ಕೊಲ್ಹಾರ: ಇಕ್ರಾ ಕನ್ನಡ ಪೂರ್ವ ಹಾಗೂ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮ ಮಾರ್ಚ್ 20 ರಂದು ಟಿಪ್ಪು ವೃತ್ತದ ಹತ್ತಿರ ಹಮ್ಮಿಕೊಳ್ಳಲಾಗಿದೆ ಎಂದು ಶಾಲೆಯ ಅಧ್ಯಕ್ಷ ಜಾವೀದ ಬಿಜಾಪುರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಧರ್ಮಗುರುಗಳಾದ ಹಜರತ ಸೈಯ್ಯದ ಮೊಹಮ್ಮದ ತನ್ವೀರ್ ಹಾಶ್ಮೀ, ಸಾನಿಧ್ಯ ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರು, ಶೀಲವಂತ ಹಿರೇಮಠದ ಕೈಲಾಸನಾಥ ಸ್ವಾಮಿಜಿಗಳು, ಅಧ್ಯಕ್ಷತೆ ಜಾವೀದ ಬಿಜಾಪುರ ಅಧ್ಯಕ್ಷರು ಇಕ್ರಾ ಮೈನಾರಿಟಿ ಎಜುಕೇಷನ್ ಅಸೋಷಿಯೇಷನ್, ಉದ್ಘಾಟಕರಾಗಿ ಶಾಸಕ ಶಿವಾನಂದ ಪಾಟೀಲ್, ಜ್ಯೋತಿ ಬೆಳಗಿಸುವವರು ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ, ಬಿಜೆಪಿ ಮುಖಂಡ ಅಪ್ಪುಗೌಡ ಪಾಟೀಲ್(ಮನಗೂಳಿ), ಅಂಜುಮನ್ ಕಮಿಟಿ ಅಧ್ಯಕ್ಷ ಅಲ್ಲಾಭಕ್ಷ ಬಿಜಾಪುರ ಸಹಿತ ಅನೇಕ ಮಹನೀಯರು ಉಪಸ್ಥಿತರಿರುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.