ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Viral Video: ನೊಯ್ಡಾದಿಂದ ಮೀರತ್‍ವರೆಗೆ ಗೋಡೆ ಹಾಗೂ ಕಂಬಗಳ ಮೇಲೆ ನಿಗೂಢ ಪೋಸ್ಟರ್; ಏನಿದು?

ನೋಯ್ಡಾ ಮತ್ತು ಮೀರತ್‍ನ ಪ್ರಮುಖ ರಸ್ತೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ 'ಕ್ಷಮಿಸಿ ಬುಬು' ಎಂಬ ಪದಗಳನ್ನು ಅಂಟಿಸಿದ ನಿಗೂಢ ಪೋಸ್ಟರ್‌ಗಳು ಕಂಡುಬಂದಿವೆ. ಇದನ್ನು ಯುವತಿಯೊಬ್ಬಳು ವಿಡಿಯೊ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾಳೆ. ಇದು ವೈರಲ್(Viral Video) ಆಗಿದೆ. ಈ ಬಗ್ಗೆ ಪೊಲೀಸರು ತನಿಖೆ ಶುರುಮಾಡಿದ್ದಾರೆ.

ಗೋಡೆ ಮೇಲೆ ರಾರಾಜಿಸಿದ ನಿಗೂಢ ಪೋಸ್ಟರ್‌ ಕಂಡು ಬೆಚ್ಚಿಬಿದ್ದ ಜನರು!

viral poster

Profile pavithra Jan 30, 2025 10:52 AM

ನೊಯ್ಡಾ: ವ್ಯಕ್ತಿಗಳು ಕಾಣೆಯಾದಾಗ ಅವರನ್ನು ಹುಡುಕಲು ಸಾರ್ವಜನಿಕ ಸ್ಥಳಗಳಲ್ಲಿ ಗೋಡೆಗಳ ಮೇಲೆ ಅವರ ಪೋಟೊ ಪೋಸ್ಟರ್‌ ಅಂಟಿಸಿರುವುದನ್ನು ಸಾಮಾನ್ಯವಾಗಿ ನೋಡಿರುತ್ತೇವೆ. ಆದರೆ ನೋಯ್ಡಾ ಮತ್ತು ಮೀರತ್‍ನ ಪ್ರಮುಖ ರಸ್ತೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ 'ಕ್ಷಮಿಸು ಬಾಬು' ಎಂಬ ಬರಹಗಳಿರುವ ನಿಗೂಢ ಪೋಸ್ಟರ್‌ಗಳು ಕಂಡುಬಂದಿವೆ. ಇದನ್ನು ನೋಡಿ ಅಲ್ಲಿನ ನಿವಾಸಿಗಳು ಆಶ್ಚರ್ಯಚಕಿತರಾಗಿದ್ದಾರೆ. ಯಾರು ಮತ್ತು ಯಾರಿಗೆ ಕ್ಷಮೆಯಾಚಿಸುತ್ತಿದ್ದಾರೆಂದು ತಿಳಿದಿಲ್ಲ, ಮತ್ತು"ಬಾಬು" ಪದದ ಕಾಗುಣಿತ ಕೂಡ ತಪ್ಪಾಗಿದೆ. ಬಾಬು ಬದಲು ʻಬೂಬುʼ ಎಂದು ಬರೆದಿದ್ದಾರೆ. ನೊಯ್ಡಾದಿಂದ ಮೀರತ್‍ವರೆಗೆ ಅನೇಕ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ. ಆದರೆ, ಈ ಪೋಸ್ಟರ್‌ಗಳನ್ನು ಹಾಕಿದ ವ್ಯಕ್ತಿ ಯಾರು ಎಂಬುದು ತಿಳಿದಿಲ್ಲ. ಈ ಸುದ್ದಿ ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌(Viral Video) ಆಗಿದೆ.

ನೊಯ್ಡಾದಲ್ಲಿ, ಬೊಟಾನಿಕಲ್ ಗಾರ್ಡನ್ ಮೆಟ್ರೋ ನಿಲ್ದಾಣದ ಬಳಿ ಪಾದಚಾರಿ ಮೇಲ್ಸೇತುವೆಯಲ್ಲಿ (ಎಫ್ಒಬಿ) ಇಂತಹ ಸುಮಾರು 30ರಿಂದ 40 ಪೋಸ್ಟರ್‌ಗಳು ಕಂಡುಬಂದಿವೆ. ಈ ಪೋಸ್ಟರ್‌ಗಳ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಗಮನ ಸೆಳೆದಿವೆ. ಇದು ಕಿಡಿಗೇಡಿ ವ್ಯಕ್ತಿಯ ಕೃತ್ಯವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಈ ಬಗ್ಗೆ ತನಿಖೆ ಶುರುಮಾಡಿದ್ದಾರೆ.



ಕುತೂಹಲಕಾರಿ ಸಂಗತಿಯೆಂದರೆ, "ಕ್ಷಮಿಸಿ ಬುಬು" ಎಂಬ ಪದಗಳನ್ನು ಹೊರತುಪಡಿಸಿ, ಪೋಸ್ಟರ್‌ಗಳಲ್ಲಿ ಯಾವುದೇ ಹೆಚ್ಚುವರಿ ಮಾಹಿತಿ ಇಲ್ಲ. ಅವುಗಳ ಮೇಲೆ ಎರಡು ಕಾರ್ಟೂನ್ ಚಿತ್ರಗಳನ್ನು ಬಿಡಿಲಾಗಿದೆ. ಆದರೆ ಕಾಗುಣಿತ ತಪ್ಪಾಗಿರುವುದರಿಂದ, ರಹಸ್ಯವನ್ನು ಪರಿಹರಿಸಲು ಪೊಲೀಸರಿಗೆ ಕಷ್ಟವಾಗುತ್ತಿದೆ ಎನ್ನಲಾಗಿದೆ.

ಮೀರತ್‍ನ ಗಂಗನಗರ್‌ನಲ್ಲಿಯೂ ಇದೇ ರೀತಿಯ ಪೋಸ್ಟರ್‌ಗಳು ಕಂಡುಬಂದಿವೆ. ಯುವತಿಯೊಬ್ಬಳು ಈ ಪೋಸ್ಟರ್‌ಗಳನ್ನು ಅನೇಕ ಸ್ಥಳಗಳಲ್ಲಿ ಗಮನಿಸಿ ಅದನ್ನು ವಿಡಿಯೊವನ್ನು ರೆಕಾರ್ಡ್ ಮಾಡಿ, ನಂತರ ಅದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾಳೆ. ಇದು ವೈರಲ್ ಆಗಿದೆ. ಈ ವಿಡಿಯೊವನ್ನು ನೋಡಿದ ನಂತರ, ಸ್ಥಳೀಯ ಪೊಲೀಸರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಮತ್ತು ಈ ಕೃತ್ಯದ ಹಿಂದಿನ ವ್ಯಕ್ತಿಯನ್ನು ಗುರುತಿಸಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಚಿಕನ್‌ ಪೀಸ್‌ನಲ್ಲಿ ಹರಿದಾಡಿದ ಹುಳು! ಶಾಕಿಂಗ್‌ ವಿಡಿಯೊ ವೈರಲ್

ಸದ್ಯಕ್ಕೆ, ಪೋಸ್ಟರ್‌ಗಳನ್ನು ಹಾಕಿದ ವ್ಯಕ್ತಿಯ ಗುರುತು ತಿಳಿದುಬಂದಿಲ್ಲ, ಆದರೆ "ಕ್ಷಮಿಸಿ ಬಾಬು" ರಹಸ್ಯವು ಸಾರ್ವಜನಿಕರು ಮತ್ತು ಪೊಲೀಸರನ್ನು ಗೊಂದಲಕ್ಕೀಡು ಮಾಡುತ್ತಲೇ ಇದೆ. ಜನರು ಅದರ ಬಗ್ಗೆ ಮಿಶ್ರ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಕೆಲವರು ಇದು ಪ್ರೇಮ ಸಂಬಂಧಕ್ಕೆ ಸಂಬಂಧಿಸಿದೆ ಎಂದು ನಂಬಿದರೆ, ಇತರರು ಇದು ಕೆಲವು ಕಿಡಿಗೇಡಿಗಳ ತಮಾಷೆಯಾಗಿರಬಹುದು ಎಂದು ಭಾವಿಸಿದ್ದಾರೆ.