ಶಾಸಕ ಎಸ್. ಎನ್.ಸುಬ್ಬಾರೆಡ್ಡಿ ನೇತೃತ್ವದಲ್ಲಿ ಗಡಿನಾಡು ಉತ್ಸವ ಅಂಗವಾಗಿ ಜೊಡೆತ್ತು ಗಾಡಿಗಳ ಓಟದ ಸ್ಪರ್ಧೆ
ಜೋಡಿ ಎತ್ತಿನ ಗಾಡಿ ಸ್ಪರ್ಧೆಯಲ್ಲಿ ಗೆದ್ದಂತಹ ವಿಜೇತರಿಗೆ ಪ್ರಥಮ ಬಹುಮಾನವಾಗಿ ? ೫೦ ಸಾವಿರ ದ್ವಿತೀಯ ಬಹುಮಾನ ೪೦ ಸಾವಿರ, ತೃತೀಯ ಬಹುಮಾನ 30 ಸಾವಿರ, ೪ನೇ ಬಹು ಮಾನ ? ೨೦ ಸಾವಿರ ಹಾಗೂ ಐದು ನೇ ಬಹುಮಾನ ? 10 ಸಾವಿರ ದೊಂದಿಗೆ ಚಾಂಪಿಯನ್ ಟ್ರೋಫಿ ನೀಡಲಾಗುವುದು ಎಂದು ಈ ಸ್ಪರ್ಧೆ ಕಾರಕೂರು ಕೆರೆಯಲ್ಲಿ ನೆಡಲಾಗುತ್ತದೆ ಎಂದು ಹೇಳಿದರು

ಶಾಸಕ ಎಸ್. ಎನ್.ಸುಬ್ಬಾರೆಡ್ಡಿ ನೇತೃತ್ವದಲ್ಲಿ ಗಡಿನಾಡು ಉತ್ಸವ ಅಂಗವಾಗಿ ಜೊಡೆತ್ತು.ಗಾಡಿಗಳ ಓಟದ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಕಾರಕೂರು ನಾಗರಾಜ್ ತಿಳಿಸಿದರು.

ಬಾಗೇಪಲ್ಲಿ: ತಾಲ್ಲೂಕು, ಕಸಬಾ ಹೋಬಳಿ, ದೇವರಗುಡಿಪಲ್ಲಿ ಪಂ. ಕಾರಕೂರು ಶ್ರೀ ಆಭಯಾಂಜನೇಯ ಸೇವಾ ಸಮಿತಿ ಮತ್ತು ರೈತ ಮಿತ್ರ ಬಳಗ ಸಹಯೋಗದೊಂದಿಗೆ ಶಿವರಾತ್ರಿ ಹಬ್ಬದ ಪೂರ್ವ ಪ್ರಯುಕ್ತ ದಿನಾಂಕ ಫೆ.24ರಂದು ಸೋಮವಾರ ಅದ್ಧೂರಿ ರಾಸುಗಳಿಂದ ಲೀಗ್ ಟೈಪ್ 200 ಮೀಟರ್ ಜೋಡೆತ್ತುಗಾಡಿಗಳ ಓಟದ ಸ್ಪರ್ಧೆಗಳು ಸ್ಪರ್ಧೆ ಯ ಚಾಲನೆ ಸನ್ಮಾನ್ಯ ಶ್ರೀ ಎಸ್.ಎನ್. ಸುಬ್ಬಾರೆಡ್ಡಿ ಚಾಲನೆ ನೀಡುತ್ತಾರೆ ಎಂದು ಸ್ಪರ್ಧೆ ಆಯೋಜಕರಾದ ಕಾರಕೂರು ನಾಗರಾಜು ಹೇಳಿದರು. ಅವರು ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಪತ್ರಿಕಾ ಹೇಳಿಕೆ ನೀಡಿ ಮಾತನಾಡಿ ಗ್ರಾಮೀಣ ಕ್ರೀಡೆ ಗಳಿಗೆ ಪ್ರೋತ್ಸಾಹ, ಆರೋಗ್ಯಕರ ರಾಸುಗಳನ್ನು ಸಾಕಲು ರೈತರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ಜೋಡಿ ಎತ್ತಿನಗಾಡಿ ಸ್ಪರ್ಧೆ ಆಯೋಜಿಸಲಾಗಿದೆ.
ಇದನ್ನೂ ಓದಿ: Chikkaballapur News: ನವೋದಯ ಶಾಲೆಯ ಪರಿಸರ ಮೆಚ್ಚಿ ಸಿಬ್ಬಂದಿಯನ್ನು ಶ್ಲಾಘಿಸಿದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ
ಜೋಡಿ ಎತ್ತಿನ ಗಾಡಿ ಸ್ಪರ್ಧೆಯಲ್ಲಿ ಗೆದ್ದಂತಹ ವಿಜೇತರಿಗೆ ಪ್ರಥಮ ಬಹುಮಾನವಾಗಿ ? ೫೦ ಸಾವಿರ ದ್ವಿತೀಯ ಬಹುಮಾನ ೪೦ ಸಾವಿರ, ತೃತೀಯ ಬಹುಮಾನ 30 ಸಾವಿರ, ೪ನೇ ಬಹುಮಾನ ? ೨೦ ಸಾವಿರ ಹಾಗೂ ಐದು ನೇ ಬಹುಮಾನ ? 10 ಸಾವಿರ ದೊಂದಿಗೆ ಚಾಂಪಿಯನ್ ಟ್ರೋಫಿ ನೀಡಲಾಗುವುದು ಎಂದು ಈ ಸ್ಪರ್ಧೆ ಕಾರಕೂರು ಕೆರೆಯಲ್ಲಿ ನೆಡಲಾಗುತ್ತದೆ ಎಂದು ಹೇಳಿದರು.
ಈ ಸ್ಪರ್ಧೆಯಲ್ಲಿ ಕರ್ನಾಟಕ, ಆಂದ್ರಪ್ರದೇಶದ, ತಮಿಳುನಾಡಿನ ಸ್ಪರ್ಧೆಗಳು ಭಾಗವಹಿಸು ತ್ತಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹನುಮಂತ ರೆಡ್ಡಿ, ಅನಿಲ್ ಕುಮಾರ್, ಜಿಕ್ರಯಾ ಸಾಭ್, ತಿರುಪಾಲಪ್ಪ, ಅನಿಲ್ ಕುಮಾರ್, ಆದಿನಾರಾಯಣ, ಚಂದ್ರಶೇಖರ, ಬೈರಶಟ್ಟಿ, ಶ್ರೀನಿವಾಸ್ ಗೌಸ್ ಪೀರ್ ಇನ್ನೂ ಮುಂತಾದವರು ಪ್ರಮುಖರು ಪಾಲ್ಗೊಂಡರು.