ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Viral Video: ಶ್ವಾನವನ್ನು ಮಾರ್ಕೆಟ್‌ನಲ್ಲಿ ಒಂಟಿಯಾಗಿ ಬಿಟ್ಟು ಹೋದ ಹೃದಯಹೀನ ಮಾಲೀಕ ; ಮುಂದೇನಾಯ್ತು ವಿಡಿಯೊ ನೋಡಿ

Viral Video: ತನ್ನ ಸಾಕು ನಾಯಿ ಜರ್ಮನ್ ಶೆಫರ್ಡ್ ಅನ್ನು ಸ್ಕೂಟರ್‌ನಲ್ಲಿ ಕರೆದುಕೊಂಡ ಬಂದ ವ್ಯಕ್ತಿಯೊಬ್ಬ ಅದನ್ನು ಅಲ್ಲೇ ಬಿಟ್ಟು ಹೊರಟು ಹೋಗಿದ್ದಾನೆ. ತನ್ನ ಮಾಲೀಕನ ಈಗ ಬರಬಹುದು, ಆಗ ಬರಬಹುದು ಎಂದು ಕಾಯುತ್ತಾ ಮತ್ತೊಂದು ಸ್ಕೂಟರ್ ಹತ್ತಿ ಎಂಟು ಗಂಟೆಗಳ ಕಾಲ ನಾಯಿ ಅಲ್ಲಿಯೇ ಕಾದಿತ್ತು.ಮಾಲೀಕನು ಬಾರದೇ ಕೊನೆಗೆ ನಾಯಿಯನ್ನು ಪ್ರಾಣಿಗಳ ಆಶ್ರಯ ಮನೆಗೆ ಕಳುಹಿಸಲಾಯಿತು.ಈ ಸುದ್ದಿ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ನಾಯಿಯನ್ನು ಮಾರ್ಕೆಟ್‌ನಲ್ಲಿ ಬಿಟ್ಟು ಹೋದ ಮಾಲೀಕ

dog rescued

Profile pavithra Jan 16, 2025 12:11 PM

Source : Free press jounal

ನವದೆಹಲಿ, ಜ. 16, 2025: ತಾನೇ ಸಾಕಿದ ನಾಯಿಯನ್ನು ಮಾಲೀಕನೊಬ್ಬ ದೆಹಲಿಯ ಮಾರ್ಕೆಟ್‌ನಲ್ಲಿ ಬಿಟ್ಟು ಹೋದ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಮಾಲೀಕ ತನ್ನನ್ನು ಕರೆದುಕೊಂಡು ಹೋಗಲು ಬರಬಹುದು ಎಂದು ನಾಯಿ ಕಾಯುತ್ತ ಇರುವ ದೃಶ್ಯದ ವಿಡಿಯೊವೊಂದು ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌(Viral Video) ಆಗಿದೆ. ನಾಯಿ ಮಾಲೀಕನಿಗಾಗಿ ಇನ್ನೊಂದು ಸ್ಕೂಟರ್‌ ಹತ್ತಿ 8 ಗಂಟೆಗಳ ಕಾಲ ಕಾದಿದೆ. ಕೊನೆಗೆ ಒಂಟಿಯಾಗಿದ್ದ ನಾಯಿಯನ್ನು ಪ್ರಾಣಿಗಳ ಆಶ್ರಯ ಮನೆಗೆ ಕಳುಹಿಸಲಾಯಿತು.

ಮಾಲೀಕ ಜರ್ಮನ್ ಶೆಫರ್ಡ್ ಅನ್ನು ಸ್ಕೂಟರ್‌ನಲ್ಲಿ ಮಾರುಕಟ್ಟೆಗೆ ಕರೆದುಕೊಂಡು ಬಂದು ನಂತರ ಅದನ್ನು ಅಲ್ಲೇ ಬಿಟ್ಟು ಹೊರಟು ಹೋಗಿದ್ದಾನೆ. ಭರವಸೆ ಮತ್ತು ಹತಾಶೆಯಿಂದ ನಾಯಿ ತನ್ನ ಮಾಲೀಕ ಮರಳಿ ಬರುತ್ತಾನೆ ಎಂದು ಹಾತೊರೆಯುತ್ತಾ ಮತ್ತೊಂದು ಸ್ಕೂಟರ್ ಹತ್ತಿ 8 ಗಂಟೆಗಳ ಕಾಲ ಅಲ್ಲಿ ಕಾದಿತ್ತು.



ದಾರಿಹೋಕರು ನಾಯಿಯ ದುಃಖವನ್ನು ಕಂಡು ಸಹಾಯಕ್ಕೆ ಮುಂದಾಗಿದ್ದಾರೆ. ಈ ನಡುವೆ ಪ್ರಾಣಿ ಪ್ರಿಯರು ನಾಯಿಯನ್ನು ರಕ್ಷಿಸುವ ಪ್ರಯತ್ನಗಳನ್ನು ಮಾಡಿದ್ದಾರೆ. ಸ್ವಯಂಸೇವಕರಲ್ಲಿ ಒಬ್ಬರು ನಾಯಿಯನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದರು. ಇನ್ನೊಬ್ಬರು ನಾಯಿಯನ್ನು ತನ್ನ ಮನೆಯಲ್ಲಿ ಇರಿಸಿಕೊಳ್ಳಲು ಮುಂದಾದರು. ಕೊನೆಗೆ ನಾಯಿಯನ್ನು ನೋಯ್ಡಾದ ವಿದಿತ್ ಶರ್ಮಾ ನಿರ್ವಹಿಸುತ್ತಿರುವ ಪ್ರಾಣಿಗಳ ಆಶ್ರಯ ಮನೆಗೆ ಕಳುಹಿಸಲಾಯಿತು.



ಈ ಹೃದಯ ವಿದ್ರಾವಕ ಘಟನೆಯನ್ನು ಪ್ರಾಣಿ ಪ್ರೇಮಿಯೊಬ್ಬರು ತಮ್ಮ ಸೋಶಿಯಲ್ ಮೀಡಿಯಾ ಪೇಜ್‍ನಲ್ಲಿ ಹೈಲೈಟ್ ಮಾಡಿದ್ದಾರೆ. ಇದು ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಈ ಸುದ್ದಿಯನ್ನೂ ಓದಿ:Viral News:‌ ಶ್ವಾನಕ್ಕಾಗಿ ವಿಮಾನದಲ್ಲಿ ಫಸ್ಟ್ ಕ್ಲಾಸ್‍ ಸೀಟ್ ಬಿಟ್ಟುಕೊಡುವಂತೆ ಪಟ್ಟು ಹಿಡಿದ ಭೂಪ!

ಈ ವೈರಲ್ ಪೋಸ್ಟ್‌ಗೆ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ ಮತ್ತು ಮುಗ್ಧ ಪ್ರಾಣಿಗೆ ಸರಿಯಾದ ಸಮಯಕ್ಕೆ ಸಹಾಯ ಮಾಡಿದ್ದಕ್ಕಾಗಿ ಮತ್ತು ರಕ್ಷಿಸಿದ್ದಕ್ಕಾಗಿ ಸ್ವಯಂಸೇವಕರಿಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದಾರೆ.