ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Shaktikanta Das: ಪ್ರಧಾನಿಯ 2ನೇ ಪ್ರಧಾನ ಕಾರ್ಯದರ್ಶಿಯಾಗಿ ಆರ್‌ಬಿಐ ಮಾಜಿ ಗವರ್ನರ್‌ ಶಕ್ತಿಕಾಂತ ದಾಸ್‌ ಆಯ್ಕೆ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಗವರ್ನರ್ ಶಕ್ತಿಕಾಂತ್ ದಾಸ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರ 2ನೇ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಅವರ ನೇಮಕಾತಿ ಪ್ರಧಾನ ಮಂತ್ರಿಯ ಅವಧಿಯವರೆಗೆ ಅಥವಾ ಮುಂದಿನ ಆದೇಶದವರೆಗೆ ಇರಲಿದೆ. ಶಕ್ತಿಕಾಂತ ದಾಸ್‌ ಅವರು ಪ್ರಧಾನ ಮಂತ್ರಿ ಅವರ 1ನೇ ಪ್ರಧಾನ ಕಾರ್ಯದರ್ಶಿ ಡಾ. ಪಿ.ಕೆ.ಮಿಶ್ರಾ ಅವರೊಂದಿಗೆ 2ನೇ ಪಿಎಸ್ ಆಗಿ ಸೇವೆ ಸಲ್ಲಿಸಲಿದ್ದಾರೆ.

ಪ್ರಧಾನಿಯ 2ನೇ ಪ್ರಧಾನ ಕಾರ್ಯದರ್ಶಿಯಾಗಿ ಶಕ್ತಿಕಾಂತ್‌ ದಾಸ್‌ ಆಯ್ಕೆ

ಶಕ್ತಿಕಾಂತ್ ದಾಸ್.

Profile Ramesh B Feb 22, 2025 7:12 PM

ಹೊಸದಿಲ್ಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ಮಾಜಿ ಗವರ್ನರ್ ಶಕ್ತಿಕಾಂತ್ ದಾಸ್ (Shaktikanta Das) ಅವರನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ 2ನೇ ಪ್ರಧಾನ ಕಾರ್ಯದರ್ಶಿ (Principal Secretary-2) ಆಗಿ ನೇಮಿಸಲಾಗಿದೆ. "ನಿವೃತ್ತ ಐಎಎಸ್ ಶಕ್ತಿಕಾಂತ ದಾಸ್ ಅವರನ್ನು ಪ್ರಧಾನಿ ಅವರ 2ನೇ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲು ಸಂಪುಟದ ನೇಮಕಾತಿ ಸಮಿತಿ ಅನುಮೋದನೆ ನೀಡಿದೆ" ಎಂದು ಕೇಂದ್ರ ಸರ್ಕಾರದ ಸುತ್ತೋಲೆಯಲ್ಲಿ ತಿಳಿಸಿದೆ. ಅವರ ನೇಮಕಾತಿ ಪ್ರಧಾನ ಮಂತ್ರಿಯ ಅವಧಿಯವರೆಗೆ ಅಥವಾ ಮುಂದಿನ ಆದೇಶದವರೆಗೆ ಇರಲಿದೆ. ಶಕ್ತಿಕಾಂತ ದಾಸ್‌ ಅವರು ಪ್ರಧಾನ ಮಂತ್ರಿ ಅವರ 1ನೇ ಪ್ರಧಾನ ಕಾರ್ಯದರ್ಶಿ ಡಾ. ಪಿ.ಕೆ.ಮಿಶ್ರಾ ಅವರೊಂದಿಗೆ 2ನೇ ಪಿಎಸ್ ಆಗಿ ಸೇವೆ ಸಲ್ಲಿಸಲಿದ್ದಾರೆ.

ಆರ್‌ಬಿಐ ಗವರ್ನರ್ ಆಗಿದ್ದ, 67 ವರ್ಷದ ಶಕ್ತಿಕಾಂತ್ ದಾಸ್ ಅವರು ಕಳೆದ ವರ್ಷ ಡಿಸೆಂಬರ್‌ನಲ್ಲಿ ನಿವೃತ್ತಿ ಹೊಂದಿದ್ದರು. ಇದೀಗ ಸಂಜಯ್ ಮಲ್ಹೋತ್ರಾ ಅವರು ಆರ್‌ಬಿಐಯ 26ನೇ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.



ಶಕ್ತಿಕಾಂತ ದಾಸ್ ಹಿನ್ನೆಲೆ

ಶಕ್ತಿಕಾಂತ ದಾಸ್ ರಾಜತಾಂತ್ರಿಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಊರ್ಜಿತ್ ಪಟೇಲ್ ಹಠಾತ್ತನೆ ರಾಜೀನಾಮೆ ನೀಡಿದ ನಂತರ ಶಕ್ತಿಕಾಂತ ದಾಸ್‌ 2018ರಲ್ಲಿ ಆರ್‌ಬಿಐ ಗವರ್ನರ್ ಆಗಿ ಅಧಿಕಾರ ಸ್ವೀಕರಿಸಿದರು. 1980ರ ಬ್ಯಾಚ್‌ನ ತಮಿಳುನಾಡು ಕೇಟರ್‌ನ ಐಎಎಸ್ ಅಧಿಕಾರಿಯಾಗಿರುವ ದಾಸ್, ದಿಲ್ಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಿಂದ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಮತ್ತು ಬರ್ಮಿಂಗ್ಹ್ಯಾಮ್ ವಿಶ್ವವಿದ್ಯಾಲಯದಿಂದ ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

2016ರಲ್ಲಿ ಕೇಂದ್ರ ಸರ್ಕಾರವು 2 ಸಾವಿರ ರೂ. ಮೌಲ್ಯದ ಕರೆನ್ಸಿ ನೋಟುಗಳನ್ನು ರದ್ದುಗೊಳಿಸಿದಾಗ ಶಕ್ತಿಕಾಂತ ದಾಸ್‌ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿಯಾಗಿದ್ದರು. 2017ರ ಜು. 1ರಂದು ಜಾರಿಗೆ ಬಂದ ಒಂದು ಜಿಎಸ್‌ಟಿ ವ್ಯವಸ್ಥೆಯಲ್ಲಿ ಅನೇಕ ಪರೋಕ್ಷ ತೆರಿಗೆಗಳನ್ನು ವಿಲೀನಗೊಳಿಸುವಲ್ಲಿ ದಾಸ್ ಪ್ರಮುಖ ಪಾತ್ರ ವಹಿಸಿದ್ದರು. ವಿಶ್ವದ ಆರ್ಥಿಕತೆಯನ್ನು ಬುಡಮೇಲು ಮಾಡಿದ ಕೊರೊನಾ ವೈರಸ್‌ ವೇಳೆ ದೇಶವನ್ನು ಮುನ್ನಡೆಸಿದ ಕೀರ್ತಿ ದಾಸ್ ಅವರಿಗೆ ಸಲ್ಲುತ್ತದೆ. 2021ರಲ್ಲಿ ಇವರು ನಿವೃತ್ತಿ ಹೊಂದಿದ್ದರು. ಅದಾಗ್ಯೂ 3 ವರ್ಷಗಳ ಕಾಲ ಇವರ ಸೇವಾ ಅವಧಿಯನ್ನು ವಿಸ್ತರಿಸಲಾಗಿತ್ತು.

ನಿವೃತ್ತಿಯ ನಂತರ ಅವರನ್ನು 15ನೇ ಹಣಕಾಸು ಆಯೋಗದ ಸದಸ್ಯರನ್ನಾಗಿ ನೇಮಿಸಲಾಗಿತ್ತು. 1960ರ ನಂತರ ಆರ್‌ಬಿಐ ಇತಿಹಾಸದಲ್ಲೇ ಸುದೀರ್ಘ ಅವಧಿಗೆ ಗವರ್ನರ್‌ ಆಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆಗೆ ಶಕ್ತಿಕಾಂತ ದಾಸ್‌ ಪಾತ್ರರಾಗಿದ್ದಾರೆ. ಶಕ್ತಿಕಾಂತ ದಾಸ್‌ ಅವರು ಪ್ರಧಾನಿ ಮೋದಿ ಅವರ ನೆಚ್ಚಿನ ಅಧಿಕಾರಿಗಳಲ್ಲಿ ಒಬ್ಬರು.

ಈ ಸುದ್ದಿಯನ್ನೂ ಓದಿ: Google Pay: ಗೂಗಲ್‌ ಪೇ ಬಳಕೆದಾರರಿಗೆ ಶಾಕ್‌; ಇನ್ನುಮುಂದೆ ಬಿಲ್‌ ಪೇಮೆಂಟ್‌ಗೆ ಶುಲ್ಕ ಪಾವತಿಸಬೇಕು

2023ರಲ್ಲಿ ವಿಶ್ವದ ಅಗ್ರ ಬ್ಯಾಂಕರ್‌ಗಳ ಪಟ್ಟಿಯಲ್ಲಿ ಶಕ್ತಿಕಾಂತ ದಾಸ್ ಮೊದಲ ಸ್ಥಾನ ಪಡೆದುಕೊಂಡಿದ್ದರು. ಅಮೆರಿಕ ಮೂಲದ ನಿಯತಕಾಲಿಕ ಗ್ಲೋಬಲ್ ಫೈನಾನ್ಸ್ ಅವರನ್ನು ಜಾಗತಿಕ ಮಟ್ಟದ ಉನ್ನತ ಕೇಂದ್ರೀಯ ಬ್ಯಾಂಕರ್ ಎಂದು ಪಟ್ಟಿಮಾಡಿತ್ತು.