ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Viral Video: ಮೆಟ್ರೋದಲ್ಲಿ ಯುವತಿಗೆ ಬಾಡಿ ಶೇಮಿಂಗ್‌ ಮಾಡಿದ ಮಹಿಳೆ; ವಿಡಿಯೊ ವೈರಲ್

ದೆಹಲಿ ಮೆಟ್ರೋದಲ್ಲಿ ಇತ್ತೀಚೆಗೆ 20 ವರ್ಷದ ಯುವತಿಗೆ 42 ವರ್ಷದ ಮಹಿಳೆ ಅವಮಾನಿಸಿದ ಘಟನೆಯೊಂದು ನಡೆದಿದೆ. ಈ ಸಂದರ್ಭದಲ್ಲಿ ಸಹ ಪ್ರಯಾಣಿಕರೊಬ್ಬರು ಮಧ್ಯಪ್ರವೇಶಿಸಿ ಮಹಿಳೆಯ ವರ್ತನೆಯನ್ನು ಖಂಡಿಸಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video)ಆಗಿದೆ.

20 ವರ್ಷದ ಯುವತಿಗೆ ಮುದುಕಿಯೆಂದ ಮಹಿಳೆ! ಏನಿದು ಜಡೆಜಗಳ...?

Profile pavithra Feb 26, 2025 3:55 PM

ನವದೆಹಲಿ: ದೆಹಲಿ ಮೆಟ್ರೋ ಆಗಾಗ ಸುದ್ದಿಯಲ್ಲಿರುತ್ತದೆ. ಮೆಟ್ರೋದಲ್ಲಿ ಡಾನ್ಸ್‌, ಜಗಳ, ಕಿತ್ತಾಟ, ರೀಲ್ಸ್‌ ಇಂಥವುಗಳು ಯಾವಾಗಲೂ ನಡೆಯುತ್ತಿರುತ್ತದೆ. ಆದರೆ ಈಗ ಮಹಿಳೆಯೊಬ್ಬಳು ಬಾಡಿ ಶೇಮಿಂಗ್‌ ಮಾಡಿದ ಘಟನೆಯೊಂದು ನಡೆದಿದೆ. ಇತ್ತೀಚೆಗೆ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳಿಗೆ ಮಧ್ಯವಯಸ್ಸಿನ ಮಹಿಳಾ ಪ್ರಯಾಣಿಕಳೊಬ್ಬಳು ಬಾಡಿ ಶೇಮಿಂಗ್‌(Body Shaming) ಮಾಡಿದ ಘಟನೆಯೊಂದು ಸಿಕ್ಕಾಪಟ್ಟೆ ವೈರಲ್‌ ಆಗಿದೆ. ನೋಡುವುದಕ್ಕೆ ಸ್ವಲ್ಪ ದಪ್ಪಗಿದ್ದ ಯುವತಿಗೆ ಮಹಿಳೆಯೊಬ್ಬಳಿ 50 ವರ್ಷದ ಮುದುಕಿಯಂತೆ ಕಾಣುತ್ತಿದ್ದಿಯಾ... ಎಂದು ಅವಮಾನಿಸಿದ್ದಾಳೆ. ಮಹಿಳೆಯ ಈ ವರ್ತನೆಯನ್ನು ಸಹ ಪ್ರಯಾಣಿಕರೊಬ್ಬರು ಖಂಡಿಸಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವೈರಲ್ ವಿಡಿಯೊದಲ್ಲಿ, ಮಧ್ಯವಯಸ್ಕ ಮಹಿಳೆ ಕಿರುಚುವುದು ಸೆರೆಯಾಗಿದೆ. ಇನ್ನು ಈ ಘಟನೆಗೆ ಮುಖ್ಯ ಕಾರಣವೆಂದರೆ ಮೆಟ್ರೋದಲ್ಲಿ ಪ್ರಯಾಣಿಕಳೊಬ್ಬಳು ಚಿಪ್ಸ್‌ ತಿಂದಿದ್ದಂತೆ. ಇನ್ನು ಈ 20 ವರ್ಷದ ಯುವತಿ ಚಿಪ್ಸ್‌ ತಿಂದವಳ ಪರವಾಗಿ ಮಾತನಾಡಿದ್ದಕ್ಕೆ ಮಹಿಳೆ ಸಿಟ್ಟಾಗಿ ಈಕೆಯ ಮೇಲೆ ಹರಿಹಾಯ್ದಿದ್ದಾಳೆ. "ನೀನು ದಪ್ಪಗಿದ್ದಿಯಾ, ನೋಡುವುದಕ್ಕೆ 50 ವರ್ಷದವಳ ಹಾಗೇ ಕಾಣುತ್ತಿದ್ದಿಯಾ ಎಂದೆಲ್ಲಾ ಮಹಿಳೆ ಯುವತಿಗೆ ನಿಂದಿಸಿದ್ದಾಳೆ. ಕೊನೆಗೆ ಸಹಪ್ರಯಾಣಿಕರೊಬ್ಬರು ಮದ್ಯಪ್ರವೇಶಿಸಿ ಈ ರೀತಿ ನಿಂದನೆ ಮಾಡುವುದು ಸರಿಯಲ್ಲ ಎಂದು ಮಹಿಳೆಯ ವರ್ತನೆಯನ್ನು ಖಂಡಿಸಿದ್ದಾರೆ.



ದೆಹಲಿ ಮೆಟ್ರೋದಲ್ಲಿ ಆಗಾಗ ಈ ರೀತಿಯ ಘಟನೆಗಳು ನಡೆಯುತ್ತಿರುತ್ತದೆ. ಈ ಹಿಂದೆ ದೆಹಲಿ ಮೆಟ್ರೋ ರೈಲಿನಲ್ಲಿ ಇಬ್ಬರು ವ್ಯಕ್ತಿಗಳು ಜಗಳವಾಡುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ವಿಡಿಯೊದಲ್ಲಿ ಪುರುಷರು ಕಪಾಳಮೋಕ್ಷ ಮಾಡುವುದನ್ನು ಮತ್ತು ಒಬ್ಬರನ್ನೊಬ್ಬರು ಅವಮಾನಿಸುವುದು ಸೆರೆಯಾಗಿತ್ತು. ಆದರೆ ಅವರ ಸುತ್ತಲಿನವರಲ್ಲಿ ಕೆಲವರು ಅವರ ಜಗಳ ಬಿಡಿಸಲು ಪ್ರಯತ್ನಿಸಿದರೆ ಇನ್ನು ಕೆಲವರು ನಮಗ್ಯಾಕೆ ಈ ಉಸಾಬರಿ ಎಂದು ಅವರಿಂದ ದೂರ ಸರಿಯಲು ಪ್ರಯತ್ನಿಸಿದ್ದಾರೆ. ಒಬ್ಬ ಪ್ರಯಾಣಿಕನ ಗಿಟಾರ್‌ಗೆ ಇನ್ನೊಬ್ಬ ಪ್ರಯಾಣಿಕನ ಕಾಲು ಆಕಸ್ಮಿಕವಾಗಿ ತಗುಲಿದ ಕಾರಣ ಈ ವಾಗ್ವಾದ ಶುರುವಾಗಿತ್ತು ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ:‌Viral Video: ಬೆಂಗಳೂರು ಮೇಟ್ರೋದಲ್ಲಿ ಸಂಗೀತ ಕಲರವ; ವಿಡಿಯೊ ವೈರಲ್

ಈ ಬಾಡಿ ಶೇಮಿಂಗ್‌ ಎನ್ನುವುದು ಹೆಚ್ಚಾಗಿ ಎಲ್ಲರೂ ಅನುಭವಿಸುತ್ತಾರೆ. ಬಣ್ಣ ಕಪ್ಪಿದ್ದರೆ, ನೋಡುವುದಕ್ಕೆ ದಪ್ಪಗಿದ್ದರೆ, ಹಾಗೇ ತೀರಾ ಸಣಕಲು ಕಡ್ಡಿಯ ಹಾಗೇ ಇದ್ದರು ಆಡಿಕೊಳ್ಳುತ್ತಾರೆ. ಇನ್ನು ಸಿನಿಮಾ ನಟಿಯರಂತೂ ಈ ಬಾಡಿ ಶೇಮಿಂಗ್‌ ಅನ್ನು ತುಸು ಹೆಚ್ಚಾಗಿಯೇ ಅನುಭವಿಸುತ್ತಾರೆ ಎನ್ನಬೇಕು. ವಿಶ್ವಸುಂದರಿ ಎಂಬ ಪಟ್ಟ ಗಳಿಸಿದ ಐಶ್ಚರ್ಯಾ ರೈ ಬಚ್ಚನ್‌ ಅನ್ನೂ ಇದು ಬಿಟ್ಟಿಲ್ಲ. ಇತ್ತೀಚೆಗೆ ನಟಿ ಸ್ವರಾ ಭಾಸ್ಕರ್‌ ಕೂಡ ಈ ಬಾಡಿ ಶೇಮಿಂಗ್‌ ಅನ್ನು ಎದುರಿಸಿದ್ದರು. ಇದೊಂದು ರೀತಿಯ ಮಾನಸಿಕ ಕಿರುಕುಳ ಎನ್ನಬಹುದು. ಒಬ್ಬರ ದೇಹದ ಬಣ್ಣ ಆಕಾರದ ಕುರಿತು ಟೀಕೆ ಮಾಡಿ ಅವರ ಮನಸ್ಸನ್ನು ಘಾಸಿಗೊಳಿಸುವುದು ಎಷ್ಟು ಸರಿ...?