Viral Video: ರಾಮ ಭಜನೆ ಹಾಡಿದ ಇಟಲಿ ಮಹಿಳೆಯರು; ಯೋಗಿ ಆದಿತ್ಯನಾಥ್ ಫಿದಾ!
ಮಹಾ ಕುಂಭಮೇಳದ ಸಂಭ್ರಮಾಚರಣೆಯ ಮಧ್ಯೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಟಲಿಯಿಂದ ಆಗಮಿಸಿರುವ ಮಹಿಳಾ ನಿಯೋಗವನ್ನು ಭೇಟಿ ಮಾಡಿದ್ದಾರೆ. ಇಟಲಿ ಮಹಿಳೆಯರು ರಾಮ ಭಜನೆ ಹಾಡಿ ಯೋಗಿ ಅವರ ಗಮನಸೆಳೆದಿದ್ದು,ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಲಖನೌ: ಮಹಾಕುಂಭಮೇಳದ(Mahakumbh) ಸಂಭ್ರಮಾಚರಣೆ ಮತ್ತು ವಿದೇಶಿಗಳ ಆಗಮನದ ನಡುವೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Yogi Adhithyanath) ಅವರು ಇಟಲಿಯಿಂದ ಆಗಮಿಸಿರುವ ಮಹಿಳಾ ನಿಯೋಗವನ್ನು ಭೇಟಿ ಮಾಡಿದ್ದಾರೆ. ಪ್ರಯಾಗರಾಜ್(Prayagarj) ಮಹಾಕುಂಭದಿಂದ ಹಿಂತಿರುಗಿದ ಮಹಿಳೆಯರು ಮುಖ್ಯಮಂತ್ರಿ ಆದಿತ್ಯನಾಥ್ ಮುಂದೆ ರಾಮ, ಶಿವತಾಂಡವ ಮತ್ತು ಹಲವು ಭಜನೆಗಳನ್ನು ಪಠಿಸಿದ್ದಾರೆ. ಇಟಲಿ ಮಹಿಳೆಯರ ರಾಮ ಭಕ್ತಿಗೆ ಯೋಗಿಜೀ ಖುಷಿಯಾಗಿದ್ದು,ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ವಿಡಿಯೊ ಭಾರೀ ವೈರಲ್ ಆಗಿದೆ(Viral Video)
#WATCH लखनऊ: इटली से आए एक प्रतिनिधिमंडल ने उत्तर प्रदेश के मुख्यमंत्री योगी आदित्यनाथ से मुलाकात की।
— ANI_HindiNews (@AHindinews) January 19, 2025
प्रयागराज महाकुंभ से लौटी महिलाओं ने मुख्यमंत्री के सामने रामायण, शिव तांडव और कई भजनों का पाठ किया। pic.twitter.com/nsQhvx2n2y
ಉತ್ತರ ಪ್ರದೇಶದ ಸರ್ಕಾರ ಬಿಡುಗಡೆ ಮಾಡಿದ ಅಧಿಕೃತ ಮಾಹಿತಿಯ ಪ್ರಕಾರ, ಮುಂಜಾನೆ 8:00 ರವರೆಗೆ 1.7 ಕೋಟಿ ಯಾತ್ರಿಕರು ಭಾನುವಾರ(ಜ.19) ಮಹಾಕುಂಭ ಮೇಳಕ್ಕೆ ಭೇಟಿ ನೀಡಿದ್ದಾರೆ.
ಮಹಾ ಕುಂಭದ ಏಳನೇ ದಿನದಂದು, ತ್ರಿವೇಣಿ ಸಂಗಮದಲ್ಲಿ ಒಟ್ಟುಗೂಡಿದ 1.7 ಕೋಟಿ ಭಕ್ತಾದಿಗಳಲ್ಲಿ 10 ಲಕ್ಷ ಸಾಧು ಸಂತರು ಮತ್ತು 7.02 ಲಕ್ಷ ಯಾತ್ರಿಕರು ಬೆಳಗ್ಗೆ 8 ಗಂಟೆಗೆ ಪವಿತ್ರ ಸ್ನಾನ ಮಾಡಿದ್ದಾರೆ.
ನಾಲ್ಕು ಪ್ರಮುಖ ಪವಿತ್ರ ಸ್ನಾನಗಳು ಇನ್ನು ಬಾಕಿ ಇರುವುದರಿಂದ ಮುಂಬರುವ ದಿನಗಳಲ್ಲಿ ಯಾತ್ರಾರ್ಥಿಗಳ ಭೇಟಿ ಹೆಚ್ಚಾಗುವ ಸಾಧ್ಯತೆಯಿದೆ.
ಈ ಸುದ್ದಿಯನ್ನೂ ಓದಿ:Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ
ಮಹಾ ಕುಂಭಮೇಳವು ಜನವರಿ 13 ರಿಂದ ಪ್ರಾರಂಭವಾಗಿದೆ. ಜಗತ್ತಿನ ಅತಿದೊಡ್ಡ ಧಾರ್ಮಿಕ ಉತ್ಸವ ಇದಾಗಿದ್ದು ಫೆಬ್ರವರಿ 26 ರವರೆಗೆ ಮುಂದುವರಿಯುತ್ತದೆ. ಮುಂದಿನ ಪವಿತ್ರ ಸ್ನಾನದ ದಿನಾಂಕಗಳು ಜನವರಿ 29 (ಮೌನಿ ಅಮಾವಾಸ್ಯೆ - ಎರಡನೇ ಶಾಹಿ ಸ್ನಾನ), ಫೆಬ್ರವರಿ 3 (ಬಸಂತ್ ಪಂಚಮಿ - ಮೂರನೇ ಶಾಹಿ ಸ್ನಾನ), ಫೆಬ್ರವರಿ 12 (ಮಾಘಿ ಪೂರ್ಣಿಮಾ) ಮತ್ತು ಫೆಬ್ರವರಿ 26 (ಮಹಾ ಶಿವರಾತ್ರಿ).
ಈ ಮಧ್ಯೆ ಆಧ್ಯಾತ್ಮಿಕ ನಾಯಕ ಮೊರಾರಿ ಬಾಪು ಶನಿವಾರ(ಜ.18) ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ಗೆ ಆಗಮಿಸಿದ್ದು, ನಡೆಯುತ್ತಿರುವ ಮಹಾಕುಂಭಕ್ಕಾಗಿ ನಾನು ತುಂಬಾ ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ.