Viral Video: ದುಬೈ ಮಾಲ್‌ನಲ್ಲಿ ಸೂಪರ್‌ಮ್ಯಾನ್ ಹಾರಾಟ; ಏನಿದು ವೈರಲ್ ವಿಡಿಯೊ?
ದುಬೈ ಮಾಲ್‌ನಲ್ಲಿ ನೀರಿನ ಕಾರಂಜಿಯ ಮೇಲೆ ಸೂಪರ್‌ಮ್ಯಾನ್ ಹಾರುವ ದೃಶ್ಯವೀಗ ಎಲ್ಲರ ಕಣ್ಮನ ಸೆಳೆಯುತ್ತಿದೆ. ಈ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಅಂದಹಾಗೇ ಇದು ಜೇಮ್ಸ್ ಗನ್ ನಿರ್ದೇಶನದ ಬಹುನಿರೀಕ್ಷಿತ ಡಿಸಿ ಸ್ಟುಡಿಯೋಸ್ ಚಿತ್ರ ಸೂಪರ್‌ಮ್ಯಾನ್‌ನ ಸಿನಿಮಾದ ಪ್ರಚಾರಕ್ಕಾಗಿ ಈ ರೀತಿ ಮಾಡಲಾಗಿದೆಯಂತೆ.


ದುಬೈ: ಸೂಪರ್ ಮ್ಯಾನ್ ಎಂದರೆ ಎಲ್ಲರ ಕಣ್ಣು ಅರಳುತ್ತದೆ. ಹೌದು ಇದೀಗ ದುಬೈ ಮಾಲ್‌ಗೆ ಭೇಟಿ ನೀಡುವವರು ಸೂಪರ್ ಮ್ಯಾನ್ ಅನ್ನು ಕಣ್ತುಂಬಿಸಿಕೊಳ್ಳಬಹುದು.ದುಬೈ ಮಾಲ್‌ನಲ್ಲಿ ನೀರಿನ ಕಾರಂಜಿಯ(Waterfall Fountain) ಮೇಲೆ ಸೂಪರ್‌ಮ್ಯಾನ್ ಹಾರುವ ದೃಶ್ಯವೀಗ ಎಲ್ಲರ ಕಣ್ಮನ ಸೆಳೆಯುತ್ತಿದೆ. ಈ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video)ಆಗಿದೆ. ಅಂದಹಾಗೇ ಇದು ಜೇಮ್ಸ್ ಗನ್ ನಿರ್ದೇಶನದ ಬಹುನಿರೀಕ್ಷಿತ ಡಿಸಿ ಸ್ಟುಡಿಯೋಸ್ ಚಿತ್ರ ಸೂಪರ್‌ಮ್ಯಾನ್‌ನ ಪ್ರಾದೇಶಿಕ ಬಿಡುಗಡೆಗಾಗಿ ಈ ರೀತಿ ಮಾಡಲಾಗಿದೆಯಂತೆ. ದುಬೈ ಮಾಲ್‌ನ ರೀಲ್ ಸಿನಿಮಾಸ್‌ನಲ್ಲಿ ಚಲನಚಿತ್ರದ ಪ್ರಥಮ ಪ್ರದರ್ಶನಕ್ಕೂ ಮುನ್ನ, ವಿಶ್ವದ ಅತಿ ಹೆಚ್ಚು ಜನರು ಭೇಟಿ ನೀಡುವ ತಾಣದಲ್ಲಿ ಈ ದೃಶ್ಯ ಸೆರೆಯಾಗಿದೆ.
ವಿಡಿಯೊ ಇಲ್ಲಿದೆ ನೋಡಿ...
#Superman Promotion in the Dubai Mall. #LookUpDubai
— Universo DC (@UniversoDC1) July 6, 2025
Video: @burnoutmademe TikTok pic.twitter.com/RcyA40YUFO
ಏನಿದು ದುಬೈ ಮಾಲ್ ವಾಟರ್‌ಫಾಲ್ ಫೌಂಟೇನ್
ದುಬೈ ಮಾಲ್‌ನಲ್ಲಿರುವ ವಾಟರ್‌ಫಾಲ್ ಫೌಂಟೇನ್ ಇಪ್ಪತ್ನಾಲ್ಕು ಮೀಟರ್ ಎತ್ತರ ಮತ್ತು ವೃತ್ತಾಕಾರದ ಆಕಾರವನ್ನು ಹೊಂದಿದೆ. ಇದರ ವ್ಯಾಸವು ಮೂವತ್ತು ಮೀಟರ್‌ಗಳಿಗಿಂತ ಹೆಚ್ಚು. ಇದರಲ್ಲಿ ಕುತೂಹಲಕಾರಿ ಸಂಗತಿ ಎಂದರೆ , ನೀರು ಬೀಳುವುದನ್ನು ವಿಶುವಲ್ ಇಲ್ಯೂಷನ್ ಸೃಷ್ಟಿಸಿ ವಿನ್ಯಾಸಗೊಳಿಸಲಾಗಿದೆ.
ಸೂಪರ್‌ಮ್ಯಾನ್ ಚಿತ್ರ ಬಗ್ಗೆ
ಸೂಪರ್‌ಮ್ಯಾನ್ ಜುಲೈ 10 ರಂದು ಪ್ರಾದೇಶಿಕವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ವಾರ್ನರ್ ಬ್ರದರ್ಸ್ ಜುಲೈ 11 ರಂದು ಬಹುನಿರೀಕ್ಷಿತ ಚಿತ್ರದ ಥಿಯೇಟ್ರಿಕಲ್ ಬಿಡುಗಡೆಗೆ ಸಿದ್ಧತೆ ನಡೆಸುತ್ತಿದೆ. ಡೇವಿಡ್ ಕೊರೆನ್ಸ್‌ವೆಟ್ ಪ್ರಮುಖ ನಾಯಕನಾಗಿ ನಟಿಸಿದ್ದಾನೆ. ಇದರಲ್ಲಿ ಕೊರೆನ್ಸ್‌ವೆಟ್ ದೂರದ ಕ್ರಿಪ್ಟಾನ್ ಗ್ರಹದಿಂದ ಭೂಮಿಗೆ ಬರುವ ಸೂಪರ್‌ಮ್ಯಾನ್‌ನ ಪಾತ್ರಕ್ಕೆ ಜೀವ ತುಂಬಲಿದ್ದಾನೆ.
ಈ ಚಿತ್ರದಲ್ಲಿ ಕೊರೆನ್ಸ್‌ವೆಟ್ ಸೂಪರ್ ಹೀರೋ ಆಗಿ, ರಾಚೆಲ್ ಬ್ರಾನ್ಸಹನ್ ಲೋಯಿಸ್ ಲೇನ್ ಪಾತ್ರದಲ್ಲಿ, ನಿಕೋಲಸ್ ಹೌಲ್ಟ್ ಲೆಕ್ಸ್ ಲೂಥರ್ ಪಾತ್ರದಲ್ಲಿ, ಸ್ಕೈಲರ್ ಗಿಸಾಂಡೊ ಜಿಮ್ಮಿ ಓಲ್ಸೆನ್ ಪಾತ್ರದಲ್ಲಿ, ಸಾರಾ ಸಂಪಾಯೊ ಈವ್ ಟೆಶ್‌ಮೇಕರ್ ಪಾತ್ರದಲ್ಲಿ ಮತ್ತು ಎಡಿ ಗಥೇಗಿ ಮಿಸ್ಟರ್ ಟೆರಿಫಿಕ್ ಪಾತ್ರದಲ್ಲಿ ನಟಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ರೀಲ್ಸ್‌ಗಾಗಿ ಮಗಳನ್ನು ಅಪಾಯಕ್ಕೆ ತಳ್ಳಿದ ಪೋಷಕರು; ಶಾಕಿಂಗ್ ವಿಡಿಯೊ ವೈರಲ್
ಮುಂಬೈನ ಐತಿಹಾಸಿಕ ಬಾಂದ್ರಾ-ವರ್ಲಿ ಸಮುದ್ರ ಮಾರ್ಗದಲ್ಲಿ ಕೂಡ ಸೂಪರ್‌ಮ್ಯಾನ್ ಚಿತ್ರವನ್ನು ಪ್ರದರ್ಶಿಸಲಾಯಿತು. ಆಧುನಿಕ ಮುಂಬೈನ ಸುಂದರವಾದ ಹೆಗ್ಗುರುತಿನಲ್ಲಿ ಸೂಪರ್‌ಮ್ಯಾನ್ ತನ್ನ ಸಾಂಪ್ರದಾಯಿಕ ಭಂಗಿಯಲ್ಲಿ ಹಾರಾಟ ನಡೆಸುವುದನ್ನು ಪ್ರದರ್ಶಿಸಿದೆ.