Murder Case: ಮತ್ತೊಬ್ಬಳ ಜೊತೆ ತೋಟದ ಮನೆಯಲ್ಲಿದ್ದ ವಿವಾಹಿತನ ಕೊಲೆ
ನಿನ್ನೆ ರಾತ್ರಿ ಇಬ್ಬರೂ ತೋಟದ ಮನೆಯಲ್ಲಿ ಒಟ್ಟಾಗಿ ಇದ್ದರು. ಆದರೆ ಬೆಳಗಾಗುವಷ್ಟರಲ್ಲಿ ವ್ಯಕ್ತಿಯ ಹತ್ಯೆಯಾಗಿದೆ. ಈ ಕೊಲೆಯನ್ನು ಆತನ ಜೊತೆ ಸಂಬಂಧದಲ್ಲಿ ಇದ್ದವಳೇ ಮಾಡಿದ್ದಾಳೆ ಎಂದು ಸೂರ್ಯನ ಕುಟುಂಬಸ್ಥರು ಆರೋಪಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕೊಲೆಯಾದ ಸೂರ್ಯ

ಮೈಸೂರು: ಮೈಸೂರಿನ (Mysuru) ಅನುಗನಹಳ್ಳಿಯಲ್ಲಿ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ (Murder Case) ಮಾಡಲಾಗಿದೆ. ವಿವಾಹಿತನಾಗಿದ್ದ ಈತ ಮತ್ತೊಬ್ಬಳ ಜೊತೆ ಲವಿ ಡವಿಯಲ್ಲಿದ್ದು, ಆಕೆಯ ಜೊತೆಗೆ ತೋಟದ ಮನೆಯಲ್ಲಿದ್ದಾಗಲೇ ದುಷ್ಕರ್ಮಿಗಳು ಕೊಲೆ (Crime News) ಮಾಡಿದ್ದಾರೆ. ಮೃತ ವ್ಯಕ್ತಿಯನ್ನು ಸೂರ್ಯ ಎಂದು ಗುರುತಿಸಲಾಗಿದ್ದು, ಪ್ರೇಯಸಿಯ ಮೇಲೂ ಕೊಲೆ ಅನುಮಾನ ಮೂಡಿದೆ.
ಮದುವೆಯಾಗಿದ್ದ ಸೂರ್ಯ ಮತ್ತೊಬ್ಬಳ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಈ ವಿಚಾರ ತಿಳಿದು ಆತನ ಪತ್ನಿ ಮತ್ತು ತಾಯಿ ಮನೆ ಬಿಟ್ಟು ಹೋಗಿದ್ದರು. ಸೂರ್ಯ ಇನ್ ಸ್ಟಾಗ್ರಾಂನಲ್ಲಿ ಶ್ವೇತಾ ಎಂಬಾಕೆಯ ಜೊತೆ ಪರಿಚಯ ಮಾಡಿಕೊಂಡಿದ್ದಾನೆ. ನಂತರ ಅವರು ಒಟ್ಟಾಗಿ ಸುತ್ತುತ್ತಿದ್ದರು ಹಾಗೂ ಖಾಸಗಿ ಫೋಟೋಗಳನ್ನು ಸ್ಟೇಟಸ್‌ಗೆ ಹಾಕುತ್ತಿದ್ದರು.
ಮೊದಲು ಎಲ್ಲವೂ ಚೆನ್ನಾಗಿಯೇ ಇದ್ದರೂ ನಂತರ ಶ್ವೇತಾ ಆಸ್ತಿಗಾಗಿ ಪೀಡಿಸತೊಡಗಿದ್ದಾಳೆ. ನಿನ್ನೆ ರಾತ್ರಿ ಇಬ್ಬರೂ ತೋಟದ ಮನೆಯಲ್ಲಿ ಒಟ್ಟಾಗಿ ಇದ್ದರು. ಆದರೆ ಬೆಳಗಾಗುವಷ್ಟರಲ್ಲಿ ಸೂರ್ಯನ ಹತ್ಯೆಯಾಗಿದೆ. ಈ ಕೊಲೆಯನ್ನು ಶ್ವೇತಾಳೇ ಮಾಡಿದ್ದಾಳೆ ಎಂದು ಸೂರ್ಯನ ಕುಟುಂಬಸ್ಥರು ಆರೋಪಿಸಿದ್ದಾರೆ. ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಜಯಪುರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ನೀರು ಕುಡಿಯಲು ಹೋಗಿ ಬಾವಿಗೆ ಬಿದ್ದ ಬಾಲಕ, ರಕ್ಷಿಸಲು ಹೋದ ಅಜ್ಜಿಯೂ ನೀರುಪಾಲು!
ವಿಜಯಪುರ: ನೀರು ಕುಡಿಯಲು ಬಾವಿಗೆ ಇಳಿದಿದ್ದ ಬಾಲಕ ಕಾಲು ಜಾರಿ ಮುಳುಗಿದ್ದು, ಬಾಲಕನ ರಕ್ಷಿಸಲು ಹೋದ ಅಜ್ಜಿಯೂ ನೀರು ಪಾಲಾಗಿರುವ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಅಗಸನಾಳ ಗ್ರಾಮದ ತೋಟದಲ್ಲಿ ನಡೆದಿದೆ.
ಅಸಾದ್ ಮುಲ್ಲಾ (12) ಮೃತ ಬಾಲಕ, ಸಲೀಮಾ ಮುಲ್ಲಾ (55) ಮೃತ ಅಜ್ಜಿ ಎಂದು ತಿಳಿದು ಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿರುವ ಹೊರ್ತಿ ಪೊಲೀಸರು ಬಾವಿಯೊಳಗಿದ್ದ ಇಬ್ಬರ ಶವವನ್ನು ಹೊರತೆಗೆದು, ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆಯ ಬಗ್ಗೆ ಹೊರ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: MP Murder Case: ಅತ್ತಿಗೆ ಮೈದುನನ ಲವ್ವಿ-ಡವ್ವಿಗೆ ಪತಿ ಬಲಿ; ಕ್ರೈಂ ಪೆಟ್ರೋಲ್ ಶೋ ನೋಡಿ ಕೊಲೆಗೆ ಪ್ಲ್ಯಾನ್!