Viral News: ನಾಯಿ ಮುಖದ ಈ ಪರ್ವತ ನೋಡಿದ್ರಾ? ಇದು ಎಲ್ಲಿರುವುದು ಗೊತ್ತಾ?
ಚೀನಾದ ವ್ಯಕ್ತಿ ಗುವೊ ಕ್ವಿಂಗ್ಶಾನ್ ಅವರು ನಾಯಿಯ ಮುಖವನ್ನು ಹೋಲುವ ಪರ್ವತದ ಫೋಟೊವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾನೆ. ಚೀನಾದ ಹುಬೈ ಪ್ರಾಂತ್ಯದ ಯಿಚಾಂಗ್‍ನ ಯಾಂಗ್ಟ್ಸೆ ನದಿಯ ದಡದಲ್ಲಿರುವ ಈ ಪರ್ವತವು ದೂರದಿಂದ ನಾಯಿಯ ಮುಖದಂತೆ ಕಾಣುತ್ತಿದೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


ಬೀಜಿಂಗ್: ಇತ್ತೀಚೆಗೆ ಚೀನಾದ ವ್ಯಕ್ತಿಯೊಬ್ಬರು ನಾಯಿಯ ಮುಖವನ್ನು ಹೋಲುವ ಪರ್ವತದ ಫೋಟೊವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾನೆ. ನದಿಯ ದಡದಲ್ಲಿರುವ ಈ ಪರ್ವತವು ದೂರದಿಂದ ನಾಯಿಯ ಮುಖದಂತೆ ಕಾಣುವುದರಿಂದ ಇದು ನೆಟ್ಟಿಗರಲ್ಲಿ ವಿಸ್ಮಯವನ್ನು ಹುಟ್ಟುಹಾಕಿದೆ. ಶಾಂಘೈ ನಿವಾಸಿ ಗುವೊ ಕ್ವಿಂಗ್ಶಾನ್ ಚೀನಾದ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಕ್ಸಿಯೊಹೊಂಗ್ಶುನಲ್ಲಿ ಇದರ ಫೋಟೊವನ್ನು ಹಂಚಿಕೊಂಡಿದ್ದಾನೆ. ಹುಬೈ ಪ್ರಾಂತ್ಯದ ಯಿಚಾಂಗ್‍ನಲ್ಲಿ ತೆಗೆದ ಈ ಫೋಟೊ ನೋಡಿದ್ರೆ ನದಿಯ ದಡದಲ್ಲಿ ನಾಯಿಯೊಂದು ಕುಳಿತಂತೆ ಕಾಣುತ್ತದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral News) ಆಗಿದೆ.
ಕೇವಲ ಹತ್ತು ದಿನಗಳ ಹಿಂದೆ ಆತ ಈ ಪೋಟೊವನ್ನು ಪೋಸ್ಟ್ ಮಾಡಿದ್ದು, ಇದು ಈಗ ವೈರಲ್ ಆಗಿ 120,000ಕ್ಕೂ ಹೆಚ್ಚು ಲೈಕ್‍ಗಳನ್ನು ಗಳಿಸಿದೆ. ವಿಶೇಷವಾಗಿ ನಾಯಿ ಪ್ರಿಯರು ಇದನ್ನು ತುಂಬಾ ಇಷ್ಟಪಟ್ಟಿದ್ದಾರೆ. ಈ ಪರ್ವತವನ್ನು ʼಪಪ್ಪಿ ಮೌಂಟೈನ್ʼ ಎಂದೂ ಕರೆಯುತ್ತಾರೆ. ಹಾಗೇ ತನ್ನ ಪೋಸ್ಟ್‌ನಲ್ಲಿ ಗುವೊ ಈ ಆಕಾರವು ನೀರು ಕುಡಿಯುವ ನಾಯಿಮರಿ ಅಥವಾ ಮೀನನ್ನು ಹುಡುಕುವ ನಾಯಿಮರಿಗೆ ಹೋಲುತ್ತದೆ ಎಂದು ಹೇಳಿದ್ದಾನೆ.
ಸೋಶಿಯಲ್ ಮೀಡಿಯಾದಲ್ಲಿ ಈ ಚಿತ್ರವನ್ನು ನೋಡಿದ ನಂತರ, ಚೀನಾದ ಜನರು ನಾಯಿಮರಿಯನ್ನು ಹೋಲುವ ಪರ್ವತಕ್ಕೆ ಭೇಟಿ ನೀಡಲು ಮುಗಿಬಿದ್ದಿದ್ದಾರಂತೆ. “ತಾನು ಸಾಕಿದ ನಾಯಿಗೆ ಆ ಪರ್ವತದ ಹೋಲಿಕೆ ಇರುವ ಕಾರಣ ತನ್ನ ಸಾಕುನಾಯಿಯೊಂದಿಗೆ ಆಗಾಗ್ಗೆ ಅಲ್ಲಿಗೆ ಪ್ರಯಾಣಿಸುತ್ತೇನೆ” ಎಂದು ಒಬ್ಬ ನೆಟ್ಟಿಗರು ಹಂಚಿಕೊಂಡಿದ್ದಾರೆ. ಈ ಹೋಲಿಕೆಯನ್ನು ಕಂಡು ಇನ್‌ಸ್ಟಾಗ್ರಾಂನಲ್ಲಿ ಹಲವಾರು ನೆಟ್ಟಿಗರು ವಿವಿಧ ರೀತಿಯ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕೆಲವರು ಆಶ್ಚರ್ಯವನ್ನು ಸೂಚಿಸಿದರೆ, ಇತರರು ಈ ಚಿತ್ರಗಳನ್ನು ತಮ್ಮ ನಾಯಿಗಳಿಗೆ ಹೋಲಿಕೆ ಮಾಡಿದ್ದಾರೆ.
ಈ ಪರ್ವತವು ಯಿಚಾಂಗ್ ನಗರದಲ್ಲಿದೆ. ಈ ನಗರ ಸುಮಾರು 3.9 ದಶಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ ಮತ್ತು ತ್ರೀ ಗೋರ್ಜಸ್ ಅಣೆಕಟ್ಟು ಮತ್ತು ಗೆಝೌಬಾ ಅಣೆಕಟ್ಟು ಎಂಬ 2 ಅದ್ಭುತವಾದ ಡ್ಯಾಂಗಳನ್ನು ಹೊಂದಿದೆ. ಈ ಅಣೆಕಟ್ಟುಗಳು ಬಹಳ ಪ್ರಸಿದ್ಧವಾದವು ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ:Viral Video: ಚೀನಾದ ಅತೀ ಎತ್ತರದ ಅಪಾರ್ಟ್‌ಮೆಂಟ್‌ನಲ್ಲಿರುವ ಅತ್ಯಾಧುನಿಕ ಸೌಲಭ್ಯ ನಿಜಕ್ಕೂ ಅದ್ಭುತ!
ಇತ್ತೀಚೆಗೆ ಚೀನಾದ ಅಪಾರ್ಟ್‌ಮೆಂಟ್ ಕೂಡ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಚೀನಾದಲ್ಲಿದ್ದ ರಿಜೆಂಟ್ ಇಂಟರ್ ನ್ಯಾಶನಲ್ ಅಪಾರ್ಟ್‌ಮೆಂಟ್ ವಿಶ್ವದ ಅತೀ ಎತ್ತರದ ಅಪಾರ್ಟ್‌ಮೆಂಟ್ ಎನಿಸಿಕೊಂಡಿದೆ. ಇದು ಅತ್ಯಾಧುನಿಕ ಸೌಲಭ್ಯ ಒಳಗೊಂಡಿದ್ದು ಸುಮಾರು 20,000 ಜನರು ವಾಸಿಸುತ್ತಿದ್ದಾರೆ. ಇದರ ಡ್ರೋನ್ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು ನೆಟ್ಟಿಗರು ಈ ವಿಡಿಯೊಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಚೀನಾದ ಹ್ಯಾಂಗ್ ಝಾನ್‌ನಲ್ಲಿ ಈ ರೀಜೆಂಟ್ ಇಂಟರ್ ನ್ಯಾಶನಲ್ ಅಪಾರ್ಟ್‌ಮೆಂಟ್ ಅನ್ನು ಕಟ್ಟಲಾಗಿದ್ದು 39 ಮಹಡಿಗಳು ಈ ಕಟ್ಟಡದಲ್ಲಿದೆ. ಅಪಾರ್ಟ್‌ಮೆಂಟ್‌ನಲ್ಲಿ ಈಜುಕೊಳ, ದಿನಸಿ ಅಂಗಡಿ, ಸಲೂನ್ ಅಂಗಡಿ, ಕೆಫೆ , ಶಾಲೆ , ಜಿಮ್ ಇನ್ನಿತರ ಹೈಟೆಕ್ ಸೌಲಭ್ಯಗಳು ಇದೆ. ಅಷ್ಟು ಮಾತ್ರವಲ್ಲದೆ ಪ್ರಾಕೃತಿಕ ವಿಪತ್ತನ್ನು ಕೂಡ ಸಮರ್ಥವಾಗಿ ತಡೆಹಿಡಿಯುವಂತಹ ಆಧುನಿಕ ತಂತ್ರಜ್ಞಾನ ವ್ಯವಸ್ಥೆ ಕೂಡ ಈ ಕಟ್ಟಡದಲ್ಲಿದ್ದು ಇದೊಂದು ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ನಿತ್ಯ ಸಾವಿರಾರು ಜನರು ಈ ಕಟ್ಟಡ ವೀಕ್ಷಿಸಲು ಭೇಟಿ ನೀಡುತ್ತಿರುತ್ತಾರೆ.