Viral Video: ಪ್ರೇಯಸಿ ಜೊತೆ ಲವ್ವಿ-ಡವ್ವಿ; ಹೆಂಡ್ತಿ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಸರ್ಕಾರಿ ಅಧಿಕಾರಿ-ಆಮೇಲೇನಾಯ್ತು ಗೊತ್ತಾ?
ಜಿಎಚ್ಎಂಸಿ ಜಂಟಿ ಆಯುಕ್ತ ಜಾನಕಿರಾಮ್ ಹೈದರಾಬಾದ್‍ನ ವಾರಸಿಗುಡದ ಅಪಾರ್ಟ್‌ಮೆಂಟ್‌ನಲ್ಲಿ ಮಹಿಳೆಯೊಂದಿಗೆ ಚಕ್ಕಂದವಾಡುವಾಗ ಪತ್ನಿ ಕಲ್ಯಾಣಿ ಕೈಗೆ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಕಲ್ಯಾಣಿಯ ಕುಟುಂಬಸ್ಥರು ಜಾನಕಿರಾಮ್ ಮತ್ತು ಮಹಿಳೆ ಇಬ್ಬರ ಮೇಲೂ ಹಲ್ಲೆ ನಡೆಸಿದ್ದಾರೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.


ಹೈದರಾಬಾದ್: ಜಿಎಚ್ಎಂಸಿ ಜಂಟಿ ಆಯುಕ್ತ ಜಾನಕಿರಾಮ್ ಹೈದರಾಬಾದ್‍ನ ವಾರಸಿಗುಡದ ಅಪಾರ್ಟ್‌ಮೆಂಟ್‌ನಲ್ಲಿ ಮಹಿಳೆಯೊಂದಿಗೆ ಸರಸವಾಡುತ್ತಿದಾಗ ಪತ್ನಿ ಕಲ್ಯಾಣಿ ಕೈಗೆ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಈ ಸಂದರ್ಭದಲ್ಲಿ ಗಲಾಟೆ ನಡೆದು ಹಿಂಸಾಚಾರಕ್ಕೆ ತಿರುಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮಧ್ಯಪ್ರವೇಶಿಸಿ ಜಗಳವನ್ನು ನಿಲ್ಲಿಸಿದ್ದಾರೆ ಮತ್ತು ಈ ಬಗ್ಗೆ ತನಿಖೆ ನಡೆಸಲು ಮುಂದಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಮಾಧ್ಯಮ ವರದಿಗಳ ಪ್ರಕಾರ, ಕಲ್ಯಾಣಿ ತನ್ನ ಪತಿಯ ನಡವಳಿಕೆಯ ಬಗ್ಗೆ ಅನುಮಾನಗೊಂಡಿದ್ದಳಂತೆ. ಕೆಲಸದ ನೆಪ ಹೇಳಿ ಆಗಾಗ್ಗೆ ಮನೆಯಿಂದ ಹೊರಗೆ ಹೋಗುತ್ತಿದ್ದ ಪತಿಯ ಮೇಲೆ ಕಣ್ಣಿಟ್ಟ ಪತ್ನಿ ಕೊನೆಗೆ ಪತಿ ಅಪಾರ್ಟ್‌ಮೆಂಟ್‌ವೊಂದರಲ್ಲಿ ತನಗಿಂತ ಸುಮಾರು 20 ವರ್ಷ ಕಿರಿಯ ಮಹಿಳೆಯ ಜೊತೆ ಚಕ್ಕಂದವಾಡುವುದನ್ನು ನೋಡಿದ್ದಾಳೆ
తన కంటే 20 ఏళ్ల చిన్న వయసున్న అమ్మాయితో అక్రమ సంబంధం పెట్టుకున్న జీహెచ్ఎంసీ జాయింట్ కమిషనర్ జానకిరామ్
— Telugu Scribe (@TeluguScribe) February 21, 2025
ఇద్దరిని రెడ్ హ్యాండెడ్గా పట్టుకొని దేహశుద్ధి చేసిన భార్య
గత కొద్ది రోజులుగా వారాసిగూడలో అక్రమ సంబంధం పెట్టుకున్న అమ్మాయితో ఉంటున్న జానకిరామ్
భర్త జానకిరామ్ కొన్ని రోజుల… pic.twitter.com/wagElUI8Nr
ಶುಕ್ರವಾರ(ಫೆಬ್ರವರಿ 21) ಬೆಳಿಗ್ಗೆ ಕಲ್ಯಾಣಿ ಸಂಬಂಧಿಕರೊಂದಿಗೆ ಅಪಾರ್ಟ್‌ಮೆಂಟ್‌ಗೆ ನುಗ್ಗಿ ಜಾನಕಿರಾಮ್ ಮತ್ತು ಮಹಿಳೆಯನ್ನು ರೆಡ್‍ಹ್ಯಾಂಡ್ ಆಗಿ ಹಿಡಿದಿದ್ದಾಳೆ. ಸಂಬಂಧಿಕರು ಜಾನಕಿರಾಮ್ ಮತ್ತು ಮಹಿಳೆ ಇಬ್ಬರ ಮೇಲೂ ಹಲ್ಲೆ ನಡೆಸಿದ್ದಾರೆ. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ವಾರಾಸಿಗುಡ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಗಲಾಟೆಯನ್ನು ನಿಯಂತ್ರಿಸಿ ಎರಡೂ ಕಡೆಯವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.ಜಿಎಚ್ಎಂಸಿಯ ಆಡಳಿತ ವಿಭಾಗದಲ್ಲಿ ಜಂಟಿ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿರುವ ಜಾನಕಿರಾಮ್ ಯಾವುದಾದರೊಂದು ನೆಪವೊಡ್ಡಿ ಯಾವಾಗಲೂ ಮನೆಯಿಂದ ಹೊರಗೆ ಇರುತ್ತಿದ್ದನಂತೆ.
ವಾರಾಸಿಗುಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಜಿಎಚ್ಎಂಸಿ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಇದು ಪೊಲೀಸ್ ತನಿಖೆಯಲ್ಲಿರುವ ವೈಯಕ್ತಿಕ ವಿಷಯ ಎಂದು ಅಧಿಕಾರಿಗಳು ಹೇಳಿದ್ದಾರೆ ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ:Self Harming: ಪತಿಯ ಅನೈತಿಕ ಸಂಬಂಧಕ್ಕೆ ರೋಸಿ ಮಗಳನ್ನು ಕೊಂದು ತಾಯಿ ಆತ್ಮಹತ್ಯೆ
ಪತಿಯ ಅನೈತಿಕ ಸಂಬಂಧದಿಂದ (Illicit relationship) ಜೀವನದಲ್ಲಿ ಬೇಸತ್ತ 34 ವರ್ಷದ ಮಹಿಳೆಯೊಬ್ಬರು ತಮ್ಮ ನಾಲ್ಕು ವರ್ಷದ ಮಗಳನ್ನು (wife kills daughter) ಕೊಂದು ಆತ್ಮಹತ್ಯೆ (Self Harming) ಮಾಡಿಕೊಂಡಿರುವ ದಾರುಣ ಘಟನೆ ಸೋಮವಾರ ಬೆಂಗಳೂರಿನ (Bengaluru Crime News) ರಾಮಯ್ಯ ಲೇಔಟ್ ನಡೆದಿದೆ.
ಪಾವಗಡ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿರುವ ಶ್ರುತಿ, ಮೊದಲು ತಮ್ಮ ಮಗಳು ರೋಶಿನಿಯನ್ನು ದುಪ್ಪಟ್ಟಾ ಬಳಸಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದು ಕೊಂದು ನಂತರ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಾಗಸಂದ್ರದ ರಾಮಯ್ಯ ಲೇಔಟ್‌ನಲ್ಲಿ ಭಾನುವಾರ ಸಂಜೆ ಶ್ರುತಿಯ ಪತಿ ಮನೆಯಲ್ಲಿ ಇಲ್ಲದಿದ್ದಾಗ ಈ ಘಟನೆ ನಡೆದಿದೆ.
ಸ್ಥಳದಿಂದ ವಶಪಡಿಸಿಕೊಳ್ಳಲಾದ ಆತ್ಮಹತ್ಯೆ ಪತ್ರದಲ್ಲಿ ಆಕೆಯ ಪತಿ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು ಮತ್ತು ಅವರಿಗೆ ಇನ್ನೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧವಿದೆ ಎಂದು ಬರೆದಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಶೃತಿ 2014ರಲ್ಲಿ ಗೋಪಾಲಕೃಷ್ಣ ಅವರನ್ನು ವಿವಾಹವಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.