Saturday, 14th December 2024

ಫೇಸ್‌ಬುಕ್‌ನಲ್ಲಿ ನಾವೇ ಸಂಪಾದಕರು

ವಿಶ್ವವಾಣಿ ಕ್ಲಬ್‌ಹೌಸ್‌ ಸಂವಾದ – 114

ಫೇಸ್‌ಬುಕ್‌ನ ಸಮರ್ಪಕ, ಪರಿಣಾಮಕಾರಿ ಬಳಕೆ ಕುರಿತು ಪತ್ರಕರ್ತ ನವೀನ್ ಸಾಗರ್ ಉಪನ್ಯಾಸ

ಬೆಂಗಳೂರು: ಫೇಸ್‌ಬುಕ್ ಒಂದು ಜಗತ್ತು. ಮನಸ್ಸಿನಲ್ಲಿರುವ ಪ್ರತಿಯೊಂದು ಸಂಗತಿಗಳನ್ನು ಹಂಚಿಕೊಳ್ಳಲು ನೆರವಾಗುವ ಹಾಗೂ ದೈನಂದಿನ ವಿಷಯಗಳನ್ನು ಹಂಚಿಕೊಳ್ಳುವ ವೇದಿಕೆಯಾಗಿದೆ. ಇಲ್ಲಿ ಎಷ್ಟೋ ಜನ ಪರಿಚಯ ಆಗುತ್ತಾರೆ. ಅಭಿಪ್ರಾಯಗಳು, ಟೀಕೆ ಟಿಪ್ಪಣಿಗಳನ್ನು ವ್ಯಕ್ತಪಡಿಸು ತ್ತಾರೆ.

ಫೇಸ್‌ಬುಕ್ ನಲ್ಲಿ ನಾನು ಬರೆದಿರುವ ವಿಷಯಗಳು ಪತ್ರಿಕೆಗಳಿಗೆ ಸುದ್ದಿ ಸರಕಾಗಿದೆ. ಇಲ್ಲಿ ನಾವೇ ಸಂಪಾದಕರು ಎಂದು ಪತ್ರಕರ್ತ, ನೆಟ್ಟಿಗ ನವೀನ್
ಸಾಗರ್ ಹೇಳಿದರು. ವಿಶ್ವವಾಣಿ ಕ್ಲಬ್ ಹೌಸ್‌ನಲ್ಲಿ ಮಾತನಾಡಿದ ಅವರು, ಫೇಸ್ ಬುಕ್ ಅಡಿಕ್ಷನ್ ರೀತಿ. ಫೇಸ್‌ ಬುಕ್ ಎಷ್ಟು ಸಮಯ ಬಳಸಬೇಕು ಎಂಬುದನ್ನು ನಿಗದಿ ಮಾಡಬಹುದು. ಎಷ್ಟೊತ್ತಿಗೆ ಬಳಸಬೇಕು ಎಂದು ಸಮಯ ನಿಗದಿ ಮಾಡಿದಾಗ ಅದು ಅಲರ್ಟ್ ಮಾಡುತ್ತದೆ.

ಫೇಸ್‌ಬುಕ್ ನೋಡದಿದ್ದರೆ ಜಗತ್ತಿನಲ್ಲಿ ನಡೆಯುವ ನೈಜ ಘಟನೆಗಳು ಗೊತ್ತಾಗುವುದಿಲ್ಲ ಎಂಬ ಭಾವನೆ ನಮಗೆ ಮೂಡುವುದು ಸಹಜ. ಎಲ್ಲರೂ ಫೇಸ್‌ಬುಕ್‌ನ್ನು ಒಂದು ವಿಭಿನ್ನ ಮಾಧ್ಯಮವಾಗಿ ನೋಡುತ್ತಿದ್ದಾರೆ. ಈ ಜಾಲತಾಣದಲ್ಲಿ ಒಂದು ವಿಷಯವನ್ನು ಅಪ್ಲೋಡ್ ಮಾಡಿದಾಗ ಅದಕ್ಕೆ ಸಾಕಷ್ಟು ಕಮೆಂಟ್‌ಗಳು ಕಾಣಬಹು ದಾಗಿದೆ.

ಫೇಸ್‌ಬುಕ್‌ನಲ್ಲಿ ಬರುವ ವಿಷಯಗಳೆಲ್ಲಾ ನಿಜ ಎಂದು ಪರಿಗಣಿಸಲು ಸಾಧ್ಯವಿಲ್ಲ. ಪ್ರಮಾಣಿಸಿ ನೋಡಬೇಕು. ಸುಳ್ಳು ಸುದ್ದಿಗಳು, ಗಾಸಿಪ್ ವಿಷಯಗಳು ಹರಿದಾಡುತ್ತವೆ ಎಂದರು. ಲೈಕ್, ಕಮೆಂಟ್‌ಗಳತ್ತ ಗಮನ ಬೇಡ: ಲೈಕ್ ಮತ್ತು ಕಮೆಂಟ್‌ಗಳತ್ತ ಗಮನ ಕೊಡಬಾರದು. ಪೋಸ್ಟ್‌ಗಳನ್ನು ಹಾಕಿ ತುಂಬಾ ಜನ ಲೈಕ್, ಕಾಮೆಂಟ್‌ಗಳಿಗೆ ಕಾಯುತ್ತಾರೆ. ಇದರ ಅಗತ್ಯವಿಲ್ಲ. ನಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಪೋಸ್ಟ್ ಹಾಕುತ್ತೇವೆ. ಅದನ್ನು ನಾವು ಫಾಲೋ ಮಾಡಬಾರದು. ಇದರಿಂದ ನಮಗೆ ಸಮಯ ವ್ಯರ್ಥ. ಫೇಸ್‌ಬುಕ್‌ನಲ್ಲಿ ನಿಮ್ಮನ್ನು ಫಾಲೋ ಮಾಡು ತ್ತಿರುವುವವರೆಲ್ಲ ಒಳ್ಳೆಯದನ್ನು ಬಯಸುವುದಿಲ್ಲ ಎಂದರು.

ಫೇಸ್‌ಬುಕ್ ಮೂಲ ಸ್ವರೂಪ ಬದಲು
ಫೇಸ್‌ಬುಕ್ ಮೂಲ ಸ್ವರೂಪ ಬಹಳಷ್ಟು ಬದಲಾಗಿದೆ. ನಮಗೆ 5 ಸಾವಿರ ಸ್ನೇಹಿತರಿದ್ದರೂ 100-150 ಪೋಸ್ಟ್‌ಗಳನ್ನು ಕಾಣಬಹುದಾಗಿದೆ. ಫೇಸ್‌ ಬುಕ್ ತಂತ್ರಜ್ಞಾನದಲ್ಲಿ ಆದ ಬದಲಾವಣೆಯೇ ಇದಕ್ಕೆ ಕಾರಣ. ನಮಗೆ ಎಲ್ಲರ ಪೋಸ್ಟ್‌ಗಳು ಕಾಣುವುದಿಲ್ಲ. ಫೇಸ್‌ಬುಕ್ ನಮ್ಮನ್ನು ನಿಯಂತ್ರಣಕ್ಕೆ ತರುತ್ತದೆ ಎಂದು ನೆಟ್ಟಿಗ ನವೀನ್ ಸಾಗರ್ ಹೇಳಿದರು.

***

ಫೇಸ್‌ಬುಕ್ ಜೀವನದ ಅವಿಭಾಜ್ಯ ಅಂಗ. ನಿತ್ಯ ಅರ್ಧ ಗಂಟೆಯಾದರೂ ಈ ಸಾಮಾಜಿಕ ಜಾಲತಾಣದಲ್ಲಿ ತಲ್ಲೀನರಾಗಿರುತ್ತೇವೆ. ಇದೊಂದು ಅಭಿರುಚಿ,
ಹವ್ಯಾಸ, ಅಭಿಪ್ರಾಯ ಹೇಳಿಕೊಳ್ಳುವ ವೇದಿಕೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಫೇಸ್‌ಬುಕ್ ಮುಂಚೂಣಿಯಲ್ಲಿದೆ. ಫೇಸ್‌ಬುಕ್ ಸಮರ್ಪಕ ಬಳಕೆ ಬಗ್ಗೆ ತಿಳಿದುಕೊಳ್ಳುವುದು ಒಳಿತು.
-ವಿಶ್ವೇಶ್ವರ ಭಟ್ ವಿಶ್ವವಾಣಿ ಪ್ರಧಾನ ಸಂಪಾದಕರು