Viral News: 40 ವರ್ಷದ ಮಲತಾಯಿಯನ್ನು ಮದುವೆಯಾದ 17 ವರ್ಷದ ಬಾಲಕ!
ಹರಿಯಾಣದ ನೂಹ್ ಜಿಲ್ಲೆಯ ಬಾಸದಲ್ಲಾ ಗ್ರಾಮದಲ್ಲಿ ಅಚ್ಚರಿ ಮತ್ತು ವಿವಾದಾತ್ಮಕ ಘಟನೆಯೊಂದು ಬೆಳಕಿಗೆ ಬಂದಿದೆ. 17 ವರ್ಷದ ಬಾಲಕನೊಬ್ಬ ತನ್ನ ತಂದೆಯ 40 ವರ್ಷದ ಎರಡನೇ ಪತ್ನಿಯೊಂದಿಗೆ ಓಡಿಹೋಗಿದ್ದಾನೆ. ಗ್ರಾಮದ ನಿವಾಸಿ ರಾಮಕಿಶನ್ ತನ್ನ ಮಗ ಮಲತಾಯಿಯೊಂದಿಗೆ ಸಂಬಂಧ ಬೆಳೆಸಿಕೊಂಡು ಆಕೆಯನ್ನು ವಿವಾಹವಾಗಿದ್ದಾನೆ ಎಂದು ಆರೋಪಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಚಂಡೀಗಢ: ಹರಿಯಾಣದ (Haryana) ನೂಹ್ ಜಿಲ್ಲೆಯ ಬಾಸದಲ್ಲಾ ಗ್ರಾಮದಲ್ಲಿ ಅಚ್ಚರಿ ಮತ್ತು ವಿವಾದಾತ್ಮಕ ಘಟನೆಯೊಂದು ಬೆಳಕಿಗೆ ಬಂದಿದೆ. 17 ವರ್ಷದ ಬಾಲಕನೊಬ್ಬ ತನ್ನ ತಂದೆಯ 40 ವರ್ಷದ ಎರಡನೇ ಪತ್ನಿಯೊಂದಿಗೆ (Second Wife) ಓಡಿ ಹೋಗಿದ್ದಾನೆ. ಗ್ರಾಮದ ನಿವಾಸಿ ರಾಮಕಿಶನ್ (Ramakishan) ತನ್ನ ಮಗ ಮಲತಾಯಿಯೊಂದಿಗೆ ಸಂಬಂಧ ಬೆಳೆಸಿಕೊಂಡು ಆಕೆಯನ್ನು ವಿವಾಹವಾಗಿದ್ದಾನೆ ಎಂದು ಆರೋಪಿಸಿದ್ದಾರೆ. ಆತನ ಪ್ರಕಾರ, ಮಗ ಅಪ್ರಾಪ್ತನಾಗಿದ್ದು, ಕಾನೂನುಬದ್ಧ ಮದುವೆ ಸಾಧ್ಯವಿಲ್ಲ ಎಂದು ದೂರಿದ್ದಾರೆ.
ಹಲವು ವರ್ಷಗಳ ಹಿಂದೆ ರಾಮಕಿಶನ್ ಮೊದಲ ಪತ್ನಿ ನಿಧನರಾಗಿದ್ದಾರೆ. ಆಗ ಆತನ ಮಗ ಕೇವಲ ಎರಡು ವರ್ಷದವನಾಗಿದ್ದಾಗ ನಾಪತ್ತೆಯಾಗಿದ್ದ. ಬಹಳ ದಿನ ಹುಡುಕಾಟ ನಡೆಸಿದರೂ ಸುಳಿವು ಸಿಗಲಿಲ್ಲ. ಬಳಿಕ ರಾಮಕಿಶನ್ ಎರಡನೇ ಮದುವೆಯಾಗಿದ್ದು, ಈಗ ಆ ದಾಂಪತ್ಯಕ್ಕೆ 15 ವರ್ಷವಾಗಿದೆ. ಎರಡನೇ ಪತ್ನಿಗೆ ಒಬ್ಬ ಮಗಳಿದ್ದಾಳೆ.
ಈ ಸುದ್ದಿಯನ್ನು ಓದಿ: Viral Video: ಲಿಫ್ಟ್‌ನೊಳಗೆ ಬಾಲಕನಿಗೆ ಹಿಗ್ಗಾಮಗ್ಗಾ ಥಳಿಸಿದ ವ್ಯಕ್ತಿ; ಬೆಚ್ಚಿಬೀಳಿಸುವ ವಿಡಿಯೊ ವೈರಲ್
ನಾಪತ್ತೆಯಾಗಿದ್ದ ಮಗ ಮೂರು ತಿಂಗಳ ಹಿಂದೆ ಆಕಸ್ಮಿಕವಾಗಿ ವಾಪಸ್ ಬಂದಿದ್ದು, ತಂದೆ ಮತ್ತು ಮಲತಾಯಿಯೊಂದಿಗೆ ವಾಸಿಸತೊಡಗಿದ್ದ. ಈ ವೇಳೆ ಆತ ಮತ್ತು ಮಲತಾಯಿಯ ನಡುವೆ ಅನೈತಿಕ ಸಂಬಂಧ ಬೆಳೆದು, ಇಬ್ಬರೂ ಮನೆಯಿಂದ ಓಡಿ ಹೋದರು. ಪೊಲೀಸರು ಇಬ್ಬರೂ ಮದುವೆಯಾಗಿದ್ದಾರೆಂದು ಹೇಳುತ್ತಿದ್ದಾರೆ. ಆದರೆ ಬಾಲಕನಿಗೆ ಕಾನೂನುಬದ್ಧ ಮದುವೆ ಸಾಧ್ಯವಿಲ್ಲ ಎಂದು ರಾಮಕಿಶನ್ ಆರೋಪಿಸಿದ್ದಾರೆ. ತನಿಖಾಧಿಕಾರಿಯು ಲಂಚ ಪಡೆದು ಪ್ರಕರಣವನ್ನು ಮುಚ್ಚಿಹಾಕಿದ್ದಾರೆ ಎಂದು ಆರೋಪಿಸಿ, ತನಗೆ ನ್ಯಾಯ ಸಿಗುತ್ತಿಲ್ಲ ಎಂದಿದ್ದಾರೆ.
ಪುಂಹಾನಾ ಠಾಣೆಯ ತನಿಖಾಧಿಕಾರಿ ಪುಷ್ಪಾ, ಎರಡು ತಿಂಗಳ ಹಿಂದೆ ಮಹಿಳೆಯನ್ನು ಪತ್ತೆಹಚ್ಚಲಾಗಿತ್ತು ಎಂದು ತಿಳಿಸಿದ್ದಾರೆ. ರಾಮಕಿಶನ್ ಜತೆ ಇರಲು ಇಷ್ಟವಿಲ್ಲ ಎಂದು ಹೇಳಿಕೆ ನೀಡಿದ್ದಾಳೆ. ಯುವಕನ ಮಾಹಿತಿ ತಿಳಿದಿಲ್ಲ ಮತ್ತು ಲಂಚದ ಆರೋಪಗಳು ಆಧಾರರಹಿತ ಎಂದು ಅವರು ಹೇಳಿದ್ದಾರೆ. ಮಹಿಳೆಯ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಪ್ರಕರಣವನ್ನು ಕ್ಲೋಸ್ ಮಾಡಿದ್ದಾರೆ.