ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Viral Video: ಲಿಫ್ಟ್‌ನೊಳಗೆ ಬಾಲಕನಿಗೆ ಹಿಗ್ಗಾಮಗ್ಗಾ ಥಳಿಸಿದ ವ್ಯಕ್ತಿ; ಬೆಚ್ಚಿಬೀಳಿಸುವ ವಿಡಿಯೊ ವೈರಲ್

ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಇತ್ತೀಚೆಗೆ ಅಂಬರ್ನಾಥ್ ಪೂರ್ವದ ವಸತಿ ಕಟ್ಟಡದ ಲಿಫ್ಟ್‌ನೊಳಗೆ 12 ವರ್ಷದ ಬಾಲಕನ ಮೇಲೆ ಕೈಲಾಶ್ ಥವಾನಿ ಎಂಬ ವ್ಯಕ್ತಿ ಕ್ರೂರವಾಗಿ ಹಲ್ಲೆ ಮಾಡಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಲಿಫ್ಟ್‌ನೊಳಗೆ ಬಾಲಕನಿಗೆ ಹಿಗ್ಗಾಮಗ್ಗಾ ಥಳಿಸಿದ ವ್ಯಕ್ತಿ

Profile pavithra Jul 10, 2025 8:59 PM

ಮುಂಬೈ: ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ವಸತಿ ಕಟ್ಟಡದ ಲಿಫ್ಟ್‌ನೊಳಗೆ 12 ವರ್ಷದ ಬಾಲಕನ ಮೇಲೆ ವ್ಯಕ್ತಿಯೊಬ್ಬ ಕ್ರೂರವಾಗಿ ಹಲ್ಲೆ ನಡೆಸಿದ್ದ ಆಘಾತಕಾರಿ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಅಂಬರ್ನಾಥ್ ಪೂರ್ವದ ಕಟ್ಟಡದಲ್ಲಿ ಈ ಘಟನೆ ಸಂಭವಿಸಿದೆ. ಬಾಲಕ 14ನೇ ಮಹಡಿಯ ಅಪಾರ್ಟ್‌ಮೆಂಟ್‌ನಿಂದ ಟ್ಯೂಷನ್‌ಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಹಲ್ಲೆಯ ಸಮಯದಲ್ಲಿ ಬಾಲಕನಿಗೆ ಆತ ಹಲವು ಬಾರಿ ಕಪಾಳಮೋಕ್ಷ ಮಾಡಿದ್ದಲ್ಲದೆ ಕೈ ಕಚ್ಚಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ವೈರಲ್ ಆದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕೈಲಾಶ್ ಥವಾನಿ ಎಂಬ ವ್ಯಕ್ತಿ ಲಿಫ್ಟ್‌ನೊಳಗೆ ಬಂದು ಬಾಲಕನ ಮೇಲೆ ಹಿಂಸಾತ್ಮಕ ಹಲ್ಲೆ ನಡೆಸುತ್ತಿರುವುದು ಸೆರೆಯಾಗಿದೆ. ಅಲ್ಲದೆ ಥವಾನಿ ಬಾಲಕನಿಗೆ ಹಲವು ಬಾರಿ ಕಪಾಳಮೋಕ್ಷ ಮಾಡುತ್ತಿರುವುದು, ಅವನ ಕೈಗಳನ್ನು ಹಿಡಿದು, ಹಿಸುಕುತ್ತಿರುವುದು ಮತ್ತು ಕೈ ಕಚ್ಚುತ್ತಿರುವುದು ಕಂಡುಬಂದಿದೆ. ಅಲ್ಲದೆ ಬಾಲಕನಿಗೆ ಬೆದರಿಕೆ ಸಹ ಹಾಕಿದ್ದಾನೆ. ಲಿಫ್ಟ್‌ನೊಳಗೆ ಇದ್ದ ಮಹಿಳೆ ಮಧ್ಯ ಪ್ರವೇಶಿಸಿ ಬಾಲಕನ ಮೇಲಿನ ಹಲ್ಲೆಯನ್ನು ತಡೆಯಲು ಪ್ರಯತ್ನಿಸಿದ್ದಾಳೆ. ಕೊನೆಗೆ ಆತ ಬಾಲಕನನ್ನು ಕಟ್ಟಡದ ಲಾಬಿಗೆ ಎಳೆದುಕೊಂಡು ಹೋಗಿ ಇತರ ನಿವಾಸಿಗಳು ಮತ್ತು ಸೆಕ್ಯುರಿಟಿ ಗಾರ್ಡ್‌ ಮುಂದೆ ಹಲ್ಲೆ ಮಾಡಿದ್ದಾನೆ.

ವಿಡಿಯೊ ಇಲ್ಲಿದೆ ನೋಡಿ...



9ನೇ ಮಹಡಿಯಲ್ಲಿ ಲಿಫ್ಟ್ ಬಾಗಿಲುಗಳನ್ನು ಬಾಲಕ ಮುಚ್ಚಿದ್ದರಿಂದ ಕೈಲಾಶ್ ಥವಾನಿ ಕೋಪಗೊಂಡು ಹಲ್ಲೆ ನಡೆಸಿದ್ದಾನೆ ಎಂದು ವರದಿಯಾಗಿದೆ. ಈ ಘಟನೆಯ ಬಗ್ಗೆ ಬಾಲಕನ ಪೋಷಕರು ಸ್ಥಳೀಯ ಪೊಲೀಸರಿಗೆ ದೂರು ನೀಡಿದರೂ ಕೂಡ ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಈ ಘಟನೆಯ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾದ ಕಾರಣ ಮತ್ತು ಕುಟುಂಬದ ಒತ್ತಡದ ನಂತರ, ಘಟನೆ ನಡೆದ ನಾಲ್ಕು ದಿನಗಳ ಬಳಿಕ ಅಂತಿಮವಾಗಿ ಎಫ್‌ಐಆರ್ ದಾಖಲಿಸಲಾಯಿತು.

ಈ ಸುದ್ದಿಯನ್ನೂ ಓದಿ:Viral Video: ನಾಯಿ ಮರಿ ಮೇಲೆ ಇದೆಂಥಾ ಕ್ರೌರ್ಯ? ಈ ದುಷ್ಟನ ಹೀನ ಕೃತ್ಯದ ವಿಡಿಯೊ ಇಲ್ಲಿದೆ

ಮುಗ್ಧ ಮಕ್ಕಳ ಮೇಲೆ ವಯಸ್ಕರು ದಾಳಿ ಮಾಡಿದ ಪ್ರಕರಣ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ತಾಯಿಯೊಬ್ಬಳು ಕೋಪಗೊಂಡು ತನ್ನ ಮಗನನ್ನು ಅಡುಗೆಮನೆಯ ಪಾತ್ರೆಯಿಂದ ಹಿಗ್ಗಾಮಗ್ಗಾ ಹೊಡೆದಿದ್ದಳು. ಈ ಭಯಾನಕ ಘಟನೆಯನ್ನು ಕುಟುಂಬ ಸದಸ್ಯರೊಬ್ಬರು ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದರು. ಇದು ಈಗ ಸೋಶಿಯಲ್ ಮೀಡಿಯಾಗಳಲ್ಲಿ ಬಹಳಷ್ಟು ವೈರಲ್‌ ಆಗಿ ವಿಡಿಯೊ ನೋಡಿದ ನೆಟ್ಟಿಗರು ಶಾಕ್‌ ಆಗಿದ್ದರು. ವಿಡಿಯೊದಲ್ಲಿರುವ ಯಾರ ಗುರುತುಗಳು ಇನ್ನೂ ದೃಢಪಟ್ಟಿಲ್ಲ. ರಾಜಸ್ಥಾನದ ಕರೌಲಿಯಲ್ಲಿ ಈ ಘಟನೆ ನಡೆದಿತ್ತು.