವುದರಿಂದ ಭಾವೈಕ್ಯತೆ ಕೊಂಡಿ ಒಂದಾಗುತ್ತವೆ. ಮನುಷ್ಯನಿಗೆ ಹಣದಿಂದಲೆ ಎಲ್ಲವನ್ನು ಪಡೇಯಬಹುದು ಎಂಬ ತಪ್ಪು ಕಲ್ಪನೆ ಇರಬಾರದು ಪರೋಪಕಾರ ಧರ್ಮದ ಕಾರ್ಯಗಳಿಗೆ ಬಡವರಿಗೆ,ದೀನರಿಗೆ ಸಹಾಯ ಸಹಕಾರ ಮಾಡಬೇಕು, ದೇವರು ಈ ಪ್ರಪಂಚದಲ್ಲಿ ಕೆಲವರಿಗೆ ಎಲ್ಲವೂ ಕೊಟ್ಟಿದ್ದಾನೆ ಆದರೆ ನಗುವುದು ಮಾತ್ರ ಕೊಟ್ಟಿಲ್ಲ ನಗುವುದರಿಂದ ಮನುಷ್ಯನಿಗೆ ಆಯುಷ್ಯ ವೃದ್ದಿಸುತ್ತದೆ.

ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ ಮಾತನಾಡಿ ಹಾಸ್ಯವು ಮೂಲ ಬುದ್ದಿವಾದದ ಮೂಲತತ್ವವಾಗಿದೆ. ನಗುವು ಸಾಂಕ್ರಾಮಿಕ ಪರಹಿತಚಿಂತನೆಯ ಆತ್ಮವಾಗಿದೆ. ಹಾಸ್ಯವು ಹೃದಯಗಳನ್ನು ಅವರ ಬೆತ್ತಲೆ ವಾಸ್ತವಿಕತೆಯಲ್ಲಿ ಸೆರೆ ಹಿಡಿಯುತ್ತದೆ. ಅದು ಮೀರಿದ ವಾಸ್ತವಿಕತೆಯಕುರುಹುಗಳನ್ನು ಸಹ ನೀಡುತ್ತದೆ. ನಗುವಿಗೆ ವಯೋವೃದ್ದಿಗೆ ಮಿತವಿಲ್ಲ ಹಾಸ್ಯೆ ಜೈವವೈವಿಧತೆಯನ್ನು ಸೆರೆಹಿಡಿಯುತ್ತದೆ. ನಗು ಹೃದಯ ಮೇಲ್ಕೇತ್ತುತ್ತದೆ ಪಟಾಕಿ ಕಿತ್ತು ಹಾಕುವಂತೆ ಹಾಸ್ಯದಿಂದ ಜ್ವಾಲಾಮುಖಿಯಂತೆ ಇಡೀ ಶರೀರದ ಮೌಂಸ ಖಂಡಗಳು ಕಂಪಿಸಿ ರಕ್ತಚಲನವಾಗಿಸುತ್ತದೆ ಪ್ರತಿಯೋಬ್ಬರು ನಗುತಾ ಬಾಳಿ ಎಂದರು.

ತಡವಲಗಾ ಶ್ರೀಮಠದ ಶ್ರೀಅಭಿನವ ರಾಚೋಟೇಶ್ವರ ಶಿವಾಚಾರ್ಯರು ದಿವ್ಯಸಾನಿಧ್ಯ ವಹಿಸಿದರು. ಗೊಳಸಾರದ ಅಭಿನವ ಪುಂಡಲಿ0ಗ ಶಿವಯೋಗಿ ಗಳು, ಶಿವಾನಂದ ಶಾಸ್ತಿçಗಳು ಉಪಸ್ಥಿತರಿದ್ದರು. ಬಾಬುಸಾಹುಕಾರ ಮೇತ್ರಿ, ಬಸವರಾಜ ಇಂಡಿ, ಮಳಸಿದ್ದ ಬ್ಯಾಳಿ, ಚಂದ್ರಶೇಖರ ರೂಗಿ, ಅಪ್ಪು ಕಲ್ಲೂರ ಜೆಟ್ಟೆಪ್ಪ ಮರಡಿ, ಡಾ.ಕಾಂತು ಇಂಡಿ,ಮಲ್ಲನಗೌಡ ಪಾಟೀಲ, ಗುರುನಾಥ ಬಗಲಿ,ಮಲ್ಲಕಪ್ಪ ತಡಲಗಿ, ಗುಂಡು ರೂಗಿ ಸೇರಿದಂತೆ ಗಣ್ಯರು ವೇದಿಕೆ ಯಲ್ಲಿದ್ದರು.

ಗಂಗಾವತಿ ಪ್ರಾಣೇಶ, ಬಸವರಾಜ ಮಾಮನಿ, ರಸಿಂಹ ಜ್ಯೋಶಿ ಇವರಿಂದ ಹಾಸ್ಯ ನಗೆ ಹಬ್ಬ ಜರುಗಿತ್ತು. ಸಾರ್ವಜನಿಕರು ಜಂಟಿ ಹಾಸ್ಯ ಕಲಾವಿದ ನಗೆ ಯನ್ನು ಕೇಳಿ ನಗೆ ಗಡಲಿನಲ್ಲಿ ತೇಲಿ ಹೋದರು.