Viral Video: ಯಜಮಾನಿಯ ಜೀವ ಉಳಿಸಿದ ಶ್ವಾನ; ಹೃದಯಸ್ಪರ್ಶಿ ವಿಡಿಯೊ ನೋಡಿ
ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿದ್ದ ತನ್ನ ಯಜಮಾನಿಗೆ ನಾಯಿಯೊಂದು ಸಹಾಯ ಮಾಡಿದೆ. ಆಕೆ ಮೂರ್ಛೆ ತಪ್ಪುವುದನ್ನು ತಡೆದು ಆಕೆಗೆ ನೀರು ಮತ್ತು ಔಷಧಿ ನೀಡಿ ಆರೈಕೆ ಮಾಡಿದೆ. ಈ ವಿಚಾರವನ್ನು ನಾಯಿಯ ಯಜಮಾನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅದು ವೈರಲ್ ಆಗಿದೆ.

dog viral video

ಕೆಲವರಿಗೆ ನಾಯಿ ಮೇಲೆ ವಿಪರೀತ ಒಲವು. ಇತ್ತೀಚೆಗೆ ಕುಂಭಮೇಳದ ತ್ರಿವೇಣಿ ಸಂಗಮದಲ್ಲಿ ವ್ಯಕ್ತಿಯೊಬ್ಬರು ತಮ್ಮ ಸಾಕುನಾಯಿಯ ಜತೆ ಸ್ನಾನ ಮಾಡಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಹಾಗೇ ಮತ್ತೊಂದು ದಂಪತಿ ಆಗ್ರಾದ ತಾಜ್‌ಮಹಲ್ ಬಳಿ ತಮ್ಮ ಪ್ರೀತಿಯ ನಾಯಿ ಕಳೆದುಕೊಂಡು ಅದಕ್ಕಾಗಿ ಮೂರೂವರೆ ತಿಂಗಳು ಹುಡುಕಾಡಿ ಕೊನೆಗೆ ಅದು ದಕ್ಕಿದಾಗ ಖುಷಿ ಹಂಚಿಕೊಂಡಿದ್ದರು. ಇದೀಗ ಸೋಶಿಯಲ್ ಮೀಡಿಯಾದಲ್ಲಿ ತನ್ನ ಯಜಮಾನಿಯ ಜೀವ ಉಳಿಸಿದ ಶ್ವಾನವೊಂದು ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ (Viral Video) ವೈರಲ್ ಆಗಿದೆ.
ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾದ ಹೃದಯಸ್ಪರ್ಶಿ ವಿಡಿಯೊದಲ್ಲಿ ಶ್ವಾನವು ಪೋಸ್ಟರಲ್ ಆರ್ಥೋಸ್ಟಾಟಿಕ್ ಟಾಕಿಕಾರ್ಡಿಯಾ ಸಿಂಡ್ರೋಮ್ (ಪಿಒಟಿಎಸ್) ಕಾಯಿಲೆಯಿಂದ ಬಳಲುತ್ತಿರುವ ತನ್ನ ಯಜಮಾನಿಗೆ ಸಹಾಯ ಮಾಡಿದ್ದನ್ನು ಸೆರೆಹಿಡಿಯಲಾಗಿದೆ. ಈ ಕಾಯಿಲೆ ಇರುವವರಿಗೆ ತಲೆತಿರುಗುವಿಕೆ ಸಮಸ್ಯೆ ಕಾಡುತ್ತದೆಯಂತೆ. ಅದರಂತೆ ಆ ಮಹಿಳೆ ಅಡುಗೆಮನೆಯಲ್ಲಿ ತಲೆಸುತ್ತು ಬಂದು ಕುಳಿತಾಗ ನಾಯಿಯು ಆಕೆಯ ಬಳಿ ಬಂದು ಫ್ರಿಜ್‌ನಲ್ಲಿದ್ದ ನೀರು ಕೊಟ್ಟು ಔಷಧಿಗಳನ್ನು ಹುಡುಕಿ ತಂದು ಆಕೆಗೆ ಕೊಟ್ಟಿದೆ.
ಈ ವಿಡಿಯೊ ವೈರಲ್ ಆಗಿ 3 ದಶಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಗಳಿಸಿದೆ. ಹೆಚ್ಚಿನ ನೆಟ್ಟಿಗರು ತನ್ನ ಮಾಲಕನನ್ನು ಅಪಾಯದ ಸಂದರ್ಭದಲ್ಲಿ ನಾಯಿಗಳು ಹೇಗೆ ನೋಡಿಕೊಳ್ಳುತ್ತವೆ ಎಂಬುದನ್ನು ವಿವರಿಸಿದ್ದಾರೆ. ಇನ್ನು ಕೆಲವರು ನಾಯಿಯ ಸಮಯೋಚಿತ ಕ್ರಮವನ್ನು ಹೊಗಳಿದ್ದಾರೆ. ಕೆಲವರು ತಮ್ಮ ಮುದ್ದಿನ ನಾಯಿಗಳ ಜತೆಗಿನ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Video: ಮೊದಲ ಹೆಜ್ಜೆ ಇಡಲು ಮಗುವಿಗೆ ಸಹಾಯ ಮಾಡಿದ ಶ್ವಾನ; ಹೃದಯಸ್ಪರ್ಶಿ ವಿಡಿಯೊ ವೈರಲ್
ಸಾಮಾನ್ಯವಾಗಿ ಚಿಕ್ಕ ಮಕ್ಕಳು ಮೊದಲ ಹೆಜ್ಜೆ ಇಡುವಾಗ ತಾಯಿ ಬೆನ್ನೆಲುಬಾಗಿ ನಿಂತು ಸಹಕರಿಸುತ್ತಾಳೆ. ಆದರೆ ಇಲ್ಲೊಂದು ಸಾಕು ನಾಯಿ ಹೆಜ್ಜೆ ಇಡುವ ಚಿಕ್ಕ ಮಗುವಿಗೆ ಸಾಥ್ ನೀಡಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ (Viral Video) ಆಗಿದೆ. ನೇಚರ್ ಈಸ್ ಅಮೇಜಿಂಗ್ ಎಂಬ ಎಕ್ಸ್ ಖಾತೆಯಲ್ಲಿ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದ್ದು, ಇದು ಸೋಶಿಯಲ್ ಮೀಡಿಯಾದಲ್ಲಿ ಅನೇಕರ ಗಮನ ಸೆಳೆದಿದೆ. ಈ ವಿಡಿಯೊದಲ್ಲಿ ಚಿಕ್ಕ ಮಗು ತನ್ನ ನಾಯಿಯನ್ನು ಪಕ್ಕದಲ್ಲಿರಿಸಿಕೊಂಡು ಮೊದಲ ಬಾರಿಗೆ ನಡೆಯಲು ಪ್ರಯತ್ನಿಸುವುದು ಸೆರೆಯಾಗಿದೆ. ಮಗು ತನ್ನ ಹೆಜ್ಜೆಗಳನ್ನು ಇಡುವಾಗ ಬೀಳದಂತೆ ನಾಯಿ ಮಗುವಿನ ಹತ್ತಿರ ಹೋಗಿ ಆಧಾರವಾಗಿ ನಿಲ್ಲುತ್ತದೆ.
"ನಾಯಿ ತನ್ನ ಅತ್ಯುತ್ತಮ ಸ್ನೇಹಿತನಿಗೆ ತನ್ನ ಮೊದಲ ಹೆಜ್ಜೆಗಳನ್ನು ಇಡಲು ಸಹಕರಿಸುತ್ತಿದೆೆ" ಎಂದು ಈ ವಿಡಿಯೊಗೆ ಶೀರ್ಷಿಕೆ ನೀಡಲಾಗಿದೆ. ಈ ಹೃದಯಸ್ಪರ್ಶಿ ವಿಡಿಯೊ ಕಂಡು ನೆಟ್ಟಿಗರು ಭಾವನಾತ್ಮಕ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಅನೇಕ ಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಒಬ್ಬ ವ್ಯಕ್ತಿಯು "ಈ ಪ್ರೀತಿಯು ಅತ್ಯುತ್ತಮವಾಗಿದೆ! ಬೆಂಬಲವನ್ನು ನೀಡಲು ಉತ್ತಮ ಮಾರ್ಗವೆಂದರೆ ನಿಮ್ಮ ಪಕ್ಕದಲ್ಲಿರುವುದು!” ಎಂದಿದ್ದಾರೆ. ಇನ್ನೊಬ್ಬರು "ರಕ್ಷಕ, ಬೆಂಬಲಿಗ, ಆಕ್ರಮಣಕಾರನೂ ಹೌದು " ಎಂದು ಎಚ್ಚರಿಕೆ ನೀಡಿದ್ದಾರೆ. "ಪ್ರಾಣಿಗಳು ಮನುಷ್ಯನಿಗಿಂತ ಉತ್ತಮವಾಗಿವೆʼʼ ಎಂದು ನೆಟ್ಟಿಗರೊಬ್ಬರು ಬರೆದಿದ್ದಾರೆ.