Viral Video: ಪರೀಕ್ಷೆ ಬರೆಯುವ ಬದಲು ಪ್ರೀತಿಸಿದ ಯುವಕನನ್ನು ವರಿಸಿದ ಯುವತಿ!
ಪೂರ್ವ ಸಿದ್ಧತೆಯಿಲ್ಲದ ಈ ಸಿಂಧೂರ ಸಮಾರಂಭದ ದೃಶ್ಯವನ್ನು ಆಕೆಯ ಪ್ರಿಯಕರ ತನ್ನ ಮೊಬೈಲ್ ಫೋನ್‌ನಲ್ಲಿ ಸೆರೆಹಿಡಿದು ಸಾಮಾಜಿಕ ಮಾಧ್ಯ ಮದಲ್ಲಿ ಹಂಚಿಕೊಂಡಿದ್ದಾನೆ. ಬಿಹಾರದ ಬೋರ್ಡ್ ಪರೀಕ್ಷೆ ಆರಂಭವಾಗಿ ಕೆಲವು ದಿನ ಕಳೆದಿದ್ದು, ಇಂಗ್ಲಿಷ್ ಪರೀಕ್ಷೆ ಬರೆಯಲು ತೆರಳಿದ್ದ ಯುವತಿಯು ಅದನ್ನು ಬಿಟ್ಟು ಪ್ರಿಯಕರನನ್ನು ವರಿಸಿದ್ದಾಳೆ.

bihar girl marriage

ಪಾಟ್ನಾ: ದೇಶದೆಲ್ಲೆಡೆ ವಿದ್ಯಾರ್ಥಿಗಳು ಬೋರ್ಡ್ ಪರೀಕ್ಷೆ ಬರೆಯುತ್ತಿದ್ದರೆ ಬಿಹಾರ ಮೂಲದ ಯುವತಿಯೊಬ್ಬಳು ಪರೀಕ್ಷೆಗೆಂದು ತೆರಳಿ ತಾನು ಪ್ರೀತಿಸಿದ್ದ ಯುವಕನ ಜತೆ ಮದುವೆಯಾಗಲು ಮುಂದಾಗಿದ್ದಾಳೆ. ಸದ್ಯ ಈ ದೃಶ್ಯ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು ವಿದ್ಯಾರ್ಥಿನಿಯ ಈ ನಿರ್ಧಾರ ಕಂಡು ಆಕೆಯ ಪೋಷಕರೇ ಶಾಕ್ ಆಗಿದ್ದಾರೆ (Viral Video). ವಿದ್ಯಾರ್ಥಿನಿ ಪರೀಕ್ಷೆ ಬರೆಯುದನ್ನು ಬಿಟ್ಟು ದಾರಿ ಮಧ್ಯೆಯೇ ಪ್ರೀತಿಸಿದ ಯುವಕನ ಭೇಟಿ ಮಾಡಿದ್ದು ಆತ ಆಕೆಗೆ ಸಿಂಧೂರು ಇಡುತ್ತಿರುವ ದೃಶ್ಯವನ್ನು ಕ್ಯಾಮೆರದಲ್ಲಿ ರೆಕಾರ್ಡ್ ಮಾಡಿದ್ದು ಸದ್ಯ ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ.
ಪೂರ್ವ ಸಿದ್ಧತೆಯಿಲ್ಲದ ಈ ಸಿಂಧೂರ ಸಮಾರಂಭದ ದೃಶ್ಯವನ್ನು ಆಕೆಯ ಪ್ರಿಯಕರ ತನ್ನ ಮೊಬೈಲ್ ಫೋನ್‌ನಲ್ಲಿ ಸೆರೆಹಿಡಿದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾನೆ. ಬಿಹಾರದ ಬೋರ್ಡ್ ಪರೀಕ್ಷೆ ಆರಂಭವಾಗಿ ಕೆಲವು ದಿನ ಕಳೆದಿದ್ದು ಇಂಗ್ಲಿಷ್ ಪರೀಕ್ಷೆ ಬರೆಯಲು ತೆರಳಿದ್ದ ಯುವತಿ ಬಳಿಕ ನಡೆದಿದ್ದೇ ಬೇರೆ. ಆಕೆ ಪರೀಕ್ಷೆ ಬರೆಯದೆ ತನ್ನ ಪ್ರಿಯಕರನನ್ನು ಭೇಟಿ ಆಗಿದ್ದಾಳೆ. ಕಳೆದ ಕೆಲವು ದಿನಗಳಿಂದ ಇವರಿಬ್ಬರು ಪ್ರೀತಿಸುತ್ತಿದ್ದು, ರಸ್ತೆ ಮಧ್ಯೆಯೇ ಯುವತಿಯ ಬೈತಲೆಗೆ ಪ್ರೀತಿಸಿದ ಹುಡುಗನು ಸಿಂಧೂರ ಇಟ್ಟಿದ್ದಾನೆ.
ವೈರಲ್ ಆದ ಈ ವಿಡಿಯೊದಲ್ಲಿ ಯುವತಿಯ ಹಣೆಗೆ ಆಕೆಯ ಪ್ರಿಯಕರ ಸಿಂಧೂರ ಇಡುತ್ತಿರುವ ದೃಶ್ಯ ಸೆರೆಯಾಗಿದೆ. ಉತ್ತರ ಪ್ರದೇಶ ಮತ್ತು ಬಿಹಾರದ ಸಂಪ್ರಾದಯದಲ್ಲಿ ಸಿಂಧೂರಕ್ಕೆ ಪವಿತ್ರ ಸ್ಥಾನ ಇದ್ದು ಇದನ್ನು ಹಣೆಗಿಟ್ಟರೆ ಮದುವೆ ಆಗಿದೆ ಎನ್ನುವ ನಂಬಿಕೆ ಇದೆ. ಯುವಕ ಸಿಂಧೂರವನ್ನು ಪ್ರೇಯಸಿಗೆ ಇಡುತ್ತಿದ್ದಂತೆ ಯುವತಿಯು ನಾಚಿಕೊಳ್ಳುವ ದೃಶ್ಯವೂ ಸೆರೆಯಾಗಿದೆ.
ಬಿಹಾರದಲ್ಲಿ ಈ ರೀತಿಯ ಘಟನೆ ನಡೆಯುತ್ತಿರುವುದು ಇದು ಮೊದಲಲ್ಲ. ಇಲ್ಲಿ ಶಿಕ್ಷಿತರ ಸಂಖ್ಯೆ ಕಡಿಮೆ ಇದ್ದು ಮಹಿಳೆಯರು ವಿದ್ಯಾಭ್ಯಾಸದ ಬಗ್ಗೆ ಹೆಚ್ಚೇನು ಆಸಕ್ತಿ ಹೊಂದಿಲ್ಲ. ಈ ಹಿಂದೆಯು ಪರೀಕ್ಷೆ ಬಿಟ್ಟು ತಾನು ಪ್ರೀತಿಸಿದ ಹುಡುಗನ ಜತೆ ಮದುವೆಯಾದ ಘಟನೆ ವೈರಲ್ ಆಗಿತ್ತು. ಇದೀಗ ಮತ್ತೆ ಇದೇ ರೀತಿಯ ಘಟನೆ ವೈರಲ್ ಆಗಿದ್ದು ನೆಟ್ಟಿಗರು ಈ ಬಗ್ಗೆ ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
ಇದನ್ನು ಓದಿ: Viral Video: ಮೆಟ್ರೋದಲ್ಲಿ ಯುವತಿಗೆ ಬಾಡಿ ಶೇಮಿಂಗ್ ಮಾಡಿದ ಮಹಿಳೆ; ವಿಡಿಯೊ ವೈರಲ್
ಶಿಕ್ಷಣ ಪಡೆಯಲಿ ಎಂದು ಶಾಲೆಗೆ ಕಳುಹಿಸಿದರೆ, ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಇತ್ತೀಚಿನ ಯುವಜನಾಂಗ ಹದಿಹರೆಯದ ವಯಸ್ಸಿನಲ್ಲಿಯೇ ಪ್ರೀತಿ ಪ್ರೇಮದ ಮೋಹಕ್ಕೆ ಸಿಲುಕಿ ತಮ್ಮ ಶೈಕ್ಷಣಿಕ ಕಾರ್ಯಚಟುವಟಿಕೆ ಬದಿ ಗೊತ್ತುತ್ತಿರುವುದು ಅಘಾತಕಾರಿ ವಿಚಾರ ಎಂದು ಹಲವರು ಕಳವಳ ವ್ಯಕ್ತಪಡಿಸಿದ್ದಾರೆ.