ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Viral Video: 'ಸುನೋ ಮಿಯಾ ಸುನೋ' ಹಾಡಿಗೆ ಸಖತ್‌ ಆಗಿ ಹೆಜ್ಜೆ ಹಾಕಿದ ದೇಸಿ ದಂಪತಿ; ವಿಡಿಯೊ ವೈರಲ್

ಬಾಲಿವುಡ್ ನಟ ಗೋವಿಂದ ಮತ್ತು ನಟಿ ಸುಶ್ಮಿತಾ ಸೇನ್ ಅವರ ಚಿತ್ರದ 'ಸುನೋ ಮಿಯಾ ಸುನೋ' ಹಾಡಿಗೆ ದೇಸಿ ದಂಪತಿ ಡ್ಯಾನ್ಸ್ ಮಾಡಿದ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ಸಾಕಷ್ಟು ಮೆಚ್ಚುಗೆಯನ್ನು ಗಳಿಸಿದೆ.

ಅಬ್ಬಾ...! ದೇಸಿ ಕಪಲ್ ಡ್ಯಾನ್ಸ್‌ಗೆ ನೆಟ್ಟಿಗರು ಫುಲ್‌ ಫಿದಾ

Profile pavithra Feb 22, 2025 3:56 PM

ಬೆಂಗಳೂರು: ಡ್ಯಾನ್ಸ್‌ ಎಂದರೆ ಕೆಲವರಿಗೆ ಸಿಕ್ಕಾಪಟ್ಟೆ ಕ್ರೇಜ್‌. ಒಂದೊಳ್ಳೆ ಹಾಡು ಕೇಳಿದ್ರೆ ಸಾಕು ಕಾಲು ಹಾಡಿನ ಲಯಕ್ಕೆ ತಕ್ಕ ಹಾಗೇ ಹೆಜ್ಜೆ ಹಾಕುತ್ತದೆ. ಈಗಂತೂ ಸೋಶಿಯಲ್‌ ಮೀಡಿಯಾ ಜಮಾನ. ಏನೇ ಮಾಡಿದ್ರೂ ಸಿಕ್ಕಾಪಟ್ಟೆ ವೈರಲ್‌ ಆಗುತ್ತೆ. ಇತ್ತೀಚೆಗೆ ಮಹಿಳೆಯೊಬ್ಬಳು ಮನೆಯಲ್ಲಿ ಸತ್ಯನಾರಾಯಣ ಪೂಜೆ ಮಾಡಿ ಭೋಜ್‌ಪುರಿ ಹಾಡಿಗೆ ಸಖತ್‌ ಆಗಿ ಸೊಂಟ ಬಳುಕಿಸಿದ್ದಳು. ಈಗ ಪತ್ನಿಯೊಬ್ಬಳು ತನ್ನ ವಿಶೇಷಚೇತನ ಗಂಡನೊಂದಿಗೆ ಬಾಲಿವುಡ್ ಹಾಡಾದ 'ಸುನೋ ಮಿಯಾ ಸುನೋ' ಗೆ ಡ್ಯಾನ್ಸ್ ಮಾಡಿದ ವಿಡಿಯೊವೊಂದು ಸೋಸಿಯಲ್‌ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡುತ್ತಿದೆ. ವೈರಲ್‌ ವಿಡಿಯೊದಲ್ಲಿ ದಂಪತಿ ಒಂದೇ ಬಣ್ಣದ ಡ್ರೆಸ್‌ ಹಾಕಿಕೊಂಡು ನಟ ಗೋವಿಂದ ಮತ್ತು ಸುಶ್ಮಿತಾ ಸೇನ್ ಅಭಿನಯದ ಸಿನಿಮಾದ ಹಾಡಿಗೆ ಸಖತ್‌ ಆಗಿ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೊ(Viral Video) ನೋಡಿ ನೆಟ್ಟಿಗರು ಕೂಡ ಫಿದಾ ಆಗಿದ್ದಾರೆ.

ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ ಒಂದು ಗಂಟೆಯೊಳಗೆ, ಇದು 10,000 ವ್ಯೂವ್ಸ್ ಮತ್ತು 250 ಲೈಕ್‍ಗಳನ್ನು ಗಳಿಸಿದೆ. ದೇಸಿ ದಂಪತಿಯ ಈ ನೃತ್ಯ ಪ್ರದರ್ಶನವನ್ನು ಕಂಡು ಜನರು ಕಾಮೆಂಟ್‍ಗಳನ್ನು ಮಾಡುವ ಮೂಲಕ ಅವರನ್ನು ಹೊಗಳಿದ್ದಾರೆ. ಅವರ ಡ್ಯಾನ್ಸ್ ರೀಲ್‍ನ ಕಾಮೆಂಟ್‍ ವಿಭಾಗದಲ್ಲಿ 'ಹಾರ್ಟ್‌' ಮತ್ತು ‘ ಕ್ಲ್ಯಾಪ್' ಎಮೋಜಿಗಳನ್ನು ಹಾಕಿದ್ದಾರೆ. ದಂಪತಿ ಡ್ಯಾನ್ಸ್ ಮಾಡಿದ ಈ ಹಾಡು ಹಿಂದಿ ಚಲನಚಿತ್ರ "ಕ್ಯೋನ್ ಕಿ"ಸಿನಿಮಾದ್ದಾಗಿದೆ. ನಟ ಗೋವಿಂದ್ ಮತ್ತು ನಟಿ ಸುಶ್ಮಿತಾ ಸೇನ್ ನಟಿಸಿರುವ ಈ ಚಿತ್ರದ 'ಸುನೋ ಮಿಯಾ ಸುನೋ' ಬಾಲಿವುಡ್ ಕ್ಲಾಸಿಕ್ ಹಾಡನ್ನು ಖ್ಯಾತ ಸಂಗೀತ ಕಲಾವಿದರಾದ ಉದಿತ್ ನಾರಾಯಣ್, ಸಾಧನಾ ಸರ್ಗಮ್ ಮತ್ತು ಪೂರ್ಣಿಮಾ ಹಾಡಿದ್ದಾರೆ. ಇದಕ್ಕೆ ಸಾಹಿತ್ಯವನ್ನು ದೇವ್ ಕೊಹ್ಲಿ ಬರೆದಿದ್ದಾರೆ.

ಬಾಲಿವುಡ್‍ನ ಜನಪ್ರಿಯ ಹಾಡುಗಳಿಗೆ ಜನರು ಡ್ಯಾನ್ಸ್ ಮಾಡುವಂತಹ ವಿಡಿಯೊ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುತ್ತದೆ. ಇತ್ತೀಚೆಗೆ ಪಾಕಿಸ್ತಾನಿ ವ್ಯಕ್ತಿಯೊಬ್ಬರು ನಿಂಬೂಡಾ ನಿಂಬೂಡಾ ಹಾಡಿಗೆ ಡ್ಯಾನ್ಸ್ ಮಾಡಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಈ ಸುದ್ದಿಯನ್ನೂ ಓದಿ: Viral Video: ಶಾರುಖ್ ಹಾಡಿಗೆ ಸಿಗ್ನೇಚರ್ ಸ್ಟೆಪ್ ಹಾಕಿ ಸಖತ್ ಡ್ಯಾನ್ಸ್ ಮಾಡಿದ ಕಿಲ್ ಪೌಲ್; ವಿಡಿಯೊ ಇಲ್ಲಿದೆ

ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್‌ ಅವರಿಗೆ ಪ್ರಪಂಚದಾದ್ಯಂತ ಬಹಳಷ್ಟು ಅಭಿಮಾನಿಗಳಿದ್ದಾರೆ. ಇವರ ಸಿನಿಮಾಗಳ ಹಾಡುಗಳು ಭಾರತ ಮಾತ್ರವಲ್ಲ ಹಲವು ದೇಶಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತವೆ. ಇದೀಗ ಶಾರುಖ್ ಅಭಿನಯದ ಸಿನಿಮಾ ಹಾಡೊಂದು ಅದೇ ರೀತಿ ಹೊರ ದೇಶದಲ್ಲಿಯೂ ಕ್ರೇಜ್ ಹುಟ್ಟಿಸಿದೆ. ಸೋಶಿಯಲ್ ಮೀಡಿಯಾ ಸೆನ್ಸೇಷನಲ್ ಸ್ಟಾರ್, ತಾಂಜಾನಿಯಾದ ಕಿಲಿ ಪೌಲ್ ಮತ್ತು ದುಬೈಯ ಬರ್ಮೆದಾಸ್ ಎನ್ನುವವರು ಶಾರುಖ್ ಅಭಿನಯದ ಹಾಡಿಗೆ ಸಿಗ್ನೇಚರ್ ಸ್ಟೆಪ್ ಹಾಕಿರುವ ವಿಡಿಯೊವೊಂದು ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ (Viral Video). ಶಾರುಖಾನ್ ಅಭಿನಯದ ʼವೀರ್ ಝರಾʼ ಸಿನೆಮಾದ ಜನಪ್ರಿಯ ಹಾಡು ʼಜಾ ನಂ ದೇಖಲೊ ಮಿಟ್ ಗಯಿʼ ಹಾಡಿಗೆ ಕಿಲಿ ಪೌಲ್ ಹಾಗೂ ಬರ್ಮೆದಾಸ್ ಅವರು ಸಖತ್ ಆಗಿಯೇ ಸ್ಟೆಪ್ ಹಾಕಿದ್ದಾರೆ.

ವೈರಲ್ ಆದ ವಿಡಿಯೊದಲ್ಲಿ ಕಿಲಿ ಪೌಲ್ ಮತ್ತು ಬರ್ಮೆದಾಸ್ ಅವರು ಶಾರುಖ್ ಅವರಂತೆ ಪ್ರೀತಿಯನ್ನು ವ್ಯಕ್ತಪಡಿಸುವ ರೀತಿಯಲ್ಲಿ ಸಿಗ್ನೇಚರ್ ಸ್ಟೆಪ್ ಹಾಕಿದ್ದಾರೆ. ಬರ್ಮೆದಾಸ್ ಅವರು ತಾಂಜೇನಿಯ ಜನಾಂಗದ ಸಾಂಪ್ರದಾಯಿಕ ಉಡುಗೆಯನ್ನು ಧರಿಸಿದ್ದು ಈ ವಿಡಿಯೊದ ಇನ್ನೊಂದು ವಿಶೇಷತೆ.‌ ಶಾರುಖ್‌ ಖಾನ್‌ ಅವರ ಅಭಿಮಾನಿಗಳು ಕಿಲಿ ಪೌಲ್ ಅವರ ಸಿಗ್ನೇಚರ್ ಸ್ಟೆಪ್‌ಗೆ ಫಿದಾ ಆಗಿದ್ದಾರೆ. ಕಿಲಿ ಪೌಲ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೊ ಅಪ್‌ಲೋಡ್‌ ಮಾಡಿದ್ದು, ಬರ್ಮೆದಾಸ್ ಅವರು ತೋರಿಸಿದ ಪ್ರೀತಿ ಗೌರವಕ್ಕೆ ಧನ್ಯವಾದ. ಈ ಭೇಟಿ ತುಂಬಾ ಖುಷಿ ನೀಡಿದೆ ಎಂದು ಕ್ಯಾಪ್ಶನ್ ನೀಡಿದ್ದಾರೆ. ಇದುವರೆಗೆ ಈ ವಿಡಿಯೊ 7.5 ಲಕ್ಷಕ್ಕೂ ಅಧಿಕ ವೀವ್ಸ್ ಪಡೆದಿದ್ದು ಸೋಶಿಯಲ್ ಮೀಡಿಯಾದಲ್ಲಿ ಹಾಡಿನ ಜತೆಗೆ ಶಾರುಖ್‌ ಖಾನ್‌ ಐಕಾನಿಕ್ ಸ್ಟೆಪ್ ಟ್ರೆಂಡ್‌ನಲ್ಲಿದೆ.